ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಕೇವಲ ಮೂರು ದಿನ ಇದನ್ನ ತಿಂದು ನೋಡಿ ಮೂಲವ್ಯಾದಿ ಮೂಲೆಗೆ ಸೇರಿಕೊಳ್ಳುತ್ತೆ…

298

ಇಂದಿನ ಜನರ ಆಹಾರ ಪದ್ಧತಿಯಿಂದಾಗಿ ಇಂತಹ ದೊಡ್ಡ ಸಮಸ್ಯೆಗಳು ಎದುರಾಗುತ್ತಿದೆ ಅಂದರೆ ಅದು ಮಲಬದ್ಧತೆ ಮೂಲವ್ಯಾಧಿ ಬಳಿಕ ವಿಪರೀತ ನೋವು ನೀಡುವುದು ಜೀರ್ಣಕ್ರಿಯೆಯ ಮೇಲೆ ಪ್ರಭಾವ ಬೀರುವುದು ಕೊನೆಗೆ ಕರುಳಿನ ಆರೋಗ್ಯ ಕೆಡುವುದು ಹೀಗೆಲ್ಲ ಆಗುತ್ತದೆ.ಕೇವಲ ಆಹಾರ ಪದ್ದತಿ ಸರಿಯಿಲ್ಲವಾದರೆ ಇಷ್ಟು ಸಮಸ್ಯೆ ಎದುರಾಗುತ್ತದೆ ನಮ್ಮ ದೇಹದ ಸಂಪೂರ್ಣ ಆರೋಗ್ಯವೇ ಕೆಟ್ಟು ನಾವು ನೋವಿನಿಂದ ಅನಾರೋಗ್ಯದಿಂದ ಬಳಲಬೇಕಾಗುತ್ತದೆ.

ನಮ್ಮ ಇಡೀ ಜೀವನಾನ ಆರೋಗ್ಯಕರವಾಗಿ ಇರಬೇಕೆಂದರೆ ಮಾಡಬೇಕಿರುವುದು ಇಷ್ಟೆ ಸರಿಯಾದ ಸಮಯಕ್ಕೆ ಊಟ ಮತ್ತು ಸರಿಯಾದ ಪೋಷಕಾಂಶಗಳು ಇರುವ ಆಹಾರ ಪದಾರ್ಥ ಸೇವನೆ ಹಾಗಾಗಿ ಇಂದು ನಾವು ಮಾಡಬೇಕಿರುವುದು ಆಹಾರ ಪದಾರ್ಥದಲ್ಲಿ ಕೆಲವು ಬದಲಾವಣೆ ಕರಿದ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುವುದರ ಬದಲು ಬೇಯಿಸಿದ ಆಹಾರಗಳನ್ನು ತಿನ್ನುವುದು ಮತ್ತು ಹಸಿ ತರಕಾರಿಗಳನ್ನು ತಿನ್ನುವುದು ಹಣ್ಣುಗಳನ್ನು ತಿನ್ನುವುದು ಮೈದಾ ಸೇವನೆ ಕಡಿಮೆ ಮಾಡುವುದು ಇಷ್ಟೇ ಮಾಡಬೇಕಿರುವುದು.

ಹಾಗಾಗಿ ನಿಮ್ಮ ಆರೋಗ್ಯ ಪದ್ದತಿ ಹಾಳಾಗುತ್ತಿದೆ ಅಂದರೆ ಅನಾರೋಗ್ಯದಿಂದ ನೀವು ಬಳಲುತ್ತಿದ್ದೀರಾ ಅಂದರೆ ಇಷ್ಟೆ ಮಾಡಿ ಸಾಕು ನಿಮ್ಮ ಆಹಾರ ಪದ್ಧತಿಯಲ್ಲಿ ಕೆಲವೊಂದು ಆಹಾರಗಳನ್ನು ಇಂದೇ ಬಿಟ್ಟುಬಿಡಿ ಹೆಚ್ಚು ಹಸಿರು ಮೆಣಸಿನಕಾಯಿ ತಿನ್ನುವುದು ಮತ್ತು ಆರೋಗ್ಯಕ್ಕೆ ಆಗದಿರುವ ತಿಂಡಿ ತಿನಿಸನ್ನು ಸೇವಿಸಿವುದು ತ್ಯಜಿಸಿ.

ಇಂದು ನಾವು ಮಾತನಾಡಲು ಹೊರಟಿರುವುದು ಮಲಬದ್ಧತೆಯಿಂದ ಉಂಟಾಗುವ ಮೂಲವ್ಯಾಧಿ ಎಂಬ ಸಮಸ್ಯೆಗೆ ಪರಿಹಾರ ತುಂಬಾ ಸುಲಭ ಇದು ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ದೊರೆಯುವ ಕೆಲವೊಂದು ಪದಾರ್ಥದಿಂದ ನೀವು ಪರಿಹಾರ ಮಾಡಿಕೊಂಡು ಬಂದದ್ದೇ ಆದಲ್ಲಿ ಮೂಲವ್ಯಾಧಿ ಇದೆಲ್ಲ ಯಾವಲೆಕ್ಕ ನಿಮ್ಮ ಆರೋಗ್ಯ ಇದೆಲ್ಲವನ್ನು ಮೀರಿ ಉತ್ತಮವಾಗಿ ಇರುತ್ತದೆ.

ಈ ಮೂಲವ್ಯಾಧಿ ಸಮಸ್ಯೆ ಬಂದಾಗ ಕೂರಲು ಆಗುವುದಿಲ್ಲ ಮತ್ತು ಸರಿಯಾದ ಸಮಯಕ್ಕೆ ಊಟ ಮಾಡಲು ಆಗೋದಿಲ್ಲ ಊಟ ಬಿಡಬೇಕು ಅನಿಸುತ್ತೆ ಯಾಕೆಂದರೆ ಅದರ ನೋವು ಅಷ್ಟು ಇರುತ್ತದೆ ಆದರೆ ಮಂಗರವಳ್ಳಿ ಬಳಿಯಿಂದ ನಿಮ್ಮ ಈ ವಿಪರೀತ ನೋವು ನೀಡುವ ತೊಂದರೆಗೆ ಪರಿಹಾರ ದೊರೆಯುತ್ತದೆ.

ತುಂಬ ಸುಲಭ ಪ್ರತಿ ಬಾರಿ ಊಟ ಮಾಡಿದಾಗ ಲೋಟ ಮಜ್ಜಿಗೆ ಕುಡಿಯಿರಿ ಮತ್ತು ಮಜ್ಜಿಗೆ ಕುಡಿಯುವಾಗ ಮಂಗರವಳ್ಳಿ ಬಳ್ಳಿಯ ಬುಡದ ಚಕ್ಕೆಯನ್ನು ಸಣ್ಣದಾಗಿ ತುಂಡು ಮಾಡಿ ಮಜ್ಜಿಗೆಯೊಳಗೆ ನೆನೆಸಿಟ್ಟು ಬಳಿಕ ಅದನ್ನು ಶೋಧಿಸಿ ಮಜ್ಜಿಗೆಯನ್ನು ಕುಡಿಯುತ್ತಾ ಬನ್ನಿ ಸಾಕು.

ಹೌದು ಮಂಗರವಳ್ಳಿ ಬಳ್ಳಿ ಅಥವಾ ಇದನ್ನು ಗುಂಗುರಬಳ್ಳಿ ಅಂತ ಕೂಡ ಕರಿತಾರೆ ಸಂದು ಬಳ್ಳಿಯಂಥ ಕೂಡ ಕರೆಯುತ್ತಾರೆ.ನೀವು ಕೇಳಿರಬಹುದು ಪೈಲ್ಸ್ ಗೆ ಹಳ್ಳಿ ಕಡೆ ಔಷಧಿ ಕೊಡುತ್ತಾರೆ ಅಂತ ಆದರೆ ಎಲ್ಲಾ ಹಳ್ಳಿಗಳಲ್ಲಿಯೂ ಕೂಡ ಒಂದೇ ತರದ ಔಷಧಿ ಕೊಡುವುದಿಲ್ಲ ಅಲ್ಲಿ ದೊರೆಯುವ ಪದಾರ್ಥಗಳು ಮತ್ತು ಗಿಡಮೂಲಿಕೆಯ ಸಹಾಯದಿಂದ ಔಷಧಿ ಕೊಡುತ್ತಾರೆ.

ಈ ಗುಂಗುರಬಳ್ಳಿಯು ಎಲ್ಲಿ ದೊರೆಯುತ್ತದೆ ಅಂತಹ ಕಡೆ ಮೂಲವ್ಯಾಧಿಗೆ ಇದನ್ನೇ ಔಷಧಿಯಾಗಿ ಕೊಡುವುದು ಈ ಗುಂಗುರಬಳ್ಳಿಯ ಬೇರನ್ನು ತಂದು ಅಥವಾ ಅದರ ಎಲೆಗಳನ್ನು ಕೂಡ ಬಳಸಬಹುದು ಬಳ್ಳಿಯ ಮೇಲಿನ ಸಿಪ್ಪೆಯನ್ನು ಸಣ್ಣದಾಗಿ ಚಾಕುವಿನಿಂದ ಎರೆಯಬೇಕು.

ಈಗ ಆ ಬಳ್ಳಿಯ ಒಳಭಾಗವನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಮಜ್ಜಿಗೆಯೊಳಗೆ ನೆನೆಸಿ ಅದನ್ನು ಶೋಧಿಸಿ ಪ್ರತಿದಿನ ಕುಡಿಯುತ್ತ ಬರಬೇಕು ಇದರಿಂದ ಮೂಲವ್ಯಾಧಿ ಎಂಬ ಸಮಸ್ಯೆ ಬಹಳ ಬೇಗ ಕಡಿಮೆಯಾಗುತ್ತದೆ.ನಿಮ್ಮ ಆಹಾರ ಪದ್ಧತಿಯಲ್ಲಿ ಹೆಚ್ಚು ನಾರಿನಂಶ ಇರುವಂತಹ ಪದಾರ್ಥಗಳಿರುವ ಹಾಗೆ ನೋಡಿಕೊಳ್ಳಿ ಅದು ಸೊಪ್ಪು ತರಕಾರಿ ಹಣ್ಣು ಯಾವುದೇ ಆಗಿರಲಿ ಹೆಚ್ಚಿನ ನಾರಿನಂಶ ಇರುವ ಆಹಾರ ಪದಾರ್ಥ ತಿಂದರೆ ಆರೋಗ್ಯವೂ ಚೆನ್ನಾಗಿರುತ್ತೆ ಮತ್ತು ಫೈಲ್ಸ್ ಸಮಸ್ಯೆಯೂ ನಿವಾರಿಸುತ್ತೆ.

WhatsApp Channel Join Now
Telegram Channel Join Now