ಸಣ್ಣ ಪುಟ್ಟ ಅಂಗಡಿಗಳ ಸೀಲ್ ಓಪನ್ ಮಾಡಿ ಉದ್ಘಾಟಿಸಲು ಸಮಂತಾ ಕೇಳುವ ದುಡ್ಡು ಎಷ್ಟು ಗೊತ್ತಾ…ನೋಡಿ ಬಾಯಿ ಬಡ್ಕೊಳ್ತೀರಾ..

Sanjay Kumar
2 Min Read

ನಟಿ ಸಮಂತಾ ಅಂಗಡಿಗಳ ಓಪನಿಂಗ್ ಗೆ ಪಡೆದುಕೊಳ್ಳುವ ಸಂಭಾವನೆ ಎಷ್ಟು? ಇಲ್ಲಿದೆ ನೋಡಿ ಈ ಕುರಿತು ಹೆಚ್ಚಿನ ಮಾಹಿತಿ. ಅಷ್ಟೇ ಅಲ್ಲ ಹೊಸ ಸಿನಿಮಾದಲ್ಲಿ ಅಭಿನಯ ಮಾಡುತ್ತಿರುವ ನಟಿ ಸಮಂತಾ ತಮ್ಮ ಫಸ್ಟ್ ಲುಕ್ ಹಂಚಿಕೊಂಡಿದ್ದು ಹೇಗೆ ಗೊತ್ತಾ!!!ನಟಿ ಸಮಂತಾ ಸದ್ಯ ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಚ್ಚು ಸಂಭಾವನೆ ಪಡೆದುಕೊಳ್ಳುವಂತಹ ಮೋಸ್ಟ್ ಬ್ಯೂಟಿಫುಲ್ ನಟಿಯರಲ್ಲಿ ಒಬ್ಬರು ಹಾಗೆ ನಟಿ ಸಮಂತಾ ಮುಟ್ಟಿದ್ದೆಲ್ಲಾ ಚಿನ್ನ.

ಈಗಾಗಲೇ ಬಹಳಷ್ಟು ಅವಕಾಶಗಳನ್ನು ತಮ್ಮ ಕೈನಲ್ಲಿ ಹಿಡಿದಿರುವ ನಟಿ, ಸ್ವಲ್ಪ ದಿನಗಳ ಹಿಂದೆ ತಮ್ಮ ವಿ…ಚ್ಛೇದನ ವಿಚಾರವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸುದ್ದಿ ಆಗಿದ್ದರು ಮತ್ತು ಹಲವರು ಸಮಂತಾ ದಂಪತಿಗಳ ಕುರಿತು ಬಹಳಷ್ಟು ವಿಚಾರಗಳನ್ನು ಚರ್ಚೆ ಕೂಡ ಮಾಡಿದ್ದರು. ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಕೆರಿಯರ್ ಬಗ್ಗೆ ಯೋಚಿಸುತ್ತಾ ಮೂವ್ಆನ್ ಆಗಿರುವ ನಟಿ ಸಮಂತಾ ದಿ ಫ್ಯಾಮಿಲಿ ಮ್ಯಾನ್ ಎಂಬ ವೆಬ್ ಸೀರೀಸ್ ನಲ್ಲಿಯೂ ಕೂಡ ಅಭಿನಯ ಮಾಡುವ ಮೂಲಕ ರಾಜಿ ಪಾತ್ರದಲ್ಲಿ ಹೆಚ್ಚು ಸದ್ದು ಮಾಡಿದ್ದರು.

ಈಗ ನಟಿ ಸಮಂತಾ ಅವರ ಕುರಿತು ಮತ್ತೊಂದು ವಿಚಾರ ಹೆಚ್ಚು ಚರ್ಚೆಗೆ ಒಳಗಾಗಿದ್ದು ನಟಿ ಸಮಂತಾ ಅವರು ಈಗಾಗಲೇ ಬಹಳಷ್ಟು ಉದ್ಯಮಗಳ ಮೂಲಕ ಹಣ ಸಂಪಾದನೆ ಮಾಡುತ್ತಿದ್ದಾರೆ. ಹೌದು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಹಾಗೂ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿರುವ ನಟಿ ಸಮಂತಾ ಸೋಷಿಯಲ್ ಮೀಡಿಯಾಗಳಲ್ಲಿ ಬ್ರ್ಯಾಂಡ್ ಪ್ರಮೋಶನ್ ಕೂಡ ಮಾಡ್ತಾರೆ. ಅಷ್ಟೆ ಅಲ್ಲಾ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ನಟಿ ಸಮಂತಾ ಕಾರ್ಯಕ್ರಮಗಳಿಗೆ ಅಥವಾ ಯಾವುದಾದರೂ ಉದ್ಘಾಟನೆಗೆ ಹೋದಾಗ ಪಡೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ ನೀವು ಕೂಡ ಶಾಕ್ ಆಗ್ತಿರಾ.

ಹೌದು ಸಾಮಾನ್ಯವಾಗಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳನ್ನು ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಅಥವಾ ದೊಡ್ಡ ದೊಡ್ಡ ಬಿಲ್ಡಿಂಗ್ ಉದ್ಘಾಟನೆಗೆ ಆಹ್ವಾನಿಸುವ ಕೇಳಿರುತ್ತೀರಾ ನೋಡಿರುತ್ತೀರ ಹಾಗೆ ಅದಕ್ಕಾಗಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ದೊಡ್ಡ ದೊಡ್ಡದಾಗಿವೆ ಸಂಭಾವನೆ ಪಡೆದುಕೊಳ್ಳುತ್ತಾರೆ. ಇದರೊಟ್ಟಿಗೆ ಬಂದರೆ ನಟಿ ಸಮಂತಾ ಅವರು ಯಾವುದೇ ಮಳಿಗೆ ಅಥವಾ ಅಂಗಡಿ ಉದ್ಘಾಟನೆಗಾಗಿ ಪಡೆದುಕೊಳ್ಳುವ ಸಂಭಾವನೆ ಬರೋಬ್ಬರಿ ಹದಿನೈದು ಲಕ್ಷ ರೂಪಾಯಿಗಳು ಎಂದು ಹೇಳಲಾಗಿದೆ ಹೌದು ನಟಿ ಸಮಂತಾ ಇದಕ್ಕಿಂತ ಹೆಚ್ಚು ಸಂಭಾವನೆ ಪಡೆದು ಕೊಳ್ಳುವುದಿಲ್ಲ ಅಂತ ಕೂಡ ಹೇಳಲಾಗಿದ್ದು ಇನ್ನೂ ಕೆಲ ಸೆಲೆಬ್ರಿಟಿಗಳು ಇದಕ್ಕಿಂತ ಹೆಚ್ಚು ಸಂಭಾವನೆಯನ್ನು ಕೂಡ ಪಡೆದುಕೊಳ್ಳುತ್ತಾರೆ.

ಈ ವಿಚಾರ ಮಾತನಾಡುವಾಗಲೇ ನಟಿ ಸಮಂತಾ ಅವರ ಬಗ್ಗೆ ಮತ್ತೊಂದು ವಿಚಾರ ಸದ್ಯ ವೈರಲ್ ಆಗ್ತಾ ಇದೆ ಅದ್ಯಾವುದು ಅಂದರೆ ಸಮಂತಾ ಅವರ ಮುಂದಿನ ಸಿನಿಮಾದ ಫಸ್ಟ್ ಲುಕ್ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ನಟಿ ಸಮಂತಾ ತಮ್ಮ ಮುಂದಿನ ಸಿನಿಮಾವಾಗಿರುವ ಶಕುಂತಲಾ ಸಿನೆಮಾದ ತಮ್ಮ ಫಸ್ಟ್ ಲುಕ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ತಮ್ಮ ಮುಂದಿನ ಸಿನಿಮಾದ ಫಸ್ಟ್ ಲುಕ್ ಶೇರ್ ಮಾಡಿಕೊಳ್ಳುವ ಮೂಲಕ ಕೆಲವೊಂದು ಟ್ಯಾಗ್ ಲೈನ್ ಅನ್ನು ಕೂಡ ಹಾಕಿಕೊಂಡಿದ್ದಾರೆ.

ಅಲೌಕಿಕ ಸುಂದರಿ ಶಕುಂತಲಾ ಆ ಪಾತ್ರದಲ್ಲಿ ನಟಿ ಸಮಂತಾ ಅವರು ಮುಂದಿನ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಪ್ರಕೃತಿ ನಡುವಲ್ಲಿ ನಟಿ ಸಮಂತಾ ಅವರು ಮಾಡಿಸಿಕೊಂಡಿರುವ ಈ ಫೋಟೋಶೂಟ್ ಬಹಳ ಸೊಗಸಾಗಿದೆ ಮತ್ತು ಶಕುಂತಲಾ ಹಂಸನಾದ ಫಸ್ಟ್ ಲುಕ್ ನಲ್ಲಿ ನಟಿ ಸಮಂತಾ ಅವರು ಬಹಳ ಅದ್ಬುತವಾಗಿ ಕಾಣುತ್ತಿದ್ದು ದುಶ್ಯಂತನಿಗಾಗಿ ಕಾಡಿನ ನಡುವಲ್ಲಿ ಜಿಂಕೆ ಬಾತುಕೋಳಿಯ ನಡುವಲ್ಲಿ ಆ ಅಲೌಕಿಕ ಸುಂದರಿಯನ್ನೂ ಕಾಣುತ್ತಿದ್ದರೆ ಮನಸೋರೆಯಾಗುತ್ತೆ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.