ಡೆಡ್ಲಿ ಖ್ಯಾತಿಯ ಆದಿತ್ಯ ಅವರು ವಿಮರ್ಶಕಾರರಿಗೆ ಓಪನ್ ಚಾಲೆಂಜ್ ಅನ್ನು ಹಾಕಿದ್ದಾರೆ ಅದು ಏನು ಗೊತ್ತಾ ….!!!!!

66

ವಿಮರ್ಶಕರಿಗೆ ಖಡಕ್ ಉತ್ತರವನ್ನು ನೀಡಿದ ನಟ ಆದಿತ್ಯ ಹೀಗೆಂದು ಹೇಳಿದ್ದಾರೆ ಹೌದು ಸಾಮಾನ್ಯವಾಗಿ ಯಾವುದೇ ಚಲನ ಚಿತ್ರಗಳು ತೆರೆಗೆ ಬಂದರೂ ಆ ಚಿತ್ರದ ವಿಮರ್ಶೆ ಅನ್ನೋ ಕೆಲವರು ಮಾಡುತ್ತಾರೆ ಇತ್ತೀಚಿನ ದಿವಸಗಳಲ್ಲಿ ಅಂತೂ ವಿಮರ್ಶಕಾರರು ಸಿನಿಮಾಗಳ ಬಗ್ಗೆ ಕೆಟ್ಟದಾಗಿ ಅಭಿಪ್ರಾಯ ನೀಡುತ್ತಿರುವ ಕಾರಣದಿಂದಾಗಿ ಸಕತ್ ಕ್ಲಾಸ್ ತೆಗೆದುಕೊಂಡಿದ್ದಾರೆ ನಟ ಆದಿತ್ಯ ಅವರು. ತನ್ನ ನಿರ್ದೇಶನದ ಚಲನಚಿತ್ರದ ಕುರಿತು ವಿಮರ್ಶೆ ಮಾಡಿದವರಿಗೆ ಓಪನ್ ಚಾಲೆಂಜ್ ನೀಡಿದ್ದಾರೆ ಆದಿತ್ಯ. ಇಂದಿನ ಪರಿಸ್ಥಿತಿಯಲ್ಲಿ ಜನರು ಥಿಯೇಟರ್ ಗಳಿಗೆ ಬಂದು ಸಿನಿಮಾವನ್ನು ನೋಡು ವುದೇ ಕಷ್ಟವಾಗಿದೆ ಅದರಲ್ಲಿಯೂ ಈ ರೀತಿ ವಿಮರ್ಶಕಾರರು ಸಿನಿಮಾಗಳ ಬಗ್ಗೆ ಕೆಟ್ಟದಾಗಿ ರಿವ್ಯೂವ್ ನೀಡಿದರೆ ನಿರ್ದೇಶಕರು ಮತ್ತು ನಿರ್ಮಾಪಕರ ಕತೆಯೇನು ಎಂದು ಆದಿತ್ಯ ರವರು ತಿಳಿಸಿದ್ದಾರೆ.

ಜರ್ನಲಿಸ್ಟ್ ಗಳು ಜನರ ಅಭಿಪ್ರಾಯವನ್ನು ಕೇಳಿ ನನ್ನ ಚಿತ್ರಕ್ಕೆ 4.5 ರೇಟಿಂಗ್ ಅನ್ನು ನೀಡಿದ್ದಾರೆ ಆದರೆ ಈ ವಿಮರ್ಶಕಾರರು ಕೆಲವರು ಸಿನಿಮಾಗಳ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿ ಜನರನ್ನು ಥಿಯೇಟರ್ ಗಳ ಬಳಿ ಬರದೇ ಇರುವ ಹಾಗೆ ಮಾಡುತ್ತಿದ್ದಾರೆ ಆದರೆ ಈ ರೀತಿ ಮಾಡುವುದರಿಂದ ಚಿತ್ರ ಮಾಡುವವರಿಗೆ ಎಷ್ಟು ಕಷ್ಟವಾಗುತ್ತದೆ ಎಂದು ಅವರಿಗೆ ತಿಳಿದಿಲ್ಲ ಹಾಗೆ ಆದಿತ್ಯ ರವರು ಮಾತನಾಡುವಾಗ ವಿಮರ್ಶೆ ಮಾಡುವ ಮಂದಿಗೆ ಓಪನ್ ಚಾಲೆಂಜ್ ನೀಡಿದ್ದಾರೆ ನೀವು ಕೂಡ ಹಣ ಇನ್ವೆಸ್ಟ್ ಮಾಡಿ ಸಿನಿಮಾ ತೆಗೆಯಿರಿ ನಿಮಗೂ ಸಹ ಆಗ ಸಿನಿಮಾ ಮಾಡುವುದರ ಹಿಂದಿರುವ ನೋವು ತಿಳಿಯುತ್ತದೆ ಕಷ್ಟ ತಿಳಿಯುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಚಲನಚಿತ್ರಗಳ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿ ಬಿಡುವುದರ ಬದಲು ಕೆಲಸ ಇಲ್ಲ ಅಂದರೆ ಸಿನಿಮಾ ಇಂಡಸ್ಟ್ರಿಗೆ ಬನ್ನಿ ನಾವು ನಿಮಗೆ ಕೆಲಸ ನೀಡುತ್ತೇವೆ. ಆದರೆ ನಿರ್ಮಾಪಕ ನಿರ್ದೇಶಕ ನಟ ನಟಿಯರ ಹೊಟ್ಟೆ ಮೇಲೆ ಹೊಡೆಯಬೇಡಿ. ನಿಮಗೆ ತಾಕತ್ ಇದ್ದರೆ ಬಂದು ಲೈಟಿಂಗ್ ಕೆಲಸ ಅಥವಾ ಕ್ಯಾಮೆರಾ ಮ್ಯಾನ್ ಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡುವ ಕೆಲಸವನ್ನು ಮಾಡಿ ಆಗ ತಿಳಿಯುತ್ತದೆ ಸಿನಿಮಾ ಮಾಡುವುದು ಎಷ್ಟು ಕಷ್ಟ ಎಂದು.

ಹೀಗೆಂದು ಆದಿತ್ಯ ರವರು ವಿಮರ್ಶಕರಿಗೆ ಖಡಕ್ ಸೂಚನೆ ನೀಡಿದ್ದಾರೆ, ಅಷ್ಟೇ ಅಲ್ಲ ವಾರ್ನಿಂಗ್ ನೀಡುವಾಗ ಕನ್ನಡ ಸಿನಿಮಾ ಬಗ್ಗೆ ಹೀಗೆಂದು ಮಾತನಾಡಿದರೆ ಕನ್ನಡ ಸಿನಿಮಾ ನಂಬಿ ಎಷ್ಟೋ ಜನ ಹೊಟ್ಟೆ ತುಂಬಿಸಿಕೊಳ್ಳುತ್ತಾ ಇದ್ದಾರೆ ಆದರೆ ನೀವೇ ಈ ರೀತಿ ಕನ್ನಡ ಸಿನಿಮಾಗಳ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡಿದರೆ ಇದು ಎಷ್ಟು ಸರಿ ಹಣಕ್ಕಾಗಿ ನಿರ್ಮಾಪಕರಿಗೆ ಕರೆ ಮಾಡುತ್ತೀರಾ ಹಣ ನೀಡಿಲ್ಲವಾದರೆ ಸಿನಿಮಾ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡ್ತೀರಾ.

ವಿಮರ್ಶಕಾರರು ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡುವ ಮುನ್ನ ಎಚ್ಚರದಿಂದಿರಿ. ಅಷ್ಟೇ ಅಲ್ಲ ಬೇರೆ ಭಾಷೆಗಳ ಚಲನ ಚಿತ್ರದ ಬಗ್ಗೆ ಮಾತನಾಡಿದರೆ ಅವರು ಸುಮ್ಮನೆ ಬಿಡ್ತಾರಾ ಅದೇ ರೀತಿ ಕನ್ನಡ ಭಾಷೆಯ ಚಲನಚಿತ್ರಗಳನ್ನು ಬೆಳೆಯಲು ಬಿಡಿ ಸುಮ್ಮನೆ ಸಿನಿಮಾಗಳ ಬಗ್ಗೆ ಅಪಪ್ರಚಾರ ಮಾಡಿ ನಿರ್ಮಾಪಕ ನಿರ್ದೇಶಕರ ಹೊಟ್ಟೆ ಉರಿಸಬೇಡಿ ಎಂದು ಆದಿತ್ಯ ರವರು ತಮ್ಮ ಸಿನಿಮಾವನ್ನು ಕುರಿತು ಮಾತನಾಡುವಾಗ ಹೀಗೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಅದಿತ್ಯ ರವರು ಮಾಡಿರುವ ಸಿನಿಮಾ ಜನರಿಂದ ಮೆಚ್ಚುಗೆ ಪಡೆದುಕೊಂಡು, ಒಳ್ಳೆಯ ಪ್ರದರ್ಶನವನ್ನು ನೀಡುತ್ತಾ ಇದೆ. ಹಾಗದರೆ ವಿಮರ್ಶಕರ ಬಗ್ಗೆ ನಿಮ್ಮ ಅನಿಸಿಕೆ ಕುರಿತು ಕಮೆಂಟ್ ಮಾಡಿ ಧನ್ಯವಾದಗಳು.