‘ಭಾರತರತ್ನ’ ಪ್ರಶಸ್ತಿ ನಮ್ಮ ಅಪ್ಪನ ಕಾಲಿನ ಉಗುರಿಗೆ ಸಮಾನ ಅಂದ ಖ್ಯಾತ ನಟ ಯಾರು ಗೊತ್ತ ..

35

ನಮ್ಮ ಭಾರತ ದೇಶದ ಚಿತ್ರರಂಗದ ಕಲಾವಿದರುಗಳ ಅನ್ನು ಗೌರವಿಸುವುದಕ್ಕಾಗಿ ಹಲವು ಪ್ರಶಸ್ತಿ ಗಳನ್ನು ನೀಡಲಾಗುತ್ತದೆ ಇನ್ನು ಇಂತಹ ಪ್ರಶಸ್ತಿಗಳಲ್ಲಿ ಅಗ್ರಸ್ಥಾನದಲ್ಲಿ ಇರುವಂತಹ ಆಸ್ಕರ್ ಪ್ರಶಸ್ತಿ ಭಾರತ ರತ್ನ ಪ್ರಶಸ್ತಿ ಅತ್ಯಂತ ಅಮೂಲ್ಯವಾದದ್ದು ಹಾಗೂ ಬಹಳ ಗೌರವಾನ್ವಿತರಿಗೆ ಮತ್ತು ಅದ್ಭುತ ಪ್ರತಿಭೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಏನು ಭಾರತ ದೇಶದಲ್ಲಿ ಆಸ್ಕರ್ ಪ್ರಶಸ್ತಿ ಅನ್ನೂ ಪಡೆದುಕೊಂಡಿರುವ ಸುಪ್ರಸಿದ್ಧ ಸಂಗೀತ ನಿರ್ದೇಶಕರಾಗಿರುವ ಎ ಆರ್ ರೆಹಮಾನ್ ಅವರು ಭಾರತ ಚಿತ್ರರಂಗದ ಹೆಮ್ಮೆಯ ಸಂಗೀತ ನಿರ್ದೇಶಕರಾಗಿದ್ದಾರೆ ಅಂತ ಹೇಳಬಹುದು.

ಆದರೆ ಇದೀಗ ಆಸ್ಕರ್ ಪ್ರಶಸ್ತಿ ಕುರಿತು ಮತ್ತು ಆಸ್ಕರ್ ಪ್ರಶಸ್ತಿ ವಿಜೇತರಾಗಿರುವ ಎ ಆರ್ ರೆಹಮಾನ್ ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಇದೀಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮಾತಿಗೆ ತುತ್ತಾಗಿರುವ ಈ ಖ್ಯಾತ ನಟ ಯಾರು ಗೊತ್ತಾ ಹೌದು ಈ ವಿಚಾರ ಕುರಿತು ಇನ್ನಷ್ಟು ಮಾಹಿತಿ ನೀಡುತ್ತವೆ ಈ ಸಂಪೂರ್ಣ ಲೇಖನವನ್ನ ತಿಳಿಯಿರಿ. ತೆಲುಗಿನ ಖಾಸಗಿ ವಾಹಿನಿಯೊಂದರಲ್ಲಿ ತೆಲುಗು ಚಿತ್ರರಂಗದ ಖ್ಯಾತ ನಟರಾಗಿರುವ ನಟ ಬಾಲಕೃಷ್ಣ ಅವರು ನನಗೆ ಎ ಆರ್ ರೆಹಮಾನ್ ಅವರು ಯಾರೆಂದು ಗೊತ್ತೇ ಇಲ್ಲಾ,

ಎಂದು ವ್ಯಂಗ್ಯವಾಗಿ ನುಡಿಯುವ ಮೂಲಕ ಈ ಸಂದರ್ಶನದಲ್ಲಿ ಎ ಆರ್ ರೆಹಮಾನ್ ಅವರು ಯಾರೆಂದು ಗೊತ್ತೇ ಇಲ್ಲ ಎಂದು ಹೇಳಿಕೊಂಡಿದ್ದಾರೆ ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಭಾರೀ ವೈರಲ್ ಆಗಿದ್ದು ಈ ವೀಡಿಯೋ ನೋಡಿ ಹಲವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಹೌದು ಸಂದರ್ಶನದ ವೇಳೆ ನಟ ಬಾಲಕೃಷ್ಣ ಅವರಿಗೆ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ಬಗ್ಗೆ ಕೇಳಿದಾಗ, ನನಗೆ ಅವರು ಯಾರು ಅಂತಾನೇ ಗೊತ್ತಿಲ್ಲಾ ನಾನು ಅವರನ್ನ ನೋಡಿಯೇ ಇಲ್ಲಾ ಅವರಿಗೆ ಆಸ್ಕರ್ ಪ್ರಶಸ್ತಿ ಬಂದಿದೆ ಎಂಬುದನ್ನ ಕೇಳಿದ್ದೇನೆ ಅಷ್ಟೇ.

ಯಾವಾಗಲೋ ಒಮ್ಮೊಮ್ಮೆ ಮ್ಯೂಸಿಕ್ ಮಾಡಿ ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ಇವರ ಬಗ್ಗೆ ನನಗೆ ಹೇಗೆ ತಿಳಿದಿರಬೇಕು ಹೇಳಿ ಎಂದು ವ್ಯಂಗ್ಯ ಮಾಡಿ ಮಾತನಾಡಿರುವ ಇವರು ಭಾರತ ದೇಶದ ಬಹಳ ಗೌರವಾನ್ವಿತ ಪ್ರಶಸ್ತಿಯಾಗಿರುವ ಹಾಗೂ ದೊಡ್ಡ ದೊಡ್ಡ ಪ್ರತಿಭೆಗಳಿಗೆ ನೀಡುವಂತಹ ಭಾರತರತ್ನ ಪ್ರಶಸ್ತಿ ಕುರಿತು ಸಹ ವಿವದಾತ್ಮಕ ಹೇಳಿಕೆಯನ್ನು ನೀಡಿ ಇವರ ಅಭಿಮಾನಿಗಳಿಗೆ ಅಸಮಾಧಾನವನ್ನು ಉಂಟು ಮಾಡಿದ್ದಾರೆ ನಟ ಬಾಲಕೃಷ್ಣ ಅವರು. ಇನ್ನೂ ವಿಪರ್ಯಾಸ ಏನು ಅಂದರೆ ನಟ ಬಾಲಕೃಷ್ಣ ಅವರೇ ಅಭಿನಯ ಮಾಡಿರುವಂತಹ ನಿಪ್ಪು ರವ್ವಾ ಸಿನೆಮಾದಲ್ಲಿ ಮೂರೂ ಜನ ಸಂಗೀತ ನಿರ್ದೇಶಕರು ಇದ್ದಾರೆ ಅವರಲ್ಲಿ ಒಬ್ಬರು ಎ ಆರ್ ರೆಹಮಾನ್ ಅವರು ಸಹ ಇದ್ದಾರೆ. ಪ್ರಸ್ತುತ ಎ.ಆರ್‌.ರೆಹಮಾನ್ ಅವರು ತೆಲುಗು ತಮಿಳು ಹಿಂದಿ ಮಲೆಯಾಳಂ ಸೇರಿದಂತೆ ಭಾರತ ಚಲನಚಿತ್ರರಂಗದ ಹಲವು ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ ಅಷ್ಟೇ ಅಲ್ಲ ನಮ್ಮ ಸ್ಯಾಂಡಲ್ ವುಡ್ ನಲ್ಲಿಯೂ ಕೂಡ ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿರುವ ಗಾಡ್ ಫಾದರ್ ಚಿತ್ರಕ್ಕೂ ಸಹ ಸಂಗೀತ ನಿರ್ದೇಶನ ಮಾಡಿದ್ದಾರೆ ಎ ಆರ್ ರೆಹಮಾನ್ ಅವರು.

ಭಾರತ ಚಿತ್ರರಂಗದ ಇಂತಹ ಒಬ್ಬ ಸಂಗೀತ ನಿರ್ದೇಶಕ ದಿಗ್ಗಜರು ಬಗ್ಗೆ ವ್ಯಂಗ್ಯವಾಗಿ ಹೇಳಿಕೆ ನೀಡಿರುವ ಬಾಲಕೃಷ್ಣ ಅವರು ತಮ್ಮ ವರ್ಚಸ್ಸಿಗೆ ಕುಂದು ಬರುವ ಹಾಗೆ ಹೇಳಿಕೆ ನೀಡಿದ್ದು ಇದು ಹಲವು ಜನರಿಗೆ ಅಸಮಾಧಾನ ವ್ಯಕ್ತಪಡಿಸಿದ್ದರೆ ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿರುವ ಈ ವೀಡಿಯೊ ಈ ವಿಡಿಯೋ ಕುರಿತು ಹಲವು ಜನರು ಹಾಗೂ ನೆಟ್ಟಿಗರು ಆಕ್ರೋಶ ವನ್ನೂ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ನಟ ಬಾಲಕೃಷ್ಣ ಅವರು ‘ಭಾರತರತ್ನ ಪ್ರಶಸ್ತಿ’ ನಮ್ಮ ತಂದ ಎನ್ ಟಿ ಆರ್ ಅವರ ಕಾಲು ಬೆರಳಿನ ಉಗರಿಗೆ ಸಮಾನ ಎಂದಿದ್ದಾರೆ. ಯಾವ ಪ್ರಶಸ್ತಿಗಳು ಕೂಡ ಸಹಾ ತೆಲಗು ಚಿತ್ರರಂಗಕ್ಕೆ ನಮ್ಮ ಕುಟುಂಬದ ಕೊಡುಗೆ ಅನ್ನು ಮೀರಿಸಲಾರದು ಎಂದಲ್ಲ ಮಾತನಾಡಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ ಹಾಗಾದರೆ ನಟ ಬಾಲಕೃಷ್ಣ ಅವರು ನೀಡಿರುವ ಈ ಹೇಳಿಕೆ ತಪ್ಪೋ ಸರಿಯೋ ತಪ್ಪದೇ ಕಾಮೆಂಟ್ ಮಾಡಿ.

LEAVE A REPLY

Please enter your comment!
Please enter your name here