ಕೆಲವೊಂದು ಬಾರಿ ನಾವು ಏನಾದ್ರು ತಿಂದ್ರೆ ಆಗಿಬರೋದಿಲ್ಲ , ಅದಕ್ಕೆ ಇದೆ ಅದು ಏನು ಗೊತ್ತ

22

ನಿಮಗಿದು ಗೊತ್ತಾ ಆಚೆ ಆಹಾರಗಳನ್ನು ಹೆಚ್ಚಾಗಿ ತಿನ್ನುವುದರಿಂದ ಫುಡ್ ಫಾಯ್ಸನ್ ಆಗುವ ಸಾಧ್ಯತೆ ಇರುತ್ತದೆ. ಹೌದು ಕೆಲವರಿಗೆ ಆಚೆ ತಿಂದಾಗ ಡೀಸೆಂಟ್ರಿ ಆಗಬಹುದು ಅಥವಾ ಕೆಲವರಿಗೆ ಆಚೆ ತಿಂದಾಗ ಜ್ವರದ ಸಮಸ್ಯೆ ಅಥವಾ ಹೊಟ್ಟೆನೋವು ಕೂಡ ಕಾಡಬಹುದು. ಇದರ ಅರ್ಥ ಅಂದರೆ ಆಚೆ ಆಹಾರ ತಿಂದಾಗ ಅದರಲ್ಲಿ ಬಳಸಿರುವ ಆಹಾರ ಪದಾರ್ಥಗಳು ಕೆಟ್ಟಿರಬಹುದು ಅಥವಾ ಆಚೆ ಸೊಳ್ಳೆ,

ನೊಣಗಳಿಂದ ಅಥವಾ ರಸ್ತೆಯ ಬದಿಯಲ್ಲಿ ದೂಳು ಆಹಾರದೊಂದಿಗೆ ಕೂತು ಅದೂ ನಮ್ಮ ಹೊಟ್ಟೆಗೆ ಸೇರಿದಾಗ ಜೀರ್ಣವಾಗದೆ ಫುಡ್ ಪಾಯ್ಸನ್ ಆಗಬಹುದು. ಈ ರೀತಿಯಾಗಿ ಸಮಸ್ಯೆಗಳು ಕಾಡುತ್ತಿದ್ದರೆ ನೀವು ಆಚೆ ಆಹಾರಗಳ ಸೇವನೆ ಮಾಡುವುದು ಕಡಿಮೆ ಮಾಡಬೇಕಾಗುತ್ತದೆ. ಅದರಲ್ಲಿಯೂ ಮಳೆಗಾಲದ ಸಮಯದಲ್ಲಿ ಆಚೆ ಆಹಾರ ತಿನ್ನುವುದು ಅಷ್ಟೊಂದು ಆರೋಗ್ಯಕ್ಕೆ ಒಳ್ಳೆಯದಲ್ಲಾ.

ಈ ಫುಡ್ ಪಾಯ್ಸನ್ ಗೆ ಸಾಮಾನ್ಯವಾಗಿ ನೀವು ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಕೆಲವೊಂದು ಪರಿಹಾರಗಳನ್ನು ತಿಳಿಸುತ್ತೇವೆ ಹಾಗೆ ಆಚೆ ಆಹಾರ ತಿಂದಾಗ ಕೆಲವರಿಗೆ ಹೊಟ್ಟೆ ನೋವು ಅಥವಾ ಡಿಸೆಂಟ್ರೀ ಕೂಡ ಆಗುತ್ತಾ ಇರುತ್ತದೆ ಇನ್ನ ಕೆಲವರಿಗೆ ಅಜೀರ್ಣತೆಯಿಂದ ತಲೆನೋವಿನ ಸಮಸ್ಯೆ ಕೂಡ ಉಂಟಾಗುತ್ತದೆ. ಅಂತಹ ಸಮಯದಲ್ಲಿ ನೀವು ಮಾಡಿಕೊಳ್ಳಬಹುದಾದ ಕೆಲವೊಂದು ಮದ್ದುಗಳನ್ನು ಕೂಡ ತಿಳಿಸುತ್ತೇವೆ ನೀವು ಈ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ತಿಂದ ಆಹಾರ ಜೀರ್ಣವಾಗಲು ಅಜೀರ್ಣತೆ ದೂರವಾಗುತ್ತದೆ ಮತ್ತು ಫುಡ್ ಪಾಯ್ಸನ್ ನಿಂದ ಜ್ವರದ ಸಮಸ್ಯೆ ಕಾಡುತ್ತಿದ್ದರೆ ಅದಕ್ಕೆ ಕೂಡ 1ಪರಿಹಾರವನ್ನು ತಿಳಿಸುತ್ತೇವೆ ಅದನ್ನು ಮಾಡಿಕೊಳ್ಳುವುದರಿಂದ ಫುಡ್ ಪಾಯ್ಸನ್ ಸಮಸ್ಯೆ ಬೇಗ ಪರಿಹಾರ ಆಗುತ್ತದೆ.

ಆಚೆ ಆಹಾರ ತಿಂದು ಬಂದ ನಂತರ ಮನೆಯಲ್ಲಿ ಜೀರಿಗೆ ನೀರು ಕುಡಿಯುವುದು ಅಥವಾ ಕಲ್ಲುಸಕ್ಕರೆಯನ್ನು ತಿನ್ನುವುದು ಮಾಡುವುದರಿಂದ ತಿಂದ ಆಹಾರ ಸಂಪೂರ್ಣವಾಗಿ ಜೀರ್ಣಗೊಳ್ಳುತ್ತದೆ ಕೆಲವರು ಕಂಠಪೂರ್ತಿ ತಿಂದಿರುತ್ತಾರೆ ಆಗ ಹೊಟ್ಟೆ ಉಬ್ಬರವಾಗಿ ವಾಂತಿ ಬರುವ ಅನುಭವ ಆಗುತ್ತಾ ಇರುತ್ತದೆ ಆಗ ಅಲ್ಲೂ ಕೂಡ ಕಲ್ಲುಸಕ್ಕರೆಯನ್ನು ಸೇವಿಸುವುದರಿಂದ ಈ ಹೊಟ್ಟೆ ಉಬ್ಬರದ ಸಮಸ್ಯೆ ಪರಿಹಾರ ಆಗುತ್ತದೆ.

ಫುಡ್ ಪಾಯ್ಸನ್ ನಿಂದ ಭೇಟಿಯಾಗುತ್ತಿದ್ದು ತಲೆಸುತ್ತು ಮತ್ತು ಜ್ವರ ಕೂಡ ಇದೆ ಅನ್ನುವವರು ದಾಳಿಂಬೆ ಹಣ್ಣಿನ ಎಲೆಯ ಕಷಾಯವನ್ನು ಮಾಡಿ ಸೇವಿಸಬೇಕು ಕಷಾಯ ಮಾಡುವ ವಿಧಾನ ತಿಳಿದೇ ಇದೆ ಈ ಕಷಾಯ ಮಾಡುವಾಗ ರುಚಿಗಾಗಿ ಸಕ್ಕರೆ ಬೆಲ್ಲ ಜೇನುತುಪ್ಪ ಉಪ್ಪು ಇವ್ಯಾವುದನ್ನೂ ಕೂಡ ಬಳಸುವುದು ಬೇಡ. ಈ ಎಲೆಯ ಕಷಾಯವನ್ನು ನೀವು ಮಾಡಿ ಸೇವಿಸುತ್ತಾ ಬರುವುದರಿಂದ ಜ್ವರ ಸಮಸ್ಯೆ ಬೇಗ ಪರಿಹಾರ ಆಗುತ್ತದೆ ಫುಡ್ ಪಾಯ್ಸನ್ ಕೂಡ ಪರಿಹಾರ ಆಗುತ್ತದೆ.

ಈ ರೀತಿಯಾಗಿ ಫುಡ್ ಪಾಯ್ಸನ್ ಆದಾಗ ಜ್ವರ ಬಂದಿಲ್ಲಾ ಬೇದಿ ಮಾತ್ರ ಆಗುತ್ತಿದೆ ಅನ್ನುವವರು ಶುಂಠಿ ಕಷಾಯವನ್ನು ಸೇವಿಸಬಹುದು ಇನ್ನೂ ಬೇದಿ ನಿಲ್ಲುವುದಕ್ಕಾಗಿ ಟೀ ಮತ್ತು ಬನ್ ಅನ್ನು ಸೇರಿಸಬಹುದು ಇದರಿಂದ ಬೇರೆ ನಿಲ್ಲುತ್ತದೆ ಹಾಗೆ ಹೊಟ್ಟೆ ನೋವು ಇದೆ ಅನ್ನುವವರು ಮಜ್ಜಿಗೆ ಅನ್ನವನ್ನೇ ಸೇವಿಸಬೇಕು. ನೆನಪಿನಲ್ಲಿಡಿ ಫುಡ್ ಪಾಯ್ಸನ್ ಆದಾಗ ಮಸಾಲಯುಕ್ತ ಪದಾರ್ಥಗಳ ಅನ್ನ ಸಾಂಬಾರ್ ಆಗಲಿ ಸೇವಿಸುವುದು ಕಡಿಮೆ ಮಾಡಿ ಫುಡ್ ಪಾಯ್ಸನ್ ಅದರ ಅದೆಷ್ಟು ಬೇಳೆ ಕಟ್ಟಿನ ಅನ್ನ ಅಥವಾ ಮಜ್ಜಿಗೆ ಅನ್ನವನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಉತ್ತಮ.

LEAVE A REPLY

Please enter your comment!
Please enter your name here