ನೀವು ಮಾಡುವ ಉಚ್ಛೆಯಲ್ಲಿ ಸೋಂಕು ಆಗಬಾರದು ಅಂದರೆ ಈ ಒಂದು ಪಾನೀಯವನ್ನ ಸೇವಿಸಿ ಸಾಕು…

151

ಯೂರಿನ್ ಇನ್ಫೆಕ್ಷನ್ ಇದೊಂದು ಸಮಸ್ಯೆ ಇವತ್ತಿನ ದಿನಗಳಲ್ಲಿ ಹೆಣ್ಣು ಮಕ್ಕಳಲ್ಲಿ ಬಹಳಷ್ಟು ಕಾಡುತ್ತಿರುವಂತಹ ತೊಂದರೆ ಆಗಿದೆ ಹೌದು ಈ ಮಧ್ಯ ವಯಸ್ಸಿನ ಹೆಣ್ಣುಮಕ್ಕಳಿಗೆ ಈ ಯೂರಿನ್ ಇನ್ಫೆಕ್ಷನ್ ಅನ್ನುವ ತೊಂದರೆ ಬಹಳಷ್ಟು ಕಾಡುತ್ತದೆ ಈ ತೊಂದರೆ ಉಂಟಾದಾಗ ಅದಕ್ಕೆ ಮಾಡಬಹುದಾದ ಸರಳ ಪರಿಹಾರವನ್ನು ನಾವು ಈ ದಿನದ ಲೇಖನಿಯಲ್ಲಿ ನಿಮಗೆ ತಿಳಿಸಲಿದ್ದೇವೆ ಬನ್ನಿ ಸ್ನೇಹಿತರೆ ಯಾರಿಗೆ ಈ ಯೂರಿನ್ ಇನ್ ಫೆಕ್ಷನ್ ಅಥವಾ ಉರಿಮೂತ್ರ ಸಮಸ್ಯೆ ಕಾಡುತ್ತಾ ಇದೆ ಅಥವಾ ಕೆಲವರಿಗೆ ಮೂತ್ರ ವಿಸರ್ಜನೆ ಮಾಡಿದಾಗ ಆ ಭಾಗದಲ್ಲಿ ವಿಪರೀತ ಉರಿ ಉಂಟಾಗುತ್ತಲೇ ಇರುತ್ತದೆ, ಇಂತಹ ಕೆಲವೊಂದು ಲಕ್ಷಣಗಳು ನಿಮ್ಮ ಶರೀರದಲ್ಲಿ ಕಂಡುಬಂದಾಗ ಕೂಡಲೇ ನಾವು ಹೇಳಿದಂತಹ ಪರಿಹಾರವನ್ನು ಪಾಲಿಸಿ ಇದರಿಂದ ಖಂಡಿತ ಈ ಉರಿಮೂತ್ರ ನಂತಹ ತೊಂದರೆಗೆ ಖಂಡಿತ ನೀವು ಪರಿಹಾರವನ್ನು ಪಡೆದುಕೊಳ್ಳಬಹುದು ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ.

ಹೌದು ಉರಿಮೂತ್ರ ಸಮಸ್ಯೆ ಅನ್ನೋದನ್ನ ನಾವು ನಿರ್ಲಕ್ಷ್ಯ ಮಾಡಲು ಆಗುವುದಿಲ್ಲ ಯಾಕೆಂದರೆ ಈ ಸಮಸ್ಯೆ ಕಂಡು ಬಂದಾಗ ಯಾವ ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ ಸ್ವಲ್ಪ ದೂರ ನಡೆಯುವುದಕ್ಕೂ ಆಗುತ್ತಾ ಇರುವುದಿಲ್ಲ ಅಷ್ಟೇ ಅಲ್ಲ ಉರಿಮೂತ್ರ ತೊಂದರೆ ಅಥವಾ ಯೂರಿನ್ ಇನ್ಫೆಕ್ಷನ್ ಉಂಟಾದಾಗ ಅದಕ್ಕಾಗಿ ಮಾಡಬಹುದಾದ ಪರಿಹಾರಗಳು ಬಹಳಷ್ಟು ಇರುತ್ತದೆ ಆದರೆ ಸರಿಯಾದ ಸಮಯಕ್ಕೆ ನೆನಪಾಗುವುದಿಲ್ಲ.

ಈಗ ಮಾಹಿತಿಯಲ್ಲಿ ನಾವು ಹೇಳಲು ಹೊರಟಿರುವ ಅಂತಹ ಈ ಪರಿಹಾರ ಮನೆಯಲ್ಲಿಯೇ ದೊರೆಯುವ ಕೆಲವೊಂದು ಸಾಮಗ್ರಿಗಳಿಂದ ಮಾಡಬಹುದಾದಂತಹ ಪರಿಹಾರಗಳು, ಇದಕ್ಕೆ ಬೇಕಾಗಿರುವುದು ಮೊಸರು ಜೀರಿಗೆ ಪುಡಿ ಕರಿಬೇವಿನ ಸೊಪ್ಪು ಕೊತ್ತಂಬರಿ ಸೊಪ್ಪು ಮತ್ತು ಕಲ್ಲು ಸಕ್ಕರೆ.ಇಷ್ಟೇ ಪದಾರ್ಥಗಳು ಬೇಕಾಗಿರುತ್ತದೆ ಇಲ್ಲಿ ನೋಡಿ ಜೀರಿಗೆಪುಡಿ ಪ್ರತಿಯೊಬ್ಬರ ಮನೆಯಲ್ಲಿಯೂ ಇರುತ್ತದೆ ಜೀರಿಗೆ ಸಾಮಾನ್ಯವಾಗಿ ಅಡುಗೆಗೆ ಬಳಸುತ್ತೇವೆ, ನೀವು ಜೀರಿಗೆ ಮನೆಯಲ್ಲಿಯೇ ಇದ್ದರೆ ಅದರ ಪುಡಿಯನ್ನು ಮನೆಯಲ್ಲಿಯೇ ಮಾಡಿಕೊಳ್ಳಿ ಅದು ಶುದ್ಧವಾದ ಜೀರಿಗೆಪುಡಿ ಆಗಿರುತ್ತದೆ

ಮೊಸರು ಪ್ರತಿದಿನ ತಿನ್ನುವುದರಿಂದ ದೇಹಕ್ಕೆ ತುಂಬಾ ಒಳ್ಳೆಯದು ಇದರಲ್ಲಿರುವ ನಂತಹ ಬ್ಯಾಕ್ಟೀರಿಯಾಗಳು ನಮ್ಮ ದೇಹಕ್ಕೆ ಅವಶ್ಯಕವಾಗಿ ಬೇಕಾಗಿರುವ ಮತ್ತು ಜೀರ್ಣಶಕ್ತಿಯನ್ನ ವೃದ್ದಿಸುವಂತಹ ಬ್ಯಾಕ್ಟೀರಿಯಾಗಳು ಈ ಮೊಸರಿನಲ್ಲಿ ಇರುತ್ತದೆ.ಇದರ ಜೊತೆಗೆ ನಾವು ಕೊತ್ತಂಬರಿ ಮತ್ತು ಕರಿಬೇವನ್ನು ಬಳಸಿದ್ದೇವೆ ಇದರಲ್ಲಿರುವ ಪೋಷಕಾಂಶಗಳು ದೇಹವನ್ನು ತಂಪು ಮಾಡುತ್ತದೆ ಜೊತೆಗೆ ಕೆಲವೊಂದು ಪೋಷಕಾಂಶಗಳನ್ನು ನೀಡುತ್ತದೆ ಹಾಗೂ ಕಲ್ಲು ಸಕ್ಕರೆ ರುಚಿಗೆ ಬೇಕಾಗಿರುತ್ತದೆ ಮತ್ತು ಕಲ್ಲುಸಕ್ಕರೆ ನಮ್ಮ ದೇಹದ ಉಷ್ಣಾಂಶವನ್ನು ನಿಯಂತ್ರಣಕ್ಕೆ ತರುತ್ತದೆ.

ಈ ರೀತಿಯಾಗಿದೆ ಉರಿಮೂತ್ರ ಸಮಸ್ಯೆಗೆ ಮಾಡಬಹುದಾದ ಪರಿಹಾರಕ್ಕೆ ಬೇಕಾಗಿರುವಂತಹ ಪದಾರ್ಥಗಳು ಇದೆಲ್ಲವೂ ಸಾಮಾನ್ಯವಾಗಿ ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಪದಾರ್ಥಗಳಾಗಿವೆ.ಈಗ ಮಿಕ್ಸಿಜಾರಿಗೆ ಮೊಸರು ಇದಕ್ಕೆ ಕರಿಬೇವಿನ ಸೊಪ್ಪು ಕೊತ್ತಂಬರಿ ಸೊಪ್ಪನ್ನು ಹಾಕಿ ಜೀರಿಗೆ ಪುಡಿಯನ್ನು ಕೂಡ ಮಿಶ್ರ ಮಾಡಿಕೊಂಡು ಒಮ್ಮೆಲೆ ಗ್ರೈಂಡ್ ಮಾಡಿಕೊಳ್ಳಿ

ಈಗ ಈ ಮೊಸರಿನ ಮಿಶ್ರಣಕ್ಕೆ ಕಲ್ಲುಸಕ್ಕರೆಯನ್ನು ಕೂಡ ಹಾಕಿಕೊಂಡು ಆ ಕಲ್ಲುಸಕ್ಕರೆ ಕರಗಿಸುವುದಕ್ಕಾಗಿ ಮತ್ತೊಮ್ಮೆ ಗ್ರೈಂಡ್ ಮಾಡಿಕೊಳ್ಳಿ, ಈಗ ನಮಗೆ ಮನೆಮದ್ದು ತಯಾರಾಗಿದೆ ಇದನ್ನ ಯಾವ ಸಮಯದಲ್ಲಿ ಸೇವಿಸಬೇಕು ಅಂದರೆ ಬೆಳಗಿನ ತಿಂಡಿಯ ಬಳಿಕ ಅರ್ಧ ಗಂಟೆಯ ನಂತರ ಈ ಪರಿಹಾರವನ್ನು ಅಂದರೆ ಈ ಮೊಸರಿನ ಮಿಶ್ರಣವನ್ನು ಸೇವಿಸಿ.ಈ ಮನೆಮದ್ದು ಉರಿಮೂತ್ರ ಸಮಸ್ಯೆಗೆ ಬಹಳ ಬೇಗ ಪರಿಹಾರ ಕೊಡುತ್ತೆ ಮತ್ತು ಈ ಮನೆಮದ್ದು ಮಾಡುವುದರ ಜೊತೆಗೆ ಯೂರಿನ್ ಇನ್ಫೆಕ್ಷನ್ ಆದ ಸಮಯದಲ್ಲಿ ಹೆಚ್ಚು ನೀರು ಕುಡಿಯುವ ರೂಢಿಯನ್ನ ತಪ್ಪದೆ ಮಾಡಿಕೊಳ್ಳಿ, ಈ ಕೆಲವೊಂದು ಮನೆಮದ್ದಿನಿಂದ ನಿಮ್ಮ ಈ ಸಮಸ್ಯೆ ಬಹಳ ಬೇಗ ಪರಿಹಾರವಾಗುತ್ತೆ.