ಪಿತ್ತ , ಮೂಲವ್ಯಾಧಿ , ಚರ್ಮದ ಮೇಲೆ ಆಗುವ ಅಲರ್ಜಿ ,ಹುಣ್ಣು ನಿವಾರಣೆ ಮಾಡುತ್ತದೆ ಈ ಒಂದು ಮರದಲ್ಲಿ ಬಿಡೋ ಕಾಯಿ..

Sanjay Kumar
2 Min Read

ಸ್ನೇಹಿತರೆ ನಮ್ಮ ಪೂರ್ವಜರು ಆರೋಗ್ಯವಾಗಿ ಇರುವುದಕ್ಕೆ ಹಲವಾರು ಕಾರಣಗಳಿವೆ ಎಲ್ಲರೂ ಕೂಡ ಎಲ್ಲ ರೀತಿಯಾದಂಥ ಗಿಡಮೂಲಿಕೆಗಳನ್ನು ಬಳಸಿಕೊಂಡು ಜೀವನವನ್ನು ಮಾಡುತ್ತಿದ್ದರು ಆದರೆ ಆದ್ದರಿಂದ ಅವರಿಗೆ ಯಾವುದೇ ರೀತಿಯಾದಂತಹ ಸಮಸ್ಯೆಗಳು ಕೂಡ ಬರುತ್ತಿರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ನಾವುಗಳು ಈಗಿನ ಆಧುನಿಕ ಜಗತ್ತಿಗೆ ಹೊಂದಿಕೊಂಡು ಎಲ್ಲ ರೀತಿಯಾದಂಥ ಸಮಸ್ಯೆಗಳು ಕೂಡ ಬರಲು ಆರಂಭವಾಗುತ್ತದೆ ಎಂಬುದು ನಮ್ಮೆಲರಿಗೂ ತಿಳಿದಿರುವ ವಿಷಯವಾಗಿದೆ.

ಈ ದಿನ ನಾವು ನಮ್ಮ ಹಿರಿಯರು ಆರೋಗ್ಯವಾಗಿರುವುದಕ್ಕೆ ಮತ್ತು ಕೆಲವೊಂದು ಸಮಸ್ಯೆಗಳಿಗೆ ರಾಮಬಾಣ ಆಗಿರುವಂಥ ಒಂದು ವಿಶೇಷ ಔಷಧಿಯ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ ಸಾಮಾನ್ಯವಾಗಿ ಈ ಮರದ ಬಗ್ಗೆ ಮಾಹಿತಿ ಯಾರಿಗೂ ಇರುವುದಿಲ್ಲ ಆ ಮರದ ಹೆಸರು ಕಕ್ಕೆ ಮರ ಈ ಮರ ನಮ್ಮ ಸುತ್ತಮುತ್ತ ಇದ್ರೂ ಕೂಡ ಅದರ ಅರಿವೂ ನಮಗಿರುವುದಿಲ್ಲ ಮತ್ತು ಈ ಕಕ್ಕೆಮರದ ಬಗ್ಗೆ ನಮಗೆ ಯಾವುದೇ ರೀತಿಯಾದಂತಹ ಮಾಹಿತಿ ಕೂಡ ಇರುವುದಿಲ್ಲ ಈ ಕಕ್ಕೆ ಮರದಿಂದ ಮೂಲವ್ಯಾಧಿ ಚರ್ಮ ರೋಗ ಮತ್ತು ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳಿಂದ ನಾವು ಮುಕ್ತಿಯನ್ನು ಪಡೆಯ ಬಹುದಾಗಿದೆ ಈ ಕಕ್ಕೆ ಮರದಿಂದ ಇರುವಂಥ ಉಪಯೋಗಗಳನ್ನ ಒಂದೊಂದಾಗಿಯೇ ನಾವು ಈ ದಿನ ನೋಡೋಣ.

ಮೊದಲು ಈ ಕಕ್ಕೆಮರದ ಪುಡಿಯನ್ನು ತೆಗೆದುಕೊಳ್ಳಿ ಅಂದರೆ ಆ ಮರದ ತೊಗಟೆಯಿಂದ ಮಾಡಿರುವಂತಹ ಪೌಡರನ್ನು ತೆಗೆದುಕೊಳ್ಳಿ ಅದರ ಜೊತೆಗೆ 1 ಚಿಟಿಕೆ ಇಂಗನ್ನು ಹಾಕಿ ಮತ್ತು 1 ಚಮಚ ಸಕ್ಕರೆಯನ್ನು ಹಾಕಿ ಪ್ರತಿನಿತ್ಯ ಸೇವಿಸುತ್ತಾ ಬಂದರೆ ಮೂತ್ರಕ್ಕೆ ಸಂಬಂಧಪಟ್ಟ ಹಾಗೆ ಯಾವುದೇ ರೀತಿಯಾದಂತಹ ಸಮಸ್ಯೆಗಳಿದ್ದರೂ ಕೂಡ ನೀವು ಸಂಪೂರ್ಣವಾಗಿ ನಿವಾರಣೆ ಪಡೆಯಬಹುದು ಪ್ರತಿನಿತ್ಯ ಸೇವಿಸುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಮ ಇಲ್ಲದೆ ಇರುವುದನ್ನು ನಾವು ಗಮನಿಸಬಹುದಾಗಿದೆ ಇದು ಸುಲಭವಾಗಿದೆ ಮತ್ತು ಪರಿಣಾಮಕಾರಿಯಾಗಿರುವುದರಿಂದ ಉತ್ತಮವಾದಂತಹ ಮನೆಮದ್ದಾಗಿದೆ.

ಮತ್ತೊಂದು ವಿಶೇಷವಾದಂತಹ ಉಪಯೋಗವೆಂದರೆ ಈ ಮರದ ಕಷಾಯಕ್ಕೆ ಅಂದರೆ ಮರದ ಬೇರಿನ ಕಷಾಯಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಸೇವಿಸುವುದರಿಂದ ಚರ್ಮಕ್ಕೆ ಸಂಬಂಧಪಟ್ಟ ಯಾವುದೇ ಕಾಯಿಲೆಗಳಿದ್ದರೂ ಕೂಡ ನಿವಾರಣೆಯಾಗುವುದು ನಾವು ಗಮನಿಸಬಹುದಾಗಿದೆ .
ಈ ಮರದ ತೊಗಟೆಯನ್ನು ತೆಗೆದು ಕೊಂಡು ಅದನ್ನು ಚೆನ್ನಾಗಿ ಕುದಿಸಿ ಅದಕ್ಕೆ ಸ್ವಲ್ಪ ಎಣ್ಣೆಯನ್ನು ಸೇರಿಸಿ ಕಿವಿಗೆ ಹಾಕಿಕೊಳ್ಳುವುದರಿಂದ ಕಿವಿಯಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ನೀವು ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಈ ಕಕ್ಕೆ ಮರದ ತೊಗಟೆಯನ್ನು ಚೆನ್ನಾಗಿ ಕುದಿಸಿ ಅದಕ್ಕೆ ಸ್ವಲ್ಪ ಹಾಲನ್ನು ಹಾಕಿ ಅದನ್ನ ನೀವು ಪ್ರತಿನಿತ್ಯ ಸೇವಿಸುತ್ತಾ ಬರುವುದರಿಂದ ಗಾಯದಿಂದ ಆಗಿರುವ ಯಾವುದೇ ಹುಣ್ಣುಗಳು ಇದ್ದರು ಕೂಡ ನೀವು ಅದರಿಂದ ನಿವಾರಣೆಯನ್ನ ಪಡೆದುಕೊಳ್ಳಬಹುದಾಗಿದೆ.

ಮತ್ತೊಂದು ವಿಶೇಷವಾದ ಅಂಶ ಎಂದರೆ ಈ ಕಕ್ಕೆಮರದ ಎಲೆಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಜಜ್ಜಿ ಅದಕ್ಕೆ ಸ್ವಲ್ಪ ತುಪ್ಪವನ್ನು ಸೇರಿಸಿ ಸೇವಿಸುವುದರಿಂದ ನೀವು ಖಂಡಿತವಾಗಿಯೂ ಕೂಡ ಕೈ ಮಸ್ಕೆಯಿಂದ ದೂರವಾಗಬಹುದು .
ಇವೆಲ್ಲವೂ ಕೂಡ ನಮಗೆ ಅತ್ಯಂತ ಸುಲಭವಾಗಿ ಕಕ್ಕೆ ಮರ ದಿಂದ ಆಗುವ ಉಪಯೋಗಗಳಾಗಿವೆ.

ಇವೆಲ್ಲವೂ ಕೂಡ ನಾವು ಪ್ರತಿನಿತ್ಯ ಬಳಲುವಂತಹ ಅಥವಾ ಅನುಭವಿಸುವಂತಹ ತೊಂದರೆಗಳಾಗಿವೆ ಒಮ್ಮೆ ಈ ಸಮಸ್ಯೆಗಳಿಂದ ನೀವು ದೂರಾಗಬೇಕೆಂದರೆ ಈಗ ನಾವು ಹೇಳಿದ ರೀತಿಯಲ್ಲಿ ಈ ಕಕ್ಕೆ ಮರದಿಂದ ಉಪಯೋಗವನ್ನು ಪಡೆದುಕೊಳ್ಳಿ ಖಂಡಿತವಾಗಿಯೂ ನೀವು ಈ ಎಲ್ಲಾ ಆರೋಗ್ಯದ ಸಮಸ್ಯೆಗಳಿಂದ ಮುಕ್ತಿಯನ್ನ ಪಡೆಯುತ್ತೀರಾ.

ಇನ್ನೂ ಅನೇಕರು ಈ ಸಣ್ಣ ಪುಟ್ಟ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಅವರಿಗೂ ಕೂಡ ಈ ಮಾಹಿತಿಯನ್ನು ನೀಡಿ ನೀವು ಉಪಯೋಗವನ್ನು ಪಡೆದುಕೊಳ್ಳಿ ಮತ್ತು ಬೇರೆಯವರಿಗೂ ಉಪಯೋಗ ಮಾಡಿಕೊಳ್ಳಲು ಸಹಾಯ ಮಾಡಿ ಧನ್ಯವಾದಗಳು

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.