ಲಕ್ಷ್ಮಿ ಬಾರಮ್ಮ ಧಾರವಾಯಿಯಲ್ಲಿ ನಟನೆ ಮಾಡುತ್ತಿರೋ ಈ ನಟಿ ಸೌಂದರ್ಯ ಅವರ ಅಕ್ಕ ಅಂತೇ …. ಹಾಗಾದ್ರೆ ಅವರು ಯಾರು ಗೊತ್ತ ..

134

ಫ್ರೆಂಡ್ಸ್ ಕಲಾದೇವಿಯ ಸೇವೆ ಮಾಡಬೇಕೆಂದರೆ ಅದಕ್ಕೆ ಬಹಳಷ್ಟು ಸಾಧನೆ ಮಾಡಬೇಕಾಗಿರುತ್ತದೆ ಇನ್ನೂ ಕಲಾದೇವಿ ಎಲ್ಲರಿಗೂ ಒಲಿಯುವುದಿಲ್ಲ ಆ ಕಲಾಸರಸ್ವತಿ ಒಲಿದರೆ ಖಂಡಿತವಾಗಿಯೂ ಆಕೆ ಆಶೀರ್ವಾದದಿಂದ ದೊಡ್ಡ ಹೆಸರನ್ನ ಮಾಡಬಹುದು ಅದೇ ರೀತಿ ಕಿರುತೆರೆಯ ಅಲ್ಲಿ ಅಪಾರ ಯಶಸ್ಸು ಜನಪ್ರಿಯತೆ ಪಡೆದುಕೊಂಡಿದ್ದ ಅಂತಹ ಧಾರಾವಾಹಿಯಾಗಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಬಹಳಷ್ಟು ಜನಪ್ರಿಯತೆ ಗೊಂಡಿದ್ದು ಇನ್ನೂ ಈ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ಕವಿತಾ ಗೌಡ ಅವರು ಲಕ್ಕಿ ಪಾತ್ರವನ್ನು ನಿರ್ವಹಿಸುತ್ತಾ ಇದ್ದರು .

ಆದರೆ ಕಾರಣಾಂತರಗಳಿಂದ ಧಾರಾವಾಹಿ ಯಿಂದ ದೂರ ಉಳಿದರೂ ಕವಿತಾ ಗೌಡ ಅವರು ಆನಂತರ ಈ ಲಚ್ಚಿ ಪಾತ್ರಕ್ಕೆ ಅಭಿನಯ ಮಾಡಲು ಆಯ್ಕೆ ಮಾಡಿಕೊಂಡದ್ದು ರಶ್ಮಿ ಪ್ರಭಾಕರ್. ಹೌದು ನಟಿ ರಶ್ಮಿ ಪ್ರಭಾಕರ್ ಅವರ ಪರಿಚಯ ನಿಮಗೂ ಸಹ ಇರುತ್ತದೆ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷಿ ಪಾತ್ರವನ್ನು ನಿರ್ವಹಿಸುತ್ತಾ ಇದ್ದ ನಟಿ ರಶ್ಮಿ ಪ್ರಭಾಕರ್ ಅವರು ಧಾರಾವಾಹಿಗೆ ಬರುವ ಮುನ್ನ ಇವರ ಮನೆಯಲ್ಲಿ ಯಾರೂ ಸಹ ಕಲಾವಿದರಿರಲಿಲ್ಲ ಆದರೆ ರಶ್ಮಿ ಪ್ರಭಾಕರ್ ಅವರ ಅಕ್ಕ ಮಾತ್ರ ಬಹಳ ಪ್ರಖ್ಯಾತಿ ಪಡೆದುಕೊಂಡಿದ್ದ ನಟಿಯಾಗಿದ್ದರು.

ಇವರು ಆಗ ದಕ್ಷಿಣ ಭಾರತದ ಖ್ಯಾತ ನಟಿ ಆಗಿದ್ದರು. ಆದರೆ ಈಗ ಅವರು ನಮ್ಮ ಜೊತೆ ಇಲ್ಲಾ. ಅವರ ಪ್ರೇರಣೆ ಯಿಂದಲೇ ರಶ್ಮಿ ಪ್ರಭಾಕರ್ ಅವರು ನಟಿಯಾಗಬೇಕೆಂಬ ಕನಸು ಕಟ್ಟಿಕೊಂಡಿದ್ದರು ಅದರಂತೆಯೇ ಇದೀಗ ಕನ್ನಡ ಸಿನಿಮಾ ಇಂಡಸ್ಟ್ರಿ ಗೂ ಸಹ ಕಾಲಿಡುತ್ತಿದ್ದಾರೆ ರಶ್ಮಿ ಪ್ರಭಾಕರ್ ಅವರು.ಹೌದು ನೀವು ಯೋಚಿಸುತ್ತಿರಬಹುದು ರಶ್ಮಿ ಪ್ರಭಾಕರ್ ಅವರ ಸಹೋದರಿ ಯಾರೆಂದು ನಟಿ ರಶ್ಮಿ ಪ್ರಭಾಕರ್ ಅವರ ಅಕ್ಕ ಬೇರೆ ಯಾರು ಅಲ್ಲ ದಕ್ಷಿಣ ಭಾರತದ ಖ್ಯಾತ ನಟಿಯಾಗಿದ್ದ ಸೌಂದರ್ಯ ಅವರು. ರಶ್ಮಿ ಪ್ರಭಾಕರ್ ಅವರಿಗೆ ನಟಿ ಸೌಂದರ್ಯ ಅವರು ಸಂಬಂಧದಲ್ಲಿ ಅಕ್ಕ ಆಗಬೇಕು. ನಟಿ ಸೌಂದರ್ಯ ಅವರ ಮೊದಲಿನ ಹೆಸರು ಸೌಮ್ಯ ಎಂದು. ಅವರ ಹೆಸರಿನ ತಕ್ಕಂತೆ ಸೌಂದರ್ಯ ಅವರು ನೋಡಲು ಕೂಡ ತುಂಬ ಸುಂದರವಾಗಿ ಇದ್ದರು, ಹಾಗೆ ಸೌಮ್ಯ ಸ್ವಭಾವದವರು ಸಹ ಆಗಿದ್ದರೂ ಸೌಂದರ್ಯ ಈ ನಟಿ ಜುಲೈ 18 1971 ರಂದು ಮುಳಬಾಗಿಲಿನಲ್ಲಿ ಜನಿಸಿದ್ದರು.

ಇವರ ತಂದೆಯ ಹೆಸರು ಕೆ.ಎಸ್‌ ಸತ್ಯನಾರಾಯಣ ಮತ್ತು ತಾಯಿಯ ಹೆಸರು ಕೆ.ಎಸ್ ಮಂಜುಳಾ. ಇವರ ತಂದೆ ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರೈಟರ್ ಮತ್ತು ನಿರ್ಮಾಪಕರಾಗಿದ್ದಾರೆ. ನಟಿ ಸೌಂದರ್ಯ ಅವರು ಎಂ.ಬಿ.ಬಿ.ಎಸ್ ಓದುತ್ತ ಇರುವ ಸಮಯದಲ್ಲಿ ಒಂದು ವರ್ಷದಲ್ಲಿಯೆ ತಮ್ಮ ಎಜುಕೇಶನ್&ಡಿಸ್ ಕಂಟಿನ್ಯೂ ಮಾಡಿ ನಟನೆ ಕಡೆಗೆ ಮುಖಮಾಡಿದರು. ಸೌಂದರ್ಯ ಅವರು ಮೊದಲು ಕನ್ನಡದಲ್ಲಿ ಅಭಿನಯಿಸಿದರು ಹೌದು 1992 ರಲ್ಲಿ ಗಂಧರ್ವ ಎಂಬ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.

ನಟಿ ಸೌಂದರ್ಯ ಅವರು ತೆಲುಗು ಕನ್ನಡ ತಮಿಳು ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಹೆಚ್ಚು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಗಂಧರ್ವ ಚಿತ್ರ ಆದಮೇಲೆ ಕನ್ನಡದಲ್ಲಿ ನನ್ನ ತಂಗಿ ಬಾ ನನ್ನ ಪ್ರೀತಿಸು, ರಾಜಾಧಿರಾಜ, ವಿಜಯಕ್ರಾಂತಿ, ತೂಗುವೆ ಕೃಷ್ಣನ, ಸಿಪಾಯಿ, ದೋಣಿಸಾಗಲಿ, ನಾನು ನನ್ನ ಹೆಂಡ್ತೀರು, ಆರ್ಯಭಟ, ನಾಗದೇವತೆ, ಶ್ರೀಮಂಜುನಾಥ, ವಿಜಯದಶಮಿ, ದ್ವೀಪ, ಶ್ರೀ ರೇಣುಕಾದೇವಿ, ಶ್ವೇತ ನಾಗರ, ಆಪ್ತಮಿತ್ರ ಚಿತ್ರಗಳಲ್ಲಿ ನಟಿಸಿದ್ದಾರೆ.

ಸೌಂದರ್ಯ ಅವರ ಮೊದಲನೆಯ ಚಿತ್ರವು ಕೂಡ ಕನ್ನಡ ಮತ್ತು ಕೊನೆಯ ಚಿತ್ರವು ಕೂಡ ಕನ್ನಡದಲ್ಲಿಯೆ. ನಟಿ ಸೌಂದರ್ಯ ಅವರು ಕೊನೆಯದಾಗಿ ವಿಷ್ಣುವರ್ಧನ್ ಅವರ ಅಭಿನಯದ ಆಪ್ತಮಿತ್ರ ಚಿತ್ರದಲ್ಲಿ ಅದ್ಭುತವಾಗಿ ನಟನೆ ಮಾಡಿದ್ದರು ಇನ್ನು ನಟಿ ಸೌಂದರ್ಯ ಅವರು ಏಪ್ರಿಲ್ 27 2003 ರಂದು ಜಿ.ಎಸ್ ರಘು ಎಂಬುವವರನ್ನು ವಿವಾಹವಾಗಿದ್ದರು.

ನಮಗೆಲ್ಲರಿಗೂ ತಿಳಿದಿರುವ ಹಾಗೆ ಸೌಂದರ್ಯ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಇಹಲೋಕ ತ್ಯಜಿಸಿದರು. ಸೌಂದರ್ಯ ಅವರು ಏಪ್ರಿಲ್ 17 2004ರಂದು ನಮ್ಮನ್ನೆಲ್ಲ ಅಗಲಿದರು. ನಟಿ ಸೌಂದರ್ಯ ಅವರು ಈಗ ನಮ್ಮ ಜೊತೆ ಇಲ್ಲದೇ ಇದ್ದರೂ ಕೂಡ ಇವರು ಎಲ್ಲಾ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿದ್ದಾರೆ. ಸೌಂದರ್ಯ ಅವರ ಅಭಿನಯದ ಯಾವ ಸಿನಿಮಾ ನಿಮಗೆ ಫೇವರಿಟ್ ತಪ್ಪದೇ ಕಾಮೆಂಟ್ ಮಾಡಿ.