ಮೀನು ಹಿಡಿಯಲು ಹೋದ ಹುಡುಗರು ಆದ್ರೆ ಅವರಿಗೆ ನದಿಯ ಆಳದಲ್ಲಿ ಸಿಕ್ಕಿದ್ದು ಏನು ಗೊತ್ತ … ಆ ವಸ್ತುವನ್ನ ನೋಡಿ ಇಡೀ ಊರೇ ಆಶ್ಚರ್ಯ …

74

ನಮಸ್ಕಾರ ಸ್ನೇಹಿತರೇ ನಿಮ್ಮನ್ನು ಯಾರೂ ಪ್ರೀತಿಸುತ್ತಿಲ್ಲ ಅಂದರೇನು ಪ್ರತಿ ದಿವಸ ನೀವು ಪ್ರಕೃತಿಯಲ್ಲಿ ಒಂಟಿಯಾಗಿ ಸಮಯ ಕಳೆಯಿರಿ ಈ ಪ್ರಕೃತಿಯನ್ನು ಪ್ರೀತಿಸಿ ಖಂಡಿತವಾಗಿಯೂ ಈ ಪ್ರಕೃತಿಯಿಂದ ನಿಮಗೆ ಅಷ್ಟೇ ಪ್ರೀತಿ ಲಭಿಸುತ್ತದೆ ಇನ್ನೂ ಈ ಪ್ರಕೃತಿಯಲ್ಲಿ ಅದೆಂತಹ ಶಕ್ತಿ ಅಡಗಿದೆ ಅಂದರೆ ಪ್ರಕೃತಿ ಅಸಮಾನ್ಯ ವಿಸ್ಮಯಕಾರಿ. ಈ ನಮ್ಮ ಪ್ರಕೃತಿಯಲ್ಲಿ ಬೆಲೆ ಬಾಳುವ ಪುರಾತನ ವಸ್ತುಗಳು ಮಣ್ಣಿನಲ್ಲಿ ಮುಚ್ಚಿ ಹೋಗಿವೆ. ಹೌದು ಸಮುದ್ರ, ನದಿ ತಳಗಳಲ್ಲಿ ಹುದುಗಿಕೊಂಡಿವೆ ಅಕಸ್ಮಾತ್ ಆಗಿ ಭೂಮಿ ಅಗೆಯುವಾಗ ನದಿ ಅಥವಾ ಸಮುದ್ರ ತಳಕ್ಕೆ ಇಳಿದಾಗ ಕೆಲಮೊಮ್ಮೆ ಪುರಾತನ ಕಾಲದ ವಸ್ತುಗಳು ಅಪರೂಪಕ್ಕೆ ಒಮ್ಮೆ ಸಿಕ್ಕಿ ಬಿಡುತ್ತದೆ.

ಹೌದು ಅಚ್ಚರಿ ಅನಿಸ ಬಹುದು ಆದರೆ ಇದು ಸತ್ಯ. ಹೀಗೆ ಒಮ್ಮೆ ಮೀನು ಹಿಡಿಯಲು ಹೋದ ಸುಮಾರು 12 ರಿಂದ 13 ವರ್ಷದ ಇಬ್ಬರು ಹುಡುಗರಿಗೆ ಆ ನದಿ ಅಲ್ಲಿ ಬರೋಬ್ಬರಿ 17 ಕೆ.ಜಿ ಚಿನ್ನದ ದೇವರ ವಿಗ್ರಹ ಸಿಕ್ಕಿದೆ ನೋಡಿ. ನಂತರ ಆ ವಿಗ್ರಹವನ್ನು ಹುಡುಗರು ಮನೆಗೆ ತಂದು ಮಾಡಿದ್ದೇನು ಗೊತ್ತಾ ಹೌದು ಈ ಘಟನೆ ನಡೆದಿರುವುದು ಉತ್ತರ ಪ್ರದೇಶದಲ್ಲಿ. ಈ ಹುಡುಗರು ಮನೆಗೆ ತಂದ ದೇವರ ವಿಗ್ರಹವನ್ನು ಏನು ಮಾಡ್ತಾರೆ ನೋಡಿ ಈ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ.

ನದಿಯ ಪಕ್ಕ ಒಂದೇ ಕುಟುಂಬದ ಇಬ್ಬರು ಹುಡುಗರು ಮೀನು ಹಿಡಿಯಲೆಂದು ಹೋಗಿರುತ್ತಾರೇನೋ ಆ ಸಮಯದಲ್ಲಿ ನದಿ ತೀರಕ್ಕೆ ಹೋದ ಹುಡುಗರು ಮೀನು ಹಿಡಿಯಲು ಬಲೆ ಹಾಕುತ್ತಾರೆ ಬಲೆ ಬೀಸಿದಾಗ ಅಬಲೆಯು ಯಾವುದೋ ಬಂಡೆಗೆ ಸಿಲುಕಿಹಾಕಿಕೊಂಡ ಆಕೆ ಅವರಿಗೆ ಅನುಭವವಾಗುತ್ತದೆ ಆ ಬಲೆಯನ್ನು ಬಿಡಿಸಲು ಆ ಇಬ್ಬರು ಹುಡುಗರು ನದಿಗೆ ಇಳಿದಿದ್ದಾರೆ. ನದಿಗ ಇಳಿದಾಗ ಯಾವುದೋ ವಸ್ತು ಇವರ ಕಾಲಿಗೆ ತಾಕಿದ ಹಾಗೆ ಆಗುತ್ತದೆ. ಆ ಹುಡುಗರು ಏನು ಎಂದು ನೋಡಿದಾಗ ಅದು ಸೀತಾ ಮಾತೆ ದೇವಿಯ ವಿಗ್ರಹವಾಗಿತ್ತು. ವಿಷಯ ಇಷ್ಟೇ ಆಗಿದ್ದರೆ ದೊಡ್ಡ ಸುದ್ದಿಯಾಗುತ್ತ ಇರಲಿಲ್ಲ. ಬದಲಾಗಿ ಆ ವಿಗ್ರಹ 17 ಕೇಜಿ 650 ಗ್ರಾಂ ತೂಕದ ಅಷ್ಟ ದಾತುವಿನಿಂದ ತಯಾರಿಸಿದ ಚಿನ್ನದ ವಿಗ್ರಹವಾಗಿತ್ತು.

ಆ ವಿಗ್ರಹವನ್ನು ಮನೆಗೆ ತೆಗೆದುಕೊಂಡು ಹೋದ ಆ ಹುಡುಗರಿಗೆ ಇದು ಚಿನ್ನದ ವಿಗ್ರಹ ಎಂದು ತಿಳಿಯದೆ ಆ ವಿಗ್ರಹವನ್ನು ಆಟ ಆಡಲು ಬಳಸಿಕೊಳ್ಳುತ್ತ ಇದ್ದರು. ಆ ವಿಗ್ರಹವನ್ನು ಗಮನಿಸಿದ ಕೆಲವು ಗ್ರಾಮಸ್ಥರು ಈ ವಿಗ್ರಹ ಚಿನ್ನದ ವಿಗ್ರಹದಂತೆ ಕಾಣುತ್ತ ಇದೆ ಅಲ್ವಾ ಎಂದು ಅನುಮಾನ ಪಟ್ಟಾಗ ಆ ಹುಡುಗರನ್ನು ಎಲ್ಲಿಂದ ತಂದದ್ದು ಎಂದು ವಿಚಾರಿಸುತ್ತಾರೆ ನದಿಯಲ್ಲಿ ಸಿಕ್ಕಿದ್ದು ಎಂದು ಗ್ರಾಮಸ್ಥರಿಗೆ ಹುಡುಗರು ತಿಳಿಸುತ್ತಾರೆ. ಇನ್ನೂ ತಕ್ಷಣವೇ ಅಲ್ಲಿನ ಗ್ರಾಮಸ್ಥರು ಪೋಲಿಸರಿಗೆ ಈ ವಿಚಾರವನ್ನು ತಿಳಿಸುತ್ತಾರೆ ಸ್ಥಳಕ್ಕೆ ಬಂದ ಪೊಲೀಸರು ವಿಗ್ರಹವನ್ನು ಪರಿಶೀಲನೆ ಮಾಡುತ್ತಾರೆ ಹಾಗೂ ಪೊಲೀಸರಿಗೆ ಈ ವಿಗ್ರಹ ಚಿನ್ನದ್ದು ಎಂದು ತಿಳಿಯುತ್ತದೆ. ಹೌದು ಪೊಲೀಸರು ವಿಚಾರಣೆ ಮಾಡಿ ನೋಡಿದಾಗ ತಿಳಿದದ್ದು ಆ ವಿಗ್ರಹ ಚಿನ್ನದ್ದೆಂದು.

ನಂತರ ಆ ವಿಗ್ರಹವನ್ನು ಪುರಾತತ್ತ್ವ ಇಲಾಖೆಗೆ ವರ್ಗಾವಣೆ ಮಾಡುತ್ತಾರೆ ಪೊಲೀಸರು ಪುರಾತತ್ವ ಇಲಾಖೆಯವರು ಪರಿಶೀಲನೆ ನಡೆಸಿದಾಗ ಇದು ಸುಮಾರು 16ನೇ ಶತಮಾನದ ಚಿನ್ನದ ವಿಗ್ರಹ ಆಗಿದೆ ಎಂದು ತಿಳಿಸುತ್ತಾರೆ. ಈ ವಿಗ್ರಹ ಕೋಟ್ಯಾಂತರ ರೂಪಾಯಿಗಳ ಬೆಲೆ ಬಾಳುತ್ತದೆ ಎಂದು ಮಾಹಿತಿ ಅನ್ನೂ ನೀಡಿದ್ದಾರೆ. ಇನ್ನೂ ಇದಕ್ಕೂ ಮೊದಲು ಬಾನು ನದಿಯಲ್ಲಿ ಮೀನು ಹಿಡಿಯಲು ಹೋದ ಕೆಲವು ಮೀನುಗಾರರಿಗೆ ಇದೇ ರೀತಿಯ ಹಲವಾರು ಪುರಾತನ ವಸ್ತುಗಳು ದೊರೆತಿದ್ದವು ಹಾಗೂ ಆ ಮೀನುಗಾರರು ಸಂಬಂಧ ಪಟ್ಟ ಇಲಾಖೆಗೆ ಆ ವಸ್ತುಗಳನ್ನು ಒಪ್ಪಿಸಿದ್ದಾಗಿ ಪೋಲಿಸರಿಗೆ ತಿಳಿಸಿದ್ದಾರೆ. ಇನ್ನೂ ಈ ಪೋಲಿಸರು ಈ ವಿಗ್ರಹದ ಕುರಿತಾಗಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ನೋಡಿದ್ರಲ್ಲ ಈ ಪ್ರಕೃತಿ ಅದೆಂತಹ ವಿಸ್ಮಯಕಾರಿ ಎಂದು ಈ ಮೊದಲೇ ಹೇಳಿದಂತೆ ಪ್ರಕೃತಿ ಸಾಮಾನ್ಯವಲ್ಲ ಇದು ಅಸಮಾನ್ಯ ಎಂದೊ ಪ್ರಕೃತಿಯಲ್ಲಿ ಅಡಗಿಸಿಟ್ಟ ಆ ವಿಗ್ರಹಗಳು ಇನ್ನೂ ಎಷ್ಟು ಜೋಪಾನವಾಗಿ ಇತ್ತು ನೋಡಿ ಪ್ರಕೃತಿಯನ್ನು ಪ್ರೀತಿಸಿ ಪ್ರಕೃತಿಯನ್ನು ಬಳಸಿ ರಕ್ಷಿಸಿ ಧನ್ಯವಾದ.