ರಾಬರ್ಟ್ ನಿರ್ಮಾಪಕ “ಮದಗಜ” ನಿರ್ದೇಶಕರಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಯಾಕೆ ಗೊತ್ತಾ ….!!!!

18

ಸಾಮಾನ್ಯವಾಗಿ ಚಿತ್ರರಂಗಗಳಲ್ಲಿ ಸಿನಿಮಾ ಹಿಟ್ ಆದರೆ ಅದಕ್ಕಾಗಿ ಪಾರ್ಟಿ ಕೊಡಿಸುವುದನ್ನು ಕೇಳಿರುತ್ತೇವೆ ಆದರೆ ಇದೀಗ ರಾಬರ್ಟ್ ಚಲನ ಚಿತ್ರದ ನಿರ್ಮಾಪಕರು ಮದಗಜ ಚಲನ ಚಿತ್ರದ ನಿರ್ದೇಶಕರಾದ ಮಹೇಶ್ ಕುಮಾರ್ ಅವರಿಗೆ ಕಾರ್ ಒಂದನ್ನು ನೀಡಿ ಸರ್ಪ್ರೈಸ್ ನೀಡಿದ್ದಾರೆ. ಹೌದು ರಾಬರ್ಟ್ ಚಲನ ಚಿತ್ರದ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಗೌಡ ಅವರು ಇದೀಗ ಸರ್ಪ್ರೈಸ್ ಆಗಿ ಕಾರೊಂದನ್ನು ನಿರ್ದೇಶಕರಾದ ಮಹೇಶ್ ಕುಮಾರ್ ಅವರಿಗೆ ಉಡುಗೊರೆ ನೀಡಿದ್ದಾರೆ ಇನ್ನು ಈ ಸಂತಸದ ವಿಚಾರವನ್ನು ಮಹೇಶ್ ಅವರು ಫೋಟೋವೊಂದನ್ನು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡುವ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ರಾಬರ್ಟ್ ಚಲನ ಚಿತ್ರ ರಿಲೀಸ್ ಆದ ಮೊದಲನೆಯ ವಾರವೇ ಬಹಳ ಹಿಟ್ ಆಗಿದ್ದು ಬಾಕ್ಸಾಫೀಸ್ ಸುಲ್ತಾನನ ಈ ರಾಬರ್ಟ್ ಚಲನಚಿತ್ರ ಸಕ್ಸಸ್ ಆಗೇ ಓಡುತ್ತಿದ್ದು ಮುಂದಿನ ವಾರದಿಂದ ರಾಬರ್ಟ್ ಚಿತ್ರದ ತಂಡದವರು ಕರ್ನಾಟಕಾದ್ಯಂತ ವಿಜಯಯಾತ್ರೆ ಅನ್ನೂ ಮಾಡಲಿದ್ದಾರೆ. ರಾಬರ್ಟ್ ಚಿತ್ರತಂಡವು ಇದೀಗ ಸಂತಸದ ಸುಳಿಯಲ್ಲಿದ್ದು ಈ ಚಿತ್ರದ ನಿರ್ಮಾಪಕರು ತಮ್ಮ ಸ್ನೇಹಿತರಾದ ಹಾಗೂ ಮದಗಜ ಚಿತ್ರದ ನಿರ್ದೇಶಕರಾದ ಮಹೇಶ್ ಅವರಿಗೆ ಸರ್ ಪ್ರೈಸ್ ನೀಡಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಷ್ಟೇ ಅಲ್ಲ ಇನ್ನೂ ವಿಶೇಷ ಅಂದರೆ ಮದಗದ ಚಲನಚಿತ್ರಕ್ಕೂ ಕೂಡ ನಿರ್ಮಾಪಕರು ಉಮಾಪತಿ ಶ್ರೀನಿವಾಸ್ ಗೌಡ ಅವರೇ ಆಗಿದುರಾ ಬಚ್ಚನ್ ಚಿತ್ರದ ನಿರ್ದೇಶನದ ವೇಳೆಯೂ ಕೂಡ ಮಹೇಶ್ ಅವರು ಸಿನಿಮಾದ ನಿರ್ಮಾಣಕ್ಕಾಗಿ ಸಾಕಷ್ಟು ಸಹಾಯವನ್ನು ಮಾಡಿದರೆ ಇನ್ನೂ ರಾಬರ್ಟ್ ಚಲನಚಿತ್ರ ನಿರ್ದೇಶಕರಾದ ತರುಣ್ ಸುಧೀರ್ ಅವರಿಗೆ ನಿರ್ದೇಶನದಲ್ಲಿ ಬಹಳಷ್ಟು ಸಹಾಯ ಮಾಡಿದ ಮಹೇಶ್ ಕುಮಾರ್ ಗೆ ಉಮಾಪತಿಯವರು ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಮದಗಜ ಚಲನಚಿತ್ರವು ಕೂಡ ಸಾಕಷ್ಟು ಚಿತ್ರೀಕರಣ ಮುಗಿದಿದ್ದು ಇನ್ನೇನು ರಿಲೀಸ್ಗೆ ತಯಾರಾಗುತ್ತಾ ಇದ್ದೆ ಮದಗದ ಚಲನಚಿತ್ರದಲ್ಲಿ ರೋರಿಂಗ್ ಸ್ಟಾರ್ ಮುರಳಿ ಅವರು, ನಟನಾಗಿ ಅಭಿನಯ ಮಾಡುತ್ತಿದ್ದು ಈ ಚಲನಚಿತ್ರದ ನಾಯಕಿ ಪಾತ್ರವನ್ನು ಆಶಿಕಾ ರಂಗನಾಥ್ ಅವರು ನೆರವೇರಿಸಲಿದ್ದಾರೆ ಹಾಗೂ ಜಗಪತಿ ಬಾಬು ಇವರುಗಳು ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಾಬರ್ಟ್ ಚಿತ್ರವೂ ರಿಲೀಸ್ ಆದ ಮೊದಲನೇ ವಾರವೇ ಎಪ್ಪತ್ತೆಂಟು ಕೋಟಿ ಕಲೆಕ್ಷನ್ ಪಡೆದಿದ್ದು ಮುಂದಿನ ವಾರದಿಂದ ಕರ್ನಾಟಕ ರಾಜ್ಯಾದ್ಯಂತ ರಾಭಾ ಚಿತ್ರತಂಡವು ತನ್ನ ವಿಜಯವನ್ನು ಸಂಭ್ರಮಿಸುವುದಕ್ಕಾಗಿ ವಿಜಯ ಯಾತ್ರೆ ಕೈಗೊಳ್ಳಲಿದ್ದಾರೆ. ರಿಲೀಸ್ ಗೆ ತಯಾರಾಗಿರುವ ಮದಗಜ ಚಲನಚಿತ್ರಕ್ಕೂ ಕೂಡ ಆಲ್ ದಿ ಬೆಸ್ಟ್ ತಿಳಿಸೋಣ ಧನ್ಯವಾದಗಳು.

LEAVE A REPLY

Please enter your comment!
Please enter your name here