ಕಪ್ಪು ದಾರವನ್ನ ಈ ಸಮಯದಲ್ಲಿ ಕಟ್ಟಿಕೊಳ್ಳಿ ಸಾಕು ನಿಮಗೆ ಅದೃಷ್ಟ ಅನ್ನೋದು ಹುಡುಕಿಕೊಂಡು ನಿಮ್ಮ ಮನೆ ಬಾಗಿಲಿಗೆ ಬಂದು ಬರಲಾ ಒಳಗೆ ಅಂತ ಕೇಳುತ್ತೆ…. ಅಷ್ಟಕ್ಕೂ ಯಾವ ಸಮಯದಲ್ಲಿ ಕಟ್ಟಿಕೊಳ್ಳಬೇಕು ನೋಡಿ…

Sanjay Kumar
3 Min Read

ನಮಸ್ಕಾರಗಳು ಪ್ರಿಯ ಸ್ನೇಹಿತರೇ ಕಪ್ಪುದಾರ ಹೌದು ಕಪ್ಪುದಾರ ಕಟ್ಟಿಕೊಳ್ಳುವುದನ್ನು ನೋಡಿದ್ದೀರಾ ಅಲ್ವಾ ಆದರೆ ಕಪ್ಪು ದಾರ ಕಟ್ಟಿಕೊಳ್ಳುವುದು ಅಂದರೆ ಹೇಗೆಂದರೆ ಹಾಗೆ ಕಟ್ಟಿಕೊಳ್ಳುವುದಿಲ್ಲ ಇದಕ್ಕೂ ಕೂಡ ಕೆಲವೊಂದು ವಿಶೇಷತೆಗಳಿವೆ ಅದನ್ನು ಪಾಲಿಸುವ ಮೂಲಕ ಕಪ್ಪು ದಾರವನ್ನು ಕೈಗೆ ಅಥವಾ ಕಾಲಿಗೆ ಅಥವಾ ಕಟ್ಟಿಗೆ ಕಟ್ಟಿ ಕೊಳ್ಳಬೇಕಿರುತ್ತದೆ. ಹೌದು ಈ ವಿಶೇಷ ಪದ್ದತಿಯನ್ನು ನೀವು ಕೂಡ ಒಮ್ಮೆಯಾದರೂ ಆದರೆ ಇವತ್ತಿನ ದಿವಸಗಳಲ್ಲಿ ಸ್ಟೈಲ್ ಗಾಗಿ ಕಪ್ಪುದಾರವನ್ನು ಕಟ್ಟಿಕೊಳ್ಳುವ ಮಂದಿ ಕೂಡ ಇದ್ದಾರೆ. ಆದರೆ ಕಪ್ಪು ದಾರವನ್ನು ಕೈಗೆ ಕಟ್ಟಿಕೊಳ್ಳುವುದರ ಹಿಂದೆ ಮಹತ್ತರವಾದ ಅರ್ಥವಿದೆ ಇದರಿಂದ ಬಹಳಷ್ಟು ಪ್ರಯೋಜನವಿದೆ ಅದನ್ನು ತಿಳಿಸಿಕೊಡುತ್ತೇವೆ ಜೊತೆಗೆ ಯಾವ ದಿನದಂದು ಕೈಗೆ ಕಪ್ಪು ದಾರವನ್ನು ಕಟ್ಟಿಕೊಳ್ಳಬೇಕು ಎಂಬುದರ ಕುರಿತು ಕೂಡ ತಿಳಿಸುತ್ತೇವೆ.

ಹೌದು ಕೈಗೆ ಕಪ್ಪು ದಾರವನ್ನು ಕಟ್ಟಿ ಕೊಳ್ಳುವುದರ ಹಿಂದೆ ಇರುವ ಮಹತ್ವ ಕರವಾದ ಅರ್ಥವನ್ನು ತಿಳಿಸಿಕೊಡುತ್ತೇವೆ ನೋಡಿ ಕೈಗೆ ಕಪ್ಪು ದರವನ್ನ ಕಟ್ಟುವುದು ನಮಗೆ ಯಾವುದೇ ತರಹದ ಕೆಟ್ಟ ಶಕ್ತಿಯ ಪ್ರಭಾವ ಆಗದಿರಲಿ ಅಂತ ಅಥವಾ ಈ ಕಪ್ಪು ಎಂಬುದು ಶನಿದೇವನ ಸಂಕೇತವಾಗಿರುತ್ತದೆ ಈ ಕಪ್ಪು ಎಂಬುದು ದೃಷ್ಟಿ ದೋಷವನ್ನು ನಿವಾರಣೆ ಮಾಡುವುದರ ಸಂಕೇತವಾಗಿರುತ್ತವೆ ಆದ್ದರಿಂದ ಕಪ್ಪು ದಾರವನ್ನು ಕೈಗೆ ಕಟ್ಟಿಕೊಳ್ಳುವುದರಿಂದ ಯಾವುದೇ ಕಾರಣಕ್ಕೂ ನಮ್ಮ ಮೇಲೆ ಕೆಟ್ಟ ಶಕ್ತಿಯ ಪ್ರಭಾವ ಆಗುವುದಿಲ್ಲ ಕೆಟ್ಟಾಲೋಚನೆ ಉಂಟಾಗುವುದಿಲ್ಲ ಹಾಗೂ ದೃಷ್ಟಿ ದೋಷ ಆಗುವುದಿಲ್ಲ ಎಂಬುದರ ಅರ್ಥ ಆಗಿರುತ್ತದೆ.

ಹಾಗಾದರೆ ಕಪ್ಪುದಾರವನ್ನು ಯಾವ ವಿಶೇಷ ದಿನಗಳಂದು ಕಟ್ಟಿಕೊಳ್ಳಬೇಕು ಎಂಬುದನ್ನು ತಿಳಿಯೋಣ ಬನ್ನಿ ಸ್ನೇಹಿತರೆ ಇವತ್ತಿನ ದಿವಸಗಳಲ್ಲಿ ಮನೆಯಲ್ಲಿ ಹಿರಿಯರ ಜೊತೆ ಕಿರಿಯರು ಕುಳಿತು ಮಾತನಾಡುವುದೇ ಕಡಿಮೆಯಾಗಿರುತ್ತದೆ ಆದ್ದರಿಂದ ಹಿರಿಯರಿಂದ ನಾವು ಅದೆಷ್ಟೋ ವಿಚಾರಗಳನ್ನು ತಿಳಿದುಕೊಳ್ಳುವುದು ಕಡಿಮೆ ಆಗಿ ಹೋಗಿದೆ. ಹಿರಿಯರ ಜೊತೆ ನಾವು ಮಾತನಾಡುವುದರಿಂದ ಅವರ ಎಷ್ಟೋ ಅನುಭವಗಳು ಅವರ ಎಷ್ಟೊ ಉತ್ತಮ ತಿಳುವಳಿಕೆಗಳು ನಮಗೂ ಕೂಡ ತಿಳಿಯುತ್ತದೆ ಆದ್ದರಿಂದ ಹಿರಿಯರು ಜೀವನದಲ್ಲಿ ಅವರು ಎದುರು ನೋಡಿರುವ ಉತ್ತಮ ದಿನಗಳ ಕುರಿತು ನಾವು ಅವರ ಜೊತೆ ಕುಳಿತು ಅವರ ಜೀವನದ ಅನುಭವ ಕುರಿತು ತಿಳಿದಾಗ ಖಂಡಿತಾ ನಮ್ಮಲ್ಲಿರುವ ಜ್ಞಾನ ಇನ್ನಷ್ಟು ಹೆಚ್ಚುತ್ತದೆ ಹಾಗೆ ಈ ವಿಚಾರ ಕೂಡ ಕಪ್ಪುದಾರವನ್ನು ಹಿರಿಯರು ಮನೆಯಲ್ಲಿದ್ದರೆ ಕಿರಿಯರಿಗೆ ಖಂಡಿತವಾಗಿ ಕಟ್ಟಿರುತ್ತಾರೆ.

ಹಾಗೆ ಆ ಕಪ್ಪು ದಾರವನ್ನು ಯಾವುದೆಂದರೆ ಆ ದಿನದಂದು ಕಟ್ಟು ಬಿಡುವುದಿಲ್ಲ ಮಂಗಳವಾರ ಅಥವಾ ಶನಿವಾರ ದ ದಿನದಂದು ಕೈಗೆ ಕಟ್ಟುತ್ತಾಳೆ ಅಷ್ಟೇ ಅಲ್ಲ ಅದನ್ನು ಕಟ್ಟುವ ಮುನ್ನ ಅಂಗಡಿ ತಂದು ಅದಕ್ಕೆ 9 ಅಥವಾ 16 ಗಂಟುಗಳನ್ನು ಕಟ್ಟಿ ಬಳಿಕ ಕೈಗೆ ಕಟ್ಟುತ್ತಾರೆ ಈ ರೀತಿ ಕಟ್ಟುವುದರಿಂದ ಯಾವುದೇ ಕೆಟ್ಟ ಶಕ್ತಿಯ ಪ್ರಭಾವ ನಮ್ಮ ಮೇಲೆ ಆಗುವುದಿಲ್ಲ ಎಂಬುದರ ಅರ್ಥ ಆಗಿರುತ್ತದೆ ಆದರೆ ಹೆಚ್ಚಿನ ಜನರು ಕಪ್ಪು ದಾರವನ್ನು ಹಾಗೇ ತಮ್ಮ ಕೈಗೆ ಕಟ್ಟಿಕೊಂಡಿರುತ್ತಾರೆ.

ಈ ರೀತಿ ಕಟ್ಟಿಕೊಳ್ಳುವುದರಿಂದ ಯಾವುದೇ ತರಹದ ಪ್ರಯೋಜನವಿಲ್ಲ ಆದರೆ ನಾವು ತಿಳಿಸಿದ ವಿಶೇಷ ದಿನಗಳಂದು ಹಾಗೂ ನಾವು ತಿಳಿಸಿದ ಪರಿಹಾರದ ಮೂಲಕವೇ ನಾವು ತಿಳಿಸಿದ ಪದ್ಧತಿ ಮೂಲಕವೇ ನೀವು ಕಪ್ಪು ದಾರವನ್ನು ಕೈಗೆ ಕಟ್ಟಿಕೊಂಡಿದ್ದಲ್ಲಿ ಇದರ ಹೆಚ್ಚಿನ ಪ್ರಭಾವವನ್ನು ನೀವು ಕೂಡ ಪಡೆದುಕೊಳ್ಳಬಹುದು. ಆದ್ದರಿಂದ ಕಪ್ಪು ದಾರವನ್ನು ಕಟ್ಟಿಕೊಳ್ಳುವಾಗ ಆಂಜನೇಯನನ್ನು ನೆನಪಿಸಿಕೊಳ್ಳುತ್ತಾ ಆಂಜನೇಯನ ದರ್ಶನ ಪಡೆದು ಬಳಿಕ ಆರಾಧನೆಯನ್ನು ಮಾಡಿ ಅವನ ಜಪವನ್ನು ಮಾಡುತ್ತಾ ಕೈಗೆ ಕಪ್ಪು ದಾರವನ್ನು ಕಟ್ಟಿಸಿಕೊಳ್ಳುವುದರಿಂದ ಖಂಡಿತ ಆಂಜನೇಯನ ಕೃಪೆ ನಿಮ್ಮ ಮೇಲೆ ಸದಾ ಇರುತ್ತದೆ. ಈ ಚಿಕ್ಕ ಪರಿಹಾರ ಮಾಡಿ ಬಹಳ ದೊಡ್ಡ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಿ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದ…

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.