ನಮ್ಮ ಕರ್ನಾಟಕದವರಾದ ರಾಹುಲ್ ದ್ರಾವಿಡ್ ಹೆಂಡತಿ ಹೇಗಿದ್ದಾರೆ ಗೊತ್ತಾ…ತುಂಬಾ ಸುಂದರ ಕುಟುಂಬ

184

ಭಾರತೀಯ ಕ್ರಿಕೆಟ್ ತಂಡದಲ್ಲಿ ಹಲವು ಆಟಗಾರರು ತಮ್ಮದೇ ಆದ ಆಟದಿಂದ ಜನರ ಮನ ಗೆದ್ದಿದ್ದಾರೆ ಹೌದು ಕ್ರಿಕೆಟ್ ಪ್ರಿಯರು ಅದೊಂದು ಸಮಯದಲ್ಲಿ ಸಚಿನ್ ತೆಂಡೂಲ್ಕರ್ ಔಟ್ ಆಗುತ್ತ ಇದ್ದಂತೆ ಟಿ.ವಿ ಅನ್ನು ಆರಿಸುತ್ತಿದ್ದ ಭಾರತದ ಕ್ರಿಕೆಟ್ ಅಭಿಮಾನಿಗಳು ಆ ದಶಕದ ಕೊನೆಯಲ್ಲಿ, ತೆಂಡೂಲ್ಕರ್ ಔಟ್ ಆದರೆ ಏನಂತೆ ಇನ್ನೂ ಕ್ರಿಕೆಟ್ ನಲ್ಲಿ ಗೋಡೆಯಂತೆ ನಿಂತು ತಂಡವನ್ನು ದಡ ಸೇರಿಸುವ ಆಪತ್ಬಾಂದವ ಆಟಗಾರನೊಬ್ಬ ಇದ್ದಾರೆ ಅವರು ಇರುವಾಗ ತಂಡಕ್ಕೆ ಸೋಲು ಎದುರಾಗುವುದಿಲ್ಲಾ ಎಂದು ನೆಮ್ಮದಿಯಿಂದ ಪಂದ್ಯ ನೋಡುವಂತಹ ವಾತಾವರಣ ಹುಟ್ಟಿಕೊಂಡಿತ್ತು. ಹೀಗೆ ತೆಂಡೂಲ್ಕರ್ ರಿಗೆ ಸರಿಸಮಾನರಾಗಿ ಬೆಳೆದು ಅಂತರಾಶ್ಟ್ರೀಯ ಕ್ರಿಕೆಟ್ ನಲ್ಲಿ ತಮ್ಮದೇ ವಿಶಿಶ್ಟ ಚಾಪು ಮೂಡಿಸಿ ಅಜಾತ ಶತ್ರುವೆನಿಸಿದ ಗೋಡೆ ನಮ್ಮ ಕರುನಾಡ ರಾಹುಲ್ ದ್ರಾವಿಡ್.

ನೋಡು ನಮ್ಮ ಕರುನಾಡ ಹೆಮ್ಮೆಯ ಆಟಗಾರರಾಗಿರುವ ರಾಹುಲ್ ದ್ರಾವಿಡ್ ರವರು, ವಿಶ್ವ ಕ್ರಿಕೆಟ್ ನ ಬುದ್ಧ ಹಾಗೂ ನೂಲಿನಲ್ಲಿ ಗೆರೆ ಎಳೆದಂತೆ ಚೆಂಡನ್ನು ಮೈದಾನದ ಮೂಲೆ ಮೂಲೆಗೆ ಟಚ್ ಮಾಡುವ ಕಲಾತ್ಮಕ ಬ್ಯಾಟ್ಸ್ ಮೆನ್ ಎಂದು ಹೇಳಬಹುದು. ಹೌದು ಬೌಲರ್ ಗಳು ತಾಳ್ಮೆ ಕಳೆದುಕೊಳ್ಳುವಂತೆ ಕಾಡುವ ಹಾಗೂ ವಿಕೆಟ್ ಪಡೆಯಲು ಎದುರಾಳಿ ತಂಡ ಬೇಡುವಂತೆ ಮಾಡುವ ಜಾಯಮಾನ ನಮ್ಮ ಜ್ಯಾಮಿಯದ್ದು. ಇನ್ನು ರಾಹುಲ್ ದ್ರಾವಿಡ್ ಅವರಂತಹ ಸ್ಟೈಲೀಸ್ ಪ್ಲೇಯರ್ ನ ಆಟ ಈಗ ನೆನಪು ಮಾತ್ರ. ಹೌದು ಜಂಟಲ್ ಮೆನ್ ಗೇಮ್ ನ ಜಂಟಲ್ ಮೆನ್ ಆಟಗಾರನನ್ನು ಒಂದು ಕ್ಷಣ ನೆನಪಿಸಿಕೊಂಡಾಗ ನಮಗೆ ಗೊತ್ತಿಲ್ಲದೆ, ನಮ್ಮ ಕಣ್ಣ ಮುಂದೆ ಅವರ ಬ್ಯಾಟಿಂಗ್ ವೈಖರಿಗಳು ನಮ್ಮ ನೆನಪಿನಲ್ಲಿ ಮೂಡುತ್ತದೆ.

ನಮ್ಮ ಹೆಮ್ಮೆಯ ಆಟಗಾರ ಆಗಿರುವ ರಾಹುಲ್ ದ್ರಾವಿಡ್ ಅವರನ್ನು ದಿ ವಾಲ್ ಎಂಬ ಹೆಸರಿನಿಂದ ಸಹ ಜನಪ್ರಿಯಗೊಂಡಿದ್ದಾರೆ ಹಾಗೂ ಹಲವು ವರುಷಗಳಿಂದ ಭಾರತೀಯ ಕ್ರಿಕೆಟ್ ತಂಡದ ಉತ್ತಮ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಹೌದು ಭಾರತೀಯ ತಂಡದ ಭರವಸೆಯ ನಾಯಕ ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾಕ್ಕೆ ಅನೇಕ ಅದ್ಭುತ ವಿಜಯಗಳನ್ನು ನೀಡಿದ್ದು ಅವರ ನಿವೃತ್ತಿಯ ನಂತರ ಅಭಿಮಾನಿಗಳು ಇಂದಿಗೂ ಕೂಡ ಮೈದಾನದಲ್ಲಿ ರಾಹುಲ್ ಅವರ ಆಟ ಮಿಸ್ ಮಾಡಿಕೊಳ್ಳುತ್ತಾರೆ ಮತ್ತು ಇವತ್ತಿನ ಲೇಖನದಲ್ಲಿ ನಾವು ರಾಹುಲ್ ದ್ರಾವಿಡ್ ಅವರ ವೈಯಕ್ತಿಕ ಜೀವನದ ಕುರಿತು ಮಾತನಾಡೋಣ ಹಾಗೂ ರಾಹುಲ್ ರ ಪ್ರೇಮಕಥೆ ಕೂಡ ಯಾವ ಸಿನಿಮಾಗೂ ಕಡಿಮೆಯಿಲ್ಲ.

ವೈದ್ಯರಾದ ವಿಜೇತ ಪಂಧರ್ಕರ್ ಹಾಗೂ ರಾಹುಲ್ ದ್ರಾವಿಡ್ ನಡುವೆ ಪ್ರೇಮ ಹೇಗೆ ಮತ್ತು ಯಾವಾಗ ಹೇಗೆ ಶುರು ಆಯಿತು ಎಂಬುದರ ಬಗ್ಗೆ ಹಲವು ಕುತೂಹಲ ಹಲವರಿಗೆ ಇದೆ ಎನ್ನುವ ರಾಹುಲ್ ಅವರ ಪತ್ನಿ ವಿಜೇತಾ ಅವರ ತಂದೆ ಭಾರತೀಯ ವಾಯುಸೇನೆ ವಿಂಗ್ ಕಮಾಂಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು ಈ ಕಾರಣದಿಂದಾಗಿ ಅವರ ತಂದೆ ಬಹಳಷ್ಟು ಬಾರಿ ಟ್ರಾನ್ಸ್ ಫರ್ ಆಗುತ್ತಿದ್ದ ಕಾರಣ ಭಾರತದ ವಿವಿಧೆಡೆ ಅವರು ಕೆಲಸ ಮಾಡಬೇಕಾಗಿತ್ತು. ಇವರ ನಿವೃತ್ತಿಯ ನಂತರ ಕುಟುಂಬ ನಾಗಪುರಕ್ಕೆ ಸ್ಥಳಾಂತರಗೊಂಡು ಅಲ್ಲಿ ವಿಜೇತ ಅವರು ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಳ್ಳುತ್ತಾರೆ.

ಇನ್ನು ಇದೇ ವೇಳೆ ವಿಜೇತ ಅವರ ಕುಟುಂಬದವರು ಬೆಂಗಳೂರಿನಲ್ಲಿ ಇದ್ದಾಗ ರಾಹುಲ್ ದ್ರಾವಿಡ್ ಅವರ ಕುಟುಂಬದವರೊಂದಿಗೆ ಸಂಪರ್ಕಕ್ಕೆ ಬಂದಿತ್ತು. ಆ ವರ್ಷಗಳಲ್ಲಿ ರಾಹುಲ್ ದ್ರಾವಿಡ್ ಮತ್ತು ವಿಜೇತರ ತಂದೆ ಉತ್ತಮ ಸ್ನೇಹಿತರಾಗಿದ್ದು ಇದರೊಂದಿಗೆ ಇಬ್ಬರ ಕುಟುಂಬವು ಕೂಡ ಪರಸ್ಪರ ಹತ್ತಿರವಾಯಿತು. ಇನ್ನು ವಿಶ್ವಕಪ್ ಪ್ರವಾಸದಿಂದ ಹಿಂದಿರುಗಿದ ಬಳಿಕ 2003ರ ಮೇ 4 ರಂದು ಬೆಂಗಳೂರಿನಲ್ಲಿ ಇಬ್ಬರೂ ಸಾಂಪ್ರದಾಯಿಕ ಪದ್ಧತಿಗಳೊಂದಿಗೆ ವಿವಾಹದ ಪವಿತ್ರ ಬಂಧನದಲ್ಲಿ ಬಂಧಿಸಲ್ಪಟ್ಟಿದ್ದು ಒಂದು ರೀತಿಯಲ್ಲಿ ರಾಹುಲ್ ಹಾಗೂ ವಿಜೇತರ ವಿವಾಹವು ಪ್ರೀತಿ ಮತ್ತು ಕುಟುಂಬದ ಒಪ್ಪಿಗೆಯ ವಿವಾಹವಾಗಿದೆ. ನಂತರ 2005ರಲ್ಲಿ ವಿಜೇತರು ರಾಹುಲ್ ಅವರ ಮೊದಲ ಮಗ ಸಮಿತ್ಗೆ ಜನ್ಮ ನೀಡಿದ್ದು, ನಂತರ 2009ರಲ್ಲಿ ಎರಡನೇ ಮಗ ಅನ್ವೇಗೆ ಜನ್ಮ ನೀಡುತ್ತಾರೆ. ನಮ್ಮ ಕರುನಾಡ ಹೆಮ್ಮೆಯ ಆಟಗಾರರಾಗಿರುವ ರಾಹುಲ್ ಅವರ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ.