ಶಿವನಿಗೆ ಈ ಎಲೆಯಿಂದ ಅಭಿಷೇಕ ಮಾಡುತ್ತ ಪೂಜೆ ಮಾಡುವುದರಿಂದ ಕೇವಲ ಈ ಜನ್ಮ ಮಾತ್ರ ಅಲ್ಲ ಮತ್ತೊಂದು ಜನ್ಮಕ್ಕೂ ಪುಣ್ಯವನ್ನ ಸಂಪಾದನೆ ಮಾಡುತ್ತೀರಾ… ಅಷ್ಟಕ್ಕೂ ಆ ಎಲೆ ಯಾವುದು ಗೊತ್ತ …

273

ಶಿವನ ಆರಾಧನೆಯಲ್ಲಿ ಯಾವ ಹೂವುಗಳಿಗೆ ಪ್ರಾಮುಖ್ಯತೆ ಕೊಡುತ್ತಾರೋ ಇಲ್ಲವೋ ಆದರೆ ಬಿಲ್ವದ ಎಲೆ ಗೆ ಬಿಲ್ವ ಹೂವು ಬಿಲ್ವ ಕಾಯಿಗೆ ಮಾತ್ರ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ ಹೇಗೆ ವಿಷ್ಣುವಿನ ಆರಾಧನೆಯಲ್ಲಿ ತುಳಸಿ ಎಲೆ ಗೆ ಪ್ರಾಧಾನ್ಯತೆ ನೀಡಲಾಗುತ್ತದೆ ಅಷ್ಟೇ ಪ್ರಾಮುಖ್ಯತೆಯನ್ನು ಶಿವನ ಆರಾಧನೆಯಲ್ಲಿ ಬಿಲ್ವ ಎಲೆಗೆ ನೀಡಲಾಗುತ್ತದೆ ಉಪನಿಷತ್ ಗಳಲ್ಲಿಯೂ ಕೂಡ ಬಿಲ್ವ ಮರದ ಉಲ್ಲೇಖವಿದ್ದು, ಶಿವನ ಆರಾಧನೆಯಲ್ಲಿ ಯಾಕೆ ಬಿಲ್ವದ ಎಲೆ ಗೆ ಎಷ್ಟು ಪ್ರಾಧಾನ್ಯತೆ ನೀಡಲಾಗುತ್ತದೆ ಎಂಬುದರ ಕುರಿತು ನೀವು ಕೂಡ ತಿಳಿಯಬೇಕು ಅಲ್ವಾ ಹಾಗಾದರೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಇದರ ಕುರಿತು ನಿಮಗೆ ಹೆಚ್ಚಿನ ಮಾಹಿತಿಯನ್ನು ತಿಳಿಸುತ್ತೇವೆ ಇಂದಿನ ಲೇಖನದಲ್ಲಿ. ಹೌದು ಹಿಂದೂ ಸಂಪ್ರದಾಯದಲ್ಲಿ ಹಲವು ವಿಶೇಷ ಪದ್ಧತಿಗಳಿವೆ ಸಂಸ್ಕೃತಿಗಳಿವೆ ಹಾಗೆ ಹಲವು ಪೂಜಾ ವಿಧಾನಗಳಿವೆ ನಾವು ಪ್ರತಿಯೊಂದು ದಿನವೂ ವಿಶೇಷ ಪೂಜೆಯನ್ನ ಮಾಡುತ್ತೇವೆ.

ಕೆಲವರು ಮನೆದೇವರ ವಾರ ವನ್ನು ವಾರವಾಗಿ ಆಚರಿಸಿದರೆ ಇನ್ನೂ ಕೆಲವರು ಇಷ್ಟ ದೇವರ ವಾರವನ್ನು ವಿಶೇಷವಾಗಿ ಆರಾಧನೆಯನ್ನು ಮಾಡುತ್ತಾರೆ ಇವತ್ತಿನ ಮಾಹಿತಿಯಲ್ಲಿ ಸೋಮವಾರದ ದಿನದಂದು ನಾವು ಶಿವನ ಆರಾಧನೆಯನ್ನು ಮಾಡುವಾಗ ಹಾಗೂ ಶಿವನ ವಿಶೇಷ ಪೂಜೆಯ ದಿನದಂದು ಶಿವನಿಗೆ ವಿಶೇಷವಾಗಿ ಆರಾಧನೆ ಮಾಡುವಾಗ ನಾವು ಬಿಲ್ವದ ಎಲೆಗಳನ್ನು ಶಿವನಿಗೆ ಅರ್ಪಣೆ ಮಾಡುತ್ತೇವೆ ಚಿಕ್ಕ ಬಿಲ್ವದ ಎಲೆಯನ್ನು ಶಿವನಿಗೆ ಮನಸಾರೆ ಅರ್ಪಿಸಿದರೆ ಆತ ಸಂತನಾಗುತ್ತಾನೆ ಪರಮಾತ್ಮ. ಹಾಗಾದರೆ ಇಷ್ಟೊಂದು ವಿಶೇಷತೆ ಇರುವ ಬಿಲ್ವದ ಎಲೆ ಗೆ ಯಾಕೆ ಇಷ್ಟೊಂದು ಪ್ರಾಧಾನ್ಯತೆ ಶಿವನಿಗೆ ಬಿಲ್ವ ಎಲೆಯನ್ನು ಅರ್ಪಿಸುವುದರಿಂದ ಏನೆಲ್ಲ ಪ್ರಯೋಜನವಾಗುತ್ತದೆ ತಿಳಿಯೋಣ ಬನ್ನಿ.

ಹೌದು ಶಿವನಿಗೆ ಬಿಲ್ವವನ ಅರ್ಪಿಸುವುದರಿಂದ ಬಹಳ ವಿಶೇಷತೆಗಳಿವೆ ಅದರಲ್ಲಿ ಮೊದಲಿಗೆ ಇದರ ಪ್ರಾಮುಖ್ಯತೆ ಕುರಿತು ಹೇಳುವುದಾದರೆ ಒಮ್ಮೆ ಪಾರ್ವತೀದೇವಿಯ ಕಣ್ಣೀರು ಮಂದಾರಪರ್ವತದ ಮೇಲೆ ಬೀಳುತ್ತದೆ ಆ ಕಣ್ಣಿನ ನೀರೇ ಬಿಲ್ವ ಮರವಾಗಿ ಬೆಳೆಯುತ್ತದೆ ಹಾಗೆ ಬಿಲ್ವ ಎಲೆಯಲ್ಲಿರುವ ಆ 3 ಎಲೆಗಳು ಸೃಷ್ಟಿಯ ತ್ರಿಮೂರ್ತಿಗಳನ್ನು ತಿಳಿಸುತ್ತದೆ ಬ್ರಹ್ಮ ವಿಷ್ಣು ಮಹೇಶ್ವರರನ್ನು ಸಂಕೇತಿಸುವ ಈ ಎಲೆ ಪರಮಾತ್ಮನಿಗೆ ಬಹಳ ಪ್ರಿಯವಾದದ್ದು. ಬಿಲ್ವ ಮರದಲ್ಲಿನ ಲಕ್ಷ್ಮೀದೇವಿಯು ನೆಲೆಸಿರುತ್ತಾಳೆ ಜೊತೆಗೆ ಬಿಲ್ವದ ಎಲೆಯಲ್ಲಿ ಪಾರ್ವತಿ ದೇವಿಯು ಬಿಲ್ವ ಮರದ ಬುಡದಲ್ಲಿ ಗಿರಿಜಾದೇವಿಯು ನೆಲೆಸಿರುತ್ತಾಳೆ ಬಿಲ್ವ ಮರದ ಹಣ್ಣಿನಲ್ಲಿ ಕಾತ್ಯಾಯಿನಿ ದೇವಿ ನೆಲೆಸಿರುತ್ತಾಳೆ ಹಾಗೂ ಬಿಲ್ವ ಹೂವಿನಲ್ಲಿ ಗೌರಿ ನೆಲೆಸಿರುತ್ತಾಳೆ.

ಆದಕಾರಣವೆ ಪ್ರತಿಯೊಂದು ಶಿವಾಲಯ ದಲ್ಲಿಯೂ ಕೂಡ ಬಿಲ್ವ ಮರವನ್ನು ಬೆಳೆಸಲಾಗುತ್ತದೆ ಇದು ಆ ಶಿವ ಪರಮಾತ್ಮನಿಗೆ ಇಷ್ಟವಾದ ಮರವಾಗಿದ್ದು ವೇದಗಳಲ್ಲಿ ಉಪನಿಷತ್ತುಗಳಲ್ಲಿ ಉಲ್ಲೇಖಿಸಲಾಗಿದೆ ಮರಗಳ ರಾಜ ಬಿಲ್ವಮರದ ಎಂದು. ಶಿವನನ್ನು ಆರಾಧಿಸುತ್ತಾ ಶಿವನಿಗೆ ಬಿಲ್ವ ಎಲೆಯನ್ನು ಸಮರ್ಪಣೆ ಮಾಡಿದರೆ ಆತನ ಪಾದಕ್ಕೆ ಬಿಲ್ವವನ್ನು ಸಮರ್ಪಣೆ ಮಾಡಿದರೆ ಆರೋಗ್ಯ ವೃದ್ಧಿಯಾಗುತ್ತದೆ ಹಲವು ಸಮಸ್ಯೆಗಳು ದೂರ ಆಗುತ್ತದೆ ಅಷ್ಟೇ ಅಲ್ಲ ಶಿವನ ಲಿಂಗದ ಮೇಲೆ ಬಿಲ್ವದ ಎಲೆಯನ್ನು ಇಡುವಾಗ ಅದರ ತೊಟ್ಟು ನಮ್ಮ ಕಡೆ ಮುಖ ಮಾಡಿರಬೇಕು ಇದರ ಅರ್ಥವೇನೆಂದರೆ ಶಿವಲಿಂಗದ ಶಕ್ತಿಯು ವಾತಾವರಣಕ್ಕೆ ಹಾಗೂ ನಮಗೆ ಆ ತೊಟ್ಟಿನ ಮೂಲಕ ಪಸರಿಸಲಿ ಎಂಬ ನಂಬಿಕೆಯಿಂದಾಗಿ ಶಿವನ ಲಿಂಗದ ಮೇಲೆ ಬಿಲ್ವದ ಎಲೆಯನ್ನು ಈ ರೀತಿಯಾಗಿ ಇಡುವುದು ಪದ್ಧತಿಯಾಗಿದೆ.

ಶಿವಲಿಂಗವನ್ನು ಪೂರ್ತಿಯಾಗಿ ಬಿಲ್ವ ಎಲೆಯಿಂದ ಅಲಂಕರಿಸಿ ಶಿವನಿಗೆ ಆರಾಧನೆ ಮಾಡಿದರೆ ಆ ನಮ್ಮಪ್ಪ ಸಂತಸಗೊಳ್ಳುತ್ತಾನೆ ಬಿಲ್ವದ ಎಲೆಯ ಜೊತೆಗೆ ಶ್ರೀಗಂಧದ ಹೂವುಗಳನ್ನು ಬಿಲ್ವದ ಹೂಗಳನ್ನು ಬಿಲ್ವ ಕಾಯಿಯನ್ನು ಕೂಡ ಪರಮಾತ್ಮನಿಗೆ ಸಮರ್ಪಣೆ ಮಾಡುವುದು ಪದ್ಧತಿಯಾಗಿದೆ ಈ ರೀತಿ ಶಾಸ್ತ್ರಗಳಲ್ಲಿ ಪುರಾಣ ಗ್ರಂಥಗಳಲ್ಲಿ ಬಿಲ್ವದ ಎಲೆಯ ಕುರಿತು ಉಲ್ಲೇಖಗೊಂಡಿದ್ದು ಶಿವನ ಆರಾಧನೆಯಲ್ಲಿ ಏನನ್ನು ಮರೆತರೂ ಶಿವ ಪರಮಾತ್ಮನಿಗೆ ಬಿಲ್ವದ ಎಲೆಯನ್ನು ಸಮರ್ಪಿಸುವುದನ್ನು ಮರೆಯಬೇಡಿ…

WhatsApp Channel Join Now
Telegram Channel Join Now