ದೇವರಿಗೆ ಪ್ರದಕ್ಷಿಣೆಯನ್ನು ಎಷ್ಟು ಸಾರಿ ಹಾಕಿದರೆ ಹಾಗೂ ಯಾವ ಸಮಯದಲ್ಲಿ ಹಾಕಿದರೆ ನೀವು ಕೇಳಿದೆಲ್ಲ ದೇವರು ಈಡೇರಿಸುತ್ತಾನೆ…

16

ಸಾಮಾನ್ಯವಾಗಿ ನಾವು ದೇವಸ್ಥಾನಕ್ಕೆ ಹೋದಾಗ ಪ್ರದಕ್ಷಿಣೆ ಹಾಕುವುದು ಸರ್ವೇ ಸಾಮಾನ್ಯ, ಯಾರು ಕೂಡ ದೇವಸ್ಥಾನಕ್ಕೆ ಹೋದವರು ಪ್ರದಕ್ಷಿಣೆ ಹಾಕದೆ ಬರುವುದಿಲ್ಲ .ಪ್ರದಕ್ಷಿಣ ಹಾಕಬೇಕಾದರೆ ನಾವು ಬಲಗಡೆಯಿಂದ ಎಡಗಡೆಗೆ ಹೋಗುತ್ತೇವೆ. ಆದರೆ ಕೆಲ ಜನರನ್ನು ನೀವು ಗಮನಿಸಬಹುದು ಎಡಗಡೆಯಿಂದ ಬಲಗಡೆ ಕೂಡ ಮಾಡುವವರು ಇದ್ದಾರೆ.

ಆದರೆ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಬೇಕಾದರೆ ಕೆಲವು ನೀತಿ ನಿಯಮಗಳು ಇವೆ. ಇವತ್ತು ನಾವು ನಿಮಗೆ ಪ್ರದಕ್ಷಿಣೆಯನ್ನು ಎಷ್ಟು ಸಾರಿ ಹಾಕಿದರೆ ಒಳ್ಳೆಯದು ಹೇಗೆ ಹಾಕಿದರೆ ಒಳ್ಳೆಯದು ಹಾಗೆ ಹಾಕಿದ ಮೇಲೆ ಯಾವ ತರಹದ ಫಲಗಳು ನಿಮಗೆ ಪಕ್ತಿ ಆಗುತ್ತವೆ ಎನ್ನುವುದು ಈ ಲೇಖನದ ಉದ್ದೇಶವಾಗಿದೆ.

ಇನ್ನೇಕೆ ದರ ಕೆಳಗೆ ಕೊಟ್ಟಿರುವಂತಹ ಸಂಪೂರ್ಣ ಮಾಹಿತಿಯನ್ನು ಓದಿ ಅರ್ಥಮಾಡಿಕೊಳ್ಳಿ ಹಾಗೆ ದೇವರನ್ನು ಒಳ್ಳೆಯ ರೀತಿಯಲ್ಲಿ ಪೂಜೆಯನ್ನು  ಮಾಡುವುದನ್ನು ತಿಳಿದುಕೊಳ್ಳಿ. ಹೀಗೆ ಪ್ರದರ್ಶನೆ ಮಾಡುವುದರಿಂದ ನಿಮಗೆ ಒಳ್ಳೆಯ ಧನಾತ್ಮಕ ರೀತಿಯ ಉಪಯೋಗಗಳು ಆಗುತ್ತದೆ.

ನೀವೇನಾದರೂ ದೇವಸ್ಥಾನದಲ್ಲಿ ಐದು ಬಾರಿ  ಪ್ರದಕ್ಷಿಣೆಯನ್ನು ಹಾಕಿದರೆ ನಿಮಗೆ ಜಯಾ ದೊರಕುತ್ತದೆ ನೀವು ಮಾಡಿದಂತಹ ಯಾವುದೇ ಕೆಲಸವು ಕೂಡ  ಫೇಲ್ ಆಗುವುದಿಲ್ಲ .ನಿಮಗೇನಾದರೂ ತುಂಬಾ ಜನ ಶತ್ರುಗಳು ಇದ್ದರೆ ನೀವು ಕೇವಲ ಏಳು ಬಾರಿ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವುದರಿಂದ ನಿಮಗೆ ಇರುವಂತಹ ಶತ್ರುಗಳು ದೂರವಾಗುತ್ತಾರೆ ಹಾಗೆ ನೀವು ನಿಶ್ಚಿಂತೆಯಿಂದ ಬಾಳಬಹುದು.

ನೀವೇನಾದರೂ 11 ಬಾರಿ ಪ್ರದಕ್ಷಿಣೆ ಹಾಕಿದರೆ ನಿಮಗೆ ಇರುವಂತಹ ಆಯುಷ್ಯವು ಗಟ್ಟಿಯಾಗುತ್ತದೆ ಹಾಗೆ ನಿಮ್ಮ ಆಯುಷ್ಯವು ಮುಂದೂಡಲ್ಪಡುತ್ತದೆ.
ನಿಮಗೇನಾದರೂ ಕೋರಿಕೆಗಳು ಇದ್ದಲ್ಲಿ ಅಥವಾ ನೀವು ಯಾವುದಾದರೂ ಸಾಧನೆ ಮಾಡಬೇಕು ಅನ್ಕೊಂಡಿದ್ದೆ ನೀವು 13 ಬಾರಿ ಪ್ರದಕ್ಷಿಣೆ ಹಾಕುವುದರಿಂದ ನಿಮಗೆ ಸಿದ್ಧಿ ಪ್ರಾಪ್ತಿಯಾಗುತ್ತದೆ.

ನೀವು ಏನಾದರೂ ಹಣದ ಅಭಾವ ತೆಯನ್ನು ಅನುಭವಿಸುತ್ತಿದ್ದರೆ ನೀವು ಹದಿನೇಳು ಬಾರಿ ಪ್ರದಕ್ಷಿಣೆ ಹಾಕುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ತರನಾದ ಆರ್ಥಿಕ ಸಮಸ್ಯೆ ಇರುವುದಿಲ್ಲ ಹಾಗೆಯೇ ನಿಮ್ಮ ಆರೋಗ್ಯ ಸಮಸ್ಯೆ ಕೂಡ ಸುಧಾರಿಸುತ್ತದೆ.
19 ಬಾರಿ ಪ್ರದಕ್ಷಿಣೆ ಹಾಕುವುದರಿಂದ ನಿಮ್ಮಲ್ಲಿ ಇರುವಂತಹ ಆರೋಗ್ಯದ ಸಮಸ್ಯೆ ಹಾಗೂ ಆರೋಗ್ಯದ ಗುಣಮಟ್ಟ ಹೆಚ್ಚಾಗುತ್ತದೆ ಹಾಗೆ ನಿಮ್ಮ ಕುಟುಂಬದವರ ಆರೋಗ್ಯ ಕೂಡ ಸುಧಾರಿಸುತ್ತದೆ.

ದೇವರ ಸನ್ನಿಧಿಯಲ್ಲಿ ನೀವು ಹೋದಾಗ ಪ್ರದಕ್ಷಿಣೆ ಹಾಕುವುದು ಸರ್ವೇ ಸಾಮಾನ್ಯ ಯಾವ ಸಮಯಕ್ಕೆ ಹಾಕಬೇಕು ಎನ್ನುವುದು ತುಂಬಾ ಮುಖ್ಯವಾಗಿರುತ್ತದೆ, ದೇವಸ್ಥಾನಕ್ಕೆ ಯಾವಾಗಲೂ ಹೋಗಿ ಯಾವಾಗಲೂ ಪ್ರದಕ್ಷಿಣೆಯನ್ನು ಹಾಕಿದರೆ ಅದು ಸಿದ್ಧಿಯನ್ನು ಕೊಡುವುದಿಲ್ಲ ಹಾಗೆ ಕೆಲವೊಂದು ಬಾರಿ ಪ್ರದಕ್ಷಿಣೆ ಹಾಕುವುದರಿಂದ ಕೆಲ ಸಮಸ್ಯೆಗಳು ಕೂಡ ಉಂಟಾಗುತ್ತದೆ.

ಆದ್ದರಿಂದ ಯಾವ ಟೈಮ್ನಲ್ಲಿ ಪ್ರದಕ್ಷಿಣೆ ಹಾಕಬೇಕು ಎನ್ನುವುದು ತುಂಬಾ ಮುಖ್ಯವಾಗಿರುತ್ತದೆ. ಒಳ್ಳೆಯ ಕಾಲ ಎಂದರೆ ಪ್ರದಕ್ಷಿಣೆ ಹಾಕುವುದಕ್ಕೆ ಅದು ಸಂಜೆಯ  ಸಮಯದಲ್ಲಿ ಅಥವಾ ಪ್ರಾತಃಕಾಲದಲ್ಲಿ ಎಂದು ಪುರಾಣದಲ್ಲಿ ಉಲ್ಲೇಖ ಮಾಡಿದ್ದಾರೆ.

ಈ ವಿಷಯ ನಿಮಗೇನಾದರೂ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಿಳಿಸಿ, ಹಾಗೆ ಕಮೆಂಟ್ ಮಾಡಿದರೆ ಮುಖಾಂತರ ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು  ಖಂಡಿತ ತಿಳಿಸಿ ಕೊಡಿ.

LEAVE A REPLY

Please enter your comment!
Please enter your name here