ಜೀವನದಲ್ಲಿ ಅಥವಾ ಮನೆಯಲ್ಲಿ ವಿಪರೀತ ಕಷ್ಟಗಳು ಶುರು ಆದ್ರೆ ಎಲ್ಲಾದ್ರೂ ದರ್ಬೆ ಹುಲ್ಲನ್ನ ತಂದು ಈ ಒಂದು ಚಿಕ್ಕ ಕೆಲಸವನ್ನ ಮಾಡಿ ನೋಡಿ… ಮನೆಯಲ್ಲಿ ಕಷ್ಟಗಳು ನಿವಾರಣೆ ಆಗೋದಲ್ಲದೆ ನಿಮ್ಮ ಕುಟುಂಬದ ಮೇಲೆ ಪರಿಣಾಮ ಬೀರುವ ನಕಾರಾತ್ಮ ಶಕ್ತಿಗಳಿಂದ ನಿಮ್ಮನ್ನ ಕಾಪಾಡುತ್ತೆ…

883

ನಮಸ್ಕಾರ ಸ್ನೇಹಿತರೆ, ನಾವು ಇಂದು ಹೇಳುವ ಈ ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿರುವ ದರ್ಬೆ ಅಥವಾ ಗರಿಕೆಯಿಂದ ಈ ರೀತಿಯಾಗಿ ನೀವು ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ದರಿದ್ರ ದೂರವಾಗಿ ನೆಮ್ಮದಿ ನೆಲೆಸುತ್ತದೆ ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.

ಸ್ನೇಹಿತರೆ ಸಾಮಾನ್ಯವಾಗಿ ಕೆಲವರು ಹಲವಾರು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಆದರೆ ಅವರಿಗೆ ಪರಿಹಾರ ಮಾಡಿಕೊಳ್ಳುವುದು ಹೇಗೆ ಎಂದು ತಿಳಿದಿರುವುದಿಲ್ಲ.ಆದರೆ ಇಂದು ನಾವು ಹೇಳುವ ರೀತಿಯಲ್ಲಿ ಪರಿಹಾರವನ್ನು ಮಾಡಿಕೊಂಡರೆ ನಿಮ್ಮ ಮನೆಯಲ್ಲಿ ನಕಾರತ್ಮಕ ಶಕ್ತಿಗಳೆಲ್ಲ ತೊಲಗಿ ಸಕಾರತ್ಮಕ ಶಕ್ತಿಗಳು ಉಂಟಾಗಿ ನಿಮ್ಮ ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ.ಹಾಗೂ ಲಕ್ಷ್ಮಿ ಕಟಾಕ್ಷ ನಿಮ್ಮ ಮನೆಗೆ ಆಗುತ್ತದೆ ಎನ್ನುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಸುತ್ತೇನೆ.ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲಾ ಕಡೆ ಸಿಗುವಂತಹ ಈ ಒಂದು ದರ್ಬೆ ಅಥವಾ ಗರಿಕೆ ಹುಲ್ಲಿನ ಹತ್ತಿರ ನೀವು ಹೋಗಬೇಕು

ಹೋಗುವುದಕ್ಕಿಂತ ಮೊದಲೇ ಒಂದು ತಾಮ್ರದ ಬಿಂದಿಗೆಯಲ್ಲಿ ಕಾಲು ಲೀಟರ್ ಹಾಲನ್ನು ತುಂಬಿಕೊಂಡು ಹೋಗಬೇಕು.ದರ್ಬೆ ಅಥವಾ ಗರಿಕೆ ಇರುವ ಜಾಗದಲ್ಲಿ ನೀವು ತಾಮ್ರದ ಚೊಂಬಿನಲ್ಲಿ ಇರುವಂತಹ ಹಾಲನ್ನು ಗರಿಕೆಗೆ ಚಿಮುಕಿಸಬೇಕು .ಹೀಗೆ ಚಿಮುಕಿಸಿ ನೀವು ಪ್ರಾರ್ಥನೆಯನ್ನು ಅಂದರೆ ಇಷ್ಟ ದೇವರ ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು ಹೀಗೆ ಮಾಡಿದ ನಂತರ ನೀವು ಗರಿಕೆ ಅಥವಾ ದರ್ಬೆಯ ಬೇರನ್ನು ಮನೆಗೆ ತೆಗೆದುಕೊಂಡು ಬರಬೇಕು.

ಹೀಗೆ ತೆಗೆದುಕೊಂಡು ಬಂದಂತಹ ದರ್ಬೆಯ ಬೇರು ಅಥವಾ ಗರಿಕೆಯ ಬೇರನ್ನು ದೇವರು ಕೋಣೆಯಲ್ಲಿಟ್ಟು ಅದಕ್ಕೆ ಅರಿಶಿನ-ಕುಂಕುಮವನ್ನು ಹಚ್ಚಬೇಕು ಹಾಗೂ ಗಂಧವನ್ನು ಕೂಡ ಹಚ್ಚಬೇಕು ಹೀಗೆ ಹಚ್ಚಿದ ನಂತರ ಅದನ್ನು ಹೂವನ್ನು ಕಟ್ಟುವ ಹಾಗೆ ಒಂದು ಅರಿಶಿನದ ದಾರದಲ್ಲಿ ಕಟ್ಟಬೇಕು.ಈ ಮಾಲೆಯನ್ನು ಮಾಡಿದ ನಂತರ ದೇವರ ಪ್ರಾರ್ಥನೆಯನ್ನು ಮಾಡಿಕೊಂಡು ಮಾಲೆಯನ್ನು ಅಂದರೆ ಹೂವಿನಂತೆ ಕೊಟ್ಟಿರುವಂತಹ ಹಾರವನ್ನು ತೆಗೆದುಕೊಂಡು ನಿಮ್ಮ ಮುಖ್ಯದ್ವಾರದ ಬಾಗಿಲಿನ ಹೊರಮುಖವಾಗಿ ಕಟ್ಟಬೇಕು.

ಹೀಗೆ ಕಟ್ಟಿದರೆ ನಿಮ್ಮ ಮನೆಯ ಮೇಲೆ ಲಕ್ಷ್ಮಿಕಟಾಕ್ಷ ಆಗುತ್ತದೆ ಹಾಗೂ ಗಣೇಶನ ಅನುಗ್ರಹ ಕೂಡ ಯಾವಾಗಲೂ ಇರುತ್ತದೆ ಯಾಕೆಂದರೆ ಯಾವಾಗಲೂ ಗಣಪತಿಗೆ ಪೂಜೆ ಮಾಡುವಾಗ ಗರಿಕೆಯನ್ನು ಸಲ್ಲಿಸುತ್ತಾರೆ.ಹಾಗಾಗಿ ನಾವು ಗರಿಕೆಯನ್ನು ಪೂಜೆ ಮಾಡುವುದರಿಂದ ನಿಮಗೆ ಸಕಲ ಸಂಕಷ್ಟಗಳು ಕೂಡ ನಿವಾರಣೆಯಾಗಿ ಜೀವನದಲ್ಲಿ ನೆಮ್ಮದಿ ಎನ್ನುವುದು ನೆಲೆಸುತ್ತದೆ ಹಾಗೂ ಸಂಪತ್ತು ಕೂಡ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.

ಹಾಗಾಗಿ ಸ್ನೇಹಿತರೆ ನಾವು ಮೇಲೆ ಹೇಳಿದ ರೀತಿಯಲ್ಲಿ ನೀವು ಈ ಒಂದು ದರ್ಬೆ ಅಥವಾ ಗರಿಕೆ ದರ್ಬೆ ಸಿಗಲಿಲ್ಲವೆಂದರೆ ನಿಮಗೆ ಗರಿಕೆಯಲ್ಲಿ ಮಾಡಿಕೊಂಡು ಈ ವಿಧಾನವನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ರೀತಿಯ ನಕಾರಾತ್ಮಕ ಶಕ್ತಿ ಗಳು ತೊಲಗುತ್ತದೆ.ಹಾಗೂ ನಿಮ್ಮ ಮನೆಯ ಮೇಲೆ ಯಾವಾಗಲೂ ಲಕ್ಷ್ಮಿ ಸ್ಥಿರವಾಗಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ. ಇದನ್ನು ತಿಂಗಳಿಗೊಮ್ಮೆ ಮಾಡಬೇಕು ತಿಂಗಳಿನಲ್ಲಿ ಭರಣಿ ನಕ್ಷತ್ರ ಬರುವ ಸಮಯದಲ್ಲಿ ಈ ಒಂದು ವಿಧಿವಿಧಾನವನ್ನು ನೀವು ಮಾಡಬೇಕಾಗುತ್ತದೆ. ಪ್ರತೀ ತಿಂಗಳು ಈ ವಿಧಾನವನ್ನು ನಾವು ಹೇಳಿದ ರೀತಿಯಲ್ಲಿ ಅನುಸರಿಸಿದರೆ ನಿಮ್ಮ ಜೀವನವೇ ಬದಲಾಗುತ್ತದೆ.

ಹಾಗೇ ಸ್ನೇಹಿತರೆ ಬಾಗಿಲಿಗೆ ಕಟ್ಟಿದಂತಹ ದರ್ಬೆಯ ಅಥವಾ ಗರಿಕೆಯ ಹಾರವನ್ನು ಪ್ರತಿನಿತ್ಯ ದೂಪವನ್ನು ಹಾಕಿ ಹಾಗೂ ಪೂಜೆಯನ್ನು ಕೂಡ ಮಾಡಬೇಕಾಗುತ್ತದೆ ಹೀಗೆ ನೀವು ಮಾಡಿಕೊಂಡರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ಕಷ್ಟಗಳು ಕೂಡ ನಿವಾರಣೆಯಾಗುತ್ತವೆ.ನೋಡಿದ್ರಲ್ಲಾ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಮತ್ತು ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.