ಮದುವೆಯಾಗದೆ ತಾಯಿ ಆಗಬೇಕು ಅಂತ ಅಂದುಕೊಂಡ ದೊಡ್ಡ ನಟಿ ಇವರೇ ನೋಡಿ ..

327

ತಾಯ್ತನ ಎಂಬುದು ಹೆಣ್ಣಿಗೆ ಆ ಪ್ರಕೃತಿ ಹೆಣ್ಣಿಗೆ ನೀಡಿರುವ ವರ, ಹೆಣ್ಣೆಗೆ ಇದು ಅವರ್ಣನೀಯ ಅನುಭವ. ಅದನ್ನು ಮಾತಿನಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ ಹೌದು ಇದನ್ನು ಅನುಭವಿಸಿಯೆ ತಿಳಿಯಬೇಕು, ಹೌದು ಮಗುವಿಗೆ ಜನ್ಮ ನೀಡಿ ಅದನ್ನು ಬೆಳೆಸುವ ಪ್ರಕ್ರಿಯೆ ಕುತೂಹಲ ಖುಷಿಯ ವಿಚಾರವಾದರೂ, ಅದರಲ್ಲಿ ಕೂಡ ಹಲವು ಸಮಸ್ಯೆಗಳು ಅಡಕವಾಗಿರುತ್ತದೆ. ಮಗುವಿನ ಮೇಲೆ ಎಲ್ಲಾ ಸಮಯವನ್ನು ವ್ಯಯಿಸಿ ತಮ್ಮ ಆರೋಗ್ಯವನ್ನು ಕಡೆಗಣಿಸುವ ತಾಯಂದಿರು,

ಒಂದು ಕಡೆಯಾದರೆ ನೈಸರ್ಗಿಕವಾಗಿ ಕೆಲವು ತೊಂದರೆಗಳು ಈ ಸಂದರ್ಭದಲ್ಲಿ ಕಾಡುತ್ತದೆ. ಆದರೆ ಇದೀಗ ದಕ್ಷಿಣ ಭಾರತದ ಟಾಪ್ ನಟಿಯೊಬ್ಬರು ಮದುವೆಯಾಗದೇನೆ ತಾಯ್ತನದ ಅನುಭವ ಅನುಭವಿಸುವ ಆಸೆ ಅನ್ನು ಹೊಂದಿದ್ದಾರಂತೆ. ಹೌದು ದಕ್ಷಿಣ ಭಾರತದ ಜನಪ್ರಿಯ ನಟಿಯೊಬ್ಬರು ಇಂತಹ ಹೇಳಿಕೆಯನ್ನು ನೀಡಿದ್ದು ಇವರು ನೀಡಿರುವ ಹೇಳಿಕೆ ಸುಮಾರು ವರುಷಗಳ ಹಿಂದೆಯೇ ಆಗಿದ್ದರು ಇದೀಗ ಈ ವಿಚಾರ ಇನ್ನೂ ಕೂಡಾ ಭಾರೀ ವೈರಲ್ ಆಗಿದೆ.

ಹೌದು ಸದ್ಯ ಇಂದಿನ ಸಿನಿಮಾ ನಟಿಯರು ತಮ್ಮ ನಿಜ ಜೀವನದಲ್ಲಿ ಯಾವ ರೀತಿಯ ಆದರ್ಶ ಬದುಕನ್ನು ಬದುಕಿ ತಮ್ಮ ಅಭಿಮಾನಿಗಳಿಗೆ ಉದಾಹರಣೆ ಆಗುವುದಿಲ್ಲ ಎಂದು ಹೇಳಬಹುದು ಪಾಶ್ಚಾತ್ಯರ ಮೊರೆ ಹೋಗಿರುವ ಹಲವು ನಟ ನಟಿಯರು ತಮ್ಮ ಜೀವನದಲ್ಲಿ ತಮಗೆ ಹೇಗೆ ಬೇಕೋ ಹಾಗೆ ಜೀವನ ನಡೆಸುತ್ತಿದ್ದಾರೆ ಆದರೆ ಹಿಂದಿನ ಕಾಲದಲ್ಲಿ ಹಾಗಿರಲಿಲ್ಲ ಸಮಾಜಕ್ಕೆ ಮಾದರಿಯಾಗುವಂತೆ ನಟನಟಿಯರು ಅಂದು ಜೀವಿಸುತ್ತಿದ್ದರು. ಹೌದು ಈ ರೀತಿಯಾ ಬದುಕಿನ ಬದಲು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದು ಕೆಲವೊಂದು ವಿವಾದಾತ್ಮಕ ಹೇಳಿಕೆಗಳ ಮೂಲಕ ಸದಾ ಮಾದ್ಯಮ ಲೋಕದಲ್ಲಿ ಸದ್ದು ಮಾಡುತ್ತಿರುತ್ತಾರೆ ಇತ್ತೀಚಿನ ಖ್ಯಾತ ನಟಿಯರು. ಇದೀಗ ಅದೇ ರೀತಿ ದಕ್ಷಿಣ ಭಾರತ ಚಿತ್ರರಂಗದ ಟಾಪ್ ನಟಿ ಒಬ್ಬರು ತನ್ನ ತಂದೆ ತಾಯಿಯಂತೆ ಮದುವೆಗೂ ಮುನ್ನವೇ ಮಗು ಹೆರುವ ಆಸಕ್ತಿ ಹಾಗೂ ಆಸೆ ಇದೆ ಎಂದು ಹೇಳಿಕೆ ನೀಡುವ ಮೂಲಕ ಎಲ್ಲರೂ ತಮ್ಮ ಕಡೆಗೆ ತಿರುಗಿ ನೋಡುವಂತೆ ಮಾಡಿಕೊಂಡಿದ್ದಾರೆ. ಹೌದು ಅಷ್ಟಕ್ಕೂ ಯಾರು ಆ ಟಾಪ್ ನಟಿ ಹಾಗೂ ಈ ರೀತಿ ಹೇಳಿಕೆ ಕೊಡಲು ಕಾರಣವೇನು ಗೊತ್ತಾ ಮುಂದೇ ಓದಿ.

ಭಾರತ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಈ ನಟ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಕಲ ಕಲಾ ವಲ್ಲಭ ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ ಹೌದು ಇಂತಹ ಅತ್ಯದ್ಭುತ ನಟ ನಮ್ಮ ಸ್ಯಾಂಡಲ್ ವುಡ್ ನಲ್ಲಿಯೂ ಕೂಡ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರ ಹೌದು ಅವರೇ ಕಮಲ್ ಹಾಸನ್ ರವರು. ನಟ ಕಮಲಹಾಸನ್ ಅವರು ಸಾರಿಕಾ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಆಶ್ಚರ್ಯ ಮೂಡಿಸುವ ವಿಚಾರ ಏನು ಅಂದರೆ ಈ ದಂಪತಿಗಳು ಮದುವೆ ಆಗುವ ಮುನ್ನವೇ ಮಗು ಮಾಡಿಕೊಂಡಿದ್ದರು. ಈ ಮಗು ಬೇರೆ ಯಾರು ಅಲ್ಲ. ಇದೀಗ ಈ ಮಗು ದಕ್ಷಿಣ ಭಾರತ ಚಿತ್ರರಂಗದಲ್ಲಿ ಖ್ಯಾತ ನಟಿಯಾಗಿ ಬೆಳೆದು ನಿಂತಿದ್ದು ಬಹು ಬೇಡಿಕೆಯ ನಟಿಯಾಗಿದ್ದಾರೆ.

ಹೌದು ಅವರು ಬೇರೆ ಯಾರು ಅಲ್ಲಾ ನಟಿ ಶ್ರುತಿ ಹಾಸನ್ ರವರು. ಹೀಗೆ ಒಂದು ಸಂದರ್ಶನದಲ್ಲಿ ತಮ್ಮ ತಂದೆ ತಾಯಿ ಕುರಿತು ಶ್ರುತಿ ಹಾಸನ್ ಅವರು ಮಾತನಾಡುವಾಗ ನನ್ನ ತಂದೆ ಹಾಗೂ ತಾಯಿ ಅದು ಬಹಳ ಅದ್ಭುತವಾದ ಜೋಡಿ ಆಗಿತ್ತು ಇದೀಗ ನಮ್ಮ ತಂದೆ ತಾಯಿ ಇಬ್ಬರೂ ದೂರವಾಗಿದ್ದಾರೆ ಆದರೆ ನಾವು ಒಟ್ಟಿಗೆ ಇದ್ದಾಗ ಒಳ್ಳೆಯ ಸಮಯವನ್ನು ಕಳೆಯುತ್ತಿದ್ದೆವು ಎಂದು ಶ್ರುತಿ ಹಾಸನ್ ಅವರು ಹೇಳಿಕೊಂಡಿದ್ದಾರೆ ಅಷ್ಟೆಲ್ಲ ತಮ್ಮ ಹಳೆಯ ನೆನಪುಗಳ ಬಗ್ಗೆ ನೆನಪು ಮಾಡಿಕೊಳ್ಳುತ್ತಾ ಸಾಕಷ್ಟು ವಿಚಾರಗಳ ಬಗ್ಗೆ ಹಂಚಿಕೊಂಡಿದ್ದಾರೆ. ನಾನು ಕೂಡ ನಮ್ಮ ತಂದೆ ತಾಯಿಯಂತೆ ಮದುವೆಗೂ ಮುನ್ನ ಮಗು ಹೆರುವ ಆಲೋಚನೆ, ಆಸಕ್ತಿ ಇದೆ ಎಂದು ಹೇಳಿರುವ ನಟಿ ಶ್ರುತಿ ಹಾಸನ್ ಅವರು ಅದರಲ್ಲಿ ಏನಿದೆ ತಪ್ಪು ಎಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಭಾರಿ ಸದ್ದು ಮಾಡಿದ್ದರು. ಈ ರೀತಿ ಹೇಳಿಕೆ ನೀಡಿರುವ ನಟಿ ಶ್ರುತಿ ಹಾಸನ್ ಅವರು ಸಾಮಾಜಿಕ ಜಾಲತಾಣದಲ್ಲಿ ಇವತ್ತಿಗೂ ಭಾರೀ ವೈರಲ್ ಆಗಿದ್ದಾರೆ.

LEAVE A REPLY

Please enter your comment!
Please enter your name here