ಬಿಗ್ ಬಾಸ್ ಖ್ಯಾತಿಯ ಕವಿತಾ ಗೌಡ ಮತ್ತು ಸುಮಂತ್ ನಟಿಸಿರುವ ಹೊಸ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಯಾವಾಗ ಗೊತ್ತಾ …!!!!

26

ಬಿಗ್ ಬಾಸ್ ರಿಯಾಲಿಟಿ ಶೋ ಹಾಗೂ ಲಕ್ಷ್ಮೀ ಬಾರಮ್ಮ ಎಂಬ ಧಾರಾವಾಹಿ ಇಂದ ಹೆಚ್ಚು ಪ್ರಖ್ಯಾತಿ ಹೊಂದಿದ ಕವಿತಾ ಗೌಡ ರವರು ಇದೀಗ ಮತ್ತೊಂದು ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಮೂವಿ ಅಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು ಲಚ್ಚಿ ಆಗಿ ಧಾರಾವಾಹಿಗೆ ಎಂಟ್ರಿ ಕೊಟ್ಟ ಸವಿತಾ ಗೌಡ ರವರು ಈಗಾಗಲೇ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ನಾಯಕಿಯಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ, ಇದೀಗ ಮತ್ತೊಂದು ಹೊಸ ಕತೆಯೊಂದಿಗೆ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಮೂವಿ ಜೊತೆಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಕವಿತಾ ಗೌಡ ರವರು. ಇದೀಗ ಈ ಚಲನಚಿತ್ರದ ಆಡಿಯೋ ಮಾರ್ಚ್ 22ರಂದು ಬಿಡುಗಡೆಯಾಗಿದ್ದು, ಆಡಿಯೋ ಲಾಂಚ್ ಗಾಗಿ ರಾಜಕಾರಣಿಗಳಾದ ಕೆ ಎನ್ ರಾಜಣ್ಣ ಹಾಗೂ ನಿರ್ದೇಶಕರಾದ ಲಿಂಗದೇವರು ಅವರು ಅತಿಥಿಗಳಾಗಿ ಆಗಮಿಸಿದ್ದರು. ಇನ್ನು ಈ ಚಲನಚಿತ್ರದ ನಿರ್ಮಾಣ ಮಾಡುತ್ತಿರುವವರು ಶೈಲೇಂದರ್ ಪ್ರೊಡಕ್ಷನ್ ಎಲ್ಜಿ ಕ್ರಿಯೇಷನ್ಸ್ ಹಾಗೂ ರಂಗರಾಣಿ ಪ್ರೊಡಕ್ಷನ್ ಇವರುಗಳು ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಈ ಸಿನಿಮಾದ ಹೆಸರು ಗೋವಿಂದ ಗೋವಿಂದ ಹಾಗೂ ಈ ಸಿನಿಮಾವು ಸಸ್ಪೆನ್ಸ್ ಥ್ರಿಲ್ಲರ್ ಮೂವಿಯಾಗಿದ್ದು ಕುಟುಂಬದವರೆಲ್ಲ ಸೇರಿ ನೋಡುವಂತಹ ಸಿನಿಮಾ ಆಗಿದೆ ಇನ್ನು ಈ ಸಿನಿಮಾದಲ್ಲಿ ಇಬ್ಬರು ನಟಿಯರು ಹಾಗೂ ಇಬ್ಬರು ನಟರು ಅಭಿನಯ ಮಾಡುತ್ತಿದ್ದಾರೆ ಸುಮಂತ್ ಶೈಲೇಂದ್ರ ಹಾಗೂ ತುಳು ಭಾಷೆಯ ನಟರಾದ ರೂಪೇಶ್ ಅವರು ಈ ಸಿನಿಮಾದಲ್ಲಿ ನಟರಾಗಿ ಅಭಿನಯ ಮಾಡಿದ್ದಾರೆ ಇನ್ನು ಈ ಸಿನಿಮಾದ ನಾಯಕಿಯರಾಗಿ ಕವಿತಾ ಗೌಡ ಮತ್ತು ಭಾವನಾ ಮೆನನ್ ಅವರು ಅಭಿನಯ ಮಾಡಿದ್ದಾರೆ. ಈ ಸಿನಿಮಾವನ್ನು ತಿಲಕ್ ಅವರು ನಿರ್ದೇಶನ ಮಾಡಿದ್ದು ದೇವ್ ರವರು ರಂಗಭೂಮಿ ಕಥೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ಈ ಸಿನಿಮಾ ಕಳೆದ ವರ್ಷವೇ ರಿಲೀಸ್ ಆಗಬೇಕಿತ್ತು ಆದರೆ ಕಾರಣಾಂತರಗಳಿಂದ ರಿಲೀಸ್ ಆಗಲು ಸಾಧ್ಯವಾಗಿಲ್ಲ ಆದರೆ ಈಗ ಏಪ್ರಿಲ್ 16ನೇ ತಾರೀಖಿನಂದು ಚಿತ್ರ ತೆರೆಕಾಣಲಿದೆ. ಒಟ್ಟಾರೆಯಾಗಿ ಈ ಸಿನೆಮಾದಲ್ಲಿ ಹೊಸಬರಿಗೆ ಅವಕಾಶವನ್ನು ನೀಡಲಾಗಿದೆ. ಸಿನಿಮಾಗೆ ಹಿತನ್ ಅವರು ಸಂಗೀತವನ್ನು ನೀಡಿದ್ದಾರೆ. ಒಟ್ಟಾರೆಯಾಗಿ ಈ ಸಿನಿಮಾದಲ್ಲಿ ಆರು ಹಾಡುಗಳಿದ್ದು ಎಲ್ಲಾ ಹಾಡುಗಳು ಚೆನ್ನಾಗಿ ಮೂಡಿ ಬಂದಿದೆ ಎಂದು ಆಡಿಯೋ ಲಾಂಚ್ ಗೆ ಬಂದಿದ್ದ ಅತಿಥಿಗಳು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಸಿನಿಮಾ ರಂಗಕ್ಕೆ ಹೊಸ ಮುಖಗಳು ಬರಬೇಕೋ ಅವರು ಗಳಿಗೂ ಸಹ ಅವಕಾಶ ನೀಡಬೇಕು. ಅಂತಹ ಹಾದಿಯಲ್ಲಿ ಹೊರಟಿರುವ ಈ ಸಿನಿಮಾದ ನಿರ್ದೇಶಕರು ಹಾಗೂ ನಿರ್ಮಾಪಕರು ಈ ಗೋವಿಂದಾ ಗೋವಿಂದ ಭಟ್ಟರ ಚಿತ್ರದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿಗೆ ಚಾನ್ಸ್ ನೀಡಲಾಗಿದೆ. ಆಡಿಯೋ ಲಾಂಚ್ ಗೆ ಬಂದ ಅತಿಥಿಗಳು ಸಿನಿಮಾ ಶತದಿನೋತ್ಸವ ಪೂರೈಸಲಿ ಎಂದು ಹಾರೈಸಿ ಹೋಗಿದ್ದಾರೆ. ಇನ್ನು ಹೊಸ ಪ್ರತಿಭೆಗಳನ್ನು ಹೊಂದಿರುವ ಈ ಸಿನಿಮಾ ಒಳ್ಳೆಯ ಪ್ರದರ್ಶನ ನೀಡಲಿ ಎಂದು ನಾವು ಕೂಡ ಹಾರೈಸೋಣ ಹಾಗೂ ಕನ್ನಡ ಸಿನಿಮಾರಂಗಕ್ಕೆ ಇದೇ ರೀತಿ ಹೊಸ ಪ್ರತಿಭೆಗಳು ಬರಲೆಂದು ಕೇಳಿಕೊಳ್ಳೋಣ ಧನ್ಯವಾದಗಳು.

LEAVE A REPLY

Please enter your comment!
Please enter your name here