ಕೊನೆ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಎದ್ದು ಬರಬಹುದೇನೋ ಎಂದು ದೇಹ ಮುಟ್ಟಿ ನೋಡುತ್ತಿರುವ ಪತ್ನಿ ಅಶ್ವಿನಿ ಪತಿಗಾಗಿ ತೆಗೆದುಕೊಂಡ ಮಹತ್ವ ನಿರ್ಧಾರ ನೋಡಿ.

30

ಹೌದು ಕನ್ನಡಿಗರೇಕೆ ಕಳೆದ ಶುಕ್ರವಾರ ಬ್ಲಾಕ್ ಫ್ರೈಡೆ ಅಂತ ಹೇಳಿದರೆ ತಪ್ಪಾಗುವುದಿಲ್ಲ ನಂಬಲು ಅಸಾಧ್ಯ ವಾಗಿರುವ ಈ ಸತ್ಯವನ್ನ ಸುಳ್ಳು ದೇವರೇ ಅಂತ ಬೇಡಿಕೊಳ್ಳುವವಳು ಹಾಗೇ ಆಗಿದೆ. ಅದೆಷ್ಟೋ ಮುಗ್ಧ ಮನಸ್ಸಿನ ಪ್ರಾರ್ಥನೆಗಳು ಯಾಕೆ ದೇವರ ಮನಮುಟ್ಟಲಿಲ್ಲ ಯಾಕೆ ಈ ರೀತಿ ಆಯ್ತು ದೇವರು ಯಾಕೆ ನಮ್ಮ ಈ ರಾಜಕುಮಾರನನ್ನು ಇಷ್ಟು ಬೇಗ ಕರೆಸಿಕೊಂಡ ಅವರ ತಂದೆ ತಾಯಿಯ ಮಡಿಲು ಸೇರಿಸಿದ ಇವನ ಲೆಕ್ಕಾಚಾರ ಇವತ್ತಿಗೂ ತಿಳಿಯುತ್ತಿಲ್ಲ.

ಯಾರ ದೃಷ್ಟಿ ತಾಕಿತೋ ನಮ್ಮ ಈ ಕರುನಾಡ ರಾಜನಿಗೆ ಆ ದೇವರಿಗೆ ಅಷ್ಟು ಬೇಗ ಇಷ್ಟವಾಗಿ ಬಿಟ್ಟರೆ ನಮ್ಮ ಅಪ್ಪು ಅವರನ್ನ ಕರುನಾಡ ಜನತೆ ಒಬ್ಬರೂ ಸಹ ದ್ವೇಷಿಸುತ್ತಿರಲಿಲ್ಲ ಇಂತಹ ನೊಬ್ಬ ಅಜಾತಶತ್ರುವನ್ನು ದೇವರು ಕರೆದುಕೊಂಡದ್ದು ಆ ದೇವರು ಎಂತಹ ಕ್ರೂರ ಇರಬೇಕು ಅಂತ ಅನಿಸುತ್ತದೆ ಇನ್ನು ಕರ್ನಾಟಕದ ಮನೆ ಮಗನಾಗಿದ್ದ ಇವರು ನಮ್ಮ ಮಗನಾಗಬೇಕಿತ್ತು ಎಂದು ಎಷ್ಟೋ ಜನರು ಅಂದುಕೊಂಡಿದ್ದರು ಹಾಗೆ ತೆರೆ ಮೇಲೆ ಕಂಡು ನಾವೇ ಎಷ್ಟೋ ವರನ ಇಷ್ಟಪಟ್ಟು ಇವರನ್ನ ಕಳೆದುಕೊಂಡಾಗ ಎಷ್ಟು ಎಂದರೆ ಇಷ್ಟು ವರುಷ ಸಂಸಾರ ಮಾಡಿದ ಅಶ್ವಿನಿ ಅವರ ಕಥೆಯೇನು ಇನ್ನೂ ಅಂತಹ ಅದ್ಭುತವಾದ ತಂದೆಯನ್ನು ಕಳೆದುಕೊಂಡಿರುವ ಆ ಮಕ್ಕಳ ನೋವು ನಿಜಕ್ಕೂ ಯಾರಿಂದಲೂ ಸಹ ತೆಗೆದುಕೊಳ್ಳಲು ಸಾಧ್ಯವಿಲ್ಲ.

ಶುಕ್ರವಾರದ ಹಿಂದಿನ ದಿನ ಅಂದರೆ ಗುರುವಾರ ದಿವಸದಂದು ಗುರುಕಿರಣ್ ಅವರ ಜನುಮದಿನವನ್ನ ಮುಗಿಸಿ ಬಂದವರು ನಗುನಗುತ್ತಾ ಇದ್ದವರು ಬೆಳಿಗ್ಗೆ ಭಜರಂಗಿ ಸಿನೆಮಾಗೆ ಶುಭ ಹಾರೈಸಿದವರು ಮಧ್ಯಾಹ್ನದ ಸಮಯಕ್ಕೆ ಇನಿಲ್ಲ ಅಂದರೆ ಯಾರಿಗೆ ನಂಬಲು ಸಾಧ್ಯ. ಕಂಠೀರವ ಸ್ಟೇಡಿಯಂನಲ್ಲಿ ಚಿರನಿದ್ರೆಗೆ ಜಾರಿದ ಪುನೀತ್ ಅವರ ಬಳಿ ಬಂದು ಅಶ್ವಿನಿಯವರು ಮೈಕೈ ಮುಟ್ಟುತ್ತಾ ಇದ್ದರೂ ಹೌದು ಜೀವ ಇರಬಹುದೇನೋ ಮತ್ತೆ ನನ್ನ ಪತಿ ಎದ್ದು ಬರುತ್ತಾರೆ ಎಂದು ಚಡಪಡಿಸುತ್ತಿದ್ದ ಆ ಮನಸ್ಸು ನೋಡುತ್ತಾ ಇದ್ದರೆ ಕಣ್ಣಲ್ಲಿ ನೀರು ಜಾರುತ್ತಿತ್ತು.

ಇತ್ತ ದೊಡ್ಡ ಮಗಳು ಧೃತಿ ಅಮೇರಿಕಾದಿಂದ ಹೊರಟಿದ್ದು ಶನಿವಾರ ಸಂಜೆಯ ಸಮಯಕ್ಕೆ ಬೆಂಗಳೂರಿನ ಕಂಠೀರವ ಸ್ಟೇಡಿಯಂಗೆ ಆಗಮಿಸುತ್ತಾಳೆ ಯನ್ನು ಭಾನುವಾರ ಪುನೀತ್ ಅವರ ಅಂತಿಮ ಸಂಸ್ಕಾರ ನೆರವೇರಿದೆ. ಇತ್ತ ರಾಜ್ಯ ಸರ್ಕಾರ ಕಂಠೀರವ ಸ್ಟುಡಿಯೋದಲ್ಲಿಯೇ ಪುನೀತ್ ಅವರ ಅಂತಿಮ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದರೂ ಸಹ ರಾಮನಗರದಲ್ಲಿನ ಪುನೀತ್ ಅವರ ತೋಟದಲ್ಲಿಯೇ ಅಂತಿಮ ಸಂಸ್ಕಾರ ಮಾಡಲು ನಿರ್ಧಾರ ಮಾಡಲಾಗಿತ್ತು. ಅತ್ತ ರಾಮನಗರದ ಎಸ್ ಪಿ ಹಾಗೂ ಜಿಲ್ಲಾಧಿಕಾರಿಗಳು ತೋಟಕ್ಕೆ ಭೇಟಿ‌ ನೀಡಿ ಸ್ಥಳ ಪರಿಶೀಲನೆ ಮಾಡಿ ಬಂದಿದ್ದರು.

ಆದರೆ ಇದೀಗ ತನ್ನ ಪತಿ ತನ್ನ ಜೊತೆ ಪದೇ ಪದೇ ಹೇಳುತ್ತಿದ್ದ ಆ ಒಂದು ಮಾತಿಗಾಗಿ ಅವರ ಆಸೆ ನೆರವೇರಿಸಲು ಮುಂದಾಗಿದ್ದಾರೆ. ಹೌದು ಪುನೀತ್ ರಾಜ್ ಕುಮಾರ್ ಅವರು ವಾರಕ್ಕೆ ಒಮ್ಮೆಯಾದರೂ ಅಪ್ಪ ಅಮ್ಮನ ಸಮಾಧಿ ಬಳಿ ಹೋಗುತ್ತಿದ್ದರು. ಅಲ್ಲಿ ಹೋದರೆ ಅವರಿಗೆ ಏನೊ ಒಂದು ರೀತಿ ಸಮಾಧಾನ. ಈ ಬಗ್ಗೆ ಈ ಹಿಂದೆ ರಮೇಶ್ ಅವರು ಕಾರ್ಯಕ್ರಮ ಒಂದರಲ್ಲಿ ಪ್ರಶ್ನಿಸಿದ್ದರು. ನಿಮ್ಮ ಕಾರ್ ಅನ್ನು ಸದಾ ಕಂಠೀರವ ಸ್ಟುಡಿಯೋ ಬಳಿ ನೋಡುತ್ತ ಇರುತ್ತೇನೆ ಎಂದಿದ್ದರು ರಮೇಶ್ ಅವರು. ಆಗ ಪ್ರತಿಕ್ರಿಯೆ ನೀಡಿದ್ದ ಪುನೀತ್ ಅವರು “ಅದೇನೋ ಗೊತ್ತಿಲ್ಲ ಸರ್.

ನನಗೆ ಆ ಜಾಗಕ್ಕೆ ಹೋದರೆ ನೆಮ್ಮದಿನಾನು ಅಲ್ಲಿ ಹೋಗಿ ಏನೂ ಕೇಳಲ್ಲ ಆದರೆ ಅಲ್ಲಿಗೆ ಹೋದರೆ ನನ್ನ ಚಿಂತೆ ಏನೇ ಇದ್ದರೂ ನಿರಾಳ ಆಗಿ ಬಿಡುತ್ತದೆ. ಅದಕ್ಕೆ ಆಗಾಗ ನಾನು ಅಲ್ಲಿಗೆ ಹೋಗಿ ಅಪ್ಪ ಅಮ್ಮನ ಬಳಿ ಸುಮ್ಮನೆ ಕೂತು ಬಿಡುತ್ತೇನೆ. ನನಗೆ ಅಲ್ಲೊಂದು ರೀತಿ ನೆಮ್ಮದಿ ಅನಿಸುತ್ತದೆ ಎಂದಿದ್ದರು. ಇತ್ತ ಪತ್ನಿಯ ಜೊತೆಯೂ ಆಗಾಗ ಇದೇ ಮಾತನ್ನು ಹೇಳುತ್ತಿದ್ದರು ಪುನೀತ್. ಅದೇ ಕಾರಣಕ್ಕೆ ಪುನೀತ್ ಅವರಿಗೆ ಬಹಳ ಇಷ್ಟವಾದ ಅದೇ ಜಾಗ ತನ್ನ ಅಪ್ಪ ಅಮ್ಮನ ಪಕ್ಕದಲ್ಲಿಯೇ ಅವರನ್ನೂ ಅಂತ್ಯ ಸಂಸ್ಕಾರ ಮಾಡಲು ನಿರ್ಧಾರ ಮಾಡಿದ್ದಾರೆ.

ಹೌದು ಈ ಹಿಂದೆ ರಾಮನಗರದ ಶೇಷಗಿರಿ ಹಳ್ಳಿ ಅಲ್ಲಿನ ತೋಟದಲ್ಲಿ ಅಪ್ಪುವಿನ ಅಂತ್ಯ ಸಂಸ್ಕಾರ ಮಾಡಲು ನಿರ್ಧರಿಸಿದ್ದರೂ ಸಹ ಪುನೀತ್ ಅವರಿಗೆ ನೆಮ್ಮದಿ ಸಿಗುವ ಜಾಗವಾದ ಅವರ ಅಪ್ಪ ಅಮ್ಮ ರಾಜ ಕುಮಾರ್‌ ಹಾಗೂ ಪಾರ್ವತಮ್ಮನವರ ಅಂತ್ಯ ಸಂಸ್ಕಾರ ನಡೆದಂತಹ ಸ್ಥಳದಲ್ಲಿಯೇ ಅಪ್ಪು ಸಹ ಇರಲಿವೆ ಎಂದು ಈ ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗಿದೆ. ಚಿಕ್ಕ ವಯಸ್ಸಿಗೆ ಎಲ್ಲರ ಮನಸ್ಸಿನಲ್ಲಿ ನೆಲೆಯೂರಿ ಎಲ್ಲರ ಮನೆಮಗನಾಗಿ ಕೊನೆಗೆ ಚಿಕ್ಕ ವಯಸ್ಸಿಗೇ ಎಲ್ಲರನ್ನೂ ಬಿಟ್ಟು ಹೋದ ಅಪ್ಪು ಚಿರಕಾಲ ಅಪ್ಪ ಅಮ್ಮನ ಪಕ್ಕದಲ್ಲಿಯೇ ನೆಮ್ಮದಿಯಾಗಿ ನಿದ್ರಿಸಲಿ ಎಂದು ಕಂಠೀರವ ಸ್ಟುಡಿಯೋದಲ್ಲಿಯೇ ಅಂತಿಮ ಸಂಸ್ಕಾರ ಮಾಡುವ ಮೂಲಕ ಪುನೀತ್ ಅವರ ಕೊನೆಯ ಆಸೆಯನ್ನು ನೆರವೇರಿಸಲಾಯಿತು.

LEAVE A REPLY

Please enter your comment!
Please enter your name here