ನಿಮಗೆ ಇ-ಸ್ವತ್ತು ಅಂದ್ರೇನು ಗೊತ್ತ ಇದು ಗ್ರಾಮಪಂಚಾಯಿತಿಯಲ್ಲಿ ಹೆಚ್ಚಾಗಿ ಬಳಸುತ್ತಾರೆ , ಫಾರಂ ನಂಬರ್ 9 ಹಾಗೂ 11 ಮಾಡಿಸೋದು ಹೇಗೆ ಅನ್ನೋ ಸುಲಭ ಮಾಹಿತಿ..

Sanjay Kumar
5 Min Read

ಬಹುಶಃ ಸ್ವಂತ ಮನೆ ಹೊಂದಿದವರಿಗೆ ಅಥವಾ ಆಸ್ತಿ ವರ್ಗಾವಣೆ ಮಾಡುವ ಸಮಯದಲ್ಲಿ ನಿಮಗೆ ಈ ಸ್ವತ್ತು ಎಂಬ ಶಬ್ದವನ್ನು ಕೇಳಿರುತ್ತೀರಾ ಹಾಗಾದರೆ ಈ ಸ್ವತ್ತು ಎಂದರೇನು ಹಾಗೆ ಜನರಿಗೆ ಯಾವ ರೀತಿ ಇದರಿಂದ ಉಪಯೋಗ ಆಗುತ್ತದೆ? ಜೊತೆಗೆ ನಮೂನೆ-೯ ನಮೂನೆ-೧೧ ಎಂದರೇನು? ಇದರಲ್ಲಿ ಏನೆಲ್ಲ ಇರುತ್ತದೆ ಹಾಗೂ ಅವುಗಳನ್ನು ಪಡೆಯುವುದು ಒದಗಿಸಬೇಕಾಗುತ್ತದೆ ಮತ್ತು ಇದರ ಲಕ್ಷಣಗಳೇನು ಎಲಾ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.

ಇ ಸ್ವತ್ತಿನಿಂದಾಗಿ ಜನರಿಗೆ ಯಾವೆಲ್ಲ ರೀತಿಯ ಪ್ರಯೋಜನ ಆಗುತ್ತದೆ ಎಂದು ನೋಡಬೇಕೆಂದರೆ ಫೋರ್ಜರಿ ನಡೆಯುವಂತಹದ್ದು ನಕಲಿ ದಾಖಲೆ ಅನ್ನೋ ತಯಾರಿಸುವುದು ಹಾಗೂ ಇವುಗಳನ್ನು ಈ ಸ್ವತ್ತಿನ ಮೂಲಕ ಕಡಿಮೆ ಮಾಡಬಹುದಾಗಿದೆ. ಅದೇ ರೀತಿಯಾಗಿ ಕಾನೂನು ಬಾಹಿರವಾಗಿ ಲೇಔಟ್ಸ್ ಗಳನ್ನು ಮಾಡುವುದು ಆಸ್ತಿಗಳನ್ನು ಮಾರಾಟ ಮಾಡುವುದು ಇವುಗಳನ್ನು ತಡೆಯಬಹುದು ಎಂಬ ಉದ್ದೇಶದಿಂದ ಕರ್ನಾಟಕ ಸರ್ಕಾರ ಈ ಒಂದು ಇ ಸ್ವತ್ತು ಎಂಬುದನ್ನು ಜಾರಿಗೆ ತಂದಿದೆ. ಈ ಇ ಸ್ವತ್ತಿನಲ್ಲಿ ಯಾವೆಲ್ಲ ದಾಖಲೆಗಳನ್ನು ನಾವು ನೋಡಬಹುದು ಎಂಬುದನ್ನು ತಿಳಿಯುವುದಾದರೆ ಮೊದಲನೆಯದಾಗಿ ನಮೂನೆ-೯ ನೋಡಬಹುದು ಹಾಗೂ ಎರಡನೆಯದಾಗಿ ನಮೂನೆ-೧೧ ನೋಡಬಹುದು. ಹಾಗಾದರೆ ನಮೂನೆ-೯ ಹಾಗೂ ನಮೂನೆ-೧೧ ಅಂದರೆ ಏನು ಎಂಬುದನ್ನು ತಿಳಿದುಕೊಳ್ಳೋಣ ಹೌದು ಇದನ್ನು ಏಕತಾ ಡಾಕ್ಯುಮೆಂಟ್ ಎಂದು ಕರೆಯುತ್ತಾರೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಖಾಲಿ ಜಾಗ ಇದ್ದರೂ ಹಾಗೂ ಆಸ್ತಿ ಗೆ ನಮೂನೆ-೯ ಬೇಕಾಗುತ್ತದೆ.

ಇದರಲ್ಲಿ ಕೆಲವೊಂದು ನಿಯಮಗಳಿರುತ್ತವೆ ಅದೇನೆಂದರೆ ನೀವು ತೆಗೆದುಕೊಳ್ಳುವ ಅಥವಾ ಮಾರುವ ಜಾಗವನ್ನು ಕಾನೂನುಬದ್ಧವಾಗಿ ಕೃಷಿಯೇತರ ಆಸ್ತಿಯನ್ನಾಗಿ ಪರಿವರ್ತಿಸಬೇಕು. ಪರಿವರ್ತನೆ ಆಗಿರುವ ಜಮೀನಿನಲ್ಲಿ ಲೇಔಟ್ ಅಥವಾ ಸೈಟ್ಗಳನ್ನು ಅಥವಾ ನೀವು ಒಂದು ಮನೆಯನ್ನು ಕಟ್ಟಿಸಿಕೊಂಡಿದ್ದರೆ ಅದು ಅಪ್ರೊಪ್ರಿಯೆಟೆ ಅಥಾರಿಟಿ ಕಡೆಯಿಂದ ಅದಕ್ಕೆ ಒಪ್ಪಿಗೆ ಇರಬೇಕು ಎಂದರೆ ಪಿಡಿಒ ಇರಬಹುದು ಬಿ ಎಂ ಆರ್ ಡಿ ಇರಬಹುದು ಈ ರೀತಿ ಆರ್ಥ ರೈಸ್ಡ್ ಪ್ಲಾನಿಂಗ್ ಅಥಾರಿಟಿ ಯ ಒಪ್ಪಿಗೆ ನೀಡಿದರೆ ಅಂತಹ ಜಾಗಗಳಿಗೆ ನಮೂನೆ-ಒಂಬತ್ತು ನೀಡಲಾಗುತ್ತದೆ. ಆ ಒಂದು ಜಮೀನು ಒಂದು ಗ್ರಾಮ ಪಂಚಾಯಿತಿಗೆ ಒಳಪಟ್ಟಿದ್ದರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಇದೆ ಎಂಬುದನ್ನು ತಹಶೀಲ್ದಾರರು ನಕ್ಷೆಯನ್ನು ಪರಿಶೀಲನೆ ಮಾಡಿ ಅದಕ್ಕೆ ಒಪ್ಪಿಗೆ ನೀಡಬೇಕು. ಆ ಸಮಯದಲ್ಲಿ ನಿಮಗೆ ನಮೂನೆ-ಒಂಬತ್ತು ಸಿಗುತ್ತದೆ.

ಅದೇ ರೀತಿಯಲ್ಲಿ ಸರ್ಕಾರದ ವಸತಿ ಯೋಜನೆ ಅಡಿಯಲ್ಲಿ ನಿಮಗೆ ಮನೆಗಳು ಸಿಕ್ಕಿದ್ದರೆ ಅಂತಹ ಸಮಯದಲ್ಲಿ ನಮೂನೆ-ಒಂಬತ್ತು ಸಿಗುತ್ತದೆ. ಈ ರೀತಿಯಾಗಿ ನಮೂನೆ ಒಂಬತ್ತರಲ್ಲಿ ಜಾಗಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಇರುತ್ತದೆ ಅದು ಖಾಲಿ ಜಾಗ ಅಥವಾ ಮನೆಯೇ, ಅದರ ಅಳತೆ ಅದರ ಅಕ್ಕಪಕ್ಕದಲ್ಲಿ ಏನಿದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ನಮೂನೆ ಒಂಬತ್ತರಲ್ಲಿ ಇರುತ್ತದೆ. ಅದೇ ರೀತಿಯಾಗಿ ಈ ಆಸ್ತಿ ಯಾವ ಗ್ರಾಮ ಪಂಚಾಯಿತಿಗೆ ಸೇರಿದೆ ಎಂಬುದರ ಬಗ್ಗೆ ಮಾಹಿತಿ ಇರುತ್ತದೆ ನಮೂನೆ ಒಂಬತ್ತು ತೆಗೆದುಕೊಳ್ಳುವುದಕ್ಕೆ ಯಾವೆಲ್ಲ ದಾಖಲೆಗಳನ್ನು ಒದಗಿಸಲಾಗಿದೆ ಎಂಬುದರ ಬಗ್ಗೆ ಮಾಹಿತಿ ಇರುತ್ತದೆ. ನಿಮ್ಮ ಹೆಸರು ಮಾಲೀಕರ ಹೆಸರು ವಿಳಾಸ ಭಾವಚಿತ್ರದ ಸಮೇತ ನಿಮಗೆ ದೊರೆಯುತ್ತದೆ. ಈ ದಾಖಲೆ ಮೂಲಕ ನೀವು ಆಸ್ತಿಯ ಮಾಲೀಕರು ಯಾರು ಎಂಬುದನ್ನು ಆನ್ಲೈನ್ ಮೂಲಕ ತಿಳಿದುಕೊಳ್ಳಬಹುದು.

ಇ ಸ್ವತ್ತಿನಲ್ಲಿ ನಮೂನೆ-೯ ನೋಡಿ ನೀವು ಆಸ್ತಿಯನ್ನು ಖರೀದಿ ಮಾಡಿದರೆ ನಿಮಗೆ ಇದರಿಂದ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ. ನಮೂನೆ ೯ ಪಡೆಯುವುದಕ್ಕೆ ಯಾವೆಲ್ಲ ದಾಖಲೆಗಳನ್ನು ಒದಗಿಸಬೇಕು ಅಂತ ಹೇಳುವುದಾದರೆ ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂದರೆ ಮೊದಲಿಗೆ ಮಾಲೀಕತ್ವದ ದಾಖಲೆಗಳನ್ನು ಸಲ್ಲಿಸಬೇಕು ನೀವೇ ಅದರ ಮಾಲೀಕರು ಎಂಬುದನ್ನು ಖಾತರಿಪಡಿಸುವುದಕ್ಕೆ ದಾಖಲೆಗಳನ್ನು ಸಲ್ಲಿಸಬೇಕು. ಅದರ ಜೊತೆಗೆ ಗ್ರಾಮಠಾಣ ನಕ್ಷೆಯನ್ನು ಕೂಡ ಸಲ್ಲಿಸಬೇಕು. ಆ ನಕ್ಷೆಯಲ್ಲಿ ನಿಮ್ಮ ಆಸ್ತಿ ಇರಬೇಕು, ಗ್ರಾಮಠಾಣ ನಕ್ಷೆಯನ್ನು ತಹಶೀಲ್ದಾರರು ಪರಿಶೀಲನೆ ಮಾಡಿ ಅವರು ನಿಮಗೆ ಒಂದು ಪ್ರಮಾಣಪತ್ರವನ್ನು ಕೊಡಬೇಕು. ಜೊತೆಗೆ ಅರ್ಜಿದಾರರು ನಿಮ್ಮ ಭಾವಚಿತ್ರ ಮತ್ತು ಪಡಿತರ ಚೀಟಿ, ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ನಂತಹ ಗುರುತು ವಿಳಾಸ ಇರುವ ದಾಖಲೆಗಳನ್ನು ನೀಡಬೇಕು, ಈ ರೀತಿಯಾಗಿ ನೀವು ದಾಖಲೆಗಳನ್ನು ಸಲ್ಲಿಸಿದಾಗ ನಿಮಗೆ ನಮೂನೆ-9 ಸಿಗುತ್ತದೆ.

ನಿಮ್ಮದು ಕೃಷಿಯೇತರ ಅಷ್ಟೇ ಆಗಿದ್ದರೆ ಅಂದರೆ ಕೆಲವೊಂದು ಕಡೆ ಸೈಟ್ ಗಳನ್ನ ಮಾಡಿರುತ್ತಾರೆ ಅಥವ ಲೇಔಟ್ ಗಳನ್ನು ಮಾಡಿರುತ್ತಾರೆ, ಕೃಷಿ ಭೂಮಿಯಿಂದ ಕೃಷಿಯೇತರ ಭೂಮಿಯಾಗಿ ಪರಿವರ್ತನೆ ಆಗಿದ್ದಾಗ ನಮೂನೆ-೯ ನೀಡುತ್ತಾರೆ, ಇದನ್ನು ಪಡೆಯಲು ನೀವು ಮಾಲೀಕತ್ವದ ದಾಖಲೆಗಳನ್ನು ನೀಡಬೇಕು ಕಂದಾಯ ಇಲಾಖೆಯಿಂದ ನೀಡುವ ಪರಿವರ್ತನೆ ಆದೇಶವನ್ನು ಸಲ್ಲಿಸಬೇಕಾಗುತ್ತದೆ. ನಗರಾಭಿವೃದ್ಧಿ ಇಲಾಖೆಯಡಿಯಲ್ಲಿ ಯೋಜನೆಗೆ ಅನುಮತಿ ಸಿಕ್ಕರೆ ಅನುಮೋದನೆ ಪ್ರತಿಯನ್ನು ಸಲ್ಲಿಸಬೇಕು, ಹಾಗೆ ಅರ್ಜಿದಾರರು ನಿಮ್ಮ ಭಾವಚಿತ್ರ ಮತ್ತು ಪಡಿತರ ಚೀಟಿ, ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ನಂತಹ ಗುರುತು ವಿಳಾಸ ಇರುವ ದಾಖಲೆಗಳನ್ನು ನೀಡಬೇಕಾಗುತ್ತದೆ.

ಒಂದು ವೇಳೆ ನಿಮಗೆ ಸರ್ಕಾರಿ ವಸತಿ ಯೋಜನೆ ಅಡಿಯಲ್ಲಿ ಆಸ್ತಿಯನ್ನು ನೀಡಿದ್ದರೆ ನೀವು ನಮೂನೆ-ಒಂಬತ್ತು ಪಡೆಯುವುದಕ್ಕೆ ಯಾವ ಯೋಜನೆ ಅಡಿಯಲ್ಲಿ ನಿಮಗೆ ಜಾಗವನ್ನು ನೀಡಲಾಗಿ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಬೇಕು ಜೊತೆಗೆ ಅರ್ಜಿದಾರರು ನಿಮ್ಮ ಭಾವಚಿತ್ರ ಮತ್ತು ಪಡಿತರ ಚೀಟಿ, ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ನಂತಹ ಗುರುತು ವಿಳಾಸ ಇರುವ ದಾಖಲೆಗಳನ್ನು ನೀಡಬೇಕು. ನಮೂನೆ-ಹನ್ನೊಂದು ಎಂದರೆ ಏನು ಎಂಬುದನ್ನು ತಿಳಿದುಕೊಳ್ಳೋಣ. ಈ ಸ್ವತ್ತು ನಮೂನೆ ಹನ್ನೊಂದನ್ನೂ ಕೂಡ ಕೃಷಿಯೇತರ ಆಸ್ತಿ ಗಳಿಗೋಸ್ಕರ ಕೊಡುತ್ತಾರೆ. ಇಲ್ಲಿ ಭೂಮಿ ಇರಬಹುದು ಕಟ್ಟಡ ಇರಬಹುದು ಎಲ್ಲಾ ಆಸ್ತಿಗಳಿಗೆ ತೆರಿಗೆಯನ್ನು ಸಂಗ್ರಹಿಸುವುದಕ್ಕೆ ನಮೂನೆ ಹನ್ನೊಂದನ್ನು ನೀಡುತ್ತಾರೆ, ಕೆಲವೊಂದು ಬಾರಿ ನಮೂನೆ-ಒಂಬತ್ತು ಸಿಗದಿದ್ದಾಗ ನಮೂನೆ ಹನ್ನೊಂದು ನಿಮಗೆ ಸಿಗುತ್ತದೆ. ಇದರಲ್ಲಿಯೂ ಕೂಡ ಆಸ್ತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇರುತ್ತದೆ.

ನಮೂನೆ ಒಂಬತ್ತು ಮತ್ತು ನಮೂನೆ-೧೧ ಉಪಯೋಗಗಳು ಏನು ಎಂದು ಹೇಳುವುದಾದರೆ, ಸರ್ಕಾರದವರು ಖಾಲಿ ಜಾಗ ಅಥವಾ ಕಟ್ಟಡದ ತೆರಿಗೆಯನನ್ನು ನಮೂನೆ ಒಂಬತ್ತು ಮತ್ತು ಹನ್ನೊಂದರ ಮೂಲಕ ಸಂಗ್ರಹಿಸುತ್ತಾರೆ. ಅದೇ ರೀತಿಯಾಗಿ ನೀವು ಕೃಷಿಯೇತರ ಆಸ್ತಿಯನ್ನ ಮಾರಾಟ ಮಾಡಬೇಕು ಅಥವಾ ತೆಗೆದುಕೊಳ್ಳಬೇಕು ಎಂದರೆ ಅದಕ್ಕೆ ನಮೂನೆ-ಒಂಬತ್ತು ಮತ್ತು ನಮೂನೆ-೧೧ ಬೇಕಾಗುತ್ತದೆ. ಈ ದಾಖಲೆಗಳು ಇಲ್ಲದಿದ್ದಾಗ ನೀವು ಆಸ್ತಿಯನ್ನು ನೊಂದಣಿ ಮಾಡಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಈ ರೀತಿಯಾಗಿ ನಮೂನೆ-೯ ಮತ್ತು ನಮೂನೆ-೧೧ ಕೃಷಿಯೇತರ ಭೂಮಿಗಳ ಮಾರಾಟ ಮತ್ತು ಖರೀದಿ ಗೆ ತುಂಬಾ ಅಗತ್ಯವಾಗಿ ಬೇಕಾಗಿರವಂತದ್ದಾಗಿದೆ. ಇ ಸ್ವತ್ತು ಎಂದರೇನು, ಇದರಿಂದ ಏನೆಲ್ಲಾ ಪ್ರಯೋಜನ ಹಾಗೂ ನಮೂನೆ ೯ ಮತ್ತು ನಮೂನೆ ೧೧ ಹೇಗೆ ಪಡೆದುಕೊಳ್ಳುಬಹುದು ಹಾಗೂ ಯಾವ ರೀತಿಯ ಪ್ರಯೋಜನ ಆಗುತ್ತದೆ ಎಂದು ತಿಳಿದುಕೊಂಡಿರಿ ಎಂದು ಭಾವಿಸುತ್ತೇವೆ ಮಾಹಿತಿ ಉಪಯೋಗವಾಗದಿದ್ದಲ್ಲಿ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.