ರಾತ್ರಿ ಮಲಗುವುದಕ್ಕಿಂತ ಮುಂಚೆ ಈ ಒಂದು ವಸ್ತುವನ್ನ ಬಿಸಿ ನೀರಿನಲ್ಲಿ ಸೇರಿಸಿ ಸೇವನೆ ಮಾಡಿ ಸಾಕು ನಿಮಗೆ ಬರುವ ಎಲ್ಲ ವ್ಯಾಧಿಗಳಿಂದ ರಕ್ಷಣೆ ನೀಡುತ್ತದೆ…

86

ಆಯುರ್ವೇದದ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಈ ಒಂದು ಪದಾರ್ಥವನ್ನು ನೀವೇನಾದರೂ ಪ್ರತಿದಿನ ನಿಯಮಿತವಾಗಿ ಸೇವಿಸುತ್ತ ಬಂದಲ್ಲಿ ನೀವು ಆಸ್ಪತ್ರೆಗೆ ಹಣ ಹಾಕುವ ಅವಶ್ಯಕತೆಯೇ ಇರುವುದಿಲ್ಲ.ಹಾಗಾದರೆ ಆ ಪದಾರ್ಥ ಯಾವುದು ಅಂತ ನಿಮಗೆ ಗೊತ್ತಾಗಿರುತ್ತದೆ ಹೌದು ಅದೇ ನಮ್ಮ ಅಡುಗೆ ಮನೆಯಲ್ಲಿ ಇರುವ ಮಸಾಲೆ ಪದಾರ್ಥವಾಗಿ ಪರಿಮಳಕ್ಕಾಗಿ ಬಳಸುವ ಲವಂಗ, .ಲವಂಗದಲ್ಲಿ ಅಡಗಿರುವ ಆರೋಗ್ಯದ ರಹಸ್ಯದ ಬಗ್ಗೆ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ಹಾಗೆ ಈ ಲವಂಗವನ್ನು ಹೇಗೆ ಯಾರು ಯಾವಾಗ ಎಷ್ಟು ನಿಯಮಿತವಾಗಿ ಸೇವಿಸಬೇಕು ಅನ್ನೋದರ ಪ್ರತಿ ಮಾಹಿತಿಯನ್ನು ತಿಳಿಸುತ್ತೇನೆ ತಪ್ಪದೇ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ.

ಲವಂಗದಲ್ಲಿ ಎರಡು ವಿಧವಿರುತ್ತದೆ. ಒಂದು ಹಸಿರು ಬಣ್ಣದ ಲವಂಗವಿದ್ದರೆ ಮತ್ತೊಂದು ಕಪ್ಪು ಬಣ್ಣದ ಲವಂಗ. ಹಸಿರು ಬಣ್ಣದ ಲವಂಗವನ್ನು ಹೆಚ್ಚಾಗಿ ಲವಂಗದ ಎಣ್ಣೆಯನ್ನು ತಯಾರಿಸುವುದರಲ್ಲಿ ಬಳಸಿದರೆ ,ಈ ಕಪ್ಪು ಬಣ್ಣದ ಲವಂಗವನ್ನು ಅಡುಗೆಯಲ್ಲಿ ಮಸಾಲೆ ಪದಾರ್ಥವಾಗಿ ಬಳಸುತ್ತಾರೆ.ಲವಂಗದ ಪ್ರಯೋಜನಗಳನ್ನು ಇದೀಗ ತಿಳಿಯೋಣ, ಪ್ರತಿ ದಿನ ರಾತ್ರಿ ಎರಡು ಲವಂಗವನ್ನು ತಿಂದು ಬಿಸಿ ನೀರನ್ನು ಕುಡಿಯುವುದರಿಂದ ಜೀರ್ಣಾಂಗ ಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆಗಳು ನಿವಾರಣೆಯಾಗುತ್ತದೆ .ಹಾಗೆ ಈ ಅನಗತ್ಯ ಬೊಜ್ಜಿನ ಸಮಸ್ಯೆ ಕಾಡುತ್ತಿದ್ದರೆ ,ಗ್ಯಾಸ್ಟ್ರಿಕ್ ಅಸಿಡಿಟಿ ಸಮಸ್ಯೆ ಕಾಡುತ್ತಿದ್ದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರಿಗೆ ಎರಡು ಅಥವಾ ಮೂರು ಹನಿ ಲವಂಗದ ಎಣ್ಣೆಯನ್ನು ಹಾಕಿಕೊಂಡು ಕುಡಿಯುತ್ತಾ ಬರುವುದರಿಂದ ಈ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಸಕ್ಕರೆ ಕಾಯಿಲೆಯ ವಿಚಾರಕ್ಕೆ ಬಂದರೆ ಯಾರೂ ಡಯಾಬಿಟಿಸ್ ನಿಂದ ಬಳಲುತ್ತಿರುತ್ತಾರೆ ಅಂತವರು ನಿಯಮಿತವಾಗಿ ಲವಂಗವನ್ನು ಸೇವಿಸಬೇಕು .ಹಾಗೆ ಪ್ರತಿ ದಿನ ಒಂದು ಲವಂಗವನ್ನು ತಿಂದು ಬಿಸಿ ನೀರನ್ನು ಕುಡಿಯುವುದರಿಂದ ರಕ್ತದಲ್ಲಿರುವ ಸಕ್ಕರೆಯ ಮಟ್ಟ ಕಡಿಮೆಯಾಗುತ್ತದೆ ಹಾಗೆ ಮಾತ್ರೆಗಳನ್ನು ಹೆಚ್ಚಾಗಿ ಸೇವಿಸುವ ಅವಶ್ಯಕತೆ ಇರುವುದಿಲ್ಲ ಆರೋಗ್ಯವೂ ಉತ್ತಮವಾಗಿರುತ್ತದೆ.ರಕ್ತಹೀನತೆ ಸಮಸ್ಯೆಯಿಂದ ಯಾರು ಬಳಲುತ್ತಿರುತ್ತಾರೆ ಅಂತವರು ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಲವಂಗವನ್ನು ತಿಂದು ಬಿಸಿ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವು ಅಭಿವೃದ್ಧಿಯಾಗುತ್ತದೆ.

ಅದರಲ್ಲಿಯೂ ಹೆಣ್ಣು ಮಕ್ಕಳು ಈ ಒಂದು ರಕ್ತ ಹಣದ ಸಮಸ್ಯೆಯಿಂದ ಹೆಚ್ಚಾಗಿ ಬಳಲುತ್ತಿರುತ್ತಾರೆ ಅಂಥವರು ತಪ್ಪದೇ ಲವಂಗವನ್ನು ಪ್ರತಿದಿನ ಬಿಸಿ ನೀರಿನೊಂದಿಗೆ ಸೇವಿಸುತ್ತಾ ಬರಬೇಕು ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೆ ರಕ್ತಹೀನತೆ ಸಮಸ್ಯೆ ಕೂಡ ದೂರವಾಗುತ್ತದೆ.ವಯಸ್ಸಾದಂತೆ ಕೈ ಕಾಲು ಹಿಡಿಯುವುದು ಬೆನ್ನು ನೋವು ಸೊಂಟ ನೋವು ಇಂತಹ ಸಮಸ್ಯೆಗಳು ಬರುತ್ತದೆ .ಅಂತವರು ಪ್ರತಿದಿನ ರಾತ್ರಿ ಮಲಗುವ ಮುನ್ನ ಎರಡು ಲವಂಗವನ್ನು ಸೇವಿಸಿ ಬಿಸಿ ನೀರನ್ನು ಕುಡಿಯುವುದರಿಂದ ದೇಹಕ್ಕೆ ಕ್ಯಾಲ್ಷಿಯಂ ಐರನ್ ಮತ್ತು ಪೊಟಾಶಿಯಂ ಅಂಶವು ದೊರೆತು ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಎದುರಾಗುವುದಿಲ್ಲ.

ನಿಮ್ಮ ಆರೋಗ್ಯ ವೃದ್ಧಿಗಾಗಿ ನೀವು ಅನೇಕ ಮನೆಮದ್ದುಗಳನ್ನು ಬಳಸಿ ವಿಫಲರಾಗಿದ್ದರೆ ಈ ಒಂದು ಮನೆ ಮದ್ದನ್ನು ನೀವು ಪಾಲಿಸುವುದರಿಂದ ನಿಮಗೆ ಉತ್ತಮವಾದ ಫಲಿತಾಂಶವಂತೂ ದೊರೆಯುವುದು ಖಚಿತ.ಆದ ಕಾರಣ ಈ ಲವಂಗವನ್ನು ಬಿಸಿ ನೀರಿನೊಂದಿಗೆ ಯಾರು ಬೇಕಾದರೂ ಸೇವಿಸಬಹುದು ಆದರೆ ಚಿಕ್ಕಮಕ್ಕಳು ಸೇವಿಸುವುದು ಬೇಡ.ಪುರುಷರಾದರೆ ಪ್ರತಿ ದಿನ ಎರಡು ಲವಂಗವನ್ನು ಮಲಗುವ ಮುನ್ನ ಸೇವಿಸಿ ಬಿಸಿ ನೀರನ್ನು ಸೇವಿಸಬೇಕು.

ಹಾಗೆ ಹೆಣ್ಣುಮಕ್ಕಳು ಒಂದು ಲವಂಗವನ್ನು ಸೇವಿಸಿ ಬಿಸಿ ನೀರನ್ನು ಕುಡಿಯುವುದರಿಂದ ಅಗಾಧವಾದ ಆರೋಗ್ಯ ಲಾಭಗಳು ದೊರೆಯುವುದಲ್ಲದೆ, ನೀವು ಅನಾರೋಗ್ಯ ಸಮಸ್ಯೆಗೆ ಶೀತ ಕೆಮ್ಮು ಜ್ವರ ಇಂತಹ ಎಲ್ಲ ಸಮಸ್ಯೆಗಳಿಗೆ ಮಾತ್ರೆಗಾಗಿ ಹಣ ವ್ಯರ್ಥ ಮಾಡುವ ಸಮಯವೇ ಎದುರಾಗುವುದಿಲ್ಲ.ಈ ದಿನ ತಿಳಿಸಿದ ಮಾಹಿತಿ ನಿಮಗೂ ಕೂಡ ಇಷ್ಟವಾಗಿದ್ದರೆ ಉಪಯುಕ್ತವಾಗಿದ್ದರೆ ತಪ್ಪದೇ ಈ ಆರೋಗ್ಯ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಹಾಗೂ ಲೈಕ್ ಮಾಡಿ ಧನ್ಯವಾದ.

LEAVE A REPLY

Please enter your comment!
Please enter your name here