ನೀವು ಎಲ್ಲಿದ್ದೀರೋ ಅಲ್ಲಿಂದಲೇ ನನ್ನ ಕಷ್ಟಗಳು ತೀರಿ ಹೋದರೆ ದೇವಸ್ಥಾನಕ್ಕೆ ಬಂದು ಮಣ್ಣಿನ ಗೊಂಬೆಯನ್ನ ಹರಕೆಯ ರೂಪದಲ್ಲಿ ನೀಡುತ್ತೇನೆ ಅಂತ ಸಂಕಲ್ಪ ಮಾಡಿ ಬೇಡಿಕೊಂಡರೆ ಸಾಕು ಅದು ಎಂತ ಕಷ್ಟಗಳು ಇದ್ದರು ಸಹ ಇಲ್ಲಿನ ದೇವರು ಅದನ್ನ ನಿವಾರಣೆ ಮಾಡುತ್ತಾನೆ… ಅಷ್ಟಕ್ಕೂ ಈ ದೇವರು ಯಾರು ಹಾಗು ಈ ದೇವಸ್ಥಾನ ಎಲ್ಲಿದೆ ಗೊತ್ತ …

Sanjay Kumar
3 Min Read

ನಮಸ್ಕಾರಗಳು ಪ್ರಿಯ ಓದುಗರೆ ಇನ್ನೊಂದು ದೇವಾಲಯವಿದೆ ಈ ದೇವಾಲಯದ ವಿಶೇಷತೆ ಕೇಳಿದರೆ ನೀವು ಕೂಡ ಖಂಡಿತ ಅಚ್ಚರಿ ಪಡುತ್ತೀರಾ ಹೌದು ನೀವು ದೇವರ ಬಳಿ ಹರಕೆ ಊರಬೇಕು ನಿಮ್ಮ ಹರಕೆ ಸಂಪೂರ್ಣವಾದ ಬಳಿಕ ಮಣ್ಣಿನ ಬೊಂಬೆಯನ್ನು ಆ ದೇವರಿಗೆ ಸಮರ್ಪಿಸಬೇಕು ಹೌದು ಈ ದೇವಾಲಯ ಎಲ್ಲಿದೆ ಗೊತ್ತಾ ಇಂತಹದೊಂದು ಅಚ್ಚರಿ ನಡೆಯುತ್ತಿರುವುದು ಎಲ್ಲಿ ಗೊತ್ತಾ. ಅದೇ ಶಿವನು ಲಿಂಗ ಸ್ವರೂಪ ದಲ್ಲಿ ನೆಲೆಸಿರುವ ಸೂರ್ಯ ದೇವಾಲಯ ಈ ದೇವಾಲಯಕ್ಕೆ ಸದಾಶಿವರುದ್ರ ದೇವಾಲಯ ಅಂತ ಕೂಡ ಕರೆಯಲಾಗುತ್ತದೆ ಆದರೆ ಈ ದೇವಸ್ಥಾನವು ಸೂರ್ಯ ಎಂಬ ಹಳ್ಳಿಯಲ್ಲಿ ಇರುವ ಕಾರಣ ಇದನ್ನು ಸೂರ್ಯ ದೇವಸ್ಥಾನ ಅಂತ ಕೂಡ ಕರೆಯುವುದುಂಟು ಹಾಗಾದರೆ ಬನ್ನಿ ಈ ದೇವಾಲಯದ ವಿಶೇಷತೆ ಬಗ್ಗೆ ತಿಳಿದುಕೊಳ್ಳೋಣ ಇವತ್ತಿನ ಲೇಖನದಲ್ಲಿ.

ಹೌದು ನೀವು ಧರ್ಮಸ್ಥಳಕ್ಕೆ ಹೋದಾಗ ಈ ದೇವಾಲಯಕ್ಕೆ ಹೋಗಿ ಬರಬಹುದು ಧರ್ಮಸ್ಥಳಕ್ಕೆ ಈ ದೇವಾಲಯ ಬಹಳ ಹತ್ತಿರವೇ ಇದ್ದ ಹಾಗೆ ಈ ದೇವಾಲಯದ ಕುರಿತು ಹೇಳುವುದಾದರೆ ನೀವು ನಿಮ್ಮ ಮನದಿಚ್ಛೆ ಗಳಿಗೆ ಅನುಸಾರವಾಗಿ ದೇವನಲ್ಲಿ ನೀವು ಹರಕೆಯನ್ನ ಕಟ್ಟಿಕೊಂಡು ಮನೆಗೆ ವಾಪಸ್ ಆದರೆ ಅದು ಸ್ವಲ್ಪ ದಿನಗಳಲ್ಲಿಯೇ ನೆರವೇರುತ್ತದೆ ಹಾಗೆ ನೀವು ನಿಮ್ಮ ಹರಕೆ ತೀರಿದ ಬಳಿಕ ದೇವಾಲಯಕ್ಕೆ ಮತ್ತೆ ಭೇಟಿ ನೀಡಿ ಆ ಶಿವನ ದರ್ಶನವನ್ನು ಪಡೆದು ಅಲ್ಲಿ ನೀವು ನಿಮ್ಮ ಹರಕೆಯನು ಸಲ್ಲಿಸಿದೆ ಬರಬೇಕಿರುತ್ತದೆ ಇಲ್ಲಿ ಮಣ್ಣಿನ ಬೊಂಬೆಗಳನ್ನು ಹರಕೆ ರೂಪದಲ್ಲಿ ತೀರಿಸಲಾಗುತ್ತದೆ ಈ ಮಣ್ಣಿನ ಬೊಂಬೆಗಳನ್ನು ದೇವಾಲಯದವರು ತೆಗೆದುಕೊಂಡು ಹೋಗಿ ಪ್ರತ್ಯೇಕವಾದ ಸ್ಥಳದಲ್ಲಿ ಇರಿಸಿ ಬರುತ್ತಾರೆ ಆ ಸ್ಥಳವನ್ನು ಕೂಡ ನೀವು ಅಲ್ಲಿ ಕಾಣಬಹುದಾಗಿದೆ.

ಹೌದು ಹಾಗಾದರೆ ಈ ದೇವಾಲಯದ ಹಿಂದಿರುವ ಪುರಾಣ ಕತೆಯೇನೋ ಎಂಬುದನ್ನು ಒಮ್ಮೆ ತಿಳಿಯುವುದಾದರೆ ಮಹರ್ಷಿಗಳ ಶಿಷ್ಯರೊಬ್ಬರು ಇಲ್ಲಿ ತಪಸ್ಸು ಮಾಡಲೆಂದು ಕುಳಿತಿರುತ್ತಾರೆ ಇವರ ತಪಸ್ಸಿಗೆ ಮೆಚ್ಚಿ ಶಿವ ಪಾರ್ವತಿ ಇಲ್ಲಿ ಇವರಿಗೆ ದರ್ಶನ ಕೊಡುತ್ತಾರೆ. ಶಿವನು ಪ್ರತ್ಯಕ್ಷಗೊಂಡು ಮಹರ್ಷಿಯ ಶಿಷ್ಯನಿಗೆ ವರವನ್ನು ಸಹ ನೀಡುತ್ತಾರೆ ಬಳಿಕ ಶಿವನು ಲಿಂಗ ಸ್ವರೂಪದಲ್ಲಿಯೇ ಸೂರ್ಯ ಎಂಬ ಹಳ್ಳಿಯಲ್ಲಿ ನೆಲೆಸಿ ಬಿಡುತ್ತಾಳೆ ಅಂದಿನಿಂದ ಬಂದ ಭಕ್ತಾದಿಗಳಿಗೆ ಬೇಡಿದ ವರವನ್ನು ನೀಡುತ್ತಾ ಇರುವ ಶಿವನು ಇಲ್ಲಿ ರುದ್ರನಾಗಿ ನೆಲೆಸಿದ್ದಾರೆ.

ಬಂದ ಭಕ್ತಾದಿಗಳು ತಮಗೆ ಏನು ಹರಕೆ ನೆರವೇರಿರುತ್ತದೆ ಅದಕ್ಕೆ ಅನುಸಾರವಾಗಿ ಅಂದರೆ ಮನೆ ಕಟ್ಟಬೇಕು ಅಂತ ಇದ್ದಲ್ಲಿ ಆ ಹರಕೆ ತೀರಿಸಿದರೆ ಮನೆಯ ಮಣ್ಣಿನ ಬೊಂಬೆಯನ್ನು ಹರಕೆಯಾಗಿ ಮಗು ಆಗಬೇಕು ಅನ್ನುವ ಹರಕೆಯನ್ನು ಹೊತ್ತಿದ್ದರೆ ತೊಟ್ಟಿಲನ್ನು ಹರಕೆಯಾಗಿ ದೇವರಿಗೆ ನೀಡಬೇಕು ಇಲ್ಲಿ ಹರಕೆ ನೀಡುವಾಗ ತಟ್ಟೆಯ ಮೇಲೆ ಒಂದು ಸೇರು ಅಕ್ಕಿ ಮತ್ತು ತೆಂಗಿನಕಾಯಿ ಜೊತೆಗೆ ಹರಕೆಯ ಬೊಂಬೆಯನ್ನು ಇರಿಸಿ ದೇವಾಲಯಕ್ಕೆ ಪೂಜೆಗೆ ಮುನ್ನ ಕೊಡಬೇಕು ಇದನ್ನು ಪೂಜೆ ಮಾಡಿ ಬಳಿಕ ದೇವಾಲಯದ ಅರ್ಚಕರು ಅದನ್ನು ಪ್ರತ್ಯೇಕವಾದ ಸ್ಥಳದಲ್ಲಿ ಇರಿಸಿ ಬರುತ್ತಾರೆ. ಬಂದ ಭಕ್ತಾದಿಗಳಿಗೆ ಸುಲಭವಾಗಲೆಂದು ದೇವಾಲಯದ ಆವರಣದಲ್ಲಿ ಗೊಂಬೆಗಳನ್ನು ನಾವು ಕಂಡುಕೊಳ್ಳಬಹುದು ಸುಮಾರು ಐವತ್ತರಿಂದ ಇನ್ನೂರು ರೂಪಾಯಿಗಳ ವರೆಗಿನ ಬೊಂಬೆಗಳನ್ನ ನಾವು ಇಲ್ಲಿ ಕಾಣಬಹುದಾಗಿದೆ.

ನೀವು ಯಾವ ಹರಕೆ ಹೊತ್ತಿರುವ ಹತ್ತಿರ ಅದರ ಅನುಸಾರವಾಗಿ ಇಲ್ಲಿ ಬೊಂಬೆಗಳನ್ನು ಕಂಡುಕೊಳ್ಳಬೇಕಿರುತ್ತದೆ ಹಾಗೆ ಯಾವ ಗೊಂಬೆಯನ್ನು ಕೊಳ್ಳಬೇಕು ಎಂಬುದನ್ನು ಕೂಡಾ ನೀವು ಅಲೆ ಫಲಕ ಹಾಕಿರುವುದನ್ನು ನೋಡಿ ತಿಳಿದುಕೊಳ್ಳಬಹುದಾಗಿದೆ. ಈ ದೇವಾಲಯದ ಕುರಿತು ಇದಿಷ್ಟು ಮಾಹಿತಿಯಾಗಿದ್ದು ಈ ಬೊಂಬೆಗಳನ್ನು ಅವೆ ಎಂಬ ಮಣ್ಣಿನಲ್ಲಿ ಮಾಡಿರಲಾಗುತ್ತದೆ ನೀವು ಕೂಡ ಈ ದೇವಾಲಯಕ್ಕೆ ಭೇಟಿ ನೀಡಿ ಬನ್ನಿ ಅದ್ಭುತವಾದ ಈ ದೇವಾಲಯವು ಪವಾಡ ಗಳನ್ನು ಹೊಂದಿದೆ ನೀವು ಕೂಡ ಒಮ್ಮೆ ನೋಡಿಬನ್ನಿ ಸೂರ್ಯ ದೇವಾಲಯವನ್ನು ಧನ್ಯವಾದ…

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.