ಬಾಚಿದಾಗೆಲ್ಲ ಕೂದಲು ಉದುರುತ್ತಾ ಇದೆಯಾ ಹಾಗಾದರೆ ಮನೆಯಲ್ಲೇ ಮಾಡಬಹುದಾದ ಈ ಮನೆಮದ್ದು ಬಳಸಿ ಸಾಕು … ಚಮತ್ಕಾರದ ರೀತಿಯಲ್ಲಿ ಬೆಳೆಯಲು ಶುರು ಆಗುತ್ತದೆ…

63

ಕೂದಲು ಉದುರುವಂತಹ ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ, ಈ ಮನೆ ಮದ್ದು ಮಾಡುವ ವಿಧಾನವನ್ನು ನೀವು ತಿಳಿದು ಮನೆಯಲ್ಲಿಯೇ ದೊರೆಯುವ ಪದಾರ್ಥಗಳನ್ನು ಬಳಸಿ ಹೇಗೆ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ತಿಳಿಯಿರಿ.ಹೌದು ಸಾಮಾನ್ಯವಾಗಿ ಇವತ್ತಿನ ದಿನಗಳಲ್ಲಿ ಕೂದಲುದುರುವ ಸಮಸ್ಯೆ ಎಲ್ಲರಲ್ಲೂ ಕಾಡುತ್ತಿರುವಂತಹ ತೊಂದರೆಯಾಗಿದೆ ಹಾಗಾಗಿ ಈ ಸಮಸ್ಯೆಗೆ ಹೆಚ್ಚಿನ ಮಂದಿ ಪರಿಹಾರವನ್ನು ಕಂಡುಕೊಳ್ಳಲು ಪರಿಹಾರವನ್ನು ಹುಡುಕುತ್ತ ಇರುತ್ತಾರೆ.

ಆದರೆ ಹಲವರಿಗೆ ಗೊತ್ತಿಲ್ಲ ಈ ಕೂದಲುದುರುವ ಸಮಸ್ಯೆಗೆ ಮನೆಯಲ್ಲಿಯೇ ಪರಿಹಾರ ಅಡಗಿದೆಯೆಂದು ಮನೆಯಲ್ಲಿ ಇರುವಂತಹ ಮನೆಯಲ್ಲೇ ದೊರೆಯುವಂತಹ ಕೆಲವೊಂದು ಪದಾರ್ಥಗಳನ್ನು ಬಳಸಿ ನಾವು ಈ ಪರಿಹಾರವನ್ನು ಮಾಡಬಹುದು ಈ ಪದಾರ್ಥಗಳನ್ನು ಅಂದರೆ ಈ ಮನೆ ಮದ್ದಿನಲ್ಲಿ ಬಳಸುತ್ತಿರುವಂತಹ ಪದಾರ್ಥಗಳನ್ನು ನೀವು ಪ್ರತಿನಿತ್ಯ ಮನೆಯಲ್ಲಿಯೂ ಕೂಡ ಬೇರೆ ವಿಚಾರಗಳಿಗಾಗಿ ಬಳಸುತ್ತ ಇರುತ್ತೀರಾ ಅಂದರೆ ಉದಾಹರಣೆಗೆ ಈ ಮನೆ ಮದ್ದಿಗಾಗಿ ಬೇಕಾಗಿರುವುದು ಮೆಂತ್ಯೆ ಕಾಳುಗಳು

ಈ ಮೆಂತ್ಯೆ ಕಾಳುಗಳು ಆರೋಗ್ಯಕರ ಪ್ರಯೋಜನ ನೀಡುತ್ತದೆ ಹಾಗೂ ಕೂದಲನ್ನು ಕೂಡ ಪೋಷಣೆ ಮಾಡಿ ಕೂದಲಿಗೆ ಕಾಳಜಿ ಮಾಡಿ ಕೂದಲು ಉದುರುವ ಸಮಸ್ಯೆಗೆ ಪರಿಹಾರ ನೀಡುತ್ತದೆ ಹಾಗೆಯೇ ಈ ಮನೆ ಮದ್ದಿಗೆ ಟೀ ಪುಡಿ ಬೇಕಾಗಿರುತ್ತದೆಈ ಪದಾರ್ಥವು ಕೂದಲು ಉದುರುವಂತಹ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ ಜೊತೆಗೆ ಕೂದಲಿಗೆ ಒಳ್ಳೆಯ ಪೋಷಣೆ ನೀಡಿ ನೈಸರ್ಗಿಕವಾಗಿ ಕೂದಲಿನ ಬುಡವನ್ನು ದೃಢ ಮಾಡುತ್ತದೆ ಹಾಗಾಗಿ ಈ ಕೆಲವೊಂದು ಪದಾರ್ಥಗಳನ್ನು ನಾವು ಕೂದಲು ಉದುರುವ ಸಮಸ್ಯೆ ನಿವಾರಣೆಗೆ ಬಳಕೆ ಮಾಡುತ್ತಾ ಇದ್ದೇವೆ.

ಮೊದಲಿಗೆ ನೀರನ್ನು ಕುದಿಯಲು ಇಡಿ ಈ ನೀರಿಗೆ ಟೀಪುಡಿ ಹಾಕಿ ಬಳಿಕ ಇದಕ್ಕೆ ಕರಿಬೇವಿನ ಎಲೆಗಳು ಜೊತೆಗೆ ಮೆಂತೆ ಕಾಳುಗಳನ್ನು ಹಾಕಿ ನೀರನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು, ಆ ಬಳಿಕ ನೀರಿನ ಬಣ್ಣ ಬದಲಾಗುತ್ತದೆ ಆ ಬದಲಾದಂತಹ ಬಣ್ಣದ ನೀರನ್ನು ಶೋಧಿಸಿ ಕೊಳ್ಳಿಈಗ ಈ ಶೋಧಿಸಿಕೊಂಡಂತಹ ನೀರಿಗೆ ಆಲಿವ್ ಎಣ್ಣೆಯನ್ನು ಮಿಶ್ರ ಮಾಡಬೇಕು ಹೌದು ಈ ಆಲಿವ್ ಎಣ್ಣೆ ಕೂಡ ಕೂದಲಿನ ಬುಡವನ್ನು ದೃಡ ಪಡಿಸುತ್ತದೆ ಹಾಗೂ ಕೂದಲು ಉದುರುವಂತಹ ಸಮಸ್ಯೆಯನ್ನು ನಿವಾರಣೆ ಮಾಡಲು ಸಹಕಾರಿಯಾಗಿರುತ್ತದೆ.

ಹಾಗಾಗಿ ಇವತ್ತಿನ ಲೇಖನದಲ್ಲಿ ನಾವು ತೋರಿಸಿಕೊಟ್ಟಂತಹ ಈ ಸರಳ ಮನೆ ಮದ್ದನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಯಾರೂ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂಥವರು ಮಾಡಿ ಪಾಲಿಸುವುದರಿಂದ ಕೂದಲಿಗೆ ಯಾವುದೇ ಸೈಡ್ ಎಫೆಕ್ಟ್ ಗಳು ಇಲ್ಲದೆ ಕೂದಲನ್ನು ಸೂಕ್ಷ್ಮವಾಗಿ ಕಾಳಜಿ ಮಾಡಿ ಕೂದಲು ಉದುರುವಂತಹ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ ಈ ಸರಳ ಮನೆಮದ್ದು.

ಇದನ್ನು ಪಾಲಿಸುವ ವಿಧಾನ ;ತಯಾರಿಸಿ ಕೊಂಡಂತಹ ಈ ಮಿಶ್ರಣವನ್ನು ಹತ್ತಿಯ ಸಹಾಯದಿಂದ ಕೂದಲಿನ ಬುಡಕ್ಕೆ ಲೇಪಿಸಿ ಸ್ವಲ್ಪ ಸಮಯ ಹಾಗೆಯೇ ಬಿಟ್ಟು, ಅದನ್ನು ಅಂದರೆ ಕೂದಲಿನ ಬುಡವನ್ನು ಮಸಾಜ್ ಮಾಡಿ ಅದನ್ನ 1 ಗಂಟೆಗಳವರೆಗೂ ಹಾಗೇ ಬಿಡಬೇಕುಈಗ ಶೀಗೆಕಾಯಿ ಪುಡಿ ಅಥವಾ ಶ್ಯಾಂಪೂ ಬಳಸಿ ನಿಮ್ಮ ಕೂದಲನ್ನು ಸ್ವಚ್ಛ ಮಾಡಿಕೊಳ್ಳಿ ಈ ಪರಿಹಾರ ಮಾಡಿದಾಗ ಮುಖ್ಯವಾಗಿ ತಡೆಯಿರಿ ಬಿಸಿಬಿಸಿ ನೀರನ್ನು ಕೂದಲಿಗೆ ಹಾಕಬಾರದುಬೆಚ್ಚಗಿನ ನೀರು ಅಥವಾ ತಣ್ಣಗಿನ ನೀರನ್ನು ನೀವು ಬಳಸಿ ಕೂದಲನ್ನು ಸ್ವಚ್ಛ ಮಾಡುವುದರಿಂದ ಕೂದಲು ಇನ್ನಷ್ಟು ಸಾಫ್ಟ್ ಸಿಲ್ಕಿ ಆಗುತ್ತದೆ ಮತ್ತು ಕೂದಲಿನ ಬುಡ ಸದೃಢ ಆಗುತ್ತದೆ.

LEAVE A REPLY

Please enter your comment!
Please enter your name here