ಪಕ್ಕದ ಮನೆಯವರ ಬೆಕ್ಕಿಗೆ ಊಟ ಹಾಕಿ 25 ಲಕ್ಷ ಕಳೆದುಕೊಂಡ ಮಹಿಳೆ ಹೇಗೆ ಗೊತ್ತಾ….

73

ಸ್ನೇಹಿತರೇ ಎಷ್ಟೊಂದು ವಿಷಯಕ್ಕೆ ನಾವು ನಮ್ಮ ಪಕ್ಕದ ಮನೆಯವರ ಜೊತೆ ಜಗಳ ಆಡಿರುತ್ತೇವೆ ಅದು ಕೇವಲ ಆ ಕ್ಷಣದ ಮನಸ್ತಾಪ ಅಷ್ಟೇ ಅದನ್ನು ಹೊರತುಪಡಿಸಿ ಯಾವುದೇ ರೀತಿಯಾದಂತಹ ವೈಮನಸ್ಸುಗಳು ಇರಲು ಸಾಧ್ಯವಿಲ್ಲ ಏಕೆಂದರೆ ಅಕ್ಕಪಕ್ಕದವರು ಬಂಧುಗಳ ರೀತಿ ಎಂಬುದು ಸಾಮಾನ್ಯ ಆದರೆ ನಾನು ಈಗ ಹೇಳುತ್ತಿರುವ ವಿಚಾರದ ಕಡೆ ನೀವು ಗಮನ ಹರಿಸಿ ಈಕೆ ಒಂದು ಬೆಕ್ಕಿನಿಂದಾಗಿ ಇಪ್ಪತ್ತೈದು ಲಕ್ಷ ರೂಪಾಯಿ ಹಣಗಳನ್ನು ಕಳೆದುಕೊಳ್ಳುತ್ತಾಳೆ ಅದಕ್ಕೆ ಕಾರಣವಾದರೂ ಏನು ಎಂದು ಯೋಚಿಸುತ್ತಿದ್ದೀರಾ ಸ್ನೇಹಿತರೆ ನಾನು ಈಗ ಹೇಳಹೊರಟಿರುವ ಘಟನೆ ಇಂಗ್ಲೆಂಡಿನಲ್ಲಿ ನಡೆದಿದೆ ಇದರಲ್ಲಿ ಇಬ್ಬರು ಮಹಿಳೆಯರು ಬರುತ್ತಾರೆ .

ಸ್ನೇಹಿತರೇ ಅದರಲ್ಲಿ ಒಬ್ಬಳು ಮಹಿಳೆ ತನ್ನ ಮಗಳ ಹುಟ್ಟುಹಬ್ಬ ಕ್ಕೋಸ್ಕರ ಐವತ್ತು ಸಾವಿರ ರೂಪಾಯಿಗಳನ್ನು ಕೊಟ್ಟು ಒಂದು ಬೆಕ್ಕಿನ ಮರಿಯನ್ನು ತರುತ್ತಾಳೆ ಅದನ್ನು ಅವಳ ಮಗಳಿಗೆ ಗಿಫ್ಟ್ ಆಗಿ ನೀಡಿರುತ್ತಾಳೆ ಅದಾದ ನಂತರ ಕೆಲವು ದಿನಗಳ ನಂತರ ಆ ಬೆಕ್ಕು ತುಂಬಾ ಚೆನ್ನಾಗಿ ಬೆಳೆದಿರುತ್ತದೆ,ಆದರೆ ಆ ಬೆಕ್ಕು ಮಾಲೀಕರ ಮನೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿರುವುದಿಲ್ಲ ಎಲ್ಲಿ ಹೋಯಿತು ಏನು ಮಾಡುತ್ತಿದೆ ಎಂದು ಮಾಲೀಕರಿಗೆ ತಿಳಿಯುತ್ತಿರಲಿಲ್ಲ ತುಂಬಾ ಸಮಯಗಳ ಕಾಲ ಅದು ಮನೆಯಲ್ಲಿ ಇರುತ್ತಿರಲಿಲ್ಲ ಅದನ್ನು ಗಮನಿಸಿದ ಮಾಲೀಕರು ಈ ಬೇಕು ಎಲ್ಲಿ ಹೋಗುತ್ತಿದೆ ಏನು ಮಾಡುತ್ತಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲದಿಂದಾಗಿ ಆ ಬೆಕ್ಕಿಗೆ ಜಿಪಿಎಸ್ ಅನ್ನು ಅಳವಡಿಸುತ್ತಾರೆ.

ಅದಾದ ನಂತರ ಬೆಕ್ಕನ್ನು ಗಮನಿಸಲು ಆರಂಭಿಸುತ್ತಾರೆ ಆ ಬೆಕ್ಕು ಪಕ್ಕದ ಮನೆಗೆ ಹೋಗುತ್ತಿರುವುದು ಅವರಿಗೆ ತಿಳಿಯುತ್ತದೆ ಪಕ್ಕದ ಮನೆಯಲ್ಲಿದ್ದ ಹೆಂಗಸು ಆ ಬೆಕ್ಕಿಗೆ ತುಂಬಾ ಸುಂದರವಾಗಿ ಅಲಂಕಾರವನ್ನು ಮಾಡಿ ಅದಕ್ಕೆ ಊಟವನ್ನು ಹಾಕುತ್ತಿರುತ್ತಾಳೆ ಅದಕ್ಕೆ ಬೆಕ್ಕು ಹೆಚ್ಚು ಸಮಯ ಪಕ್ಕದ ಮನೆಯಲ್ಲೇ ಇರುವುದು ಮಾಲೀಕರಿಗೆ ತಿಳಿಯುತ್ತದೆ ಅದಾದ ನಂತರ ಮಾಲೀಕರು ಪಕ್ಕದ ಮನೆಯ ಮಹಿಳೆಯನ್ನು ಒಮ್ಮೆ ಭೇಟಿ ಮಾಡಿ ಹೇಳುತ್ತಾರೆ ಈ ಬೆಕ್ಕಿಗೆ ಆಹಾರವನ್ನು ಹಾಕಬೇಡಿ ನಾವೇ ಸಾಕುತ್ತೇವೆ ನಾವೇ ಆಹಾರ ಹಾಕುತ್ತೇವೆ ಎಂದು ಆದರೂ ಸಹ ಆ ಮಹಿಳೆ ಬೆಕ್ಕಿಗೆ ದಿನನಿತ್ಯ ಆಹಾರವನ್ನು ಹಾಕುತ್ತಿರುತ್ತಾಳೆ, ಅದರಿಂದ ಬೇಸತ್ತ ಮಾಲೀಕರು ಪೊಲೀಸರಿಗೆ ದೂರನ್ನು ಕೊಟ್ಟು ಕೋರ್ಟ್ ಗೆ ಆಕೆಯನ್ನು ಕರೆಸುತ್ತಾರೆ .

ಅದಾದ ನಂತರ ಈ ಕೇಸ್ ತುಂಬಾ ವರ್ಷಗಳ ಕಾಲ ಕೋರ್ಟ್ನಲ್ಲಿ ಇರುತ್ತದೆ ಆದರೆ ಯಾವುದೇ ರೀತಿಯಾದಂತಹ ಪರಿಹಾರ ಸಿಗುವುದಿಲ್ಲ ಎಷ್ಟು ವಾದ ಮಾಡಿದರೂ ಕೂಡ ಪರಿಹಾರ ದೊರೆಯುವುದಿಲ್ಲ ಅದಕ್ಕೆ ಇಬ್ಬರು ಮಹಿಳೆಯರು ಕೂಡ ಯೋಚಿಸಿ ತಮ್ಮ ತಮ್ಮಲ್ಲೇ ರಾಜಿ ಮಾಡಿಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆ .ಅದಾದ ನಂತರ ಇಬ್ಬರೂ ಕೂಡ ರಾಜಿ ಮಾಡಿಕೊಂಡು ಮಾಲೀಕರು ನಮ್ಮ ಬೆಕ್ಕಿಗೆ ಊಟವನ್ನು ಹಾಕಬೇಡಿ ಎಂದಾಗ ಪಕ್ಕದ ಮಹಿಳೆ ಒಪ್ಪಿಕೊಳ್ಳುತ್ತಾಳೆ ಈ ಸಣ್ಣ ವಿಷಯಕ್ಕೆ ಮಹಿಳೆ ಇಷ್ಟೊಂದು ಹಣವನ್ನು ಯಾಕೆ ಕಳೆದುಕೊಂಡಳು ಗೊತ್ತೆ ಆ ಕೋರ್ಟ್ನಲ್ಲಿ ಈ ಕೇಸು ವಾದ ಮಾಡಲು ಬರೋಬ್ಬರಿ ಇಪ್ಪತ್ತೈದು ಲಕ್ಷ ಹಣವನ್ನು ಈ ಮಹಿಳೆ ಕಳೆದುಕೊಂಡಿದ್ದಾಳೆ ನೋಡಿದಿರಲ್ಲ ಸ್ನೇಹಿತರೇ ಒಂದೊಂದು ಬಾರಿ ಎಂತೆಂಥಾ ಅನಾಹುತಗಳು ನಡೆದು ಹೋಗುತ್ತವೆ ಈ ವಿಷಯವನ್ನು ಕೇಳಿ ಮುನ್ನೆಚ್ಚರಿಕೆಯನ್ನು ನೀವು ಕೂಡ ವಹಿಸಿ ಧನ್ಯವಾದಗಳು.