ಕೇವಲ ಒಂದು ಐದು ದಿನ ಇದನ್ನ ಕುಡಿದು ನೋಡಿ ಸಾಕು ನರಗಳ ವೀಕ್ನೆಸ್ಸ್ , ರಕ್ತದ ಕೊರತೆ ,ಕೈ ಕಾಲು ನೋವು ಏನೇ ಇದ್ರೂ ಪವಾಡ ಸದ್ರೂಪದಲ್ಲಿ ನಿವಾರಣೆ ಆಗುತ್ತೆ..

Sanjay Kumar
2 Min Read

ಕೆಲವರಿಗೆ ಸ್ವಲ್ಪ ದೂರ ನಡೆದರೂ ಸ್ವಲ್ಪ ಕೆಲಸ ಮಾಡಿದರೂ ಸಹ ಸುಸ್ತಾಗುತ್ತದೆ ಹಾಗಾಗಿ ಅಂತಹವರ ಶರೀರಕ್ಕೆ ಎನರ್ಜಿಯ ಅಗತ್ಯ ತುಂಬಾನೇ ಇರುತ್ತದೆ. ಅದಕ್ಕಾಗಿ ನೀವು ಹೊಟ್ಟೆ ತುಂಬುವಷ್ಟು ಆರೋಗ್ಯಕರ ಆಹಾರಗಳನ್ನು ತಿನ್ನ ಬೇಕಿರುತ್ತದೆ ಜೊತೆಗೆ ಕೆಲವೊಂದು ಪರಿಹಾರಗಳನ್ನು ಕೂಡ ಮಾಡಬೇಕಿರುತ್ತದೆ ಆಗಲೇ ಈ ಸುಸ್ತು ನಿಶ್ಶಕ್ತಿ ಅಂತಹ ಸಮಸ್ಯೆ ದೂರವಾಗಿ ಆರೋಗ್ಯ ಕೂಡ ವೃದ್ಧಿಸುತ್ತದೆ.

ಆದ್ದರಿಂದ ನಾವು ಇವತ್ತಿನ ಮಾಹಿತಿಯಲ್ಲಿ ಸುಸ್ತು ನಿಶಕ್ತಿ ಕಾಡುತ್ತಿರುವವರಿಗಾಗಿ ಒಂದೊಳ್ಳೆ ಎನರ್ಜಿ ಡ್ರಿಂಕ್ ಅನ್ನೂ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇವೆ, ಇದು ತುಂಬ ಸುಲಭವಾಗಿ ಮಾಡಿಕೊಳ್ಳಬಹುದಾದಂತಹ ಡ್ರಿಂಕ್ ಆಗಿದೆ. ಇದನ್ನ ಯಾವ ಸಮಯದಲ್ಲಿ ಕುಡಿಯುವುದು ಉತ್ತಮ ಎಂದು ಹೇಳುವುದಾದರೆ ಅದು ಬೆಳಗಿನ ಸಮಯ ಆಗಿರುತ್ತದೆ ಬೆಳಿಗ್ಗೆ ನೀವು ತಿಂಡಿಯ ನಂತರ ಅಥವಾ ತಿಂಡಿಗೆ ಮೊದಲು ಈ ಡ್ರಿಂಕ್ ಅನ್ನು ಕುಡಿಯಬಹುದು.

ಮಾಡುವ ವಿಧಾನ ತುಂಬ ಸುಲಭ ಹಾಗೂ ಡ್ರಿಂಕ್ ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಕೂಡ ತುಂಬ ಸುಲಭವಾಗಿ ಕೈಗೆಟಕುತ್ತದೆ ಹಾಗೂ ಎಲ್ಲಾ ಕಡೆ ಈ ಆಹಾರ ಪದಾರ್ಥಗಳು ದೊರೆಯುತ್ತದೆ.ಈ ಪರಿಹಾರವನ್ನು ಯಾರೆಲ್ಲ ಮಾಡಬಹುದು ಅಂದರೆ ಅದು ಚಿಕ್ಕವರಿಂದ ಹಿಡಿದು ಅಂದರೆ 5ವರ್ಷ ಮೇಲ್ಪಟ್ಟ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಸೇವಿಸಬಹುದು ಆದರೆ ಸಕ್ಕರೆ ಕಾಯಿಲೆ ಇರುವವರು ಈ ಡ್ರಿಂಕ್ ಅನ್ನ ಕುಡಿಯುವುದು ಉತ್ತಮವಾಗಿರುವುದಿಲ್ಲ.

ಈ ಡ್ರಿಂಕ್ ಅನ್ನ ಕೊಡುವುದರಿಂದ ಆಗುವ ಲಾಭಗಳ ಕುರಿತು ಮೊದಲು ತಿಳಿದುಕೊಳ್ಳೋಣ. ಇವರೆಲ್ಲರಿಗೂ ಮಂಡಿನೋವು ಕೀಲುನೋವು ಕಾಡುತ್ತಿರುತ್ತದೆ ಯಾರಿಗೆ ಸುಸ್ತು ನಿಶಕ್ತಿ ಆಗುತ್ತಿರುತ್ತದೆ ರಕ್ತಹೀನತೆ ಉಂಟಾಗುತ್ತದೆ ಮತ್ತು ದೇಹದಲ್ಲಿ ಬಲ ಇರುವುದಿಲ್ಲ ಹಾಗೆ ಮೆದುಳಿನ ಬೆಳವಣಿಗೆ ಆಗಬೇಕು ಎಂದವರು ಕೂಡ ಈ ಪರಿಹಾರವನ್ನು ಮಾಡಬಹುದು ಈ ಡ್ರಿಂಕ್ ಅನ್ನು ಕುಡಿಯಬಹುದು.

ಈಗ ಈ ಡ್ರಿಂಕ್ ಅನ್ನ ಮಾಡುವ ವಿಧಾನವನ್ನು ತಿಳಿಯೋಣ ಬಳಿಕ ಇನ್ನಷ್ಟು ಡ್ರಿಂಕ್ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ.ಮೊದಲಿಗೆ ಖರ್ಜೂರವನ್ನು ತೆಗೆದುಕೊಂಡು ಅದನ್ನು ಸ್ವಚ್ಛ ಮಾಡಿ ಒಣ ಖರ್ಜೂರ ಆದರೆ ನೆನೆಸಿಟ್ಟು ತೆಗೆದುಕೊಳ್ಳಿ ಹಸಿ ಖರ್ಜೂರ ವಾದರೆ ಮೀನಿನ ಸಿಪ್ಪೆಯನ್ನು ತೆಗೆದು ಒಳ ಭಾಗವನ್ನು ತೆಗೆದುಕೊಳ್ಳಿ ಈಗ ಇದಕ್ಕೆ ನೆನೆಸಿಟ್ಟ ಬಾದಾಮಿಯನ್ನು ಸಿಪ್ಪೆ ತೆಗೆದು ಖರ್ಜೂರದೊಂದಿಗೆ ಮಿಶ್ರ ಮಾಡಿ ಇದಕ್ಕೆ ಚಿಟಿಕೆಯಷ್ಟು ಅರಿಶಿನ ಮಿಶ್ರಣ ಮಾಡಿ ಇದಕ್ಕೆ ಆಕಳಿನ ಹಾಲನ್ನ ಸ್ವಲ್ಪಸ್ವಲ್ಪವೇ ಹಾಕುತ್ತ ಜ್ಯೂಸ್ ಮಾಡಿಕೊಳ್ಳಿ.

ನೀವು ಎಷ್ಟು ಜನರಿಗೆ ಜ್ಯೂಸ್ ಮಾಡುತ್ತಿದ್ದೀರಾ ಉದಾಹರಣೆಗೆ ಇಬ್ಬರಿಗೆ ಅಂದರೆ 2 ಲೋಟ ಆಕಳಿನ ಹಾಲು ತೆಗೆದುಕೊಂಡು ಈ ಮಿಶ್ರಣದೊಂದಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ.ಬಳಿಕ ಇಷ್ಟಾದ ಮೇಲೆ ಇನ್ನಷ್ಟು ಹಾಲನ್ನು ಹಾಕಿ ಜ್ಯೂಸ್ ಮಾಡಿ ಇದನ್ನು ಶೋಧಿಸುವುದು ಬೇಡ ಹಾಗೆ ಸೇವಿಸಬೇಕು. ಇದರಲ್ಲಿ ಈಗಾಗಲೇ ಸಿಹಿಯ ಅಂಶ ಇರುವುದರಿಂದ ಸಕ್ಕರೆ ಬೆಲ್ಲ ಇವುಗಳನ್ನ ಹಾಕಿಕೊಳ್ಳುವ ಅಗತ್ಯ ಇರುವುದಿಲ್ಲ ಹಾಗೂ ಇನ್ನಷ್ಟು ಸಿಹಿ ಬೇಕು ಅಂದಲ್ಲಿ ಜೇನು ತುಪ್ಪವನ್ನು ಇದಕ್ಕೆ ಮಿಶ್ರ ಮಾಡಿಕೊಳ್ಳಿ.

ಈ ಡ್ರಿಂಕ್ ಅನ್ನು ಪ್ರತಿದಿನ ಕುಡಿಯಬಹುದು ದಿನಬಿಟ್ಟು ದಿನ ಕುಡಿಯಬಹುದು. ಎ ಡ್ರಿಂಕ್ ಅನ್ನು ವಾರಕ್ಕೊಮ್ಮೆಯಾದರೂ ನೀವು ಸೇವಿಸಬಹುದು ಇದರಲ್ಲಿ ಬಳಸಿರುವ ಬಾದಾಮಿ ಕಣ್ಣಿಗೆ ಪುಷ್ಟಿನೀಡುತ್ತದೆ ಕಣ್ಣಿನ ದೃಷ್ಟಿಯನ್ನು ವೃದ್ಧಿಸುತ್ತದೆ ಹಾಗೂ ಮಿದುಳಿನ ಬೆಳವಣಿಗೆಯನ್ನು ಕೂಡ ಹೆಚ್ಚು ಮಾಡುತ್ತದೆ.ಇದರ ಜೊತೆಗೆ ಖರ್ಜೂರದಲ್ಲಿರುವ ಫೈಬರ್ ಅಂಶ ಜೊತೆಗೆ ಕಬ್ಬಿಣದ ಅಂಶ ರಕ್ತಹೀನತೆಯನ್ನು ಪರಿಹಾರ ಮಾಡುತ್ತದೆ ಆಕಳಿನ ಹಾಲು ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.ಹೀಗೆ ಈ ಡ್ರಿಂಕ್ ಅನ್ನೂ ಕುಡಿಯುತ್ತ ಬಂದರೆ ಸಾಕು ಸಾಕಷ್ಟು ಆರೋಗ್ಯಕರ ಲಾಭಗಳು ನಿಮಗೆ ನಿಮ್ಮ ಆರೋಗ್ಯಕ್ಕೆ ಲಭಿಸುತ್ತದೆ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.