ಬೆನ್ನು , ಕಾಲು , ಇನ್ನಿತರ ಯಾವುದೇ ದೇಹದ ನೋವು ಇದ್ರೂ ಮನೆಯಲ್ಲೇ ಈ ಒಂದು ಎಣ್ಣೆ ಮಾಡಿ ಹಚ್ಚಿ ಸಾಕು , ಕೆಲವೇ ಕ್ಷಣದಲ್ಲಿ ನೋವು ಹೋಗುತ್ತೆ..

178

ಮಂಡಿ ಕೈಕಾಲು ನೋವು ಅಥವಾ ಶರೀರದ ಯಾವುದೇ ಭಾಗದಲ್ಲಿ ಒಳಭಾಗದಿಂದ ನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಅದನ್ನ ಬಹುಬೇಗ ನಿವಾರಣೆ ಮಾಡೋದಕ್ಕೆ ಅಪರೂಪವಾದ ಮನೆಮದ್ದಿನ ತಿಳಿಸುತ್ತದೆ ಈ ಮನೆ ಮದ್ದಿಗೆ, ಮನೆಯಲ್ಲಿರುವ ಕೆಲವೇ ಕೆಲವು ಸಾಮಗ್ರಿಗಳು ಸಾಕು ಇದರಿಂದ ಮಂಡಿ ನೋವು ಬಹಳ ಬೇಗ ನಿವಾರಣೆ ಆಗುತ್ತದೆ.

ಹೌದು ಸ್ನೇಹಿತರೆ ಮನೆಮದ್ದು ಮಾಡುವುದರಿಂದ ಅಡ್ಡಪರಿಣಾಮಗಳು ಇರುವುದಿಲ್ಲ ಅದನ್ನು ನಾವು ಮೊದಲು ತಿಳಿದಿರಬೇಕು ಯಾಕೆಂದರೆ ಅಡುಗೆ ಮನೆಯಲ್ಲೇ ದೊರೆಯುವ ಕೆಲವೊಂದು ಪದಾರ್ಥಗಳನ್ನು ಬಳಸಿ ನಾವು ಮನೆಮದ್ದು ಮಾಡಿದಾಗ ಅದರಿಂದ ಹೆಚ್ಚಿನ ಸೈಡ್ ಎಫೆಕ್ಟ್ ಗಳನ್ನು ನಾವು ಕಾಣುವುದಿಲ್ಲ.ಆದರೆ ಕೆಲವೊಂದು ಪೇನ್ಕಿಲ್ಲರ್ ಮಾತ್ರೆಗಳನ್ನು ಎಣ್ಣೆಗಳು ಇವೆಲ್ಲವೂ ಆರೋಗ್ಯದ ಮೇಲೆ ಬಹಳ ಬೇಗ ಪ್ರಭಾವ ಬೀರುತ್ತದೆ ಇನ್ನೂ ಕೆಲವರಿಗೆ ಅದು ನಿಧಾನವಾಗಿ ಎಫೆಕ್ಟ್ ಕೊಟ್ಟರೂ ಮುಂದಿನ ದಿನಗಳಲ್ಲಿ ಬಹಳ ದೊಡ್ಡ ಸಮಸ್ಯೆಯನ್ನೇ ನಾವು ಎದುರಿಸಬೇಕಾಗಿರುತ್ತದೆ

ಹಾಗಾಗಿ ಇವತ್ತಿನ ಲೇಖನಿಯಲ್ಲಿ ನಾವು ಹೇಳಲು ಹೊರಟಿರುವ ಇಂತಹ ಸುಲಭ ಮನೆಮದ್ದನ್ನು ಬಳಸಿ ನಿಮ್ಮ ಮಂಡಿ ನೋವಿನಿಂದ ಶಮನ ಪಡೆದುಕೊಳ್ಳಿ ಕೇವಲ ಮಂಡಿನೋವು ಮಾತ್ರವಲ್ಲಾ, ಕೀಲುನೋವು ಕೈನಲ್ಲಿ ನೋವು ಕಾಲು ನೋವು ಅಥವಾ ಸೊಂಟ ನೋವು ಬೆನ್ನಿನ ಭಾಗದಲ್ಲಿ ನೋವು ಈ ರೀತಿ ಯಾವುದೇ ಭಾಗದಲ್ಲಿ ನೋವು ಕಾಣಿಸಿಕೊಂಡರೂ ಅದನ್ನು ಶಮನ ಮಾಡುವುದಕ್ಕೆ ಈ ಮನೆಮದ್ದು ಬೆಸ್ಟ್ ಆಗಿದೆ.

ಈ ಮನೆಮದ್ದು ಮಾಡುವುದಕ್ಕೆ ನಿಮಗೆ ಬೇಕಾಗಿರುವುದು ಸಾಸಿವೆ ಎಣ್ಣೆ ಅಜ್ವಾನ ಮತ್ತು ಬೆಳ್ಳುಳ್ಳಿ ಈ ಸಾಮಗ್ರಿಗಳು ಸಾಕು ಮಂಡಿನೋವನ್ನು ಪಟ್ ಎಂದು ಶಮನ ಮಾಡುವುದಕ್ಕೆ. ಹಾಗಾದರೆ ಮನೆಮದ್ದು ಕುರಿತು ತಿಳಿಯೋಣ ಬನ್ನಿ ಕೆಳಗಿನ ಲೇಖನಿಯಲ್ಲಿ.

ಮಂಡಿ ನೋವು ಸಾಮಾನ್ಯವಾಗಿ ವಯಸ್ಸಾದ ನಂತರ ಬರುತ್ತೆ ಅದಕ್ಕೆ ಕಾರಣ ಅಂದರೆ ಮೂಳೆ ಸವೆತದಿಂದ ಯಾಕೆಂದರೆ ಮನುಷ್ಯ ಹುಟ್ಟಿದಾಗಿನಿಂದ ಆತ ವಯಸ್ಸಾಗುವವರೆಗೂ ಇಷ್ಟೆಲ್ಲ ಕೆಲಸ ಮಾಡಿರುತ್ತಾನೆ ಅದರಲ್ಲಿಯೂ ಅಂದಿನ ಕಾಲದಲ್ಲಿ ಹಿರಿಯರು ಎಲ್ಲೇ ಹೋಗುವುದಾದರೂ ನಡೆದುಹೋಗುತ್ತಿದ್ದರು ಮತ್ತು ಕೆಲಸ ಕೂಡ ವಿಪರೀತ ಇರುತ್ತಿತ್ತು. ಇದರಿಂದ ಮೂಳೆಗಳು ಸವೆಯುತ್ತಿತ್ತು ಆಗ ಮಂಡಿನೋವು ವಯಸ್ಸಾದ ಮೇಲೆ ಸಾಮಾನ್ಯವಾಗಿರುತ್ತಿತ್ತು.

ಆದರೆ ಇವತ್ತಿನ ದಿನಗಳಲ್ಲಿ ಸರಿಯಾದ ಆಹಾರ ಕ್ರಮವನ್ನು ಪಾಲಿಸದೆ ಮತ್ತು ವಾಯು ಸಮಸ್ಯೆಯಿಂದ ಇನ್ನೂ ಹಲವು ಕಾರಣಗಳಿಂದ ಮಂಡಿ ನೋವು ಕಾಣಿಸಿಕೊಳ್ಳುತ್ತಿದೆ ಇದಕ್ಕೆ ನಾವು ಮನೆಯಲ್ಲಿ ಮಾಡಬಹುದಾದ ಸುಲಭ ಪರಿಹಾರ ಅದು ಮನೆಯಲ್ಲಿಯೇ ಮಾಡುವ ಪೇನ್ ಕಿಲ್ಲರ್ ಎಣ್ಣೆ

ಈ ಎಣ್ಣೆಯಿಂದ ನೋವಿರುವ ಭಾಗಕ್ಕೆ ನಿಧಾನವಾಗಿ ಮಸಾಜ್ ಮಾಡುತ್ತಾ ಬಂದರೆ ನೋವು ಬಹಳ ಬೇಗ ನಿವಾರಣೆ ಆಗುತ್ತದೆ ಮೊದಲಿಗೆ ಸಾಸುವೆ ಎಣ್ಣೆಯನ್ನು ಕಬ್ಬಿಣದ ಬಾಣಲೆಗೆ ಹಾಕಿ ಬಿಸಿ ಮಾಡಿಕೊಳ್ಳಿ.ಹೌದು ಈ ಪರಿಹಾರ ಮಾಡುವುದಕ್ಕೆ ಸಾಧ್ಯವಾದಷ್ಟು ಕಬ್ಬಿಣದ ಬಾಣಲೆ ಯನ್ನೇ ತೆಗೆದುಕೊಳ್ಳಿ, ಬಳಿಕ ಇದಕ್ಕೆ ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ, ಇದಕ್ಕೆ 1 ಚಮಚದಷ್ಟು ಅಧ್ವಾನವನ್ನು ಹಾಕಿ ಎಣ್ಣೆಯನ್ನು ಕುದಿಸಿಕೊಳ್ಳಿ ಇದರೊಳಗಿರುವ ಪದಾರ್ಥಗಳು ಬಣ್ಣ ಬದಲಾಗಬೇಕು ಅಷ್ಟು ಪ್ರಮಾಣದಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಂಡರೆ ಸಾಕು.

ಈಗ ಈ ಎಣ್ಣೆಯನ್ನು ಬಾಣಲೆಯಲ್ಲಿ ತಣಿಯಲು ಬಿಟ್ಟು ಬಳಿಕ ಎಣ್ಣೆಯನ್ನು ಶೋಧಿಸಿಕೊಂಡು ಗ್ಲಾಸ್ ಬಾಕ್ಸ್ ಗೆ ಈ ಎಣ್ಣೆಯನ್ನು ಶೇಖರಣೆ ಮಾಡಿ ಇಟ್ಟುಕೊಳ್ಳಿ ನೋವಾದ ಭಾಗಕ್ಕೆ ಸ್ನಾನಕ್ಕೂ 1ಗಂಟೆಯ ಮುಂಚೆ ಎಣ್ಣೆಯನ್ನು ಹಾಕಿ ಮಸಾಜ್ ಮಾಡಿಕೊಂಡು ಬಳಿಕ ಮಂಡಿ ಅಥವಾ ನೋವಿರುವ ಭಾಗಕ್ಕೆ ಬಿಸಿ ನೀರನ್ನು ಹಾಕಿ ಈ ರೀತಿ ಪ್ರತಿದಿನ ಮಾಡುತ್ತ ಬಂದರೆ ನಾವು ಬೇಗ ಪರಿಹಾರವಾಗುತ್ತೆ.