ನಿಮ್ಮ ಜೀವನದಲ್ಲಿ ಮುಖದ ಕಲೆ ಹೋಗುತ್ತಿಲ್ಲ ಅಂತ ಕೊರುಗುತ್ತಾ ಇದ್ರೆ ನೈಸರ್ಗಿಕವಾಗಿ ಮನೆಯಲ್ಲೇ ಮಾಡುವ ಇದನ್ನ ಹಚ್ಚಿ ನೋಡಿ ಸಾಕು,ಬಂಗು,ಕಪ್ಪು ಕಲೆಗಳು,ಚರ್ಮದ ಸುಕ್ಕು ಎಲ್ಲ ಹೋಗುತ್ತೆ..

217

ಮುಖದ ಮೇಲೆ ಬಂದಿರುವ ಸುಕ್ಕು ಮತ್ತು ಭಂಗು ನಿವಾರಣೆಗೆ ಈ ಪರಿಹಾರ ಮಾಡಿ ಇದು ಎಲ್ಲರೂ ಮಾಡಬಹುದಾದ ಸುಲಭ ಮತ್ತು ಎಫೆಕ್ಟಿವ್ ಮನೆ ಮದ್ದು ಅಗಿದೆ ಹೌದು ಮುಖದ ಮೇಲೆ ಬಂದಿರುವ ಭಂಗಿಗೆ ಕೆಲವರು ಸನ್ ಟ್ಯಾನ್ ಕಾರಣ ಅಂತ ಹೇಳಬಹುದು ಇನ್ನು ಕೆಲವರು ಇದು ಮುಖವನ್ನು ಕಾಳಜಿ ಮಾಡದೇ ಇರುವುದರಿಂದ ಬಂದಿರುವ ತೊಂದರೆ ಅಂತ ಹೇಳಬಹುದು, ಆದರೆ ಕೆಲವರು ಹೇಳ್ತಾರೆ ಇದು ಹಾರ್ಮೋನ್ ಇಂಬ್ಯಾಲೆನ್ಸ್ ಇಂದ ಬಂದಿರುವಂತಹ ಸಮಸ್ಯೆ ಎಂದು.

ಹೀಗೆ ಹಲವು ಕಾರಣಗಳಿಂದ ಮುಖದ ಬಂಗು ಬಂದಿರಬಹುದು ಆದರೆ ಸುಕ್ಕು ಮಾತ್ರ ಹೇಗೆ ಬಂದಿರುತ್ತದೆ ಅಂದರೆ ವಯಸ್ಸಾಗುತ್ತಾ ಅಥವಾ ನಾವು ತ್ವಚೆಯ ಕಾಳಜಿ ಮಾಡದೆ ಹೋದಾಗ ಮತ್ತು ಮುಕ್ಕದಲ್ಲಿರುವ ಮಾಯಿಶ್ಚರ್ ಕಂಟೆಂಟ್ ಕಡಿಮೆ ಆದಾಗ ಈ ರೀತಿ ಮುಖದ ಮೇಲೆ ಸುಕ್ಕುಗಳು ಉಂಟಾಗುತ್ತೆ.ಆದರೆ ಹಲವು ಕಾರಣಗಳಿಂದ ಉಂಟಾಗುವ ತ್ವಚೆಗೆ ಸಂಬಂಧಪಟ್ಟ ಸಮಸ್ಯೆ ನಿವಾರಣೆ ಮಾಡಿಕೊಂಡು ನಿಮ್ಮ ತ್ವಚೆಯ ಕಾಳಜಿಯನ್ನು ಮಾಡ ಬೇಕ. ಹಾಗಾದರೆ ಇಲ್ಲಿದೆ ನೋಡಿ ನಿಮಗಾಗಿ ಒಂದು ಸುಲಭ ಪರಿಹಾರ ಮತ್ತು ಮನೆ ಮದ್ದು. ಇದನ್ನು ಮಾಡುವುದಕ್ಕೆ ಬೇಕಾಗಿರುವುದು ಲವಂಗ ಜೊತೆಗೆ ಅಲೋವೆರಾ ಜೆಲ್ ಗ್ಲಿಸರಿನ್ ನೀರು.

ಮೊದಲಿಗೆ ಮಾಡಬೇಕಿರುವುದು ಏನು ಅಂದರೆ ಒಂದೊಳ್ಳೆ ಸ್ಕ್ರಬ್ ಹೌದು ಮುಖದ ಮೇಲೆ ಉಂಟಾಗಿರುವ ಈ ಬಂ ಗೂ ಮತ್ತು ಸುಕ್ಕು ನಿವಾರಣೆಗೆ ಹೀಗೆ ಮಾಡಿ.ಲವಂಗವನ್ನು ಕುಟ್ಟಿ ಪುಡಿಮಾಡಿ ನೀರಿನೊಂದಿಗೆ ಮಿಶ್ರಮಾಡಿ ಬಿಳಿಬಟ್ಟೆಯೊಂದನ್ನು ತೆಗೆದುಕೊಂಡು ಅದರ ಮೇಲೆ ಈ ನೀರನ್ನು ಹಾಕಬೇಕು.ಬಳಿಕ ಲವಂಗದ ಪುಡಿ ಬಿಳಿ ಬಟ್ಟೆಯ ಮೇಲೆ ಇರುತ್ತದೆ ಅದನ್ನು ಸಂಗ್ರಹ ಮಾಡಿ ಆ ಲವಂಗದ ಪುಡಿ ಸಕ್ಕರೆ ಪುಡಿ ಮತ್ತು ಸ್ವಲ್ಪ ಅರಿಶಿಣ ಹಾಗೂ ಹಾಲನ್ನು ಹಾಕಿ ಈ ಮಿಶ್ರಣವನ್ನು ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಸ್ಕ್ರಬ್ ಮಾಡಬೇಕು. ಹೌದು ಜೋರಾಗಿ ಮುಖಕ್ಕೆ ಮಸಾಜ್ ಮಾಡಬಾರದು ನಿಧಾನವಾಗಿ ಕೆಳಗಿನಿಂದ ಮೇಲಕ್ಕೆ ಮಸಾಜ್ ಮಾಡುವ ರೀತಿ ಮಾಡಿ ಸ್ಕ್ರಬಿಂಗ್ ಮಾಡಬೇಕು.

ಈ ರೀತಿ ಸ್ಕ್ರಬ್ಬಿಂಗ್ ಮಾಡಿದಮೇಲೆ ಮುಖವನ್ನು ತಣ್ಣಗಿನ ನೀರಿನಿಂದ ತೊಳೆದುಕೊಳ್ಳಿ ಬಳಿಕ ಮಾಯಿಶ್ಚರೈಸರ್ ಹಚ್ಚುವುದನ್ನು ಮರೆಯಬೇಡಿ, ಇದನ್ನು ವಾರಕ್ಕೊಮ್ಮೆ ಮಾಡಿದರೆ ಸಾಕು.ಈಗ ಲವಂಗದ ನೀರನ್ನು ತೆಗೆದುಕೊಂಡು ಅದಕ್ಕೆ ಗ್ಲಿಸರಿನ್ ಅಲೋವೆರಾ ಜೆಲ್ ಮಿಶ್ರ ಮಾಡಿ ರಾತ್ರಿ ಮಲಗುವ ಮುನ್ನ ಮುಖಕ್ಕೆ ಸ್ಪ್ರೇ ಮಾಡಿ ಒಮ್ಮೆ ಮುಖವನ್ನ ಟ್ಯಾಪ್ ಮಾಡಿ ಹಾಗೆ ಮಲಗಬೇಕು ಬೆಳಗ್ಗೆ ಎದ್ದು ತಣ್ಣೀರಿನಲ್ಲಿ ಮುಖವನ್ನು ಸ್ವಚ್ಛ ಮಾಡಬೇಕು.

ಈ ತಯಾರಿಸಿ ಕೊಂಡಂತಹ ಲವಂಗದ ನೀರಿನ ಸ್ಪ್ರೇ ಅನ್ನು ಫ್ರಿಜ್ ನಲ್ಲಿ ಇಟ್ಟು ಶೇಖರಣೆ ಮಾಡಿ ಇಟ್ಟಿರಿ ಪ್ರತಿದಿನ ಈ ಸ್ಪ್ರೇಯನ್ನು ನಿಮ್ಮ ಮುಖಕ್ಕೆ ಹಾಕಿ ಮುಖವನ್ನ ಟ್ಯಾಪ್ ಮಾಡಿ, ಈ ರೀತಿ ಮಾಡುತ್ತಾ ಬರುವುದರಿಂದ ಮುಖದ ಮೇಲೆ ಉಂಟಾಗಿರುವ ಮೊಡವೆ ಕಲೆ ಕಪ್ಪು ಚುಕ್ಕೆಗಳು ಕಪ್ಪು ಕಲೆಗಳು ಪಿಗ್ಮಂಟೇಷನ್ ಹಾಗೂ ಸುಕ್ಕುಗಳು ಇವೆಲ್ಲವೂ ನಿವಾರಣೆಯಾಗುತ್ತೆ ಸ್ವಲ್ಪ ದಿನಗಳಲ್ಲಿಯೇ ನಿಮ್ಮ ತ್ವಚೆಯಲ್ಲಿ ಆಗುವ ಬದಲಾವಣೆಯನ್ನು ನೀವು ಕಂಡು ಅಚ್ಚರಿ ಪಡುತ್ತೀರ.

ಇದನ್ನು ಪುರುಷರು ಮಹಿಳೆಯರು ಇಬ್ಬರು ಕೂಡ ಕಳಿಸಬಹುದುಈ ಎಫೆಕ್ಟಿವ್ ಮನೆಮದ್ದನ್ನು ನೀವು ಕೂಡ ಪಾಲಿಸಿ ಯಾವುದೇ ಖರ್ಚಿಲ್ಲದೆ ಪಿಗ್ಮೆಂಟೇಶನ್ ಅನ್ನು ತೊಲಗಿಸುಗ್ತೆ, ಈ ಸರಳ ಪರಿಹಾರ. ಮಾಡುವುದಕ್ಕೂ ಸುಲಭ ಪಾಲಿಸುವುದಕ್ಕೂ ಸುಲಭ ಹಾಗೂ ತ್ವಚೆಗೂ ಕೂಡ ಒಳ್ಳೆಯದು ಮತ್ತು ಎಫೆಕ್ಟು ಫಲಿತಾಂಶ ದೊರೆಯುತ್ತದೆ.

LEAVE A REPLY

Please enter your comment!
Please enter your name here