ಪುನೀತ್ ರಾಜಕುಮಾರ್ ತನ್ನ ಮಕ್ಕಳ ಜೊತೆ ಕಳೆದ ಸುಂದರ ಕ್ಷಣಗಳ ಫೋಟೋಸ್ ಇಲ್ಲಿವೆ ನೋಡಿ .. ನೋಡಿದ್ರೆ ತುಂಬಾ ಬೇಜಾರ್ ಆಗುತ್ತೆ ಕಣ್ರೀ…

172

ನಮಸ್ಕಾರಗಳು ಪ್ರಿಯ ಸ್ನೇಹಿತರೇ ಈಗಾಗಲೇ ಪುನೀತ್ ಅವರು ನಮ್ಮನ್ನೆಲ್ಲಾ ಬಿಟ್ಟು ಹೋಗಿ ಸುಮಾರು ಒಂದು ತಿಂಗಳು ಕಳೆಯುತ್ತಾ ಬಂದಿದೆ, ಇನ್ನೂ ಎಷ್ಟೋ ದಿವಸಗಳಾದರೂ ಅವರ ಅಗಲಿಕೆ ನಮಗೆಲ್ಲರಿಗೂ ಒಪ್ಪಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ ಅದೆಲ್ಲಾ ಬಿಡಿ ಪುನೀತ್ ಸರ್ ಯಾವಾಗಲೂ ನಮ್ಮೊಂದಿಗೆ ಇರುತ್ತಾರೆ ನಮ್ಮ ಜೊತೆಯಲ್ಲಿಯೇ ಇರುತ್ತಾರೆ ಅವರ ಸದ್ಗುಣಗಳು ಸದಾ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಿಗೆ ಒಳ್ಳೆಯ ದಾರಿ ತೋರಲಿ ಈ ಮೂಲಕ ಪುನೀತ್ ಸರ್ ನಮ್ಮ ಜೊತೆಯಲ್ಲಿಯೇ ಇದ್ದಾರೆ ಎಂಬುದನ್ನ ಸದಾ ನಂಬಿ ರೋಣ ಹೌದು ಅಪ್ಪು ಸರ್ ಸದಾ ಅಮರರಾಗಿರುತ್ತಾರೆ.

ಅವರ ಮುಗ್ಧ ನಗುವಿನಿಂದ ಅವರ ನಗುಮುಖದಿಂದ ಅವರ ವ್ಯಕ್ತಿತ್ವದಿಂದ. ಪುನೀತ್ ಸರ್ ತಮ್ಮ ತಂದೆ ಅವರ ಜೊತೆಯಲ್ಲಿಯೇ ಚಿಕ್ಕಂದಿನಿಂದಲೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡುವ ಮೂಲಕ ಹಲವು ಸಿನಿಮಾಗಳಿಗೆ ಪ್ರಶಸ್ತಿ ಅನ್ನು ಸಹ ಪಡೆದುಕೊಂಡಿದ್ದಾರೆ. ನಟ ಶಿವರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವರಿಗಿಂತ ಮುಂಚೆಯೇ ಸಿನಿಮಾರಂಗಕ್ಕೆ ಕಾಲಿಟ್ಟ ಅಪ್ಪು ಇಂದಿಗೂ ಸಿನಿಮಾ ವಿಚಾರದಲ್ಲಿ ಸಹೋದರರ ಸಲಹೆ ತೆಗೆದುಕೊಳ್ಳುತ್ತಾರಂತೆ ಇದೆ ಅಲ್ವಾ ದೊಡ್ಡಗುಣ ಅನ್ನೋದು. ‘Dont try to live in your character, enact it’ ಎಂದು ಅಮೆರಿಕನ್ ಸಿನಿಮಾ ನಿರ್ದೇಶಕ ರಾಬರ್ಟ್‌ ಡಿ ನೋರ್ ಹೇಳುವ ಮಾತುಗಳನ್ನು ನಟ ಪುನೀತ್ ಆಗಾಗ ಹೇಳುತ್ತಲೆ ಇದ್ದರು.

ನಟ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಎಳೆ ವಯಸ್ಸಿನಿಂದಲೇ ಅಂದರೆ ಹುಟ್ಟಿದಾಗಿನಿಂದಲೂ ಬಹಳ ಜನಪ್ರಿಯತೆ ಪಡೆದುಕೊಂಡವರು. ಏಕೆಂದರೆ ನಟಸಾರ್ವಭೌಮ ಡಾ.ರಾಜ್‌ಕುಮಾರ್ ಅವರ ಮಗ ಅಲ್ಲವೆ ಅಷ್ಟೇ ಅಲ್ಲ ತಮ್ಮ ಚಿಕ್ಕ ವಯಸ್ಸಿಗೆ ಸಿನಿಮಾ ರಂಗಕ್ಕೆ ಬಂದವರು ಹಾಗೆ ಸಿನಿಮಾದಲ್ಲಿ ಅವರು 44ವರ್ಷಗಳನ್ನು ಪೂರೈಸಿದ್ದು ಅಪ್ಪು ಹಲವಾರು ಹಿಟ್ ಸಿನಿಮಾಗಳನ್ನು ಸ್ಯಾಂಡಲ್ ವುಡ್ ಗೆ ನೀಡಿದ್ದಾರೆ. ಕರ್ನಾಟಕದ ಪ್ರತಿಯೊಬ್ಬರಿಗೂ ಅಪ್ಪು ಯಾರು ಅಂತ ಗೊತ್ತೇ ಇದೆ ಆದರೆ ಅಪ್ಪು ಅವರ ಮಕ್ಕಳು ಯಾರಿಗೂ ಅಷ್ಟಾಗಿ ಗೊತ್ತಿಲ್ಲ ಯಾಕೆಂದರೆ ಸೆಲೆಬ್ರಿಟಿ ಮಕ್ಕಳು ಅನ್ನುವ ಅಹಂ ಇಲ್ಲದೆ ತಮ್ಮ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಕೊಡುತ್ತಾ ಈ ಹೆಣ್ಣು ಮಕ್ಕಳು ಬೆಳೆದು ಬಂದಿದ್ದು ತನ್ನ ತಂದೆ ದೊಡ್ಡ ಹೀರೋ ಎಂದು ಎಲ್ಲಿಯೂ ಸಹ ತೋರಿದವರಲ್ಲ ಎನ್ನುವ ಪುನೀತ್ ಅವರದ್ದು ಪ್ರೇಮ ವಿವಾಹ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವೇ ಈ ದಂಪತಿಗಳು ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದುಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ತುಂಬಾನೇ ಪ್ರೀತಿ ಮಾಡ್ತಾ ಇದ್ದ ತಮ್ಮ ಪತ್ನಿಯ ಅನ್ನು ಬಿಟ್ಟು ಹೋದ ಅಪ್ಪು ಇಡೀ ಕುಟುಂಬಕ್ಕೆ ಈ ದುಃಖ ತಡೆಯಲು ಸಾಧ್ಯವಾಗುವುದಿಲ್ಲ ಅದೊಂದು ಖಂಡಿತ ಹೌದು ಅಪ್ಪು ಎಲ್ಲರಜೊತೆ ನಗುನಗುತ್ತಾ ಮಾತನಾಡಿಕೊಂಡು ಇದ್ದವರು ಇದ್ದಕಿದ್ದ ಹಾಗೆ ಅವರು ನಮ್ಮ ಜೊತೆ ಇಲ್ಲ ಅಂದರೆ ಅದು ತಡೆದುಕೊಳ್ಳುವ ಸಾಧ್ಯವಾಗದೆ ಇರುವ ಮಾತು ಇನ್ನು ಸ್ಯಾಂಡಲ್ ವುಡ್ ನಲ್ಲೇ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಎಂದರೆ ಅಪ್ಪು ಅಂತ ಪ್ರತಿಯೊಬ್ಬರೂ ಹೇಳುತ್ತಿದ್ದರು. ಈ ಮುದ್ದಾದ ಜೋಡಿಗೆ ಇಬ್ಬರು ಹೆಣ್ಣು ಮಕ್ಕಳು ಧೃತಿ ಮತ್ತು ವಂದಿತ. ಹಠಾತ್ತಾಗಿ ಕಾಣಿಸಿಕೊಂಡ ಎದೆನೋವು ಮತ್ತು ತೀವ್ರ ಹೃದಯಾಘಾತದಿಂದಾಗಿ ೨೯ ಅಕ್ಟೋಬರ್ ೨೦೨೧ ರಂದು ಬೆಂಗಳೂರಿನ ವಿಕ್ರಮ ಆಸ್ಪತ್ರೆಯಲ್ಲಿ ನಿಧನರಾದ ಅಪ್ಪು ಈ ವಿಚಾರ ಅತಿಬೇಗ ಎಲ್ಲರಿಗೂ ತಿಳಿದು ಬಿಟ್ಟಿತ್ತು ಹಾಗೂ ರಚನಾ ಅವರ ಇಡೀ ಕುಟುಂಬ ನೇತ್ರ ದಾನ ಮಾಡುವುದಕ್ಕೆ ಹಲವು ವರ್ಷಗಳ ಹಿಂದೆಯೇ ಸಹಿ ಮಾಡಿದ್ದು ಅಣ್ಣಾವ್ರ ತರಹ ಅಪ್ಪು ಅವರು ಸಹ ನೇತ್ರದಾನ ಮಾಡಿದರು ಅಪ್ಪು.

ವಿಶೇಷ ಅಂದರೆ ನಟ ಪುನೀತ್ ರಾಜಕುಮಾರ್ ಅವರ ಕಣ್ಣನ್ನು ನಾಲ್ಕು ಜನರಿಗೆ ಅಳವಡಿಸಲಾಗಿದೆ, ಹೌದು ಆಧುನಿಕ ತಂತ್ರಜ್ಞಾನದ ಮೂಲಕ ಈ ಚಿಕಿತ್ಸೆ ಫಲಕಾರಿಯಾಗಿದೆ. ಇರುವಾಗಲೂ ಅದೆಷ್ಟೋ ನಿರ್ಗತಿಕರಿಗೆ ಬಡವರಿಗೆ ಸಹಾಯ ಮಾಡಿದ ಆ ಕೈ, ಅವರು ನಮ್ಮನೆಲ್ಲ ಅಗಲಿದ ನಂತರವೂ ಸಹ ನಾಲ್ಕು ಜನರಿಗೆ ಒಳ್ಳೆಯದಾಗುವ ಹಾಗೆ ಮಾಡಿ ಆ ರಾಜಕುಮಾರ ರಾಜನಂತೆ ಸ್ವರ್ಗವಾಸಿಯಾದರು.

ಪುನೀತ್ ರಾಜಕುಮಾರ್ ಅವರ ಮಕ್ಕಳ ವಿಚಾರಕ್ಕೆ ಬರುವುದಾದರೆ ಸಾಮಾನ್ಯವಾಗಿ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಹಾಗೂ ಅವರ ಮಕ್ಕಳು ಮೀಡಿಯಾ ಎದುರು ಹೆಚ್ಚಿನದಾಗಿ ಕಾಣಿಸಿಕೊಳ್ಳುವುದಿಲ್ಲ ಹಾಗೆ ತಂದೆ ಅಂತೆ ಮಕ್ಕಳು ಸಹ ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ತೋರುತ್ತಾರೆ ಏನೋ ಇವರ ಹಿರಿಯ ಮಗಳು ಧೃತಿ, ತಂದೆಯ ಹಾದಿಯಲ್ಲಿಯೆ ಸಾಗುತ್ತ ಇದ್ದಾರೆ ಅದೂ ಇಷ್ಟು ಚಿಕ್ಕ ವಯಸ್ಸಿನಲ್ಲಿಯೆ ಹೌದು ನಿಮಗೆ ಅಚ್ಚರಿ ಎನಿಸಬಹುದು ಆದರೆ ಇದು ನಿಜ ಧೃತಿ ಅವರು ಕಳೆದ ವರುಷವಷ್ಟೇ ನೇತ್ರದಾನ ವಿಚಾರವಾಗಿ ರೋಟರಿ ಕ್ಲಬ್ ಗೆ ಪುನೀತ್ ರಾಜಕುಮಾರ್ ಅವರ ಹಿರಿಯ ಮಗಳು ಧೃತಿ ಅವರು ಬೆಂಬಲ ನೀಡಿದ್ದರು. ತಂದೆಯಂತೆ ಮಗಳೂ ಸಹ ಸದ್ಗುಣಗಳಿಂದಲೇ ಬೆಳೆದು ಬಂದಿದ್ದಾರೆ ಎಂಬುದು ನಮಗೆ ಇದರಿಂದ ತಿಳಿಯುತ್ತದೆ.

ಇನ್ನು ಕಿರಿಯ ಮಗಳು ವಂದಿತಾ ೧೦ನೇ ತರಗತಿಯಲ್ಲಿ ಓದುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರ ನಿಧಾನವಾದ ಸಮಯದಲ್ಲಿ ಧೃತಿ ವಿದೇಶದಲ್ಲಿ ವ್ಯಾಸಂಗ ಮಾಡಲು ಹೋಗಿ ಕೇವಲ ಎರಡು ತಿಂಗಳುಗಳ ಆಗಿತ್ತು ಅಷ್ಟೇ. ತನ್ನ ಇಬ್ಬರು ಹೆಣ್ಣುಮಕ್ಕಳೆಂದರೆ ಪುನೀತ್ ಅವರಿಗೆ ಬಹಳ ಇಷ್ಟ ಅಂತೆ ಯಾಕೆಂದರೆ ಇವರು ಪರ್ಫೆಕ್ಟ್ ನಟ ಮಾತ್ರ ಅಲ್ಲ ಪರ್ಫೆಕ್ಟ್ ಪ್ರಜೆ ಮಾತ್ರ ಅಲ್ಲ ಪರ್ಫೆಕ್ಟ್ ಅಪ್ಪ ಸಹ ಆಗಿದ್ದರು.