ಗೊತ್ತಿದ್ದೋ ಅಥವಾ ಗೊತ್ತಿಲ್ಲದೋ ಶುಕ್ರವಾರದ ದಿನದಂದು ಈ ಕೆಲಸವನ್ನ ಮಾಡಲೇಬೇಡಿ … ಹಾಗೆ ಮಾಡಿದರೆ ದರಿದ್ರ ನಿಮ್ಮ ಬೆನ್ನ ಮೇಲೆ ಹತ್ತಿಕೊಳ್ಳುತ್ತೆ… ಅಷ್ಟಕ್ಕೂ ಯಾವುದು ಆ ಕೆಲಸ ಗೊತ್ತ …

Sanjay Kumar
3 Min Read

ನಮಸ್ಕಾರಗಳು ಪ್ರಿಯ ಓದುಗರೆ ಶುಕ್ರವಾರದಂದು ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡಾ ವಿಶೇಷ ಪೂಜೆಯನ್ನು ಮಾಡುತ್ತಾರೆ ಅದರಲ್ಲಿಯೂ ಅಮ್ಮನವರಿಗೆ ಈ ದಿನ ವಿಶೇಷವಾಗಿ ಆರಾಧನೆ ಮಾಡಲಾಗುತ್ತದೆ ತಾಯಿಯ ಬಳಿ ವಿಶೇಷವಾಗಿ ನಾವು ಕೋರಿಕೆಗಳನ್ನು ಕೂಡ ಈ ದಿನ ಇರುತ್ತದೆ ಅಷ್ಟೇ ಅಲ್ಲ ಕೆಲವರು ಅಮ್ಮನವರ ದೇವಾಲಯಕ್ಕೆ ಹೋಗಿ ಅಲ್ಲಿ ದೇವರ ದರ್ಶನ ಪಡೆದು ಬರುತ್ತಾರೆ. ಹಾಗಾಗಿ ಇವತ್ತಿನ ಮಾಹಿತಿ ಯಲ್ಲಿಯೂ ಕೂಡ ಶುಕ್ರವಾರದ ದಿನದಂದು ನಾವು ಮಾಡಿಕೊಳ್ಳಬೇಕಾದ ಕೆಲವೊಂದು ಪರಿಹಾರಗಳ ಕುರಿತು ಶುಕ್ರವಾರದ ದಿನದಂದು ಯಾವ ಕೆಲಸ ಮಾಡಬೇಕು ಯಾವ ಕೆಲಸ ಮಾಡಬಾರದು ಎಂಬುದರ ಕುರಿತು ಸಹ ನಿಮಗೆ ಮಾಹಿತಿ ನೀಡಲಿದ್ದೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಹೌದು ಈ ಮೊದಲೇ ಹೇಳಿದ ಹಾಗೆ ಶುಕ್ರವಾರ ಬಹಳ ವಿಶೇಷವಾದ ವಾರ ಆಗಿದ್ದು ಈ ಶುಕ್ರವಾರದಂದು ಮನೆಯಲ್ಲಿ ವಿಶೇಷ ಪೂಜೆಗಳನ್ನು ಮಾಡುತ್ತೇವೆ, ಅಷ್ಟೇ ಅಲ್ಲ ಅಮ್ಮನವರ ಹೆಸರಿನಲ್ಲಿ ತುಪ್ಪದ ದೀಪವನ್ನು ಹಚ್ಚುವುದು ಕೂಡ ಬಹಳ ಶ್ರೇಷ್ಠವಾಗಿರುತ್ತದೆ. ಆದರೆ ಕೆಲವರಿಗೆ ಶುಕ್ರವಾರದ ದಿನದಂದು ಕೆಲವೊಂದು ಕಾರಣಾಂತರಗಳಿಂದ ವಿಶೇಷಪೂಜೆ ಮಾಡುವುದಾಗಲಿ ಅಥವಾ ಮನೆಯಲ್ಲಿ ಅಮ್ಮ ನವರ ಹೆಸರಿನಲ್ಲಿ ಪೂಜೆ ಮಾಡುವದಾಗಲಿ ಆಗಿರುವುದಿಲ್ಲ ಹಾಗಾದರೆ ಇಂತಹ ಸಮಯದಲ್ಲಿ ಮನೆಯಲ್ಲಿರುವ ಸದಸ್ಯರು ತೆಗೆದುಕೊಳ್ಳಬೇಕಿರುವ ಕೆಲವೊಂದು ಕ್ರಮಗಳು ಯಾವುವು ಹೇಗೆ ಲಕ್ಷ್ಮೀದೇವಿಯ ಅನುಗ್ರಹವನ್ನು ಪಡೆದುಕೊಳ್ಳವುದು ಅನ್ನುವುದನ್ನ ತಿಳಿಯೋಣ ಬನ್ನಿ ಈ ಮಾಹಿತಿಯಲ್ಲಿ. ಹೌದು ಈ ಕೆಲವೊಂದು ಪರಿಹಾರಗಳನ್ನು ನೀವು ಕೂಡ ಪಾಲಿಸುವುದರಿಂದ ತಾಯಿಯ ಆರಾಧನೆ ಮಾಡದಿದ್ದರೂ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು ಹಾಗಾದರೆ ಆ ಕೆಲವೊಂದು ಪರಿಹಾರಗಳು ಯಾವುವು ಅನ್ನೋದನ್ನ ನಾವು ತಿಳಿಸಿಕೊಡುತ್ತೇವೆ ನೀವು ಅದನ್ನು ಪಾಲಿಸಿ.

ಹೌದು ಇದನ್ನೆಲ್ಲ ನಮ್ಮ ಹಿರಿಯರು ಪಾಲಿಸುತ್ತಿದ್ದ ತಹ ಕೆಲವೊಂದು ಪದ್ಧತಿಗಳಾಗಿವೆ ಅದರಲ್ಲಿ ಮೊದಲನೆಯದು ಶುಕ್ರವಾರದ ದಿನದಂದು ಹೆಣ್ಣುಮಕ್ಕಳು ಕಪ್ಪುಬಣ್ಣದ ಕುಂಕುಮವನ್ನ ಇಟ್ಟುಕೊಳ್ಳುವುದಾಗಲಿ ಕಪ್ಪು ಬಣ್ಣದ ಬಳೆ ತೊಡುವ ವುದಾಗಲಿ ಮಾಡಬಾರದು ಅಷ್ಟೇ ಅಲ್ಲ ಕಪ್ಪು ಬಣ್ಣದ ವಸ್ತ್ರವನ್ನು ಕೂಡ ಈ ದಿನ ಧರಿಸದೇ ಇರುವುದು ಶ್ರೇಷ್ಠವಾಗಿರುತ್ತದೆ ಹೀಗೆ ಈ ಶುಕ್ರವಾರದ ದಿನದಂದು ನೀವೇನಾದರೂ ಈ ಪರಿಹಾರವನ್ನು ಪಾಲಿಸಿದರೆ ತಾಯಿ ಕೃಪೆಗೆ ಪಾತ್ರರಾಗಬಹುದು.

ಎರಡನೆಯದಾಗಿ ನೀವು ಮಾಡಬೇಕಿರುವುದು ಏನು ಅಂದರೆ ನಿಮ್ಮ ಮನೆಗೆ ಶುಕ್ರವಾರದ ದಿನದಂದು ಮುತ್ತೈದೆ ಬಂದರೆ ಅವರಿಗೆ ಅರಿಶಿನ ಕುಂಕುಮವನ್ನು ತೆಗೆದುಕೊಳ್ಳುವುದಕ್ಕೆ ಹೌದು ಈ ದಿನ ಬಹಳ ವಿಶೇಷವಾದದ್ದು ನಿಮ್ಮ ಮನೆಗೆ ಹೆಣ್ಣು ಮಕ್ಕಳು ಬಂದರೆ ಅವರಿಗೆ ಅರಿಶಿನ ಕುಂಕುಮ ಕೊಡದೆ ಕಳುಹಿಸಬೇಡಿ. ಈ ರೀತಿ ನೀವು ಕೆಲವೊಂದು ಪರಿಹಾರಗಳನ್ನು ಶುಕ್ರವಾರದ ದಿನಗಳಂದು ಮಾಡಲೇಬೇಕು ಮತ್ತು ಇತರ ಕೆಲವೊಂದು ತಪ್ಪುಗಳನ್ನು ಮಾಡಬಾರದು ಕೆಲವರು ಶುಕ್ರವಾರದ ದಿನದಂದು ಕುಂಕುಮ ಕೊಂಡುಕೊಂಡು ಬರುವುದಾಗಲೀ ಇಂತಹ ಕೆಲಸಗಳನ್ನು ಮಾಡುತ್ತಾರೆ ಆದರೆ ಹೇಳಲಾಗುತ್ತದೆ ಅದು ತಪ್ಪು ಅಂತ.

ಅಷ್ಟೇ ಅಲ್ಲ ಈ ದಿನದಂದು ಹಣ ಕೊಡಬಾರದು ಅಂತ ಕೂಡ ಹೇಳ್ತಾರೆ ಹೌದು ನೀವು ಬೀರುವಿನಿಂದ ಹಣವನ್ನು ತೆಗೆದು ಬೇರೆಯವರಿಗೆ ಕೊಡಬೇಡಿ ಹಾಗೆ ಸಂಜೆಯ ನಂತರ ಅರಿಶಿಣ ಕುಂಕುಮವನ್ನು ಬೇರೆಯವರಿಗೆ ದಾನ ಮಾಡುವುದಾಗಲಿ ಹಾಲು ಮೊಸರು ಬೆಣ್ಣೆ ತುಪ್ಪ ಇಂತಹ ವಸ್ತುಗಳನ್ನು ಬೇರೆಯವರಿಗೆ ದಾನ ಮಾಡುವುದಾಗಲಿ ಮಾಡಬೇಡಿ ಈ ಶುಕ್ರವಾರದ ದಿನದಂದು ಹಸಿರು ಮತ್ತು ಕೆಂಪು ಬಣ್ಣದ ಬಟ್ಟೆ ಧರಿಸುವುದು ಶ್ರೇಷ್ಠ ಎಂದು ಹೇಳಲಾಗಿದೆ.

ಯಾಕೆ ಅಂದರೆ ತಾಯಿಗೆ ಇಷ್ಟವಾದ ಬಣ್ಣ ಹಸಿರು ಮತ್ತು ಕೆಂಪು ಆದ್ದರಿಂದ ಈ ಶುಕ್ರವಾರದ ದಿನದಂದು ಕೆಂಪು ಮತ್ತು ಹಸಿರು ಬಣ್ಣದ ಬಟ್ಟೆಯನ್ನು ಹೆಣ್ಣುಮಕ್ಕಳು ಧರಿಸುವುದರಿಂದ ಬಹಳ ಶ್ರೇಷ್ಠ. ಶುಕ್ರವಾರದಂದು ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳು ಮನೆಯಲ್ಲಿ ಕಣ್ಣೀರು ಹಾಕಬಾರದು ಹೌದು ಅದು ಶ್ರೇಷ್ಠ ಅಲ್ಲ ಅಂತಾ ಹೇಳಲಾಗುತ್ತದೆ ಈ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಈ ಕೆಲವೊಂದು ಮಾಹಿತಿ ತಿಳಿದಿರುವುದರಿಂದ ಖಂಡಿತವಾಗಿಯೂ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ ತಾಯಿಯ ಕೃಪೆ ನಿಮಗೆ ಲಭಿಸುತ್ತದೆ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.