Sanjay Kumar
2 Min Read

80 ಹಾಗೂ 90 ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಅಭಿನಯ ಮಾಡಿಕೊಂಡು ನಂತರದ ದಿನಗಳಲ್ಲಿ ನಾಯಕ ನಟನಾಗಿ ಅವಕಾಶವನ್ನು ಪಡೆದುಕೊಂಡು ತೆರೆಮೇಲೆ ಕಾಣಿಸಿಕೊಂಡು ಯಶಸ್ಸನ್ನು ಪಡೆದುಕೊಂಡಿರುವ ನಟ ಅಂದರೆ ಅದು ಮತ್ಯಾರೂ ಅಲ್ಲ ನಟ ಅಭಿಜಿತ್ ರವರು. 90ರ ದಶಕದಲ್ಲಿ ನಟ ಅಭಿಜಿತ್ ಅವರು ಯಾವುದೇ ಪಾತ್ರವನ್ನು ನೀಡಿದರೂ ಬಹಳ ಅಚ್ಚುಕಟ್ಟಾಗಿ ಅಭಿನಯ ಮಾಡುವ ಮೂಲಕ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದರು ಈ ನಟ.

ನಟ ಅಭಿಜಿತ್ ರವರು ಸಿನಿಮಾ ರಂಗದಲ್ಲಿ ಅವಕಾಶ ಪಡೆದುಕೊಂಡ ನಂತರ ಯಾವುದೇ ಪಾತ್ರವನ್ನು ನೀಡಲಿ ಅದನ್ನು ಅಭಿನಯ ಮಾಡುತ್ತೇನೆ ಎಂದು ಹೇಳುತ್ತಿದ್ದರು ಹೊರತು ಇಂತಹದ್ದೇ ಪಾತ್ರ ಬೇಕು ಎಂದು ನಿರೀಕ್ಷೆ ಮಾಡಿದವರಲ್ಲ ಅಥವಾ ಹಠ ಹಿಡಿದವರಲ್ಲ. ಯಾವುದೇ ಪಾತ್ರ ನೀಡಿದರೂ ಕೂಡ ಅದಕ್ಕೆ ಬೇಕಾದ ಅಭಿನಯ ಮಾಡುವ ಮೂಲಕ ಎಲ್ಲಾ ತರದ ಪಾತ್ರಗಳಿಗೂ ಜೀವ ತುಂಬಿ ಸಂಪೂರ್ಣವಾದ ನ್ಯಾಯವನ್ನು ಸಲ್ಲಿಸುವಂತಹ ಕಲಾವಿದ ನಟ ಅಭಿಜಿತ್.

ಕನ್ನಡದ ದೇವರು ಹಾಗೂ ನಟ ಸಾರ್ವಭೌಮ ಎಂದೇ ಖ್ಯಾತರಾಗಿರುವ ರಾಜಕುಮಾರ್ ರವರ ಕೊನೆಯ ಚಿತ್ರ ಜೀವನ ಚೈತ್ರದಲ್ಲೂ ಕೂಡ ಅಭಿನಯ ಮಾಡುವ ಮೂಲಕ ಅವರಿಂದಲೂ ಕೂಡ ಮೆಚ್ಚುಗೆ ಅನ್ನು ಪಡೆದಂತಹ ಮಹಾನ್ ಕಲಾವಿದ ಎಂದೇ ಹೇಳಬಹುದು ಅಭಿಜಿತ್ ಅವರನ್ನು. ಅಣ್ಣಾವ್ರೇ ಮೆಚ್ಚಿ ಹೊಗಳಿದ ಮೇಲೆ ನಾವೇನು ನೀವೇನು ಅಲ್ವಾ. ಇನ್ನೂ ಸಾಹಸ ಸಿಂಹ ಅಭಿನಯ ಭಾರ್ಗವ ನಟ ವಿಷ್ಣುವರ್ಧನ್ ರವರ ಹಲವಾರು ಚಿತ್ರಗಳು ಅಭಿಜಿತ್ ರವರು ಅಭಿನಯ ಮಾಡಿದ್ದಾರೆ.

ನಟ ಅಭಿಜಿತ್ ಅವರು ಕನ್ನಡ ಸಿನಿಮಾರಂಗದಲ್ಲಿ ಬರೋಬ್ಬರಿ 120ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿಜಿತ್ ರವರು ಅಭಿನಯ ಮಾಡುವ ಮೂಲಕ ಕನ್ನಡಿಗರ ಮನ ರಂಜಿಸಿದ್ದಾರೆ. ಅಭಿಜಿತ್ ರವರು ಇತ್ತೀಚಿಗಿನ ದಿನಗಳಲ್ಲಿ ಕನ್ನಡ ಕಿರುತೆರೆಯ ವಾಹಿನಿಯ ಧಾರವಾಹಿಗಳಲ್ಲಿ ಅಭಿನಯವನ್ನು ಮಾಡುವ ಮೂಲಕ ಮತ್ತೊಮ್ಮೆ ಮನೋರಂಜನ ಕ್ಷೇತ್ರಕ್ಕೆ ಹಿಂದಿರುಗಿರುವುದು ಖುಷಿಯ ಸಂಗತಿಯಾಗಿದೆ. ಹೌದು ಸತ್ಯ ಧಾರಾವಾಹಿಯಲ್ಲಿ ನಟ ಅಭಿಜಿತ್ ಅವರು ಅಭಿನಯ ಮಾಡುತ್ತಿದ್ದು ಇವರ ಪಾತ್ರ ಅದ್ಭುತವಾಗಿ ಮೂಡಿಬರುತ್ತಿದೆ ಮತ್ತು ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಇನ್ನು ಇವರ ವೈವಾಹಿಕ ಜೀವನದ ಕುರಿತಂತೆ ಹೇಳುವುದಾದರೆ ರೋಹಿಣಿ ಎಂಬುವವರನ್ನು ವಿವಾಹವಾಗಿದ್ದಾರೆ.

ಇನ್ನು ಇವರಿಗೆ ಕಾರ್ತಿಕೇಯ ಬಾಲಾಜಿ ಶಿಲ್ಪ ಎಂಬ ಮಕ್ಕಳಿದ್ದಾರೆ. ಬಾಲಾಜಿ ಡ್ಯಾನ್ಸರ್ ಆಗಿದ್ದು ಮಗಳು ಶಿಲ್ಪ ಮದುವೆ ಆಗಿ ಒಂದು ಮಗುವನ್ನು ಕೂಡ ಹೊಂದಿದ್ದಾರೆ. ನಟ ಅಭಿಜಿತ್ ಅವರ ಮಕ್ಕಳು ಯಾವ ನಟಿಯರಿಗೂ ಕಡಿಮೆ ಇಲ್ಲ ಬಹಳ ಸುಂದರವಾಗಿ ಇದ್ದಾರೆ. ಇನ್ನೂ ಅಭಿಜಿತ್ ಅವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಕೊಡುಗೆ ಅಪಾರವಾದದ್ದು, ಇವರಿಗೆ ಈ ಮಾಹಿತಿ ಮೂಲಕ ಮೆಚ್ಚುಗೆಯನ್ನು ವ್ಯಕ್ತ ಪಡಿಸೋಣ ಹಾಗೆ ಅಭಿಜಿತ್ ಅವರ ಅಭಿನಯ ನಿಮಗೆ ಇಷ್ಟವಾಗಿದ್ದಲ್ಲಿ ಇವರ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.