ನೀವು ರಾತ್ರಿಯ ಸಂರ್ಭದಲ್ಲಿ ನಿಮ್ಮ ಉಗುರುಗಳನ್ನ ಕಟ್ ಮಾಡೋದ್ರಿಂದ ಎನ್ನೆಲ್ಲ ಆಗುತ್ತೆ ಗೊತ್ತ .. ಗೊತ್ತಾದ್ರೆ ಇವತ್ತಿನಿಂದ ಉಗುರು ಕಟ್ ಮಾಡೋಕು ಹೆದರುತ್ತೀರಾ…

181

ನಮಸ್ಕಾರಗಳು ನಮ್ಮ ಹಿಂದೂ ಸಂಪ್ರದಾಯದಲ್ಲಿ ಕೇವಲ ದೇವರ ಪೂಜೆಯಲ್ಲಿ ಪಾಲಿಸಬೇಕಿರುವ ಇಂತಹ ಪದ್ಧತಿಗಳು ಮಾತ್ರವಲ್ಲ ನಮ್ಮ ದಿನನಿತ್ಯ ಪಾಲಿಸ ಬೇಕಾಗಿರುವಂತಹ ಕೆಲವೊಂದು ಪದ್ಧತಿಗಳು ಕೂಡ ಇವೆ. ಹೌದು ನೀವೇನಾದರೂ ಇದರ ಬಗ್ಗೆ ಕೇಳಿದ್ದೀರಾ, ಸಂಜೆ ಸಮಯದಲ್ಲಿ ಅಂದರೆ ಸೂರ್ಯಾಸ್ತದ ಬಳಿಕ ಉಗುರು ಕತ್ತರಿಸಬಾರದು ಅಂತ ಇದಕ್ಕೆ ಕಾರಣವಿದೆ ಕಾರಣವೇನು ಅಂತ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ. ಹೌದು ಅಂದಿನ ಕಾಲದಿಂದಲೂ ನಡೆದುಕೊಂಡು ಬಂದಿರುವಂತಹ ಕೆಲವೊಂದು ಪದ್ದತಿಗಳ ಬಗ್ಗೆ ನಿಮಗೂ ಕೂಡ ಪರಿಚಯ ಇರುತ್ತದೆ ಅಲ್ವಾ ಹೌದು ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿರುವ ಕೆಲವು ಪದ್ಧತಿಯನ್ನು ನಾವು ಅರ್ಥ ಗೊತ್ತಿಲ್ಲದೆ ಪಾಲಿಸುತ್ತಾ ಇರುತ್ತೇವೆ ಅಂತಹ ಪದ್ಧತಿಗಳಲ್ಲಿ ಸಂಜೆಯ ಸಮಯದ ಬಳಿಕ ಉಗುರು ಕತ್ತರಿಸಬಾರದು ಎಂಬ ಪದ್ಧತಿ ಕೂಡ ಹಾಗೆಯೇ ಉಗುರನ್ನು ಕತ್ತರಿಸಿ ಎಲ್ಲೆಲ್ಲಿಯೂ ಹಾಕಬಾರದು ಎಂಬ ಕಾರಣದಿಂದಾಗಿ ಕೂಡ ಕೆಲವೊಂದು ಪದತ್ಯಾಗ ಮಾಡಿದ್ದಾರೆ ಅದನ್ನು ನಾವು ಕೂಡ ಪಾಲಿಸುತ್ತೆವೆ ನೀವು ಕೂಡ ಪಾಲಿಸುತ್ತಾ ಇರುತ್ತೀರಾ.

ಹೌದು ಸಂಜೆಯ ನಂತರ ಯಾವುದೇ ಕಾರಣಕ್ಕೂ ಯಾರೂ ಕೂಡ ಉಗುರು ಕತ್ತರಿಸುವಂತಿಲ್ಲ ಹಿರಿಯರು ಕೂಡ ಅದನ್ನು ಪಾಲಿಸಿಕೊಂಡು ಬಂದಿದ್ದರು ನೀವು ಕೂಡ ಅದನ್ನು ಪಾಲಿಸುತ್ತಾ ಇರುತ್ತಿರಾ ಆದರೆ ಇದಕ್ಕೂ ಕೂಡ ಕಾರಣವಿದೆ ಕೇಳಿ ಅದೇನೆಂದರೆ ಅಂದಿನ ಕಾಲದಲ್ಲಿ ಉಗುರು ಕತ್ತರಿಸುವ ಇದಕ್ಕಾಗಿಯೇ ಪ್ರತ್ಯೇಕವಾದ ಪರಿಕರಗಳು ಇರಲಿಲ್ಲ ಆದ್ದರಿಂದ ಹಿರಿಯರು ಬ್ಲೇಡ್ ಅಥವಾ ಚೂಪಾದ ವಸ್ತು ಅಥವಾ ಚಾಕುವಿನಿಂದ ಉಗುರನ್ನು ಕತ್ತರಿಸುತ್ತಿದ್ದರು. ಸೂರ್ಯಾಸ್ತದ ಬಳಿಕ ಚೂಪಾದ ವಸ್ತುವಿನಿಂದ ಉಗುರು ಕತ್ತರಿಸುವುದು ಅಷ್ಟು ಸುಲಭವಾಗಿರಲಿಲ್ಲ ಅಷ್ಟೇ ಅಲ್ಲ ಅಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ವಿದ್ಯುತ್ ಸೌಲಭ್ಯ ಕೂಡ ಸರಿಯಾಗಿ ಇರುತ್ತ ಇರಲಿಲ್ಲ.

ಆದ್ದರಿಂದ ಇಂತಹ ಕೆಲಸಗಳನ್ನ ಸೂರ್ಯನ ಬೆಳಕು ಇರುವಾಗಲೇ ಹಿರಿಯರು ಮಾಡುತ್ತಾ ಇದ್ದರು ಮತ್ತು ಕೆಲವರಿಗೆ ತಿಳಿಯದೇ ಇರುವ ಕಾರಣ ಸೂರ್ಯಾಸ್ತದ ಬಳಿಕ ಉಗುರನ್ನು ಕತ್ತರಿಸುವುದರಿಂದ ಕೆಲವೊಂದು ಅವಘಡಗಳು ಸಂಭವಿಸುತ್ತದೆ ಎಂಬ ಕಾರಣಗಳನ್ನು ನೀಡುತ್ತಿದ್ದರು, ಅಂದಿನಿಂದಲೂ ಸೂರ್ಯಾಸ್ತದ ಬಳಿಕ ಉಗುರನ್ನು ಕತ್ತರಿಸಿದರೆ ಏನಾದರೂ ಅವಘಡಗಳು ಆಗಿ ಹೋಗುತ್ತದೆ ಎಂದು ಕಿರಿಯರು ಹೆದರಿಯೇ ಸೂರ್ಯಾಸ್ತದ ಬಳಿಕ ಉಗುರನ್ನು ಕತ್ತರಿಸುತ್ತಿರಲಿಲ್ಲಾ. ಅದಕ್ಕೆ ಕಾರಣ ಇಷ್ಟೆ ಸೂರ್ಯಾಸ್ತದ ಬಳಿಕ ವಿದ್ಯುತ್ ಕೂಡ ಇರುತ್ತಿರಲಿಲ್ಲ ಆ ಉಗುರುಗಳನ್ನು ಕತ್ತರಿಸಲು ಕಷ್ಟ ಎಂಬ ಕಾರಣಕ್ಕೆ ಹಿರಿಯರು ಈ ರೀತಿ ಕಾರಣ ಕೊಡುತ್ತಿದ್ದರು.

ಅಷ್ಟೇ ಅಲ್ಲ ಈ ಉಗುರು ಗಳೇನಾದರೂ ಆಹಾರದಲ್ಲಿ ಬೆರೆತು ಹೋದರೆ ಅಥವಾ ನಮ್ಮ ಹೊಟ್ಟೆ ಸೇರಿದರೆ ಇಲ್ಲಸಲ್ಲದ ಅನಾರೋಗ್ಯ ಸಮಸ್ಯೆಗಳನ್ನು ಕೂಡ ನಾವು ಎದುರಿಸಬೇಕಾಗಿ ಬರುತ್ತಿತ್ತು. ಈ ಎಲ್ಲ ಕಾರಣಗಳಿಂದಲೇ ಸೂರ್ಯಾಸ್ತದ ಬಳಿಕ ಉಗ್ರನ ಕತ್ತರಿಸುವುದಿಲ್ಲ ಅಷ್ಟೆಲ್ಲಾ ಮನೆಯ ಒಳಗೂ ಕೂಡ ಉಗುರನ್ನು ಕತ್ತರಿಸುವುದಿಲ್ಲ ಇನ್ನೂ ಕೆಲವೊಂದು ಧಾರ್ಮಿಕ ಕಾರಣಗಳಿವೆ ಅದೇನೆಂದರೆ ಕೆಲವರು ಕೆಟ್ಟ ಶಕ್ತಿಯನ್ನು ಪ್ರಭಾವಿ ಸುವುದಕ್ಕಾಗಿ ಈ ಉಗ್ರನ ಬಳಸುತ್ತಿದ್ದರು ಆದರೆ ಸೂರ್ಯಾಸ್ತದ ಬಳಿಕ ಈ ಉಗುರುಗಳನ್ನು ಕತ್ತರಿಸಬಾರದು ಎಂದು ಹೇಳುತ್ತಿದ್ದರು ಅಷ್ಟೇ ಅಲ್ಲ ಮನೆಯೊಳಗೆ ನಾದರೂ ಈ ಉಗುರುಗಳು ಬಿದ್ದರೆ ಅದು ಮನೆಗೆ ದಾರಿದ್ರ ಎಂಬ ಕಾರಣಗಳನ್ನು ಕೂಡ ಹಿರಿಯರು ನೀಡುತ್ತಿದ್ದರು. ಆದರೆ ಇದಕ್ಕೆ ಮೂಲ ಕಾರಣ ಏನೆಂದರೆ ಮನೆಯೊಳಗೆ ಉಗುರು ಕತ್ತರಿಸಿದರೆ ಅದೇನಾದರೂ ಅಚಾನಕ್ಕಾಗಿ ನಮ್ಮ ಹೊಟ್ಟೆ ಸೇರಿದಾಗ ಅಥವಾ ಮನೆಯಲ್ಲಿ ಮಕ್ಕಳಿದ್ದರೆ ಮಕ್ಕಳ ಹೊಟ್ಟೆ ಸೇರಿದರೆ ಬೇರೆ ತರದ ಸಮಸ್ಯೆಗಳನ್ನು ಎದುರಿಸಬೇಕು ಎಂಬ ಕಾರಣಕ್ಕೆ ಮನೆಯೊಳಗೆ ಉಗುರು ಕತ್ತರಿಸುತ್ತಿರಲಿಲ್ಲ.

ಅಷ್ಟೇ ಅಲ್ಲ ಉಗುರನ್ನು ಕತ್ತರಿಸಿ ಎಲ್ಲೆಂದರೆ ಅಲ್ಲಿ ದಯವಿಟ್ಟು ಹಾಕಬೇಡಿ ಯಾಕೆಂದರೆ ನೀವೇನಾದರೂ ನಿಮ್ಮ ಮನೆಯ ಮುಂದೆಯೇ ಅಥವಾ ಮರಗಿಡಗಳು ಇರುವ ಜಾಗದಲ್ಲಿ ಇದನ್ನು ಹಾಕಿದರೆ ಮೂಕಪ್ರಾಣಿಗಳು ಅಲ್ಲಿ ಮೇವು ಮೇಯುವಾಗ ಅವುಗಳ ಹೊಟ್ಟೆ ಸೇರಿದಾಗ ಅವುಗಳಿಗೂ ಕೂಡ ಹೊಟ್ಟೆ ಕೆಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಉಗ್ರನ ಕತ್ತರಿಸಿದಾಗ ಅದನ್ನು ಚರಂಡಿಗಳಿಗೆ ಹಾಕಿ ಇದರಿಂದ ಯಾವ ತೊಂದರೆ ಉಂಟಾಗುವುದಿಲ್ಲ. ಈ ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ..

LEAVE A REPLY

Please enter your comment!
Please enter your name here