ಮಲಬದ್ಧತೆ , ಎದೆ ಹಾಲು ಹೆಚ್ಚಿಸಲು , ದೇಹದ ಉಷ್ಣತೆ ಕಡಿಮೆ ಮಾಡಲು ಈ ಮನೆಮದ್ದು ಮಾಡಿ ಅಡುಗೆ ಮಾಡಿ ತಿಂದು ತೇಗಿ ಸಾಕು …

Sanjay Kumar
2 Min Read

ಮೆಂತೆಕಾಳಿನಿಂದ ಮಾಡುವ ಈ ತಂಬುಳಿ ಹಾಲುಣಿಸುವ ತಾಯಂದಿರಿಗೆ ಅದ್ಭುತ ಆರೋಗ್ಯಲಾಭ ನೀಡುತ್ತೆ! ನಮಸ್ಕಾರಗಳು ಇವತ್ತಿನ ಲೇಖನದಲ್ಲಿ ನಾವು ತಿಳಿಸಲು ಹೊರಟಿರುವ ಮಾಹಿತಿ ಒಂದೊಳ್ಳೆ ಆರೋಗ್ಯಕರ ಮಾಹಿತಿ ಯಾಕೆ ಅಂದರೆ ಈ ಪರಿಹಾರ ಗರ್ಭಿಣಿ ಬಾಣಂತಿಯರಿಗೆ ಮತ್ತು ಮಲಬದ್ಧತೆ ಸಮಸ್ಯೆಯಿಂದ ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅತ್ಯದ್ಭುತ ಆರೋಗ್ಯಕರ ಲಾಭಗಳನ್ನು ನೀಡುತ್ತದೆ ಹಾಗಾಗಿ ಈ ದಿನದ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿರಿ ಹಾಗೂ ಈ ಪರಿಹಾರವನ್ನು ಪಾಲಿಸುವ ಮೂಲಕ ಈ ಮನೆ ಮದ್ದಿನ ಮೂಲಕ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಬನೀನ್ ಈ ಆರೋಗ್ಯಕರ ಲಾಭದ ಮನೆಮದ್ದಿನ ಕುರಿತು ತಿಳಿದುಕೊಳ್ಳೋಣ ಇಂದಿನ ಲೇಖನದಲ್ಲಿ.

ಸಾಮಾನ್ಯವಾಗಿ ಮೆಂತೆಕಾಳಿನ ಆರೋಗ್ಯಕರ ಲಾಭಗಳನ್ನು ಈಗಾಗಲೇ ಸಾಕಷ್ಟು ಮಾಹಿತಿಯ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ ಹಾಗಾಗಿ ಇವತ್ತಿನ ಲೇಖನದಲ್ಲಿ ಈ ಮೆಂತೆಕಾಳಿನಿಂದ ಮಾಡುವ ಒಂದೊಳ್ಳೆ ರುಚಿಕರವಾದ ತಂಬುಳಿಯ ಬಗ್ಗೆ ಮಾಹಿತಿ ನೀಡುತ್ತಿದ್ದು ಈ ಮನೆ ಮದ್ದಿಗಾಗಿ ಬೇಕಾಗುವಂಥ ಪದಾರ್ಥಗಳು ಮೆಂತ್ಯೆ ಕಾಳುಗಳು ಮತ್ತು ತೆಂಗಿನಕಾಯಿಯ ತುರಿ ಎಣ್ಣೆ ಸಾಸಿವೆ ಜೀರಿಗೆ ಮತ್ತು ಮಜ್ಜಿಗೆ

ಮಾಡುವ ವಿಧಾನದ ಬಗ್ಗೆ ಮೊದಲು ತಿಳಿದುಕೊಳ್ಳೋಣ ಆನಂತರ ಈ ಮೆಂತ್ಯೆಕಾಳಿನ ತಂಬುಳಿ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಈಗ ಮಾಡುವ ವಿಧಾನ ಹೇಗೆ ಅಂದರೆ ಮೊದಲಿಗೆ ಮಾಡುವ ವಿಧಾನ ಮೆಂತ್ಯಕಾಳುಗಳನ್ನು ಹುರಿದುಕೊಳ್ಳಬೇಕು ಹೌದು ಸರಿಯಾದ ಹದದಲ್ಲಿ ಹುರಿದುಕೊಂಡು ಪೂರ್ಣವಾಗಿ ಮೆಂತೆ ಕಾಳುಗಳನ್ನೂ ಹುರಿದ ಕೊಳ್ಳಬಾರದು ಸ್ವಲ್ಪ ಹುರಿದುಕೊಂಡು ನಂತರ ಕಾಯಿ ತುರಿ ಜೊತೆಗೆ ಈ ಮೆಂತೆ ಕಾಳುಗಳನ್ನು ಸೇರಿಸಿ ರುಬ್ಬಿಕೊಳ್ಳಬೇಕು

ರುಬ್ಬಿಕೊಂಡ ಮಿಶ್ರಣವನ್ನು ಮಜ್ಜಿಗೆಯೊಂದಿಗೆ ಹಾಕಬೇಕು ಈ ಮಜ್ಜಿಗೆಗೆ ಮಿಶ್ರಣವನ್ನು ಹಾಕುವ ಮೊದಲು ಮಜ್ಜಿಗೆಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ಬೆಲ್ಲ ಸೇರಿಸಬೇಕು ಯಾಕೆಂದರೆ ಮೆಂತೆ ಕಾಳು ಸ್ವಲ್ಪ ಕಹಿ ಇರುವುದರಿಂದ ಕಹಿ ರುಚಿ ಹೋಗ ಬೇಕೆಂಬ ಕಾರಣಕ್ಕೆ ಈ ಮೆಂತೆ ತಂಬುಳಿ ಗೆ ಬೆಲ್ಲವನ್ನು ಉಪಯೋಗಿಸಬೇಕು. ಈಗ ಮಾಡುವ ವಿಧಾನ ಮಜ್ಜಿಗೆಗೆ ಉಪ್ಪು ಮತ್ತು ರುಚಿಗೆ ಬೇಕಾದಷ್ಟು ಬೆಲ್ಲ ಸೇರಿಸಿ ನಂತರ ರುಬ್ಬಿಕೊಂಡ ಮಿಶ್ರಣವನ್ನು ಮಜ್ಜಿಗೆಗೆ ಹಾಕಿ ಈಗ ಇದಕ್ಕೆ ಒಗ್ಗರಣೆಯನ್ನು ನೀಡಬೇಕು.

ಎಣ್ಣೆಗೆ ಅಥವಾ ತುಪ್ಪಕ್ಕೆ ಸಾಸಿವೆ ಒಣಮೆಣಸಿನಕಾಯಿ ಹಾಗೂ ಸ್ವಲ್ಪ ಜೀರಿಗೆ ಸ್ವಲ್ಪ ಕರಿಬೇವಿನ ಎಲೆಗಳನ್ನು ಹಾಕಿ ಈಗ ಈ ಒಗ್ಗರಣೆಯನ್ನು ಮೆಂತ್ಯೆ ಮತ್ತು ಮಜ್ಜಿಗೆಯ ಮಿಶ್ರಣಕ್ಕೆ ಹಾಕಬೇಕು. ಈಗ ಈ ಮೆಂತೆ ತಂಬುಳಿ ತಯಾರಾಗಿದೆ ಇದನ್ನು ಅನ್ನದ ಜೊತೆ ಸವಿಯಬಹುದು ಹಾಗೂ ಈ ರುಚಿಕರವಾದ ಈ ಮೆಂತೆಕಾಳಿನ ತಾಂಬೋಳಿ ಬಾಣಂತಿಯರಿಗೆ ತುಂಬಾ ಒಳ್ಳೆಯದು.ನ್ಮ ಲಬದ್ಧತೆ ಮೂಲವ್ಯಾಧಿಯಿಂದ ಬಳಲುತ್ತಿರುವವರಿಗೂ ಕೂಡ ಈ ತಂಬುಳಿ ಆರೋಗ್ಯಕ್ಕೆ ತುಂಬಾನೇ ಉಪಯುಕ್ತಕರವಾಗಿದೆ ಮತ್ತು ಇದರಲ್ಲಿ ಬೆಲ್ಲ ಬಳಸುವುದರಿಂದ ದೇಹಕ್ಕೆ ಪುಷ್ಟಿ ದೊರೆಯುತ್ತದೆ ಮತ್ತು ಬೆಲ್ಲ ಸೇವನೆ ಮಾಡುವುದರಿಂದ ರಕ್ತಹೀನತೆ ದೂರವಾಗುತ್ತೆ.

ಈ ಸರಳವಾಗಿ ಮಾಡುವಂತಹ ಮೆಂತೆಕಾಳಿನ ತಂಬುಳಿಯ ಸೇವನೆ ಮಾಡುವುದರಿಂದ ಮಲಬದ್ಧತೆ ದೂರವಾಗುತ್ತದೆ ಯಾಕೆಂದರೆ ಮಜ್ಜಿಗೆ ಹಾಗೂ ಮೆಂತೆ ಕಾಳುಗಳು ಬೆಲ್ಲ ಇವೆಲ್ಲವೂ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದ್ದು ಈ ಮಿಶ್ರಣ ಶರೀರಕ್ಕೆ ಬೇಕಾದ ಪೋಷಕಾಂಶಗಳನ್ನು ನೀಡಿ ಮಲಬದ್ಧತೆಯಂತಹ ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡುವಲ್ಲಿ ಸಹಕಾರಿ ಆಗಿರುತ್ತದೆ. ಆದ್ದರಿಂದ ಈ ಸರಳ ಮನೆಮದ್ದನ್ನು ಪಾಲಿಸುವ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಹಾಗೂ ಬಸರಿ ಬಾಣಂತಿಯರಿಗೆ ಆರೋಗ್ಯ ವೃದ್ಧಿಗೆ ಈ ಮೆಂತೆಕಾಳಿನಿಂದ ಮಾಡಿದ ತಂಬುಳಿಯನ್ನು ನೀಡಿ ಆರೋಗ್ಯ ಉತ್ತಮವಾಗಿರುತ್ತದೆ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.