ಕೆಲವೊಂದು ಸಾರಿ ಆಗುವ ಹೊಟ್ಟೆ ಉಬ್ಬರವನ್ನ ತಡೆಗಟ್ಟಲು ಹಾಗು ತಕ್ಷಣಕ್ಕೆ ಕಡಿಮೆ ಮಾಡಿಕೊಳ್ಳಲು ಈ ಪಾನೀಯವನ್ನ ಸೇವಿಸಿ ಸಾಕು..

69

ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತಿದೆಯೇ ಹಾಗಾದರೆ ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ನೋಡಿ ಸರಳ ಪರಿಹಾರ ಇದನ್ನು ಪಾಲಿಸುವುದರಿಂದ ಗ್ಯಾಸ್ಟ್ರಿಕ್ ಗೆ ಸಂಪೂರ್ಣವಾಗಿ ಗುಡ್ ಬೈ ಹೇಳಬಹುದು. ಗ್ಯಾಸ್ಟ್ರಿಕ್ ನಿವಾರಣೆಗೆ ಮಾಡಿ ಈ ಮನೆಮದ್ದು, ಇದನ್ನು ಮಾಡುವ ವಿಧಾನ ಹೇಗೆ ಎಂಬುದನ್ನು ತಿಳಿಸುತ್ತಿದ್ದೇವೆ ಈ ಲೇಖನಿಯಲ್ಲಿ. ಹಾಗಾಗಿ ಸಂಪೂರ್ಣವಾಗಿ ಮಾಹಿತಿ ತಿಳಿದು ಇದರ ಸಂಪೂರ್ಣ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳುವುದಕ್ಕೆ ನಾವು ಹೇಳಿದ ವಿಧಾನದಲ್ಲಿಯೇ ಈ ಮನೆಮದ್ದು ಪಾಲಿಸಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

ಹೌದು ಇತ್ತೀಚಿನ ದಿನಗಳಲ್ಲಿ ಅದರಲ್ಲಿಯೂ ಬ್ಯುಸಿ ಶೆಡ್ಯೂಲ್ ಇರುವ ಮಂದಿ ಕೆಲಸ ಹೆಚ್ಚು ಅನ್ನುವ ಮಂದಿ ಊಟದ ಕಡೆ ಗಮನ ಕೊಡುವುದಿಲ್ಲ ಅದರಲ್ಲಿ ಪೋಷಕಾಂಶಭರಿತ ಊಟ ಮಾಡುವುದರ ಕಡೆಗೆ ಗಮನವೇ ಕೊಡುವುದಿಲ್ಲ ಏನೋ ಹಸಿವಾಯಿತು ತಿನ್ನಬೇಕು, ಹೊಟ್ಟೆ ತುಂಬಬೇಕು ಸಾಕು ಕೆಲಸ ಮಾಡ ಬೇಕು ಅನ್ನುವವರು ಹೆಚ್ಚಾಗಿದ್ದಾರೆ. ಅಂಥವರಲ್ಲಿ ಕಾಡುವ ಈ ಗ್ಯಾಸ್ಟ್ರಿಕ್ ಸಮಸ್ಯೆಗೆ ಅವರು ಬೇರೆ ಪರಿಹಾರಗಳನ್ನು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ

ಹಾಗಾಗಿ ಇಂದಿನ ಲೇಖನದಲ್ಲಿ ನಾವು ಹೇಳುವಂತಹ ಮನೆಮದ್ದನ್ನು ಪಾಲಿಸಿ ಗ್ಯಾಸ್ಟ್ರಿಕ್ ಸಮಸ್ಯೆಗೆ ನೀವು ಪರಿಹಾರ ಕಂಡುಕೊಳ್ಳಿ ಹೌದು ಗ್ಯಾಸ್ಟ್ರಿಕ್ ನಿವಾರಣೆಗೆ ಮನೆಮದ್ದು ಉತ್ತಮವಾಗಿರುತ್ತೆ. ಯಾಕೆಂದರೆ ಗ್ಯಾಸ್ಟ್ರಿಕ್ ಉಂಟಾದಾಗ ದೇಹದಲ್ಲಿ ಆಲ್ಕಲೈನ್ ಅಂಶ ಅಂದರೆ ಅಸಿಡಿಟಿ ಅಂಶ ಹೆಚ್ಚಾಗಿರುತ್ತದೆ. ಆದ್ದರಿಂದಲೇ ಹುಳಿತೇಗು ಎದೆ ಉರಿ ಹೊಟ್ಟೆ ಉರಿ ಕಿಬ್ಬೊಟ್ಟೆ ನೋವು ಇಂತಹ ಎಲ್ಲ ಸಮಸ್ಯೆಗಳು ಉಂಟಾಗುತ್ತದೆ

ಆದರೆ ಮನೆಮದ್ದನ್ನು ಪಾಲಿಸಿ ಆ ಅಸಿಡಿಟಿ ಅಂಶವನ್ನ ನಿವಾರಣೆ ಮಾಡಿಕೊಂಡರೆ ತಾನಾಗಿಯೇ ಗ್ಯಾಸ್ಟ್ರಿಕ್ ಕೂಡ ನಿವಾರಣೆಯಾಗುತ್ತದೆ ಜೊತೆಗೆ ಕೆಲವರಿಗೆ ತಿಂದ ಆಹಾರ ಸಂಪೂರ್ಣವಾಗಿ ಜೀರ್ಣ ಆಗದೆ ಹೋದರೂ ಕೂಡ ಗ್ಯಾಸ್ಟ್ರಿಕ್ ಹೆಚ್ಚುತ್ತೆ ಮತ್ತು ಹುಳಿತೇಗು ಎದೆಯುರಿ ಬರುತ್ತೆ

ಅದಕ್ಕೂ ಕೂಡ ಈ ಮನೆಮದ್ದು ಪರಿಹರ ಕೊಡುತ್ತೆ ಈ ಮನೆಮದ್ದು ಮಾಡುವ ವಿಧಾನ ಹೇಗೆಂದರೆ ಬಿಸಿ ನೀರನ್ನು ತೆಗೆದುಕೊಳ್ಳಿ ಅಥವಾ ನೀರು ಕುದಿಯಲು ಇಡಿ ಆ ನೀರು ಕುದ್ದ ಬಳಿಕ ಅದಕ್ಕೆ ಅರ್ಧ ಚಮಚ ಕಪ್ಪು ಜೀರಿಗೆ ಪುಡಿ ಮತ್ತು ಕಾಲು ಚಮಚ ಉಪ್ಪು ಕಾಲು ಚಮಚ ಇಂಗು ಕಾಲು ಚಮಚ ಹಿಪ್ಪಲಿ ಪುಡಿ

ಇದಿಷ್ಟು ಪದಾರ್ಥಗಳನ್ನು ಕುದಿಯುವ ನೀರಿಗೆ ಹಾಕಿ ಮಿಶ್ರ ಮಾಡಿ ಆ ನೀರನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು ಬಳಿಕ ಆ ನೀರನ್ನು ಶೋಧಿಸಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯುತ್ತಾ ಬನ್ನಿ ಇದರಿಂದ ಬಹಳಷ್ಟು ತೇಗು ಹೊರ ಹೋಗುತ್ತದೆ ಮತ್ತು ಗ್ಯಾಸ್ ಹೊರ ಹೋಗುತ್ತದೆ ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ ಅಷ್ಟೇ ಅಲ್ಲ ಹಿಪ್ಪಲೆ ದೇಹವನ್ನು ತಂಪಾಗಿಸುತ್ತದೆ ವೇಗದಲ್ಲಿರುವ ಆಸಿಡ್ ಅಂಶವನ್ನು ಹೊರಹಾಕುತ್ತೆ.

ಈ ಸರಳ ವಿಧಾನ ಗ್ಯಾಸ್ಟ್ರಿಕ್ ನಿವಾರಣೆಗೆ ಉತ್ತಮವಾಗಿದೆ ಜೊತೆಗೆ ಜೀರಿಗೆ ಪುಡಿ ಇಂಗು ಹಿಪ್ಪಲಿ ಇವುಗಳನ್ನು ಆದಷ್ಟು ಬೇಗ ವ್ಯಾಸ್ ನಿವಾರಣೆಗೆ ಉಪಯುಕ್ತವಾಗಿ ಇರುವುದರಿಂದ ಈ ಮನೆ ಮದ್ದು ಬಹಳ ಬೇಗ ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರವನ್ನು ಕೊಡುತ್ತದೆ

ಈ ಮನೆಮದ್ದನ್ನು ಪಾಲಿಸುವಾಗ ಹೆಚ್ಚು ಹೆಚ್ಚು ನೀರು ಕುಡಿಯುವ ರೂಢಿ ಮಾಡಿಕೊಳ್ಳಿ ಯಾಕೆಂದರೆ ಗ್ಯಾಸ್ಟ್ರಿಕ್ ಆದಾಗ ಹೆಚ್ಚು ನೀರು ಕುಡಿಯುವುದರಿಂದ ಹೊಟ್ಟೆ ಖಾಲಿ ಇರುವುದಿಲ್ಲ ಇದರಿಂದ ಗ್ಯಾಸ್ಟ್ರಿಕ್ ಇನ್ನಷ್ಟು ಹೆಚ್ಚುವುದಿಲ್ಲ ಜೊತೆಗೆ ಹೆಚ್ಚು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ಆ್ಯಸಿಡ್ ಅಂಶ ಅಂದರೆ ಈ ಆಲ್ಕಲೈನ್ ಅಂಶ ಹೊರಹೋಗುತ್ತದೆ ತಾನಾಗಿಯೇ ದೇಹದ ಉಷ್ಣಾಂಶ ಕಡಿಮೆ ಆಗಿ ಗ್ಯಾಸ್ಟ್ರಿಕ್ ಕೂಡ ನಿವಾರಣೆಯಾಗುತ್ತದೆ.

LEAVE A REPLY

Please enter your comment!
Please enter your name here