ವಿಪರೀತ ತಲೆನೋವು ಬರುತ್ತಾ ಇದೆಯಾ ಹಾಗಾದರೆ ಈ ಒಂದು ಮನೆಮದ್ದು ಮಾಡಿ ನೋಡಿ ಸಾಕು ..ಬೇಗ ಗುಣ ಆಗುತ್ತೆ…

189

ಸೈನಸ್ ಸಮಸ್ಯೆ ನಿವಾರಣೆಗೆ ಮಾಡಿ ಪರಿಹಾರ ಈ ಮನೆಮದ್ದಿನಿಂದ ಶ್ವಾಸಕೋಶವನ್ನು ಶುಚಿ ಮಾಡಬಹುದು.ನಮಸ್ಕಾರಗಳು ಪ್ರಿಯ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ನಾವು ಹೇಳಲು ಹೊರಟಿರುವ ಈ ಮನೆ ಮದ್ದು ನಮ್ಮ ಉಸಿರಾಟಕ್ಕೆ ಸಂಬಂಧಪಟ್ಟ ವಿಚಾರದ ಕುರಿತು, ಹೌದು ನಮಗೆ ಉಸಿರಾಟ ಎಷ್ಟು ಅಗತ್ಯ ಮನುಷ್ಯನು ಉಸಿರು ಆಡುವಾಗ ಮಾತ್ರ ಅವನನ್ನು ಜೀವಂತ ಅಂತ ಹೇಳುತ್ತಾರೆ ಇಲ್ಲವಾದರೆ ಅವನನ್ನು ಹೆಸರಿಡಿದು ಸಹ ಕರೆಯುವುದಿಲ್ಲ ಅವನನ್ನ ಶ..ವ ಅಂತ ಕರೆಯುತ್ತಾರೆ

ಹಾಗಾಗಿ ಉಸಿರಾಡುವುದು ಮನುಷ್ಯನಿಗೆ ಅಗತ್ಯ ಮತ್ತು ಉಸಿರಾಡುವುದರಿಂದ ನಮ್ಮ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತವೆ ನಮ್ಮ ಉಸಿರಾಟದ ಪ್ರಕ್ರಿಯೆಯಲ್ಲಿ ಆಕ್ಸಿಜನ್ ಅಂಶವು ನಮ್ಮ ದೇಹಕ್ಕೆ ದೊರೆಯುತ್ತದೆ ಹಾಗೂ ಇದರಿಂದ ನಮ್ಮ ದೇಹದ ಪ್ರತಿ ಕಣವೂ ಜೀವಂತವಾಗಿರಲು ಸಾಧ್ಯ ವಾಗುತ್ತದೆ ಮತ್ತು ತನ್ನ ಕ್ರಿಯೆ ನಡೆಸಲು ಸಾಧ್ಯವಾಗುತ್ತದೆ.

ನಾವು ಉಸಿರು ತೆಗೆದುಕೊಂಡು ಬಿಡುವಾಗ ನಮ್ಮ ದೇಹದಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ಹೊರ ಹಾಕಬಹುದು ಇದರಿಂದ ಶ್ವಾಸಕೋಶವು ತನ್ನ ಕ್ರಿಯೆ ಸರಿಯಾಗಿ ನಡೆಸುತ್ತದೆ. ಈ ನಡುವೆ ಸೈನಸ್ ಸಮಸ್ಯೆ ಎಂಬ ಉಸಿರಾಟಕ್ಕೆ ಸಂಬಂಧಪಟ್ಟ ತೊಂದರೆ ಒಂದು ಕೆಲವರಿಗೆ ಬಾಧಿಸಿರುತ್ತದೆ ಇದು ಉಸಿರಾಡುವಾಗ ಬಹಳ ಸೆನ್ಸಿಟಿವಿಟಿಯನ್ನು ಉಂಟುಮಾಡುತ್ತದೆ ಹೌದು ಮೂಗಿನ ಭಾಗದಲ್ಲಿ ತಣ್ಣಗೆ ಆಗುವುದು ಅಥವಾ ಇರುಸುಮುರುಸಾಗುವುದು ಹೀಗೆಲ್ಲಾ ಆಗುತ್ತದೆ, ಈ ಸಮಸ್ಯೆಗೆ ನಾವು ಪರಿಹಾರ ಹೇಳುವುದಾದರೆ

ಹೌದು ನಾವು ವೈದ್ಯರ ಬಳಿ ಹೋಗಿ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡು ಬರಬಹುದು ಜೊತೆಗೆ ಈ ಪರಿಹಾರದ ಜೊತೆಗೆ ಈ ಮನೆಮದ್ದನ್ನು ಸಹ ಪಾಲಿಸಬೇಕಾಗಿರುತ್ತದೆ ಹೌದು ಈ ಮನೆ ಮದ್ದು ಮಾಡುವುದು ತುಂಬ ಸುಲಭ.ಸಾಕಷ್ಟು ಮನೆಮದ್ದುಗಳಿವೆ ಸೈನಾ ಸಮಸ್ಯೆ ನಿವಾರಣೆಗೆ ಅದರಲ್ಲಿ ಮೊದಲನೆಯದ್ದು ಈ ಸಮಸ್ಯೆಯಿಂದ ಬಳಲುತ್ತಿರುವವರು ಬಿಸಿ ನೀರನ್ನೇ ಕುಡಿಯುವುದು ಉತ್ತಮ, ಹೌದು ಈ ಸಮಸ್ಯೆ ಇರುವವರು ತಪ್ಪದೆ ಬಿಸಿ ನೀರನ್ನೇ ಕುಡಿಯಬೇಕು ಯಾವುದೇ ಕ್ಷಣದಲ್ಲಿ ಆಗಲಿ ಈ ವ್ಯಕ್ತಿಗಳು ಬಿಸಿ ನೀರನ್ನೇ ಸೇವಿಸಬೇಕು ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಈ ತೊಂದರೆಯು ಕಾಡುವುದು ಸ್ವಲ್ಪ ನಿಯಂತ್ರಣಕ್ಕೆ ಬರುತ್ತದೆ.

ಎರಡನೆಯದಾಗಿ ಬೆಳಿಗ್ಗೆ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಅಂದರೆ ಬಿಸಿ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಕುಡಿಯುತ್ತ ಬರಬೇಕು ಹೀಗೆ ಮಾಡುವುದರಿಂದ ಕೂಡ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.ಪ್ರಾಣಾಯಮ ಎಂಬುದು ಉತ್ತಮ ವ್ಯಾಯಾಮವಾಗಿದೆ ಈ ಶ್ವಾಸಕೋಶಕ್ಕೆ ಸಂಬಂಧಪಟ್ಟ ತೊಂದರೆಯಿಂದ ಬಳಲುತ್ತಿರುವವರಿಗೆ ಹಾಗಾಗಿ ಈ ಪರಿಹಾರವಲ್ಲ ತಪ್ಪದೆ ನೀವು ಕಲಿತು ಈ ಪರಿಹಾರವನ್ನು ಮಾಡುತ್ತ ಬರುವುದು ತುಂಬಾ ಒಳ್ಳೆಯದು.

ಇನ್ನೂ ಶ್ವಾಸಕೋಶ ಸಂಬಂಧಪಟ್ಟ ಸಮಸ್ಯೆ ಇರುವವರು ಬೆಳ್ಳುಳ್ಳಿಯನ್ನು ನೀರಿಗೆ ಹಾಕಿ ನೀರನ್ನು ಕುದಿಸಿ ಆ ನೀರನ್ನು ಶೋಧಿಸಿ ಕುಡಿಯುತ್ತ ಬರಬೇಕು ಅಥವಾ ಬೆಳಿಗ್ಗೆ ಮಧ್ಯಾಹ್ನ ಊಟದ ನಂತರ ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನುತ್ತ ಬರುವುದರಿಂದ ಕೂಡ ಆರೋಗ್ಯ ತುಂಬ ಚೆನ್ನಾಗಿರುತ್ತದೆ ಮತ್ತು ಈ ಶ್ವಾಸ ಸಂಬಂಧಿ ಸಮಸ್ಯೆ ಕೂಡ ನಿಯಂತ್ರಣದಲ್ಲಿರುತ್ತದೆ.

ಹಾಗಾಗಿ ಈ ಕೆಲವೊಂದು ಮನೆ ಮದ್ದುಗಳನ್ನು ಪಾಲಿಸಿ ಈ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಿ ಮತ್ತು ನಿಮಗೆ ತುಂಬಾನೆ ಈ ಸಮಸ್ಯೆ ಕಾಡುತ್ತಾ ಇದೆ ಅಂದರೆ ಇದರ ಜೊತೆಗೆ ವೈದ್ಯರು ನೀಡುವಂತಹ ಸಲಹೆ ಪರಿಹಾರಗಳನ್ನು ಸಹ ಪಾಲಿಸಿ ಇದರಿಂದ ನೀವು ಈ ತೊಂದರೆಯಿಂದ ಬಹಳ ಬೇಗ ಹೊರ ಬರಬಹುದು ಅಥವಾ ಈ ತೊಂದರೆಯನ್ನು ನಿಯಂತ್ರಣದಲ್ಲಿ ಇಡಬಹುದು.

WhatsApp Channel Join Now
Telegram Channel Join Now