Sanjay Kumar
3 Min Read

ತಮ್ಮ ನಗುಮುಖದಿಂದಲೇ ಪ್ರತಿಯೊಬ್ಬರ ಮನಸ್ಸು ಗೆದ್ದ ಇವರು ಕನ್ನಡ ಚಿತ್ರರಂಗದಲ್ಲಿ ಅದ್ಬುತ ನಟ ಹೌದು ಪವರ್ ಸ್ಟಾರ್ ಅಂತಾನೆ ಜನಪ್ರಿಯರಾದ ಇವರು ನಿಜವಾಗಿಯೂ ಪವರ್ ಗೆ ಪವರ್ ಅಂತ ಹೇಳಬಹುದು ಇನ್ನು ಇವರು ಅಭಿಮಾನಿಗಳೇ ದೇವರು ಎಂದು ಕುಟುಂಬದಿಂದ ಬಂದವರು ಯಾರು ಸಹ ಕಲ್ಪನೆ ಮಾಡಲು ಸಾಧ್ಯವಾಗದಂತಹ ರೀತಿಯಲ್ಲಿ ಅಕ್ಟೋಬರ್ 29ನೇ ತಾರೀಕಿನಂದು ನಮ್ಮ ಅಪ್ಪು ನಮ್ಮೆಲ್ಲರನ್ನ ಅಗಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಅಪ್ಪು ಅವರು,

ನಮ್ಮನ್ನೆಲ್ಲಾ ಅಗಲಿ ತಿಂಗಳು ಕಳೆಯಿತು ಆದರೆ ಅಂದುಕೊಳ್ಳಲು ಸಾಧ್ಯವಾಗುತ್ತಿಲ್ಲ ಪುನೀತ್ ನಮ್ಮ ಜತೆ ಇಲ್ಲ ಎಂದು ಹೌದು ಅವರು ಇಲ್ಲದಿರಬಹುದು ಆದರೆ ಖಂಡಿತವಾಗಿಯೂ ಅವರ ಮುಗ್ಧ ನಗು ಸದಾ ಅಭಿಮಾನಿಗಳ ಮನಸ್ಸಿನಲ್ಲಿರುತ್ತದೆ. ಇನ್ನೂ ಈ ಸಮಯದಲ್ಲಿ ನಾವು ಅಪ್ಪು ಅವರ ಕುಟುಂಬದ ಕುರಿತು ಹೇಳಲೇಬೇಕು ಹೌದು ಅಪ್ಪನಂತೆ ಮಕ್ಕಳು ಸಹ ಮಾನವೀಯ ಮೌಲ್ಯಗಳನ್ನ ಕಲಿಯುತ್ತಾ ಬೆಳೆದುಬಂದಿದ್ದಾರೆ, ಹಾಗೂ ಮೊದಲ ಮಗಳು ಧೃತಿ ಅವರಿಗೆ ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕರೆ ಮೂಲಕ ಸಮಾಧಾನದ ಮಾತುಗಳನ್ನು ಆಡಿದ್ದಾರೆ, ಹಾಗಾದರೆ ತಿಳಿಯೋಣ ಬನ್ನಿ ದೃಷ್ಟಿ ಅವರ ಜೊತೆ ಡಿ ಬಾಸ್ ಮಾತನಾಡಿಸುವುದೇನು ಎಂದು ಸಂಪೂರ್ಣವಾಗಿ ಈ ಲೇಖನವನ್ನ ತಿಳಿಯಿರಿ.

ನಟ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಬಿಟ್ಟು ಈಗಾಗಲೆ ತಿಂಗಳುಗಳೇ ಕಳೆಯುತ್ತಾ ಬಂದಿದೆ ಹಾಗೂ ಅಪ್ಪು ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಅವರು ಇಲ್ಲ ಎಂಬ ಸತ್ಯವನ್ನ ಇಂದಿಗೂ ಅರಗಿಸಿಕೊಳ್ಳಲು ಸಾಧ್ಯನೇ ಆಗುತ್ತಾ ಇಲ್ಲಾ. ಈ ಕಾರ್ಯಕ್ರಮದಲ್ಲಿ ಇಡಿ ಕರ್ನಾಟಕದಲ್ಲಿ ಮಾತ್ರ ಅಲ್ಲದೆ ಇಡಿ ದೇಶದಲ್ಲಿ, ಇಲ್ಲಿಯವರೆಗೆ ಯಾರ ಪುಣ್ಯಸ್ಮರಣೆ ದಿವಸದಂದು ಸೇರದಷ್ಟು ಅಭಿಮಾನಿಗಳು ಪುನೀತ್ ಅವರ ಪುಣ್ಯಸ್ಮರಣೆಗೆ ಈ ದಿನದಂದು ಸೇರಿದ್ದರು ಖಂಡಿತವಾಗಿಯೂ ಇದು ಅಪ್ಪು ಅವರ ವ್ಯಕ್ತಿತ್ವವನ್ನ ಅಪ್ಪು ಅವರ ಗುಣವನ್ನೂ ನಮಗೆಲ್ಲರಿಗೂ ತಿಳಿಸುತ್ತದೆ ಪೂರ್ವಜರು ಹೇಳುತ್ತಿದ್ದರಲ್ಲ ಮನುಷ್ಯನ ವ್ಯಕ್ತಿತ್ವ ಅಥವಾ ಮನುಷ್ಯ ಏನನ್ನು ಸಂಪಾದಿಸಿದ್ದಾನೆ ಎದ್ದು ತಿಳಿಯುವುದಕ್ಕೆ ಆತನ ಮದುವೆ ದಿನದಂದು ಮತ್ತು ಆತನ ಅಂತ್ಯಸಂಸ್ಕಾರದ ದಿನದಂದು ನೋಡಬೇಕೆಂದು ನಿಜಕ್ಕೂ ಈ ಮಾತು ಸತ್ಯ ಅನಿಸುತ್ತದೆ ನಮ್ಮ ಪುನೀತ್ ಅವರ ವಿಚಾರದಲ್ಲಿ ಯಾಕೆಂದರೆ ಅವರು ಸಂಪಾದಿಸಿದ್ದು ಏನು ಎಂದು ಕೇಳಿದವರಿಗೆ ಒಮ್ಮೆ ಇವರ ಅಂತ್ಯ ಸಂಸ್ಕಾರದ ದಿನದ ಬಗ್ಗೆ ಒಮ್ಮೆ ತಿಳಿಯಿರಿ.

ಇನ್ನೂ ಪುನೀತ್ ಅವರ ಮೊದಲ ಮಗಳು ಧೃತಿ ಅವರ ಬಗ್ಗೆ ಹೇಳುವುದಾದರೆ ಇವರು ಸ್ಕಾಲರ್ಶಿಪ್ ಪಡೆದು ವಿದೇಶದಲ್ಲಿ ಓದುತ್ತಿದ್ದಾರೆ ಹಾಗೂ ವಿದ್ಯಾಭ್ಯಾಸದ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದಾರೆ ಧೃತಿ. ಧೃತಿ ಅವರು ತಂದೆಯ ಸಾವಿನ ಸುದ್ದಿ ಕೇಳುತ್ತಿದ್ದ ಹಾಗೆ ವಿದೇಶದಿಂದ ಅವರು ಬಂದು ಅಪ್ಪನ ಅಂತಿಮ ದರ್ಶನ ಪಡೆದು ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮುಗಿಸಿ ಪುನಃ ವಿದೇಶಕ್ಕೆ ತೆರಳಿದ್ದಾರೆ. ಧೃತಿ ಅವರು ಮತ್ತೆ ತಮ್ಮ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವ ಮುನ್ನ ದರ್ಶನ್ ಅವರು ದೃಷ್ಟಿ ಅವರಿಗೆ ಕಾಲ್ ಮಾಡಿ ಪುಟ್ಟಿ ನೀನು ತಲೆ ಕೆಡಿಸಿಕೊಳ್ಳಬೇಡ ನಿನ್ನ ಜೊತೆ ಇಡೀ ರಾಜ್ ಕುಟುಂಬ ಮಾತ್ರ ಅಲ್ಲ ಇಡೀ ಕರ್ನಾಟಕ ಚಿತ್ರರಂಗವೇ ಇದೆ, ನಾವು ಕೂಡ ದೊಡ್ಮನೆಯಿಂದಲೆ ಬೆಳೆದು ಬಂದಿದ್ದೇವೆ. ದೊಡ್ಮನೆ ಹೆಸರನ್ನು ನೀನು ಕೂಡ ನಿನ್ನ ತಂದೆಯಂತೆಯೆ ವಿಶ್ವಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಮಾತನಾಡಿದ್ದಾರೆ ಡಿ ಬಾಸ್ ಶ್ರುತಿ ಅವರ ಜೊತೆ.

ನಿನಗೆ ಸಿನಿಮಾ ರಂಗಕ್ಕೆ ಬರಲು ಆಸಕ್ತಿ ಇಲ್ಲದಿದ್ದರೆ ವಿದ್ಯಾಭ್ಯಾಸವನ್ನು ಮುಗಿಸಿದ ಬಳಿಕ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡು, ನಿಮ್ಮ ತಂದೆಯ ಹೆಸರನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಬೇಕು ಆ ದೇವರು ನಿನಗೆ ಆ ಶಕ್ತಿ ನೀಡಲಿ ನಿನ್ನ ಮುಂದಿನ ಭವಿಷ್ಯಕ್ಕೆ ಯಾವುದೇ ರೀತಿಯ ಸಹಾಯ ಬೇಕಾದರೂ ಇಡೀ ಚಿತ್ರರಂಗ ನಿನ್ನ ಬೆಂಬಲಕ್ಕೆ ಇರುತ್ತದೆ ಅದು ಎಂದಿಗೂ ಮರೆಯ ಬೇಡ ಎಂದು ತಮ್ಮ ಮನದಾಳದ ಮಾತುಗಳನ್ನ ಹೇಳಿದ್ದಾರೆ ಡಿ ಬಾಸ್. ಧೃತಿ ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ನಾನು ಕೂಡ ಆಶಿಸೋಣ ಹಾಗೂ ಈ ನೋವಿನ ತಡೆಯುವ ಶಕ್ತಿ ರಾಜ್ ಕುಟುಂಬದವರಿಗೆ ನೀಡಲಿ ಎಂದು ಪ್ರಾರ್ಥಿಸೋಣ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.