ರಾಜ್ಯ ಸರ್ಕಾರದಿಂದ ಸಿಗುವ ವಿಧವಾ ವೇತನ ಹೇಗೆ ಪಡೆಯುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ … ಗೊತ್ತಿಲ್ಲದವರಿಗೆ ತಿಳಿಸಿ

107

ಹೌದು ಸರ್ಕಾರವು ಹಲವು ಯೋಜನೆಗಳನ್ನು ಹಮ್ಮಿಕೊಳ್ಳುತ್ತಾ ಹಾಗೂ ಹಲವು ನಿಯಮಗಳನ್ನು ಜಾರಿಗೆ ತರುತ್ತಾ ಸಮಾಜದ ಹಿತದೃಷ್ಠಿಯನ್ನು ಹಾಗೂ ಸಮಾಜದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಶ್ರಮಿಸುತ್ತ ಇರುತ್ತದೆ. ಇನ್ನು ಕೆಲವೊಂದು ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಸರ್ಕಾರಸಮಾಜಕ್ಕೆ ಅನುಕೂಲ ಮಾಡುವ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತದೆ. ಅದರಲ್ಲೂ ನಮ್ಮ ಭಾರತ ದೇಶದ ಪ್ರಸ್ತುತ ಪ್ರಧಾನಮಂತ್ರಿ ಆಗಿರುವ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಹುದ್ದೆಗೆ ಬಂದ ನಂತರ ಹಲವು ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಅನೇಕ ಬದಲಾವಣೆಗಳನ್ನು ಯೋಜನೆಗಳಲ್ಲಿ ತರುವ ಮೂಲಕ ಜನರಿಗೆ ಒಳ್ಳೆ ಒಳ್ಳೆಯ ಯೋಜನೆಗಳ ಫಲವನ್ನು ಜನರಿಗೆ ನೀಡುತ್ತಾ ಇದ್ದಾರೆ ಅದೇ ರೀತಿ ದುಡ್ಡಿನ ವಿಚಾರದಲ್ಲಿ ಆಗಿರಬಹುದು ಹಾಗೂ ಎಲ್ಲಾ ರೀತಿಯ ಜನರಿಗೂ ಅನುಕೂಲ ಆಗುವಂತೆ ಅದರಲ್ಲಿಯೂ ಮಧ್ಯಮ ವರ್ಗದವರಿಗೆ ಮತ್ತು ನಿರ್ಗತಿಕರಿಗೆ ಕೆಲವೊಂದು ಸಹಾಯಗಳನ್ನು ಮಾಡಿಕೊಡಬೇಕೆಂದು. ಕೆಲವೊಂದು ನಿಯಮಗಳನ್ನು ಮತ್ತು ಯೋಜನೆಗಳನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಹಾಗೆ ಅಂತಹ ಯೋಜನೆಗಳಿಂದ ಜನರಿಗೆ ಸೇವೆ ಮಾಡುತ್ತಾ ಇದ್ದಾರೆ. ಹೌದು ಅಂತಹ ಯೋಜನೆಯಲ್ಲಿ ವಿವಿಧ ವಿಧವಾ ವೇತನ ಸಹ ಒಂದಾಗಿದೆ.

ಇನ್ನೂ ಸರ್ಕಾರವು ಹಮ್ಮಿಕೊಳ್ಳುವ ಕೆಲ ಯೋಜನೆಗಳು ಯಾವ ದೃಷ್ಟಿಯಿಂದ ಇರುತ್ತದೆ ಅಂದರೆ ಜನರ ಸೇವೆ ಮಾಡಲೆಂದು ಮತ್ತು ಜನರಿಗೆ ಅನುಕೂಲವಾಗಲಿ ಎಂದು ಹಾಗೆ ವಿಧವಾವೇತನ ಎಂಬ ಯೋಜನೆಯೂ ಸಹ ವಿವಾಹವಾಗಿ ಪತಿಯನ್ನು ಕಳೆದುಕೊಂಡ ಮಹಿಳೆಯರು ಜೀವನದಲ್ಲಿ ಕಷ್ಟ ಪಡಬಾರದೆಂದು ತಿಂಗಳಿಗೊಮ್ಮೆ ಸರ್ಕಾರದಿಂದ ನೀಡುವ ಹಣದ ಸೌಲಭ್ಯ ಈ ವಿಧವಾ ವೇತನದ ಆಗಿರುತ್ತದೆ. ಹದಿನೆಂಟು ವರ್ಷಕ್ಕಿಂತ ಹೆಚ್ಚು ವಯಸ್ಸಿನ ನಿ’ರ್ಗತಿಕ ವಿಧವೆಯರಿಗೆ, ವಿಧವಾ ವೇತನವನ್ನು ಸರ್ಕಾರದ ಆದೇಶದ ಮೇರೆಗೆ 1ನೇ ಏಪ್ರಿಲ್ 1984ರಿಂದ ಜಾರಿಗೆ ತರಲಾಗಿದೆ. ನಿರ್ಗತಿಕ ವಿಧವೆ ಅಂದರೆ ಪತಿಯು ಜೀವಿಸಿಲ್ಲದ ಅಥವಾ ಮೃತಪಟ್ಟಿರುವ ವ್ಯಕ್ತಿಯ ಪತ್ನಿ ಹಾಗೆಯೇ ಈ ವಿಧವಾ ವೇತನವನ್ನು ಪಡೆಯಲು ಒಂದಷ್ಟು ನಿಯಮಗಳು ಸಹ ಇರುತ್ತದೆ,

ಯಾರೆಂದರೆ ಅವರು ಈ ವಿಧವಾ ವೇತನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುವ ನಿಯಮಗಳೇನು ಅಂದರೆ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶಗಳಲ್ಲಿ ರೂ 12 ಸಾವಿರ ರೂಪಾಯಿಗಿಂತ ಕಡಿಮೆ ಇರಬೇಕು.ಇನ್ನು ನಗರ ಪ್ರದೇಶಗಳಲ್ಲಿ ರೂ.17ಸಾವರ ರೂಪಾಯಿ ಕ್ಕಿಂತ ಕಡಿಮೆ ಇರಬೇಕಾಗುತ್ತದೆ. ಅರ್ಜಿದಾರ ಹೆಣ್ಣು ಮಗಳು ಅಥವಾ ಆಕೆಯ ಮರಣ ಹೊಂದಿದ ಪತಿಯ ಅರ್ಜಿ ದಿನಾಂಕದಿಂದ ಹಿಂದಿನ ನಿರಂತರ 3ವರ್ಷಗಳ ಅವಧಿಗೆ ಕಡಿಮೆಯಿಲ್ಲದಂತೆ ರಾಜ್ಯದ ನಿವಾಸಿ ಆಗಿರಬೇಕಾಗುತ್ತದೆ. ವಿಧವಾ ವೇತನವು ತಿಂಗಳಿಗೆ ರೂ. 500 ಆಗಿದ್ದು, ಅಂದರೆ ತಿಂಗಳಿಗೆ 500ರೂ.ಗಳನ್ನು ಸರ್ಕಾರ ವಿ’ಧವ ಹೆಣ್ಣುಮಕ್ಕಳಿಗಾಗಿ ನೀಡುತ್ತದೆ ಎನ್ನುವ ವಿಧವಾ ವೇತನಕ್ಕಾಗಿ ಸಲ್ಲಿಸಬೇಕಾಗಿರುವ ಅರ್ಜಿಯ ಗೊತ್ತುಪಡಿಸಿದ ನಮೂನೆಯಲ್ಲಿ ಇರಬೇಕಾಗುತ್ತದೆ ಹಾಗೂ ಅದನ್ನು ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರಿಗೆ ಸಲ್ಲಿಸಬೇಕು. ಇನ್ನೂ ವಿಧವಾ ವೇತನ ಪಿಂಚಣಿ ಅನ್ನು ಪಡೆದುಕೊಳ್ಳ ಬೇಕು ಅಂದರೆ ಅವರು ಯಾವುದೇ ತರಹದ ಬೇರೆ ಪಿಂಚಣಿ ಅನ್ನು ಪಡೆಯಬಾರದು.

ಇನ್ನು ಹೆಣ್ಣು ಮಕ್ಕಳು ವಿಧವಾ ವೇತನವನ್ನು ತೆರೆದುಕೊಳ್ಳುತ್ತಾ ಇರುವಂತಹವರು ಮೃತ ಆಗುವವರೆಗೂ ಅಥವಾ ಪುನರ್ ವಿವಾಹ ಆಗುವವರೆಗೆ ಏನೂ ಉದ್ಯೋಗ ಪಡೆದು ನಿಗದಿತ ವಾರ್ಷಿಕ ಆದಾಯಕ್ಕಿಂತ ಅವರುಗಳು ಹೆಚ್ಚಿನ ಆದಾಯ ಪಡೆಯುವ ವರೆಗೂ ಈ ವಿಧವಾವೇತನ ಅಡಿ ಸರ್ಕಾರದಿಂದ ಈ ಹೆಣ್ಣುಮಕ್ಕಳು ಹಣವನ್ನ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಇದಕ್ಕೆ ಅರ್ಜಿ ಸಲ್ಲಿಸಲು ಹಲವಾರು ದಾಖಲಾತಿಗಳು ಬೇಕಾಗಿರುತ್ತದೆ . ಇನ್ನೂ ಆ ದಾಖಲಾತಿಗಳು ಅಂದರೆ ಜನನ ಪ್ರಮಾಣ ಪತ್ರ ವೈದ್ಯಕೀಯ ದೃಢೀಕರಣ ಪತ್ರ ಪತಿಯ ಮರಣ ಪ್ರಮಾಣಪತ್ರ ಹಾಗೂ ವಾಸಸ್ಥಳ ದೃಢೀಕರಣ ಪತ್ರ ಆದಾಯ ಪ್ರಮಾಣಪತ್ರ ಅಂದರೆ ಇನ್ಕಮ್ ಸರ್ಟಿಫಿಕೇಟ್ ವಯಸ್ಸಿನ ದೃಢೀಕರಣ ಪತ್ರ ಜೊತೆಗೆ ವಯಸ್ಸಿನ ದೃಢೀಕರಣ ಪತ್ರ ಹಾಗೂ ಭಾರತ ಚುನಾವಣಾ ಆಯೋಗವು ನೀಡಿರುವ ಮತದಾರರ ಗುರುತಿನ ಚೀಟಿ ಅಂದರೆ ಐಡಿ ಕಾರ್ಡ್ ಜನ್ಮ ದಿನಾಂಕವು ವಯಸ್ಸಿಗೆ ಸಂಬಂಧಿಸಿದ ದಾಖಲೆಯಾಗಿರುತ್ತದೆ. ಈ ದಾಖಲಾತಿಗಳೊಂದಿಗೆ ಅರ್ಜಿ ಅನ್ನೋ ಸಲ್ಲಿಸಬೇಕಾಗಿರುತ್ತದೆ.