ನಿಮ್ಮ ಮುಖದ ಮೇಲೆ ಆಗುವ ಯವ್ವನದ ಗುಳ್ಳೆಯನ್ನ ಈ ಒಂದು ಮನೆಮದ್ದಿನಿಂದ ತಕ್ಷಣಕ್ಕೆ ನಿವಾರಿಸಿಕೊಳ್ಳಬಹುದು .. ಮೊಡವೆಗೆ ಏಕೈಕ ಮದ್ದು ಇದು …

76

ಮುಖ ಹೊಳಪಾದ ಬೇಕೆಂದಲ್ಲಿ ಈ ಪರಿಹಾರ ಮಾಡಿ ಇದರಿಂದ ನಿಮ್ಮ ತ್ವಚೆಯ ಅಂದ ಹೆಚ್ಚುತ್ತದೆ ಹಾಗೂ ಯಾವುದೇ ಕ್ರೀಮ್ ಅವಶ್ಯಕತೆ ಇಲ್ಲದೆ ನಿಮ್ಮ ತ್ವಚೆಯು ಹಾಗೂ ಮುಖದ ಮೇಲಿರುವ ಕಲೆ ನಿವಾರಣೆಗೆ ಈ ಮನೆಮದ್ದು ಉಪಯುಕ್ತವಾಗಿದೆ.ನಮಸ್ಕಾರಗಳು ಪುರುಷರಿಗಿಂತ ಮಹಿಳೆಯರು ತಮ್ಮ ತ್ವಚೆಯ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತಾರೆ ನೀವು ನೋಡಿರಬಹುದು ಹೆಣ್ಣುಮಕ್ಕಳು ತಮ್ಮ ತ್ವಚೆಯ ಕಾಳಜಿ ಮಾಡಲು ಏನೆಲ್ಲ ಮಾಡ್ತಾರೆ ಎಷ್ಟೆಲ್ಲಾ ಹಣ ಖರ್ಚು ಮಾಡ್ತಾರೆ ಅಂತ.

ಹಾಗಾಗಿ ಹೆಣ್ಣುಮಕ್ಕಳು ತಮ್ಮ ತ್ವಚೆಯ ಕಾಳಜಿ ಮಾಡಲು ಏನು ಬೇಕಾದರೂ ಮಾಡ್ತಾರೆ ಆದರೆ ಮಾರ್ಕೆಟ್ ನಿಂದ ಹಲವು ಕ್ರೀಮ್ ಗಳನ್ನು ತಂದು ನಿಮ್ಮ ತ್ವಚೆಯ ಕಾಳಜಿ ಮಾಡುವುದಕ್ಕಿಂತ ಮನೆಯಲ್ಲಿಯೇ ದೊರೆಯುವ ಕೆಲವೊಂದು ನೈಸರ್ಗಿಕ ಪದಾರ್ಥಗಳನ್ನು ಬಳಸಿ ನಿಮ್ಮ ಮುಖದ ತ್ವಚೆಯ ಕಾಳಜಿ ಮಾಡಬಹುದು.ಈಗ ನಾವು ಹೇಳಲು ಹೊರಟಿರುವ ನಂತಹ ಈ ಮನೆಮದ್ದನ್ನು ಪಾಲಿಸುವುದರಿಂದ ನೀವು ಕೇವಲ ಒಂದೆರಡು ದಿನಗಳಲ್ಲಿಯೇ ತ್ವಚೆಯಲ್ಲಿ ಹಾಗೂ ಬದಲಾವಣೆಯನ್ನು ಕಾಣಬಹುದು ತ್ವಚೆಯ ಕಾಂತಿ ಹೆಚ್ಚುವುದರ ಜೊತೆಗೆ ಕಲೆಗಳು ನಿವಾರಣೆಯಾಗುತ್ತದೆ ಸನ್ ಟ್ಯಾನ್ ಅಂತಹ ಸಮಸ್ಯೆ ಕೂಡ ಪರಿಹಾರವಾಗುತ್ತದೆ.

ಈಗ ನಾವು ಮಾಹಿತಿ ಕುರಿತು ಹೇಳುವುದಾದರೆ ಇಂದಿನ ಲೇಖನದಲ್ಲಿ ತ್ವಚೆಯ ಕಾಳಜಿ ಕುರಿತು ಮಾತನಾಡುತ್ತಿದ್ದು ನಿಮ್ಮ ತ್ವಚೆಯು ತುಂಬ ಸೂಕ್ಷ್ಮವಾದದ್ದು ಹಾಗಾಗಿ ಹೆಚ್ಚು ಕೆಮಿಕಲ್ ಇರುವ ಸೋಪುಗಳನ್ನು ಬಳಸಬಾರದುಹೆಚ್ಚು ಕೆಮಿಕಲ್ ಇರುವಂತಹ ಕ್ರೀಂಗಳನ್ನು ಸಹ ಮುಖಕ್ಕೆ ಬಳಸಬಾರದು ಈ ಕೆಮಿಕಲ್ ಇರುವ ಪದಾರ್ಥಗಳನ್ನು ಏನಾದರೂ ನಾವು ಹೆಚ್ಚು ಬಳಸುತ್ತಾ ಬಂದರೆ ಅದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ನಿಮ್ಮ ತ್ವಚೆಗೂ ಒಳ್ಳೆಯದಲ್ಲ ನಮ್ಮ ಕೂದಲಿಗೂ ಸಹ ಒಳ್ಳೆಯದಲ್ಲ ನೈಸರ್ಗಿಕತ್ವವನ್ನು ಈ ಕೆಮಿಕಲ್ ಅಂಶವು ಸಂಪೂರ್ಣವಾಗಿ ನಶಿಸಿ ನಿಮ್ಮ ತ್ವಚೆಯ ನೈಸರ್ಗಿಕ ಅಂದವನ್ನು ಹಾಳು ಮಾಡುತ್ತದೆ.

ಹಾಗಾಗಿ ನಿಮ್ಮ ತ್ವಚೆಯ ಕಾಳಜಿ ಮಾಡಲು ಈ ಫೇಸ್ ಪ್ಯಾಕ್ ಬಳಸಿ ಇದನ್ನು ದಿನಬಿಟ್ಟು ದಿನ ಮಾಡುತ್ತ ಬರುವುದರಿಂದ ತ್ವಚೆಯ ಮೇಲಿರುವ ಕಲೆ ನಿವಾರಣೆಯಾಗುತ್ತದೆ ಹಾಗೂ ತ್ವಚೆಗೆ ನೈಸರ್ಗಿಕ ಹೊಳಪು ಬರುತ್ತದೆ ಈಗ ಮನೆ ಮದ್ದು ಮಾಡಲು ಬೇಕಾಗಿರುವುದು ಹೆಸರುಕಾಳು ಹಸಿರು ಚಹದ ಎಲೆ ಮುಲ್ತಾನಿ ಮಿಟ್ಟಿ ಅರಿಶಿಣ ದಾಲ್ಚಿನಿ ಚಕ್ಕೆ ಪುಡಿ.

ಈ ಫೇಸ್ ಪ್ಯಾಕ್ ಅನ್ನು ಮುಖ್ಯವಾಗಿ ಬಳಸುತ್ತಿರುವುದು ಯಾವ ಕಾರಣಕ್ಕಾಗಿ ಅಂದರೆ ಮುಖ್ಯವಾಗಿ ಮೊಡವೆ ಕಲೆಗಳ ನಿವಾರಣೆಗೆ ಬ್ಲ್ಯಾಕ್ ಹೆಡ್ಸ್ ವೈಟ್ ಹೆಡ್ಸ್ ನಿವಾರಣೆಗೆ ಇದನ್ನು ಮಾಡುವ ವಿದಾನ ಹೆಸರುಕಾಳನ್ನು ಪುಡಿ ಮಾಡಿ ಇಟ್ಟುಕೊಳ್ಳಿ ನಂತರ ಇದಕ್ಕೆ ಹಸಿರು ಚಹದ ಎಲೆಯ ಪೇಸ್ಟ್ ಮಿಶ್ರಮಾಡಿ ದಾಲ್ಚಿನಿ ಚಕ್ಕೆ ಪುಡಿ ಅರಿಶಿಣ ಹಾಕಿ ಮುಲ್ತಾನಿ ಮಿಟಿಯನ್ನು ಹಾಕಿ ಅಲೋವೆರಾ ಜೆಲ್ ಅಥವಾ ಹಾಲು ಮೊಸರು ಸಹಾಯದಿಂದ ಇದನ್ನು ಪೇಸ್ಟ್ ಮಾಡಿಕೊಳ್ಳಬೇಕು.

ಫೇಸ್ ಪ್ಯಾಕ್ ತಯಾರಿಸಿಕೊಂಡು ನಂತರ ಇದನ್ನು ಮುಖದ ಮೇಲೆ ಲೇಪ ಮಾಡಿ ಇದರಿಂದ ಯಾವುದೇ ತರಹದ ಅಡ್ಡಪರಿಣಾಮಗಳು ತ್ವಚೆಯ ಆಗುವುದಿಲ್ಲ ಮತ್ತು ಮುಲ್ತಾನಿ ಮಿಟ್ಟಿ ರಿಂಕಲ್ಸ್ ನಿವಾರಣೆಗೆ ಸಹಕಾರಿ ದಾಲ್ಚಿನಿ ಕಲೆ ನಿವಾರಣೆಗೆ ಸಹಕಾರಿ ಹಾಗೂ ಅರಿಶಿಣ ಹೆಸರುಕಾಳು ಇವುಗಳೆಲ್ಲವೂ ನಮ್ಮ ತ್ವಚೆಯ ಅಂದವನ್ನು ಹೆಚ್ಚು ಮಾಡಲು ಕಾಂತಿಯನ್ನು ಹೆಚ್ಚು ಮಾಡಲು ಕಲೆ ನಿವಾರಣೆಗೆ ಸಹಕಾರಿ ಆಗಿದ್ದು, ಈ ಪ್ಯಾಕ್ ಬಳಸಿ ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳಿ ಮತ್ತು ಕಲೆಗಳಿಂದ ಮುಕ್ತಿ ಪಡೆಯಿರಿ ಧನ್ಯವಾದ.

LEAVE A REPLY

Please enter your comment!
Please enter your name here