ಕಿಡ್ನಿಯಲ್ಲಿ ಕಲ್ಲು ಇದ್ರೆ , ಉರಿ ಉರಿ ಉಚ್ಛೆ ಬರುತ್ತಾ ಇದ್ರೆ ನೈಸರ್ಗಿಕವಾಗಿ ಮಾಡಬಹುದಾದ ಈ ಮನೆಮದ್ದು ಮಾಡಿ ಸಾಕು ..

Sanjay Kumar
2 Min Read

ನೆಗ್ಗಿಲುಮುಳ್ಳು ಈ ಗಿಡಮೂಲಿಕೆಯ ಹೆಸರನ್ನು ನೀವು ಕೇಳಿದ್ದೀರಾ ಹೌದು ಆಯುರ್ವೇದದಲ್ಲಿ ನಾಟಿ ಔಷಧಿಯಲ್ಲಿ ಈ ಗಿಡಮೂಲಿಕೆಯ ಬಳಕೆ ಅನ್ನು ಹೆಚ್ಚಾಗಿ ಮಾಡುತ್ತಾರೆ ಇದರ ಪ್ರಯೋಜನ ಪಡೆದು ಕೊಳ್ಳುವುದು ಹೇಗೆ ಎಂಬುದು ನಿಮಗೆ ಗೊತ್ತಿಲ್ಲವಾದರೆ ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ಇದರ ಪ್ರಯೋಜನ ಪಡೆದು ಕೊಳ್ಳು ವುದರಿಂದ ಆಗುವ ಅತ್ಯದ್ಭುತ ಆರೋಗ್ಯಕರ ಲಾಭದ ಬಗ್ಗೆ ನೀವು ತಿಳಿಯಿರಿ ಬೇರೆಯವರಿಗೂ ಕೂಡ ತಿಳಿಸಿಕೊಡಿ.

ಹೌದು ಸಾಮಾನ್ಯವಾಗಿ ಆರೋಗ್ಯ ಯಾವಾಗ ಕೈ ಕೊಡುತ್ತದೆ ಅಂದರೆ ಯಾವಾಗ ವ್ಯಕ್ತಿ ಸರಿಯಾದ ಆರೋಗ್ಯಕರ ಪದ್ದತಿಯನ್ನ ಪಾಲಿಸದೆ ಇದ್ದಾಗ ಹಾಗೆ ಕೆಲವೊಂದು ಬಾರಿ ಸರಿಯಾದ ಆರೋಗ್ಯಕರ ಪದ್ದತಿಯನ್ನ ಪಾಲಿಸಿದರೂ ಕೆಲವೊಂದು ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ ಆಗ ಅದಕ್ಕೆ ಕಾರಣ ತಿಳಿಯುವುದು ಕಷ್ಟವಾಗುತ್ತದೆ. ಆ ಸಮಯದಲ್ಲಿ ಉಳಿದಿರುವ ದಾರಿ ಅಂದರೆ ನಿಮಗೆ ಬಂದಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು.

ಇವತ್ತಿನ ಲೇಖನಿಯಲ್ಲಿ ಕಿಡ್ನಿಯಲ್ಲಿ ಆಗಿರುವಂತಹ ಕಲ್ಲನ್ನೂ ಕರಗಿಸುವುದಕ್ಕೆ ಜತೆಗೆ ಹೃದಯ ಸಂಬಂಧಿ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳೋದಕ್ಕೆ ಒಂದೊಳ್ಳೆ ಮನೆಮದ್ದನ್ನು ತಿಳಿಸಿಕೊಡುತ್ತಿದ್ದೇವೆ, ಅದನ್ನು ಯಾವುದರಿಂದ ಮಾಡುವುದು ಅಂದರೆ ಈ ಮೇಲೆ ತಿಳಿಸಿದಂತಹ ಈ ನೆಗ್ಗಿಲು ಮುಳ್ಳಿನ ಸಹಾಯದಿಂದ ಮಾಡುವುದು.

ಹೌದು ಪ್ರಿಯ ಸ್ನೇಹಿತರೆ ನೆಗ್ಗಿಲುಮುಳ್ಳು ಇದರ ಹೆಸರು ಬಹಳಷ್ಟು ಜನರಿಗೆ ಪರಿಚಯ ಇರುತ್ತದೆ ಹಳ್ಳಿಗಾಡು ಪ್ರದೇಶಗಳಲ್ಲಿ ದೊರೆಯುವ ಈ ಮುಳ್ಳನ್ನು ತಂದು ಇದರಿಂದ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳುತ್ತಾರೆ ಮಂದಿ ಕೆಲವೊಂದು ಅನಾರೋಗ್ಯ ಸಮಸ್ಯೆಗಳಿಗೆ ದೊಡ್ಡ ದೊಡ್ಡ ಪಟ್ಟಣಕ್ಕೆ ಹೋಗಿ ಬಂದರೂ ಅಲ್ಲಿ ವೈದ್ಯರನ್ನ ಭೇಟಿ ನೀಡಿ ಬಂದರು ಸಮಸ್ಯೆಗೆ ಪರಿಹಾರ ದೊರೆತಿರುವುದಿಲ್ಲ, ಯಾವ ವೈದ್ಯರಿಂದ ದೊರೆಯದ ಪರಿಹಾರಗಳು ನಾಟಿ ಔಷಧಿ ಆಯುರ್ವೇದ ಪದ್ಧತಿಯ ಮೂಲಕ ಬಗೆಹರಿದಿರುವುದುಂಟು.

ಇವತ್ತಿನ ಲೇಖನಿಯಲ್ಲಿ ನೆಗ್ಗಿಲ ಮುಳ್ಳಿನ ಬಗ್ಗೆ ಮಾತನಾಡುತ್ತಿದ್ದು ಇದನ್ನು ಹೇಗೆ ಉಪಯೋಗಿಸುವುದು ಅಂತ ಹೇಳುವುದಾದರೆ ಬಹಳಷ್ಟು ಮಂದಿಗೆ ಅದರಲ್ಲಿಯೂ ಈ ವಯಸ್ಸು ಅರುವತ್ತು ದಾಟಿದವರಲ್ಲಿ ಪುರುಷರಿಗೆ ಮಹಿಳೆಯರಿಗೆ ಅನ್ನದೆ ಉರಿಮೂತ್ರ ಸಮಸ್ಯೆ ಅಥವಾ ಮೂತ್ರ ನಿಲ್ಲುತ್ತಾ ಇರುವುದಿಲ್ಲ ಇಂತಹ ತೊಂದರೆಯಿಂದ ಬಳಲುತ್ತಿರುತ್ತಾರೆ.

ಅಂತಹವರು ಆಸ್ಪತ್ರೆಗಳಿಗೆ ಹೋಗಿ ಇದಕ್ಕೆ ಚಿಕಿತ್ಸೆ ಕೊಡಿ ಅಂತ ಕೇಳಲು ಆಗುವುದಿಲ್ಲ ಹಂಗು ಇಂತಹ ಸಮಸ್ಯೆಗೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಕೊಳ್ಳುತ್ತವೆ ಅಂದರೆ ಅದನ್ನ ಬಳಸಿ ನಾವು ಅದರಿಂದ ಫಲಿತಾಂಶ ಪಡೆದುಕೊಳ್ಳುವಷ್ಟರಲ್ಲಿ ಸಾಕಾಗಿ ಹೋಗಿರುತ್ತದೆ ಆದರೆ ನೆಗ್ಗಿಲ ಮುಳ್ಳಿನ ಪ್ರಯೋಜನ ಪಡೆದುಕೊಂಡರೆ ಉರಿಮೂತ್ರ ಸಮಸ್ಯೆ ಅಥವಾ ಮೂತ್ರಪಿಂಡಗಳಿಗೆ ಸಂಬಂಧಿಸಿದ ಯಾವುದೇ ತೊಂದರೆಯಾಗಲಿ ಬಹುಬೇಗ ನಿವಾರಣೆ ಆಗುತ್ತದೆ.

ವಯಸ್ಸಾಗುತ್ತಿದ್ದ ಹಾಗೆ ದೇಹದಲ್ಲಿ ಏನೆಲ್ಲ ಬದಲಾವಣೆಯಾಗುತ್ತದೆ ಜತೆಗೆ ಏನೆಲ್ಲ ಅನಾರೋಗ್ಯ ಸಮಸ್ಯೆಗಳು ಉಂಟಾಗಿ ಬಿಡುತ್ತದೆ ಅಲ್ವಾ ಅದರಲ್ಲಿ ಈ ಹೃದಯ ಸಂಬಂಧಿ ಸಮಸ್ಯೆಗಳು ಕೂಡ ಒಂದಾಗಿದೆ ಅಂತಹವರು ನೆಗ್ಗಿಲ ಮುಳ್ಳಿನ ಪ್ರಯೋಜನವನ್ನು ಪಡೆದುಕೊಳ್ಳಿ.

ಈ ಮುಳ್ಳಿನ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಬೇಕು ಅಂದರೆ ಇದನ್ನು ಪುಡಿ ಮಾಡಿ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ನೀರನ್ನು ಚೆನ್ನಾಗಿ ಕುದಿಸಬೇಕು ಎಷ್ಟು ಪ್ರಮಾಣದಲ್ಲಿ ಅಂದರೆ 1 ಗ್ಲಾಸ್ ನೀರನ್ನು ಕಾಲು ಲೋಟ ಆಗುವವರೆಗೂ ನೀರನ್ನು ಕುದಿಸಿ ಅದನ್ನು ಬೆಳಿಗ್ಗೆ ಖಾಲಿಹೊಟ್ಟೆಗೆ ಕುಡಿಯಬೇಕು.

ಈ ಸರಳ ವಿಧಾನವನ್ನು ಪಾಲಿಸಿಕೊಂಡು ಬಂದರೆ ಈ ಮೇಲೆ ತಿಳಿಸಿದಂತಹ ಹಲವಾರು ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ಎಂಬುದು ದೊರೆಯುತ್ತದೆ, ನೀವು ಕೂಡ ಇದರ ಫಲಿತಾಂಶವನ್ನು ಕಾಣುತ್ತೀರಾ ಈ ಮೇಲ್ಕಂಡ ಯಾವುದೇ ಸಮಸ್ಯೆ ಇದ್ದರೂ ಅದರ ಪ್ರಯೋಜನ ಪಡೆದುಕೊಳ್ಳಿ ಸಾಕು ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.