ಜೀವರಾಶಿಗಳ ಪಾಲಕ ಶಿವನನ್ನ ಒಲಿಕೊಳ್ಳಲು ಈ ರೀತಿ ಪೂಜೆ ಮಾಡಿ ಸಾಕು … ಶಿವ ಯಾವಾಗಲು ನಿಮ್ಮ ಬೆನ್ನ ಹಿಂದೆ ನಿಮ್ಮನ್ನ ಹಾಗು ನಿಮ್ಮ ಕುಟುಂಬವನ್ನ ಕಾಯುತ್ತಾನೆ.. ಅಷ್ಟಕ್ಕೂ ಆ ಪೂಜೆ ಮಾಡುವ ಕ್ರಮಗಳಾದರು ಏನು ಗೊತ್ತೇ ..

190

ನಮಸ್ಕಾರಗಳು ಓದುಗರು ನಮ್ಮ ಮನಸ್ಸಿಗೆ ಅನಿಸಿದಾಗ ನಾವು ಖಂಡಿತ ದೇವಸ್ಥಾನಗಳಿಗೆ ಹೋಗುತ್ತಾರೆ ಹಾಗೆ ಇನ್ನೂ ಕೆಲವರು ದೇವಸ್ಥಾನಗಳಿಗೆ ಹೋಗುವ ರೂಢಿಯನ್ನು ಕೂಡ ಮಾಡಿಕೊಂಡಿರುತ್ತಾರೆ. ಇದೆಲ್ಲದರ ನಡುವೆ ದೇವಸ್ಥಾನಕ್ಕೆ ಹೋಗುವುದು ಅವರವರ ಇಷ್ಟಾರ್ಥ ಕೂಡ ಆಗಿರುತ್ತದೆ. ಆದರೆ ನಮ್ಮ ಸಂಪ್ರದಾಯದಲ್ಲಿ ದೇವಸ್ಥಾನಕ್ಕೆ ಹೋಗುವುದು ದೇವರ ದರ್ಶನ ಪಡೆಯುವುದು ಇದೆಲ್ಲವು ಉತ್ತಮ ಅಭ್ಯಾಸವಾಗಿದೆ ಇದೆಲ್ಲದಕ್ಕೂ ಮೀರಿ ಮನಸ್ಸಿಗೆ ನೆಮ್ಮದಿ ಸಿಗುವ ಅದ್ಭುತವಾದ ಸ್ಥಳ ಅಂದರೆ ಅದು ಏಕೈಕ ಸ್ಥಳ ಅದು ದೇವಾಲಯವಾಗಿರುತ್ತದೆ ನಾವು ದೇವಾಲಯಕ್ಕೆ ಹೋಗಿ ಆ ಪ್ರಶಾಂತವಾದ ಸಂತಸವಾದ ನಗು ಮುಖವುಳ್ಳ ವಿಗ್ರಹವನ್ನು ನೋಡಿದಾಗ ಮನಸ್ಸಿಗೆ ಏನೋ ಖುಷಿ. ಹೌದು ಮುಕ್ಕೋಟಿ ದೇವರುಗಳ ನೆಲೆಯಾಗಿರುವ ಭಾರತ ದೇಶದಲ್ಲಿ ಎಲ್ಲಾ ದೇವರ ಗುಡಿಯನ್ನು ನಾವು ಇಲ್ಲಿ ಕಾಣಬಹುದು. ಪ್ರತಿಯೊಂದು ದೇವಾಲಯಗಳಲ್ಲಿಯೂ ಅದರದೇ ಆದ ವಿಶೇಷತೆ ಇರುತ್ತದೆ ಆ ದೇವಾಲಯಗಳಿಗೆ ಅದರದೇ ಆದ ಇತಿಹಾಸವಿರುತ್ತದೆ ಹಾಗೆ ನಾವು ಕೆಲವೊಂದು ದೇವಾಲಯಗಳಿಗೆ ಹೋದಾಗ ಅಲ್ಲಿ ಪಾಲಿಸುವ ಕೆಲವೊಂದು ಪದ್ಧತಿಯನ್ನು ತಪ್ಪದೇ ಪಾಲಿಸಬೇಕು.

ಹೇಗೆ ನಾವು ಮನೆಯಲ್ಲಿ ಆದರೂ ದೇವರ ಆರಾಧನೆ ಮಾಡುವಾಗ ಕ್ರಮಬದ್ಧವಾಗಿ ದೇವರ ಆರಾಧನೆಯನ್ನು ಮಾಡುತ್ತವೆ ಹಾಗೂ ಯಾವ ದೇವರಿಗೆ ಯಾವ ಮಂತ್ರವನ್ನು ಪಠಣ ಮಾಡಬೇಕು ಯಾವ ವಿಧಾನದಲ್ಲಿ ಪೂಜಿಸಬೇಕು ಇದೆಲ್ಲದನ್ನು ಕೂಡ ನಾವು ತಿಳಿದರಬೇಕು. ಹಾಗೂ ದೇವಾಲಯಗಳಿಗೆ ಹೋದಾಗ ನಾವು ದೇವರ ದರ್ಶನವನ್ನು ಪಡೆದು ಕೊನೆಗೆ ದೇವರ ಆರತಿ ಯನ್ನು ಪಡೆದು ಪ್ರಸಾದ ಪಡೆದು ಮನೆಗೆ ಹಿಂತಿರುಗುತ್ತೇವೆ ಆದರೆ ಮುಖ್ಯವಾಗಿ ಮೂರು ಲೋಕದ ಒಡೆಯನಾಗಿರುವ ನಮ್ಮಪ್ಪ ಬೇಡರ ಕಣ್ಣಪ್ಪ ಮುಕ್ಕಣ್ಣ ಪರಮೇಶ್ವರ ಈಶ್ವರ ಸಕಲ ಜೀವಚರಗಳ ಪ್ರಾಣ ದೈವನಾಗಿರುವ ಆಲಯಕ್ಕೆ ಹೋದಾಗಲೂ ನಾವು ಇದೇ ನಿಯಮವನ್ನು ಪಾಲಿಸಬಾರದು. ನೀವು ಕೂಡ ಶಿವನ ದೇವಾಲಯಕ್ಕೆ ಹೋದಾಗ ದೇವರ ದರ್ಶನ ಪಡೆದು ಕೊನೆಗೆ ದೇವರಿಗೆ ಸುತ್ತು ಹೊಡೆದು ಆರತಿ ಪಡೆದು ಪ್ರಸಾದ ಪಡೆದು ಮತ್ತೆ ಹಿಂದಿರುಗುತ್ತಿದ್ದ ಹಾಗೆ ಮಾಡದಿರಿ.

ಹೌದು ದೇವರ ದರ್ಶನ ಪಡೆಯುವಾಗ ಮನಸ್ಸಿನಲ್ಲಿ ಏಕಾಗ್ರತೆ ಇರಬೇಕು ಆದರೆ ನಾವು ಏಕಾಗ್ರತೆಯ ಜೊತೆಗೆ ಕೆಲವೊಂದು ಮಾಹಿತಿ ಅನ್ನು ಕೂಡ ತಿಳಿದಿರಬೇಕು. ಅದೇನೆಂದರೆ ಮುಖಂಡನಾಗಿರುವ ಈಶ್ವರಪ್ಪನನ್ನು ಓಲೈಸಿಕೊಳ್ಳುವುದು ತುಂಬಾ ಸುಲಭ. ಆದರೆ ಎಲ್ಲಾ ದೇವಾಲಯಗಳಿಗೂ ಎಲ್ಲಾ ದೇವರ ಗುಡಿಗೋ ಹೋದಾಗ ಹೇಗೆ ಸಾಮಾನ್ಯವಾಗಿ ಪ್ರದಕ್ಷಣೆ ಹಾಕಿ ದರ್ಶನ ಪಡೆದು ಮತ್ತೆ ಮನೆಗೆ ಹಿಂದಿರುಗುತ್ತೇವೆ ಹಾಗೆ ಶಿವನ ಆಲಯಗಳಲ್ಲಿ ಕೂಡ ಮಾಡಬಾರದು ಈಶ್ವರನ ಆಲಯಕ್ಕೆ ಹೋದಾಗ ಮೊದಲು ನಾವು ಈಶ್ವರನ ದರ್ಶನ ಪಡೆಯುವುದಕ್ಕೆ ಮುಂಚೆ ನಂದಿಯ ದರ್ಶನ ಪಡೆಯಬೇಕು, ಬಳಿಕ ದೇವಸ್ಥಾನ ಪ್ರವೇಶ ಮಾಡಿ ಶಿವನ ದರ್ಶನ ಪಡೆಯಬೇಕು ಅದಕ್ಕೂ ಮುಂಚೆ ನೀವು ನಿಮ್ಮ ಇಷ್ಟಾರ್ಥಗಳನ್ನು ಶಿವನ ವಾಹನವಾದ ನಂದಿಯ ಬಳಿ ಹೇಳಿಕೊಳ್ಳಬೇಕು.

ಹೌದು ನಂದಿಯ ಕಿವಿಯಲ್ಲಿ ಇಷ್ಟಾರ್ಥಗಳನ್ನ ಹೇಳಿಕೊಳ್ಳಬೇಕು ಹಾಗೆ ನಂದಿಯ ಬಲಭಾಗದ ಕೊಂಬಿನ ಮೂಲಕ ಈಶ್ವರನ ದರ್ಶನವನ್ನು ಮಾಡಬೇಕು ಈ ರೀತಿ ಯಾರೂ ಶಿವನ ದೇವಾಲಯಕ್ಕೆ ಹೋದಾಗ ಶಿವನ ದರ್ಶನವನ್ನು ಮಾಡುತ್ತಾರೆ ಅಂಥವರಿಗೆ ಶಿವನು ಒಲಿಯುತ್ತಾನೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ ಶಿವನೂ ಸದಾ ಧ್ಯಾನದಲ್ಲಿ ಲೀನರಾಗಿರುವ ಕಾರಣ ಶಿವನ ಗುಡಿಗೆ ಹೋದಾಗ ಶಿವನ ವಾಹನವಾದ ನಂದಿಯ ಬಳಿ ನಮ್ಮ ಇಷ್ಟಾರ್ಥಗಳು ಹೇಳಿಕೊಳ್ಳಿ.

ಆಗ ಸ್ವರ್ಗದಲ್ಲಿರುವ ಶಿವನಿಗೆ ನಂದಿಯು ತನ್ನ ಒಡೆಯನ ಭಕ್ತಾದಿಗಳ ಇಷ್ಟಾರ್ಥಗಳನ್ನು ಅವರಿಗೆ ತಿಳಿಸುತ್ತಾರೆ ಎಂಬ ನಂಬಿಕೆ ಇದೆಯಂತೆ ಹಾಗಾಗಿ ಹಿರಿಯರು ಶಿವನಾಯಕ್ ಯುತಾಕಾ ಮೊದಲು ನಂದಿಯ ದರ್ಶನ ಪಡೆದು ನಂದಿಯ ಆಶೀರ್ವಾದ ಪಡೆದುಕೊಳ್ಳಲು ಹೇಳುತ್ತಾರೆ, ಬಳಿಕ ನಂದಿಯ ಮೂಲಕ ಲಿಂಗದ ದರ್ಶನ ಮಾಡಲು ಹೇಳುತ್ತಾರೆ. ಇಡೀ ಬ್ರಹ್ಮಾಂಡದ ಮೌನವಾಗಿರುವ ಲಿಂಗ ದರ್ಶನವನ್ನು ನಂದಿಯ ಮೂಲಕ ಮಾಡಿದಾಗ ನಮಗೆ ಶಿವನ ಅನುಗ್ರಹ ಆಗುತ್ತದೆ ಇದರಿಂದ ನಾವು ಬಾಳಿನಲ್ಲಿ ಅಂದುಕೊಂಡಂತೆ ನಮ್ಮ ಯಶಸ್ಸು ಗಳಿಸಲು ನಾವು ಮುಂದಾಗುತ್ತೇವೆ. ಹೀಗೆ ಶಿವನ ದೇವಾಲಯಕ್ಕೆ ಹೋದಾಗ ತಪ್ಪದೆ ನಾವು ತಿಳಿಸಿದ ವಿಧಾನದಲ್ಲಿ ಲಿಂಗ ದರ್ಶನ ಪಡೆಯಿರಿ ಎಲ್ಲವೂ ಉತ್ತಮವಾಗಿರುತ್ತದೆ.

LEAVE A REPLY

Please enter your comment!
Please enter your name here