ನಮ್ಮ ಕರುನಾಡಿನ ಹಾಸ್ಯ ನಟ ಜಗ್ಗೇಶ್ ಅವರ ಮೇಲೆ ಈ ನಟಿಗೆ ಕ್ರಶ್ ಆಗಿತ್ತಂತೆ… ಯಾರು ಗೊತ್ತೇ ಆ ನಟಿ

135

ನಮಸ್ತೆ ಪ್ರಿಯ ಸ್ನೇಹಿತರೆ ಜೀವನದಲ್ಲಿ ಅವಕಾಶಗಳು ಸಿಗುವುದು ಬಹಳ ಕಡಿಮೆ ಆದರೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಮುನ್ನುಗ್ಗುವುದನ್ನು ಮನುಷ್ಯ ತಿಳಿದಿರಬೇಕು ಆಗಲೇ ಆತನ ಜೀವನದಲ್ಲಿ ಯಾವುದೇ ಯಶಸ್ಸನ್ನು ಸಹ ಪಡೆದುಕೊಳ್ಳಲು ಸಾಧ್ಯ ಅದೇ ರೀತಿ ನಮಗೆ ಈ ಸಮಾಜದಲ್ಲಿ ಹಲವು ನಿದರ್ಶನಗಳು ಸಿಗುತ್ತವೆ. ಹೌದು ನಾವು ಯಾವುದೇ ಅವಕಾಶವನ್ನು ಸರಿಯಾಗಿ ಬೆಳೆಸಿಕೊಂಡಿದ್ದೇ ಆದಲ್ಲಿ ನಮಗೆ ಯಾವ ಅದೃಷ್ಟಾನೋ ಬೇಡ ನಾವು ಅಂದುಕೊಂಡಂತೆ ನಮ್ಮ ಗುರಿ ತಲುಪುತ್ತೇವೆ.

ಇನ್ನೂ ಕೆಲವೊಮ್ಮೆ ನಮ್ಮ ಜೀವನದಲ್ಲಿ ಕೆಲವೊಂದು ಸರ್ ಪ್ರೈಸ್ ಗಳು ಸಹ ಕಾದಿರುತ್ತದೆ ಅಂತಹ ಸರ್ಪ್ರೈಸ್ ಗ ಳ ನನ ಉ ಬರಮಾಡಿಕೊಳ್ಳಲು ಸಹ ಸಿದ್ಧರಾಗಿರಬೇಕು. ಎಷ್ಟೋ ಜನರು ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಹೆಸರು ಮಾಡಬೇಕು ಅಂತ ಅಂದುಕೊಂಡಿರುತ್ತಾರೆ ಇನ್ನೂ ಕೆಲವರಿಗೆ ಅವರು ಅಂದುಕೊಳ್ಳದೆ ಸಿನಿಮಾ ರಂಗದಲ್ಲಿ ಅವಕಾಶ ಸಿಕ್ಕಿರುತ್ತದೆ. ಅದೇ ರೀತಿ ಕಿರುತೆರೆಯಲ್ಲಿ ಆ್ಯಂಕರಿಂಗ್ ಮಾಡುತ್ತಾ ತಮ್ಮ ಕೆರಿಯರ್ ಶುರು ಮಾಡಿದ ಮೇಘನಾ ಗಾವಂಕರ್ ನಂತರ ಸ್ಯಾಂಡಲ್ ವುಡ್ ನಲ್ಲಿ ‘ನಮ್ ಏರಿಯಾಲಿ ಒಂದಿನ’ ಎಂಬ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಪ್ರವೇಶಿಸಿದರು ನಂತರ ಒಂದಿಷ್ಟು ಸಿನಿಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಂಡು ನಟನೆ ಮಾಡಿ ಇವರು 2016ರಲ್ಲಿ ತೆರೆಕಂಡ ಸಿಂಪಲ್ ಆಗಿ ಇನ್ನೊಂದ್ ಲವ್ ಸ್ಟೋರಿ ಎಂಬ ಚಿತ್ರದ ಮೂಲಕ ತಮ್ಮ ವೃತ್ತಿ ಜೀವನದಲ್ಲಿ ಭಾರಿ ಬ್ರೇಕ್ ತೆಗೆದುಕೊಳ್ಳುತ್ತಾರೆ ಹಾಗು ಈ ಸಿನಿಮಾದ ನಂತರ ಇವರು ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲಾ. ಆದರೆ ನಟಿ ಮೇಘನಾ ಗಾವಂಕರ್ ಅವರು ಕಂಬ್ಯಾಕ್ ಮಾಡಿದ ಸಿನೆಮಾ ನವರಸ ನಾಯಕ ಜಗ್ಗೇಶ್ ಅವರ ಸಿನಿಮಾ ಆಗಿರುವ ಕಾಳಿದಾಸ ಕನ್ನಡ ಮೇಷ್ಟ್ರು ಎಂಬ ಸಿನಿಮಾದ ಮೂಲಕ.

ಈ ಚಿತ್ರದಲ್ಲಿ ನಟ ಜಗ್ಗೇಶ್ ಕನ್ನಡದ ಮೇಷ್ಟ್ರು ಪಾತ್ರದಲ್ಲಿ ಕಾಣಿಸಿಕೊಂಡರೆ, ನಟಿ ಮೇಘನಾ ಇಂಗ್ಲಿಷ್ ಪ್ರೇಮಿಯಾಗಿ ಕಾಣಿಸಿಕೊಂಡಿದ್ದಾರೆ. ಹೀಗೆ ಸಿನಿಮಾದಲ್ಲಿ ಇವರಿಬ್ಬರ ಪಾತ್ರ ತದ್ವಿರುದ್ಧವಾದದ್ದು ಹಾಗೂ ನಟ ಜಗ್ಗೇಶ್ ಅವರು ಇಂಗ್ಲಿಷ್ ನಲ್ಲಿ ಸ್ವಲ್ಪ ವೀಕ್ ಇರುತ್ತಾರೆ ಆದರೆ ನಿಜಜೀವನದಲ್ಲಿ ಮೇಘನಾಗೆ ಕನ್ನಡ ಅಂದರೆ ಕನ್ನಡ ಭಾಷೆ ಅಂದರೆ ಬಹಳ ಇಷ್ಟ ಎಂದು ಹೇಳಿಕೊಂಡಿದ್ದಾರೆ. ಈ ಸಿನಿಮಾದ ಕತೆ ಕೇಳಿದಾಗ ಸ್ವಲ್ಪ ಭಯವಿತ್ತು ನಂತರ ನಾನು ಮಾಡಬಹುದು ಎಂಬ ಕಾನ್ಫಿಡೆನ್ಸ್ ನನ್ನಲ್ಲಿ ಮೂಡಿತ್ತು ಎಂದು ಮೇಘನಾ ಗಾವಂಕರ್ ಅವರು ಹೇಳಿಕೊಂಡಿದ್ದಾರೆ. ಅಂದ ಹಾಗೆ ನಾನು ಬೋರ್ಡಿಂಗ್ ಸ್ಕೂಲ್ ನಲ್ಲಿ ಬೆಳೆದವಳು,ಈ ಕಾರಣಕ್ಕಾಗಿ ಕನ್ನಡಕ್ಕಿಂತ ಇಂಗ್ಲಿಷ್ ಮೇಲೆ ವ್ಯಾಮೋಹ ಜಾಸ್ತಿ ಇತ್ತು. ಆಗ ಭಾಷಾಪ್ರೇಮದ ಬಗ್ಗೆ ಅಷ್ಟೇನೂ ನನಗೆ ತಿಳಿವಳಿಕೆ ಇರಲಿಲ್ಲ. ಕಲಾವಿದೆ ಆದ ಮೇಲೆ ಕನ್ನಡ ಭಾಷೆಯ ಪ್ರಾಮುಖ್ಯತೆ ಏನು ಎಂಬುದು ಅರ್ಥ ಆಗಿದೆ. ಆ ವಿಚಾರದಲ್ಲಿ ಸಿನಿಮಾ ರಂಗ ನನಗೆ ದೊಡ್ಡ ಪ್ರೇರಣೆ ಆಗಿದೆ’ ಎಂದು ನಿನ್ನೆ ಸಂಜೆ ನಡೆದ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಹೇಳಿದ್ದಾರೆ.

ಇನ್ನು ನಟಿ ಮೇಘನಾ ಗಾವಂಕರ್ ಅವರು ಕನ್ನಡದಲ್ಲಿ ವೀಕ್ಷ ಣೆ ಮಾಡಿದ ಮೊದಲ ಹಾಸ್ಯ ಚಲನಚಿತ್ರ ಎಂದರೆ ಅದು ಸರ್ವರ್ ಸೋಮಣ್ಣ ಅಂತ ಹಾಗೆ ಈ ಸಿನಿಮಾ ನೋಡಿದ ಮೇಲೆ ತನಗೆ ಜಗ್ಗೇಶ್ ಸರ್ ಅವರ ಮೇಲೆ ಕ್ರಶ್ ಆಗಿತ್ತು ಎಂದು ನಟಿ ಮೇಘನಾ ಗಾಂವ್ಕರ್ ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಹೇಳಿಕೊಂಡಿದ್ದಾರೆ. ಕ್ರಶ್ ಎಂಬುದೆಲ್ಲಾ ಟೀನೇಜ್ ನಲ್ಲಿ ಹುಡುಗ ಹುಡುಗಿಯರಿಗೆ ಸಾಮಾನ್ಯ ಅದರಂತೆ ನಾವು ಹಲವು ಸೆಲೆಬ್ರಿಟಿಗಳ ಕ್ರಶ್ ಬಗ್ಗೆ ತಿಳಿದುಕೊಂಡಿದ್ದೇವೆ ಎನ್ನುವ ಕನ್ನಡ ಸಿನಿಮಾ ರಂಗದಲ್ಲಿ ಯಶಸ್ವಿ ಚಿತ್ರಗಳನ್ನು ನೀಡಿರುವ ನಟಿ ಮೇಘನಾ ಗಾವಂಕರ್ ಅವರಿಗೆ ನವರಸ ನಾಯಕ ಜಗ್ಗೇಶ್ ಅವರ ಮೇಲೆ ಕ್ರಶ್ ಆಗಿತ್ತಂತೆ ಅದರಲ್ಲಿಯೂ ಸರ್ವರ್ ಸೋಮಣ್ಣ ಎಂಬ ಸಿನಿಮಾ ನೋಡಿದ ಮೇಲೆ ಮೇಘನಾ ಗಾವಂಕರ್ ಅವರಿಗೆ ಅಂದು ಜಗ್ಗೇಶ್ ಅವರ ಮೇಲೆ ನನಗೆ ಕ್ರಶ್ ಆಗಿದೆ ಎಂಬ ವಿಚಾರವನ್ನ ಹೇಳಿಕೊಂಡಿದ್ದು, ತಮ್ಮ ಭಾಷಾ ಅಭಿಮಾನ ದ ಬಗ್ಗೆಯೂ ಸಹ ಹೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here