ಪಾರ್ವತಿಗೆ ಕಷ್ಟ ಬಂದಾದ ಹೇಳಿಕೊಂಡ ರಹಸ್ಯ ಮಂತ್ರ ಇದು , ಇದನ್ನ ನೀವು ಹೇಳಿದ್ದೆ ಆದಲ್ಲಿ ಲಾಭ ನಿಮ್ಮನ್ನ ಹುಡುಕಿಕೊಂಡು ಬರುತ್ತದೆ… ಕಷ್ಟದಲ್ಲಿ ಇರೋರಿಗೆ ಒಂದು ಸಂಜೀವಿನಿ ಅಂತ ಹೇಳಬಹುದು ಈ ಮಂತ್ರ…

Sanjay Kumar
3 Min Read

ಒಮ್ಮೆ ಪಾರ್ವತಿ ದೇವಿಯು ತನ್ನ ಪತಿದೇವನ ಬಳಿ ಹೀಗೆಂದು ಕೇಳುತ್ತಾರೆ, ಮನುಷ್ಯ ಕಷ್ಟ ಎಂದು ಬಳಲುವಾಗ ಆತ ನಿಮ್ಮನ್ನು ನೆನಪಿಸಿಕೊಳ್ಳುತ್ತಾನೆ. ಆಗ ನಿಮ್ಮನ್ನು ಹಲವು ನಾಮಗಳಿಂದ ಜಪ ಮಾಡುತ್ತಾರೆ. ಆದರೆ ಕಷ್ಟ ಬಂದಾಗ ಜನರು ತಮ್ಮ ಕಷ್ಟಗಳನ್ನು ದೂರ ಮಾಡಿಕೊಳ್ಳುವುದಕ್ಕಾಗಿ ತಮಗೆ ಬಂದಿರುವ ಕಷ್ಟಗಳನ್ನು ದೂರ ಮಾಡಿ ಜೀವನದಲ್ಲಿ ಉತ್ತಮವಾಗಿ ಇರಲು ತಾವು ಅಂದುಕೊಂಡಂತೆ ನೆಮ್ಮದಿಯಿಂದ ಇರುವುದಕ್ಕಾಗಿ ಯಾವ ಮಂತ್ರವನ್ನು ಪಠಿಸಬೇಕು ಎಂದು ಪಾರ್ವತಿ ದೇವಿಯು ತನ್ನ ಪತಿ ದೇವರ ಬಳಿ ಕೇಳಿದಾಗ. ಈಶ್ವರನು ನಗುಮುಖದಿಂದಲೇ ತನ್ನ ಪತ್ನಿಗೆ ಹೀಗೆಂದು ಹೇಳುತ್ತಾರೆ ಹೌದು ಕಷ್ಟ ಬಂದಾಗ ಮನುಷ್ಯ ಮೊದಲು ನೆನಪಿಸಿಕೊಳ್ಳುವುದೇ ದೇವರನ್ನ ದೇವರ ಜಪ ಮಾಡುವುದರಿಂದ, ಸಕಲ ಸಂಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಮನುಜಾ ಕಷ್ಟ ಬಂದಾಗ ಮೊದಲು ಓಡಿ ಬರುವುದೇ ದೇವಾಲಯಕ್ಕೆ ತನ್ನ ಪಾಪ ಕರ್ಮಗಳನ್ನು ದೂರ ಮಾಡು ದೇವಾ ಎಂದು ಬೇಡಿಕೊಳ್ಳುವ ಮನುಜ ಕಷ್ಟಗಳನ್ನ ಪರಿಹಾರಮಾಡು ತನ್ನ ಪಾಪವನ್ನು ದೂರ ಮಾಡು ಎಂದು ಬೇಡಿಕೊಳ್ಳುತ್ತಾನೆ.

ಹೌದು ಮನುಷ್ಯ ತನಗೆ ಕಷ್ಟ ಬಂದಾಗ ಹೆಚ್ಚು ನೆನಪಿಸಿಕೊಳ್ಳುವುದೇ ದೇವಾನುದೇವತೆಗಳನ್ನು ಜೊತೆಗೆ ಪ್ರತೀದಿನ ದೇವಾಲಯಗಳಿಗೆ ಹೋಗಿ ತಮ್ಮ ಪಾಪವನ್ನು ದೂರ ಮಾಡು ಅಂತ ಕೇಳಿಕೊಂಡು ಬರುತ್ತಾರೆ ಹಾಗೆ ಪಾರ್ವತಿ ದೇವಿಗೆ ಕಷ್ಟ ಬಂದಾಗ ಮನುಷ್ಯರು ಯಾವ ಮಂತ್ರವನ್ನು ಪಠಣ ಮಾಡಬೇಕು ಎಂಬುದರ ಕುರಿತು ಕೂಡ ತಿಳಿಸಿದ್ದಾರೆ ಆ ಮಂತ್ರ ಯಾವುದು ಅಂತ ಕೂಡ ಹೇಳ್ತಾರೆ, ಜೊತೆಗೆ ಈ ಮಂತ್ರವನ್ನು ಪಾರ್ವತಿ ದೇವಿಗೆ ಈಶ್ವರನು ತಿಳಿಸುವಾಗ ಕೆಲವೊಂದು ವಿಚಾರಗಳ ಬಗ್ಗೆಯೂ ಕೂಡ ತಿಳಿಸಿದ್ದಾರೆ, ಅದನ್ನ ನಾವು ತಿಳಿಸಿಕೊಡುತ್ತೇವೆ ನಿಮಗೂ ಕೂಡ ನಿಮ್ಮ ಜೀವನದಲ್ಲಿ ವಿಪರೀತ ಕಷ್ಟ ಇದೆ ಅನ್ನುವವರು ಜೊತೆಗೆ ಕಷ್ಟಗಳು ಬರಬಾರದು ಬರುವ ಕಷ್ಟದಿಂದ ಪಾರಾಗಬೇಕೆಂಬ ಹಾಗೆ ಈಗ ಇರುವ ಕಷ್ಟದಿಂದ ನಾವು ಪಾರಾಗಬೇಕು ಅನ್ನುವ ಹಾಗಿದ್ದರೆ ಈ ಮಂತ್ರವನ್ನು ಪಠಣೆ ಮಾಡಿ ಶ್ರಿ ಈಶ್ವರನು ತನ್ನ ಪತ್ನಿಯಾಗಿರುವ ಪಾರ್ವತಿ ದೇವಿಗೆ ತಿಳಿಸಿಕೊಟ್ಟಿರುವ ಈ ಮಂತ್ರ ಬಹಳ ವಿಶೇಷವಾದದ್ದು.

ಹೌದು ಈ ಮಂತ್ರ ಸ್ವತಃ ಈಶ್ವರದೇವನು ಕೂಡ ಪಟಣೆ ಮಾಡ್ತಾರಂತ ಪಾರ್ವತಿ ದೇವಿಯ ಮುಂದೆ ಮಾತಾಡುವಾಗ ಈಶ್ವರನು ಹೇಳುತ್ತಾರೆ ತಾನೂ ಕೂಡ ರಾಮನ ಹೆಸರನ್ನು ಜಪಿಸುತ್ತ ಹಾಗೆಯೇ ಮನುಷ್ಯ ಹೇಗೆ ಕಷ್ಟ ಬಂದಾಗ ದೇವರನ್ನು ಒಲಿಸಿಕೊಳ್ಳಲು ಮನೆಯಲ್ಲಿ ವಿಷ್ಣು ಸಹಸ್ರನಾಮವನ್ನು ಪಠಿಸುತ್ತಾರೆ. ಅದನ್ನು ಪ್ರತಿಯೊಬ್ಬರಿಂದಲೂ ಪಡಿಸಲು ಸಾಧ್ಯವಿಲ್ಲ ಹಾಗಾಗಿ ಈ ಮಂತ್ರವನ್ನು ಅವರೂ ಕೂಡ ಪಠಿಸುವುದರಿಂದ ರಾಮನ ಅನುಗ್ರಹವಾಗುತ್ತದೆ ಎಂದು ತಿಳಿಸಿದ್ದಾರೆ ಈಶ್ವರದೇವ.

ಆ ಮಂತ್ರ ಯಾವುದು ಅಂದರೆ “ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೆ ಸಹಸ್ರನಾಮ ತತ್ತುಲ್ಯಂ ರಾಮನಾಮ ವರನನೆ” ಈ ಮಂತ್ರವನ್ನು ಪಠಣೆ ಮಾಡುವುದರಿಂದ ವಿಷ್ಣು ಸಹಸ್ರನಾಮವನ್ನು ಪಠಿಸಿದರೆ ಅಷ್ಟೇ ಪುಣ್ಯ ಲಭಿಸುತ್ತದೆ ಎಂದು ಶ್ರೀ ಸಾಕ್ಷಾತ್ ಶಿವ ದೇವಾಲಯ ತಿಳಿಸಿದ್ದು ಇದನ್ನು ಪುರಾಣಗಳಲ್ಲಿ ಉಲ್ಲೇಖಗೊಂಡಿರುವುದನ್ನು ಕೂಡ ಕಾಣಬಹುದಾಗಿದೆ. ಹಾಗಾಗಿ ನೀವು ಕೂಡ ಪ್ರತಿದಿನ ಈ ಮೇಲೆ ತಿಳಿಸಿದ ಮಂತ್ರವನ್ನು 3 ಬಾರಿ ಪಠಣೆ ಮಾಡಿ ಹಾಗೆಯೇ ಜೀವನದಲ್ಲಿರುವ ಕಷ್ಟವನ್ನು ದೂರ ಮಾಡಿಕೊಳ್ಳಿ ಜೊತೆಗೆ ಸಾಕ್ಷಾತ್ ಈಶ್ವರ ಮತ್ತು ರಾಮನ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕಾಗಿ ಈ ಮಂತ್ರ ಪಠಣೆ ಮಾಡಿ ಸಾಕು.

ಹೌದು ಎಲ್ಲರಿಂದಲೂ ವಿಷ್ಣುಸಹಸ್ರನಾಮ ಆಗಲಿ ಅಥವಾ ಇನ್ಯಾವುದೆ ಸಹಸ್ರನಾಮ ಪಠಣೆ ಮಾಡಲು ಸಾಧ್ಯವಾಗಿಲ್ಲ ಅನ್ನುವುದಾದರೆ ಚಿಂತೆ ಬೇಡ ಈ ಮೇಲೆ ತಿಳಿಸಿದ ಮಂತ್ರವನ್ನು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ದೇವರ ಎದುರು ಪಠಣೆ ಮಾಡುತ್ತಾ ಬನ್ನಿ ಖಂಡಿತ ನಿಮಗೆ ಸಾಕ್ಷಾತ್ ಆ ದೇವರ ಕೃಪೆ ಆಗುತ್ತದೆ ಈ ಮಂತ್ರವನ್ನು ಕಲಿತು ಪ್ರತಿದಿನ ಭಜನೆ ಮಾಡುತ್ತಾ ಬನ್ನಿ ಶುಭದಿನ ಧನ್ಯವಾದ…

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.