ಬೆಳಿಗ್ಗೆ ಎದ್ದ ನಂತರ ಕಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ರಸ ಸೇವಿಸಿದರೆ ಏನೆಲ್ಲಾ ದೇಹಕ್ಕೆ ಲಾಭಗಳು ಆಗುತ್ತವೆ ಗೊತ್ತ ..

250

ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ರಸ ಕುಡಿದರೆ ಏನೆಲ್ಲಾ ಆಗಬಹುದು ಗೊತ್ತಾ? ಆರೋಗ್ಯದಲ್ಲಿ ಅದ್ಭುತ ಬದಲಾವಣೆಯನ್ನೆ ಕಾಣ್ತೀರಾ…ನಮಸ್ಥೆ ಪ್ರಿಯ ಸ್ನೇಹಿತರೆ, ನೆಲ್ಲಿಕಾಯಿ ಮಹತ್ವವನ್ನು ತಿಳಿದಿದ್ದೀರ ಅಲ್ವಾ… ಹೌದು ಸಾಮಾನ್ಯವಾಗಿ ಊರುಗಳಲ್ಲಿ ಬೆಳೆದು ಬಿಡುವ ಈ ನೆಲ್ಲಿಕಾಯಿಯ ಬಗ್ಗೆ ಮಾತಾಡ್ತಾ ಇಲ್ಲ ನಾವು ಕಾಡು ನೆಲ್ಲಿಕಾಯಿ ಯ ಬಗ್ಗೆ ಮಾತನಾಡುತ್ತಾ ಇದ್ದೇವೆ. ಇದನ್ನು ಆಮ್ಲಾ ಅಂತ ಕೂಡ ಹೌದು ಕೆಲವರಿಗೆ ನಲ್ಲಿಕಾಯಿ ಅಂದರೆ ಅರ್ಥವಾಗುವುದಿಲ್ಲ ಆಮ್ಲಾ ಅಂತ ಹೇಳಿದರೆ ತಿಳಿಯುತ್ತದೆ, ಈ ಆಮ್ಲದ ಉತ್ತಮ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಿದೆ ಅಲ್ವಾ, ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ ಸಹಕಾರಿಯಾಗಿರುವ ಈ ಆಮ್ಲದಲ್ಲಿ ಅಧಿಕವಾದ ವಿಟಮಿನ್ ಸಿ ಜೀವಸತ್ವವಿದೆ.

ಅಷ್ಟೆ ಅಲ್ಲಾ ಆಮ್ಲದಲ್ಲಿ ದೇಹಕ್ಕೆ ಬೇಕಾಗಿರುವ ಅಧಿಕ ಪೋಷಕಾಂಶಗಳಿದ್ದು ಈ ಆಮ್ಲದಲ್ಲಿರುವ ಸಿಹಿ ಮತ್ತು ಹುಳಿ ಮಿಶ್ರಣ ಆರೋಗ್ಯ ಕ್ಕೆ ಬಹು ಪ್ರಯೋಜನಕಾರಿಯಾಗಿದೆ.ಇವತ್ತಿನ ದಿನಗಳಲ್ಲಿ ಬಹಳಷ್ಟು ಔಷಧಿಗಳಲ್ಲಿ ಮಾತ್ರೆಗಳಲ್ಲಿ ಹಾಗೆ ಕೆಲವೊಂದು ಬ್ಯೂಟಿ ಪ್ರಾಡಕ್ಟ್ ಗಳಲ್ಲಿಯೂ ಕೂಡ ಬಳಕೆ ಆಗುತ್ತಿರುವಂತಹ ಈ ಆಮ್ಲ, ಇದನ್ನು ಬೆಳೆದು ರೈತರು ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಯಾಕೆಂದರೆ ಈ ಮೊದಲೇ ಹೇಳಿದ ಹಾಗೆ ಬಹಳಷ್ಟು ಔಷಧಿ ಕಂಪೆನಿಗಳು ನೆಲ್ಲಿಕಾಯಿಯನ್ನು ಔಷಧಿ ತಯಾರಿಕೆಯಲ್ಲಿ ಬಳಸುತ್ತಿರುವ ಕಾರಣ ಇದರ ವ್ಯವಸಾಯವು ಕೂಡ ಇತ್ತೀಚೆಗೆ ಹೆಚ್ಚಾಗುತ್ತಿದೆ.

ಮಾಹಿತಿಗೆ ಬರುವುದಾದರೆ ಖಾಲಿ ಹೊಟ್ಟೆಯಲ್ಲಿ ಆಮ್ಲದ ರಸವನ್ನು ಕುಡಿಯುವುದರಿಂದ ಅತ್ಯದ್ಭುತವಾದ ಲಾಭಗಳಿವೆ ಅದರಲ್ಲಿಯೂ ಬಹುತೇಕವಾಗಿ ಸಕ್ಕರೆ ಕಾಯಿಲೆಯಿಂದ ಬಳಲುವವರು ಸ್ವಲ್ಪವೇ ಸ್ವಲ್ಪ ಈ ಆಗದ ರಸವನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾ ಬಂದರೆ ಅತ್ಯದ್ಭುತವಾದ ಲಾಭಗಳನ್ನು ಮತ್ತು ಆರೋಗ್ಯಕರವಾಗಿ ಇರಬೇಕೆಂದರೆ ನೆಲ್ಲಿ ಕಾಯಿಯನ್ನು ತಂದು ಅಂದರೆ ಕಾಡಿನಲ್ಲಿ ಕಾಯಿಯನ್ನು ತಂದು ಮನೆಯಲ್ಲಿಯೇ ಇದರ ಜ್ಯೂಸ್ ಮಾಡಿ ಸೇವಿಸಿ ಇದರ ಜ್ಯೂಸ್ ಮಾಡುವಾಗ ಅದರೊಳಗಿರುವ ಬೀಜವನ್ನ ಬಿಸಾಡುವುದರ ಬದಲು ಬೀಜ ಸಮೇತವಾಗಿ ರಸವನ್ನು ತಯಾರಿಸಿ ಅಥವಾ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಬಹಳ ಆರೋಗ್ಯಕ್ಕೆ ಲಾಭವಿದೆ.

ಇತ್ತೀಚೆಗೆ ಆಮ್ಲದಿಂದ ಮಾಡಿರುವ ಕೆಲವೊಂದು ಚಾಕ್ಲೆಟ್ ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ ಅದು ಕೂಡ ಆರೋಗ್ಯಕ್ಕೆ ಉತ್ತಮವಾಗಿದೆ ಹಾಗೆ ಈ ಆಮ್ಲ ದೊರೆತಾಗ ಅದನ್ನು ಬಿಸಿಲಿನಲ್ಲಿ ಒಣಗಿಸಿ ಕೂಡ ಶೇಖರಣೆ ಮಾಡಿಟ್ಟುಕೊಳ್ಳಲು ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ತಿನ್ನುತ್ತಾ ಬಂದರೆ ಕೂದಲಿನ ಆರೋಗ್ಯ ಕೂಡ ಹೆಚ್ಚುತ್ತದೆ.ಖಾಲಿ ಹೊಟ್ಟೆಗೆ ಆಮ್ಲದ ರಸ ಕೂಡಿದಾಗ ನಮ್ಮ ದೇಹದಲ್ಲಿ ಇರುವ ಕಲ್ಮಶವನ್ನು ಹೊರಹಾಕಲು ಸಹಕಾರಿ ಆಗಿರುತ್ತದೆ ಮಲಬದ್ಧತೆ ಮೂಲವ್ಯಾಧಿ ಸಮಸ್ಯೆಯಿಂದ ಇದು ಆರೋಗ್ಯವನ್ನು ಕಾಪಾಡುತ್ತದೆ. ಹೌದು ಯಾರಿಗೆ ಮಲಬದ್ಧತೆ ಸಮಸ್ಯೆ ಇರುತ್ತದೆ ಅಂಥವರು ಖಾಲಿ ಹೊಟ್ಟೆಗೆ ಆಮ್ಲದ ರಸವನ್ನು ಕುಡಿಯಿರಿ ಎಂತಹ ಅದ್ಭುತವಾದ ಆರೋಗ್ಯಕರ ಬದಲಾವಣೆಯನ್ನು ನೋಡಿ.

ರಕ್ತ ಕೆಟ್ಟಿದ್ದರೆ ಅಥವಾ ರಕ್ತವೃದ್ಧಿ ಆಗಬೇಕು ಅಂದರೂ ಆಮ್ಲದ ಪ್ರಯೋಜನ ಪಡೆದುಕೊಳ್ಳಿ ಇದು ರಕ್ತವನ್ನು ಪ್ಯೂರಿಫೈ ಮಾಡುತ್ತದೆ. ಹೌದು ರಕ್ತ ಕೆಟ್ಟಿದ್ದರೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ ಅಥವಾ ಚರ್ಮದ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಅಂತಹವರು ಆಮ್ಲದ ಪ್ರಯೋಜನವನ್ನು ಪಡೆದುಕೊಂಡರೆ ಅತ್ಯದ್ಭುತ ಲಾಭವನ್ನು ಪಡೆದುಕೊಳ್ಳಬಹುದು.

ನೀವೇನಾದರೂ ಖಾಲಿ ಹೊಟ್ಟೆಗೆ ಆಮ್ಲ ಜ್ಯೂಸ್ ಕುಡಿಯುತ್ತಾ ಬಂದರೆ ನಿಮ್ಮ ಚರ್ಮದಲ್ಲಿ ಕಾಂತಿ ಹೆಚ್ಚುತ್ತದೆ ಹಾಗೆ ಮೊಡವೆ ಸಮಸ್ಯೆ ಮೊಡವೆ ಕಲೆ ಸಮಸ್ಯೆ ಕೂಡ ಬೇಗನೆ ನಿವಾರಣೆಯಾಗುತ್ತದೆ, ಆಮ್ಲದ ರಸದ ಜತೆಗೆ ಜೇನುತುಪ್ಪ ಮಿಶ್ರಣ ಮಾಡಿ ಕುಡಿಯುತ್ತ ಬಂದರೆ ಕಣ್ಣಿನ ದೃಷ್ಟಿ ವೃದ್ಧಿಸುತ್ತದೆ, ಹೃದಯದ ಆರೋಗ್ಯವೂ ಉತ್ತಮವಾಗಿರುತ್ತದೆ. ಒಟ್ಟಾರೆಯಾಗಿ ನಿಮ್ಮ ಶರೀರದ ಒಟ್ಟು ಆರೋಗ್ಯಕ್ಕಾಗಿ ಖಾಲಿ ಹೊಟ್ಟೆಗೆ ಆಮ್ಲದ ಜ್ಯೂಸ್ ಸೇವಿಸಿದರೆ ಉತ್ತಮವಾಗಿರುತ್ತದೆ ಆದರೆ ನಿಯಮಿತವಾಗಿರಲಿ ಅಷ್ಟೆ…