ನೀರನ್ನು ಬರಿಸಲು ಇವರು ಮಾಡಿದ ಐಡಿಯಾ ಏನ್ ಗೊತ್ತ ಗೊತ್ತಾದ್ರೆ ವಾವ್ ಅಂತೀರಾ …!!!!

64

ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ನಿಮಗೆ ತಿಳಿದೆ ಇದೆ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೇಸಿಗೆ ಸಮಯ ಬಂದು ಬಿಟ್ಟರೆ ಕುಡಿಯುವ ನೀರಿಗೂ ಕೂಡಾ ಜನರು ಹೆಚ್ಚು ಪರದಾಟ ಮಾಡಬೇಕಾಗುತ್ತದೆ. ಇಂತಹ ಸಮಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಗೆ ಸೇರಿರುವ ಒಬ್ಬ ವ್ಯಕ್ತಿ ಮಾಡಿರುವ ಕೆಲಸ ಏನು ಅಂತ ಹೇಳ್ತೇವೆ ಮತ್ತು ಈ ವ್ಯಕ್ತಿಯ ಬಗ್ಗೆ ಕೇಳಿದರೆ ನೀವು ಕೂಡ ಅಚ್ಚರಿ ಪಡುತ್ತೀರಾ ಹೌದು ಯಾರು ತಾನೆ ಇಷ್ಟೆಲ್ಲ ರಿಸ್ಕ್ ತೆಗೆದುಕೊಂಡು ಊರಿನವರಿಗೆ ಸಹಾಯ ಮಾಡಲು ಮುಂದಾಗ್ತಾರೆ ಆ ವ್ಯಕ್ತಿ ಯಾರು ಆ ವ್ಯಕ್ತಿ ಮಾಡಿದ್ದೇನು ಇದನ್ನೆಲ್ಲ ಹೇಳ್ತೇವೆ ಬನ್ನಿ ಇವತ್ತಿನ ಈ ಲೇಖನಿಯಲ್ಲಿ.

ಹೌದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಗೆ ಸೇರಿರುವ ಈ ವ್ಯಕ್ತಿ ಲಾಕ್ ಡೌನ್ ಯಿಂದಾಗಿ ಕೆಲಸ ಕಳೆದುಕೊಂಡು ಮನೆಗೆ ಬಂದಿರುತ್ತಾರೆ ಇನ್ನೂ ಊರಿನವರ ಬವಣೆ ನೋಡಲಾರದೆ ಈ ವ್ಯಕ್ತಿ ಲಾಕ್ ಡೌನ್ನಲ್ಲಿ ತಮ್ಮ ಮನೆಯ ಹಿಂದೆ ಇರುವ ಜಾಗದಲ್ಲಿ ಬಾವಿ ತೋಡಲು ಮುಂದಾಗ್ತಾರೆ ಹೌದು ಗುಂಡಿ ತೋಡ್ತಾ ತೋಡುತ್ತಾ ಈ ವ್ಯಕ್ತಿ ಸುಮಾರು ಮೂವತ್ತೆರಡು ಅಡಿ ಆಳಕ್ಕೆ ಗುಂಡಿ ತೆಗೆದು ಬಿಡುತ್ತಾರೆ ಆದರೆ ಅದಕ್ಕೆ ಆ ವ್ಯಕ್ತಿ ತೆಗೆದುಕೊಂಡ ಸಮಯ ಸುಮಾರು 8ತಿಂಗಳು.

ಆನಂತರ 8ತಿಂಗಳಿನ ಮೇಲೆ ಲಾಕ್ ಡೌನ್ ಮುಗಿಯುತ್ತದೆ ಇವರಿಗೆ ಮತ್ತೆ ಕೆಲಸ ಬಂದ ಕಾರಣ ಇವರು ಕೆಲಸಕ್ಕೆ ತೆರಳಿ ಬಿಡುತ್ತಾರೆ ಆದರೆ ಸಾಕೆಂಬಂತೆ ಮತ್ತೆ ಲಾಕ್ ಔಟ್ ಇವರ ಕೆಲಸ ಕಿತ್ತುಕೊಂಡಿತು ಮತ್ತೆ ಊರಿಗೆ ಹಿಂತಿರುಗಿದ ಮಹದೇವ ಮಂಕಾಳು ನಾಯ್ಕ ತಮ್ಮ ಮನೆ ಹಿಂದೆ ಅರ್ಧಕ್ಕೆ ನಿಲ್ಲಿಸಿದ ಬಾವಿ ತೋಡಲು ಮತ್ತೆ ಮುಂದಾಗ್ತಾರೆ ಈ ಗುಂಡಿಯಲ್ಲಿ ಸುಮಾರು 4ಅಡಿ ಉದ್ದದ ಕಲ್ಲು ಇರುತ್ತದೆ ಇದನ್ನು ಕೂಡ ತಾವೇ ಹೊಡೆದು ಪುಡಿ ಮಾಡುತ್ತಾರೆ ಮತ್ತು ಅದೃಷ್ಟ ಎಂಬಂತೆ ಮತ್ತೆ ಹತ್ತು ಅಡಿ ಗುಂಡಿ ತೋಡಿದಾಗ ಇವರಿಗೆ ಅಲ್ಲಿ ಗಂಗಾ ಮಾತೆಯ ಆಶೀರ್ವಾದ ಲಭಿಸದೆ ನೀರು ಸಿಗುತ್ತದೆ ಈ ರೀತಿ ಮಹದೇವ ಮಂಕಾಳು ನಾಯಕ ಅವರು ಊರಿನವರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಡುತ್ತಾರೆ ಇದೀಗ ಮಹದೇವ ಅವರು ಮಾಡಿರುವ ಈ ಕೆಲಸದಿಂದಾಗಿ ಊರಿನವರು ಬೇಸಿಗೆ ಸಮಯದಲ್ಲಿಯೂ ಕೂಡ ಕುಡಿಯುವ ನೀರಿನ ವ್ಯವಸ್ಥೆ ಅನ್ನೂ ಪಡೆದುಕೊಂಡಿದ್ದಾರೆ.

ಹೌದು ಮಹದೇವ ಮಂಕಾಳು ನಾಯಕ ಅವರು ಮಾಡಿರುವ ಈ ಕೆಲಸದಿಂದಾಗಿ ಊರಿನವರು ಬಹಳ ಸಂತಸ ಪಟ್ಟಿದ್ದಾರೆ ಮತ್ತು ತಮಗೆ ಬೇಸಿಗೆ ಸಮಯದಲ್ಲಿ ಕೂಡ ಕುಡಿಯುವ ನೀರು ಎಷ್ಟು ಸಲುವಾಗಿ ದೊರೆತ ಇದೆ ಎಂದು ಖುಷಿ ಪಟ್ಟಿರುವ ಈ ಊರಿನ ಜನರು ಮಹದೇವ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.ಇನ್ನೂ ಯಾರ ಸಹಾಯವೂ ಇಲ್ಲದೆ ಬಾವಿ ತೋಡಿ ಊರಿನ ಜನರಿಗೆ ನೀರಿನ ವ್ಯವಸ್ಥೆ ಮಾಡಿಕೊಟ್ಟ ಮಹದೇವ ಅವರ ಬಗ್ಗೆ ನೀವು ಕೂಡ ಒಂದೆರಡು ಮಾತುಗಳಲ್ಲೇ ಕಾಮೆಂಟ್ ಮಾಡಿ ಹಾಗೂ ಫ್ರೆಂಡ್ಸ್ ನಮಗೆ ಕಷ್ಟ ಇದ್ದಾಗ ನಮಗೆ ಯಾರಾದರೂ ಸಹಾಯಕ್ಕೆ ಬಂದರೆ ಆ ಸಮಯದಲ್ಲಿ ನಮಗೆ ಎಷ್ಟು ಖುಷಿ ಆಗುತ್ತದೆ ಆನಂತರ ನಮಗೆ ಉಪಯೋಗ ಆದ ಮೇಲೆ ನಾವು ಅವರನ್ನ ಮರೆಯುವುದಕ್ಕಿಂತ ಜೀವನಪರ್ಯಂತ ಅವರಿಗೆ ಧನ್ಯವಾದಗಳನ್ನು ಸಮರ್ಪಿಸಿದರೆ ಅದಕ್ಕಿಂತ ಸಹಾಯ ಮತ್ತೊಂದಿಲ್ಲ ಆದರೆ ಸಹಾಯ ಮಾಡಿದವರಿಗೆ ಎಂದಿಗೂ ಕಷ್ಟ ನೀಡದೆ ಇದ್ದರೆ ಅಷ್ಟೇ ಸಾಕು ಏನಂತೀರಾ ಫ್ರೆಂಡ್ಸ್ ಧನ್ಯವಾದಗಳು.