ನಿಮ್ಮ ಸಂದುಗಲ್ಲಿ ಏನಾದರು ತುರಿಕೆಯ ಅನುಭವ ಆಗುತ್ತಾ ಇದ್ರೆ ಈ ಒಂದು ಮನೆಯಲ್ಲೇ ಮಾಡಬಹುದಾದ ಈ ಮನೆಮದ್ದು ಹಚ್ಚಿ ಸಾಕು….ಕೆಲವೇ ನಿಮಿಷದಲ್ಲಿ ಆಹಾ ಅನುಭವ ಆಗುತ್ತೆ…

92

ಚರ್ಮ ಸಂಬಂಧಿ ತೊಂದರೆ ಯಾವುದೇ ಇರಲಿ ಅದಕ್ಕೆ ಮನೆಯಲ್ಲೇ ಮಾಡಬಹುದಾದ ಪವರ್ಫುಲ್ ಮನೆ ಮದ್ದು ಇದಾಗಿದೆ ಈ ಮನೆ ಮದ್ದು ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ ಬನ್ನಿ ಇವತ್ತಿನ ಮಾಹಿತಿಯಲ್ಲಿ.ನಮಸ್ಕಾರಗಳು ಈ ಚರ್ಮ ಸಂಬಂಧಿ ತೊಂದರೆಗಳು ಹಲವು ಕಾರಣಕ್ಕೆ ಬರುತ್ತದೆ ಬೇಸಿಗೆಯಲ್ಲಿ ಆದರೆ ತುಂಬಾ ಬೆವರುವುದರಿಂದ ಈ ಚರ್ಮ ಸಂಬಂಧಿ ತೊಂದರೆ ಉಂಟಾಗಬಹುದು ಅದೇ ಮಳೆಗಾಲ ಬಂದಾಗ ಅತಿ ತೇವಾಂಶ ಇರುವುದರಿಂದ ಅಂತಹ ಜಾಗಗಳಲ್ಲಿ ಓಡಾಡುವುದರಿಂದ ಕೈಕಾಲುಗಳ ಸಂದಿಗಳಲ್ಲಿ ಫಂಗಸ್ ಹಾಕುವುದು ಈ ರೀತಿ ಚರ್ಮ ಸಂಬಂಧಿ ತೊಂದರೆಗಳು ಕಾಣಸಿಗುತ್ತದೆ.

ಅದೇ ರೀತಿ ಚಳಿ ಕಾಲದಲ್ಲಿಯೂ ಕೂಡ ಕೈಕಾಲು ಒಡೆಯುವುದು ಅಥವಾ ಇನ್ನ ಹಲವು ಕಾರಣಗಳಿಂದ ಚರ್ಮ ಸಂಬಂಧಿ ತೊಂದರೆಗಳು ಬರುತ್ತದೆ ಹಾಗಾಗಿ ಇಂತಹ ತೊಂದರೆಗಳು ಕಾಡುತ್ತಿರುವಾಗ ಇದಕ್ಕೆ ತಕ್ಕ ಮನೆಮದ್ದುಗಳನ್ನು ಪಾಲಿಸಲೇಬೇಕಾಗುತ್ತದೆ.ಹೌದು ಯಾಕೆ ಈ ಮನೆ ಮದ್ದುಗಳೆ ಚರ್ಮ ಸಂಬಂಧಿ ತೊಂದರೆಗಳಿಗೆ ಉತ್ತಮ ಪರಿಹಾರ ಕೊಡುತ್ತದೆ? ಇದಕ್ಕೂ ಕೂಡ ಕಾರಣವಿದೆ ಹೌದು ಚರ್ಮ ಸಂಬಂಧಿ ತೊಂದರೆಗಳು ಬಂದಾಗ ಪದೇಪದೆ ಆಸ್ಪತ್ರೆಗಳ ಕಡೆ ಹೋಗಲು ಆಗುವುದಿಲ್ಲ ಮತ್ತು ಇತ್ತೀಚೆಗೆ ಆಸ್ಪತ್ರೆಗಳಿಗೆ ಹೋಗುವುದಾದರೆ ಪರ್ಸ್ ತುಂಬಾ ಹಣ ಇಟ್ಟುಕೊಂಡು ಹೋಗಬೇಕು. ಒಂದೊಂದು ಸಮಸ್ಯೆಗಳಿಗೆ ಬರೆಯುವ ಹಲವು ಪರಿಹಾರಗಳು ಬಹಳ ದುಬಾರಿಯಾಗಿರುತ್ತದೆ.

ಆದ್ದರಿಂದ ಕೆಲವೊಂದು ಚರ್ಮ ಸಂಬಂಧಿ ತೊಂದರೆಗಳಿಗೆ ತಕ್ಕ ಪರಿಹಾರಗಳನ್ನು ಮನೆಯಲ್ಲೇ ಮಾಡಬಹುದು ಈ ದಿನ ನಾವು ಮನೆಯಲ್ಲೇ ಮಾಡಬಹುದಾದ ಸರಳ ಮನೆಮದ್ದುಗಳ ಕುರಿತು ತಿಳಿಸಿಕೊಡುತ್ತಿದ್ದೇವೆ ಇದನ್ನು ನೀವು ಕೂಡ ಪಾಲಿಸುವ ಮೂಲಕ ಕೆಲವು ಚರ್ಮ ಸಂಬಂಧಿ ತೊಂದರೆಗಳಿಗೆ ತಕ್ಷಣಕ್ಕೆ ಪರಿಹಾರ ಕಂಡುಕೊಳ್ಳಬಹುದು ಸತತವಾಗಿ ವಾರದವರೆಗೂ ಈ ಪರಿಹಾರವನ್ನು ಪಾಲಿಸಿಕೊಂಡು ಬಂದರೆ, ಬಂದಿರುವ ಚರ್ಮ ಸಂಬಂಧಿ ತೊಂದರೆಗಳ ಆಗಿರುವ

ಈ ಬೆವರುಸಾಲೆ ಕಜ್ಜಿ ತುರಿಕೆ ಇಂತಹ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಹಾಗಾದರೆ ಬನ್ನಿ ಇಂತಹ ಕೆಲವು ತೊಂದರೆಗಳಿಗೆ ಮನೆಮದ್ದು ಯಾವುವು ಎಂಬುದನ್ನು ತಿಳಿಯೋಣ ಇಂದಿನ ಲೇಖನದಲ್ಲಿ.ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಅಂದರೆ ಅರಿಶಿಣ ಬೇವಿನ ಎಲೆ ಕೊಬ್ಬರಿ ಎಣ್ಣೆ ಮತ್ತು ಬೆಳ್ಳುಳ್ಳಿ

ಈ ಪದಾರ್ಥಗಳನ್ನು ಚರ್ಮ ಸಂಬಂಧಿ ತೊಂದರೆಗಳ ನಿವಾರಣೆಗೆ ಬಳಸಬಹುದಾಗಿದ್ದು ಇದರ ವಿಶೇಷತೆ ಏನೆಂದರೆ ಇದರಲ್ಲಿ ಆ್ಯಂಟಿಫಂಗಲ್ ಗುಣ ಆ್ಯಂಟಿ ಬ್ಯಾಕ್ಟೀರಿಯಲ್ ಗುಣ ಇರುವುದರಿಂದ ಚರ್ಮ ಸಂಬಂಧಿ ತೊಂದರೆಗಳನ್ನು ಬಹಳ ಬೇಗ ನಿವಾರಣೆ ಮಾಡಿಕೊಳ್ಳಬಹುದು ಈ ಕೆಲವೊಂದು ಪದಾರ್ಥಗಳನ್ನು ಬಳಸಿಕೊಂಡು.

ಮೊದಲನೆಯದಾಗಿ ಬೆಳ್ಳುಳ್ಳಿ ಮತ್ತು ಬೇವಿನ ಎಲೆಗಳನ್ನು ತೆಗೆದುಕೊಂಡು ಸ್ವಚ್ಛಮಾಡಿ ಇದನ್ನ ಕುಟ್ಟಿ ಪೇಸ್ಟ್ ಮಾಡಿಕೊಳ್ಳಬೇಕು ಬಳಿಕ ಇದಕ್ಕೆ ಶುದ್ಧ ಅರಿಶಿಣ ಮತ್ತು ಕೊಬ್ಬರಿ ಎಣ್ಣೆ ಹಾಕಿ ಪೇಸ್ಟ್ ಮಾಡಿಕೊಂಡು, ಚರ್ಮ ಸಂಬಂಧಿ ತೊಂದರೆಗಳು ಯಾವ ಭಾಗದಲ್ಲಿ ಇರುತ್ತದೆ ಅದಕ್ಕೆ ಸ್ನಾನದ ಮುಂಚೆ 1 ಗಂಟೆ ಹಚ್ಚಿ ಬಳಿಕ ಬಿಸಿ ನೀರಿನಿಂದ ಸ್ವಚ್ಛ ಮಾಡುತ್ತ ಬನ್ನಿ.

ಈ ವಿಧಾನವನ್ನು ಪ್ರತಿದಿನ ಪಾಲಿಸಿಕೊಂಡು ಬಂದದ್ದೇ ಆದಲ್ಲಿ ಖಂಡಿತವಾಗಿಯೂ ಚರ್ಮ ಸಂಬಂಧಿ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಜತೆಗೆ ಕಜ್ಜಿ ತುರಿಕೆ ಇಂತಹ ತೊಂದರೆಗಳಿಗೆ ಆಸ್ಪತ್ರೆಗಳಿಗೆ ಹೋಗದೆ ಹೆಚ್ಚು ಖರ್ಚು ಮಾಡದೆ, ಮನೆಯಲ್ಲೇ ದೊರೆಯುವ ಪವರ್ ಫುಲ್ ಪದಾರ್ಥಗಳನ್ನು ಬಳಸಿ ಬಹಳ ಬೇಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು, ಈ ಮನೆ ಮದ್ದು ಉಪಯುಕ್ತ ಆಗಿದ್ದಲ್ಲಿ ಬೇರೆ ಅವರಿಗೂ ಕೂಡ ಈ ಮಾಹಿತಿ ಬಗ್ಗೆ ತಿಳಿಸಿಕೊಡಿ ಧನ್ಯವಾದ.

WhatsApp Channel Join Now
Telegram Channel Join Now