ನಿಮ್ಮ ದೇಹದ ಮೇಲೆ ಉಂಟಾಗುವ ಕೊಬ್ಬಿನ ಗಡ್ಡೆಯನ್ನ ನಿವಾರಿಸುವುದಕ್ಕೆ ಈ ಒಂದು ಮನೆಮದ್ದು ಮಾಡಿ ಸಾಕು .. ಗಡ್ಡೆ ಕರಗಿ ನೀರಾಗುತ್ತದೆ…

433

ಬನ್ನಿ ದೇಹದಲ್ಲಿ ಆಗುವ ಈ ಕೊಬ್ಬಿನ ಉಂಡೆಗಳನ್ನ ಕರಗಿಸುವುದು ಹೇಗೆಂದು ತಿಳಿದುಕೊಳ್ಳೋಣ ಇಂದಿನ ಲೇಖನದಲ್ಲಿ, ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಮತ್ತು ಈ ದೇಹದಲ್ಲಿ ಕಂಡುಬರುವ ಈ ಕೊಬ್ಬಿನ ಉಂಡೆಗೆ ಮನೆಯಲ್ಲೇ ಹೇಗೆ ಪರಿಹಾರ ಮಾಡಿ ಇದನ್ನು ಕರಗಿಸುವುದು ಎಂದು ತಿಳಿದುಕೊಳ್ಳೋಣಹೌದು ಸಾಮಾನ್ಯವಾಗಿ ನಾವು ದಪ್ಪ ಆದಾಗ ನಮ್ಮ ದೇಹದಲ್ಲಿ ಕೊಬ್ಬು ಶೇಖರಣೆ ಆಗಿರುತ್ತದೆ ಹಾಗಾಗಿ ಆ ಕೊಬ್ಬು ಕರಗಿಸಲು ನಾವು ಏನೆಲ್ಲ ಪ್ರಯತ್ನಗಳನ್ನು ಮಾಡುತ್ತೇವೆ ಜೊತೆಗೆ ಕೆಲವೊಂದು ಮನೆಮದ್ದುಗಳನ್ನು ಪಾಲಿಸುವ ಮೂಲಕ, ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಲು ಮುಂದಾಗುತ್ತೇವೆ.

ಆದರೆ ಇವತ್ತಿನ ಲೇಖನದಲ್ಲಿ ನಮ್ಮ ಈ ಕೈಗಳ ಮೇಲೆ ಬೆನ್ನು ಅಥವಾ ಕಾಲಿನ ಮೇಲೆ ಕಂಡುಬರುವ ಗಂಟು ಅಂದರೆ ಇದನ್ನ ಕೊಬ್ಬಿನ ಉಂಡೆ ಅಂತ ಕೂಡ ಕರೆಯುತ್ತಾರೆ ಇದನ್ನ ಹೇಗೆ ಕರಗಿಸಿಕೊಳ್ಳೋದು ಇದರಿಂದೇನಾದರೂ ತೊಂದರೆ ಆಗುತ್ತಾ ಎಲ್ಲವನ್ನು ತಿಳಿಯೋಣ ಬನ್ನಿ ಕೆಳಗಿನ ಲೇಖನದಲ್ಲಿ.ಹೌದು ಈ ಸನ್ನಿವೇಶವನ್ನ ಲಿಪೊಮಾ ಅಂತಾ ಕರೆಯಲಾಗುತ್ತದೆ. ಇವತ್ತಿನ ಲೇಖನದಲ್ಲಿ ನಾವು ಈ ಲಿಪೋಮ ಕುರಿತು ಮಾತನಾಡುತ್ತಿದ್ದು ಈ ಕೊಬ್ಬಿನ ಉಂಡೆಗಳನ್ನ ಕೆಲವರು ಸರ್ಜರಿ ಮಾಡಿ ಕರಗಿಸುವ ಪ್ರಯತ್ನವನ್ನ ಮಾಡ್ತಾರೆ ಆದರೆ ಈ ಸರ್ಜರಿ ತನಕ ಹೋಗುವ ಅಗತ್ಯ ಇಲ್ಲ ಮನೆಯಲ್ಲಿಯೇ ಕೆಲವೊಂದು ಪರಿಹಾರಗಳನ್ನು ಮಾಡಿ ಈ ಕೊಬ್ಬಿನ ಉಂಡೆಗಳನ್ನ ಕರಗಿಸಿಕೊಳ್ಳಬಹುದು.

ಲಿಪೋಮ ಸಮಸ್ಯೆ ಎದುರಾದಾಗ ಇದನ್ನ ಹಲವು ಜನರು ಕ್ಯಾನ್ಸರ್ ಗೆಡ್ಡೆಗಳು ಅಂತ ಭಾವಿಸಿ ಭಯಪಡುತ್ತಾರೆ ಅದನ್ನ ಟೆಸ್ಟ್ ಕೂಡ ಮಾಡಿಸಿಕೊಳ್ಳಲು ಮುಂದಾಗುತ್ತಾರೆ ಆದರೆ ನಾವು ಈ ಲೇಖನದಲ್ಲಿ ಈ ಕ್ಯಾನ್ಸರ್ ಗೆಡ್ಡೆ ಅಥವಾ ಕೊಬ್ಬಿನ ಉಂಡೆಯೋ ಎಂಬುದನ್ನ ತಿಳಿದುಕೊಳ್ಳಲು ಸಣ್ಣ ವಿಚಾರವನ್ನು ತಿಳಿದಿರಬೇಕಾಗುತ್ತದೆ.ಹೌದು ಕೇವಲ ಕೊಬ್ಬಿನ ಉಂಡೆ ಆಗಿದ್ದರೆ ಆ ಭಾಗದಲ್ಲಿ ನೋವು ಇರುವುದಿಲ್ಲ ಆಗಾಗ ನೋವು ಕೂಡ ಕಾಣಿಸಿಕೊಳ್ಳುವುದಿಲ್ಲಾ. ಆದರೆ ಕ್ಯಾನ್ಸರ್ ಗಡ್ಡೆ ಆದರೆ ನೋವು ಇರುತ್ತದೆ ನಿಮಗೆ ವಿಪರೀತ ಬಾಧೆ ನೀಡುತ್ತಾ ಇರುತ್ತದೆ ಯಾಕಿಷ್ಟು ನೋವು ಅನ್ನುವ ಅನುಭವ ನಿಮಗೆ ಆಗುತ್ತಾ ಇರುತ್ತದೆ ಆಗ ನೀವು ಕೂಡಲೇ ವೈದ್ಯರ ಬಳಿ ಹೋಗಿ ಇದನ್ನ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.

ಈಗ ಮನೆಮದ್ದಿನ ಕುರಿತು ಮಾತನಾಡುವಾಗ ಇದಕ್ಕೆ ಬೇಕಾಗಿರುವ ಪದಾರ್ಥ ಬೆಳ್ಳುಳ್ಳಿ ಸೈಂಧವ ಲವಣ ಕೊಬ್ಬರಿ ಎಣ್ಣೆ ಮತ್ತು ಅರಿಶಿಣ ಈ ಪದಾರ್ಥಗಳು ಅಗತ್ಯವಿರುತ್ತದೆ.ಬೆಳ್ಳುಳ್ಳಿಯನ್ನು ಜಜ್ಜಿ ಪೇಸ್ಟ್ ಮಾಡಿಕೊಳ್ಳಿ ಬಳಿಕ ಇದಕ್ಕೆ ಕೊಬ್ಬರಿ ಎಣ್ಣೆ ಅರಿಷಿಣ ಮತ್ತು ಸೈಂಧವ ಲವಣವನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಿ ಇದು ಸ್ವಲ್ಪ ಫೇಸ್ ಪ್ಯಾಕ್ ಮಾದರಿಯಲ್ಲಿಯೇ ಇರಲಿ ನಂತರ ಕೊಬ್ಬಿನ ಉಂಡೆಗಳು ಆಗಿರುವ ಭಾಗಕ್ಕೆ ಇದನ್ನ ದಪ್ಪದಾಗಿ ಲೇಪ ಮಾಡಿ

ನಂತರ ಬಟ್ಟೆಯೊಂದರ ಸಹಾಯದಿಂದ ಆ ಭಾಗವನ್ನು ಕಟ್ಟಬೇಕು. ಈಗ ಅದನ್ನ ರಾತ್ರಿಯೆಲ್ಲ ಹಾಗೇ ಬಿಟ್ಟು ಮಾರನೇ ದಿನ ಆ ಭಾಗವನ್ನು ಬಿಸಿನೀರಿನಿಂದ ಸ್ವಚ್ಛ ಮಾಡಿಕೊಳ್ಳಿ ಈ ರೀತಿ ನೀವು ಪ್ರತಿದಿನ ಈ ಪರಿಹಾರವನ್ನು ಪಾಲಿಸಿಕೊಂಡು ಬಂದದ್ದೇ ಆದಲ್ಲಿ ನಿಮಗೆ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಈ ಕ್ಯಾನ್ಸರ್ ಉಂಡೆಗಳನ್ನು ಪರಿಹಾರ ಮಾಡಿಕೊಳ್ಳಬಹುದು ಹಾಗೂ ಸ್ವಲ್ಪ ದಿನಗಳಲ್ಲಿಯೇ ಈ ಗೆಡ್ಡೆ ನೀವು ಕೂಡ ಗಮನಿಸುತ್ತೀರಾ.ಈ ಸರಳ ಉಪಾಯವನ್ನು ನೀವು ಕೂಡ ತಿಳಿದು, ಈ ಸಮಸ್ಯೆ ಯಾರಿಗೆ ಕಾಡುತ್ತಿದ್ದಲ್ಲಿ ಅಂಥವರಿಗೆ ಈ ಪರಿಹಾರದ ಬಗ್ಗೆ ತಿಳಿಸಿಕೊಡಿ ಧನ್ಯವಾದ.

WhatsApp Channel Join Now
Telegram Channel Join Now