Sanjay Kumar
3 Min Read

ಹೌದು ಈ ಬಣ್ಣದ ಲೋಕ ಹೇಳಲಾಗದಷ್ಟು ವಿಚಾರಗಳನ್ನು ತನ್ನಲ್ಲೆ ತುಂಬಿಕೊಂಡಿರುತ್ತದೆ, ಹೌದು ಈ ಬಣ್ಣದ ಲೋಕದಲ್ಲಿ ಕಾಣುವುದೆಲ್ಲ ಹೇಳುವುದೆಲ್ಲಾ ಸತ್ಯ ಅಲ್ಲಾ, ಹಾಗೆ ಸಿನಿಮಾ ಎಂಬ ಮಾಯಾಲೋಕದಲ್ಲಿ ಬದುಕಬೇಕು ಹೆಸರು ಮಾಡಬೇಕು ನಮ್ಮ ಕಲೆಯನ್ನು ತೋರಿಸಬೇಕು ಎಂದು ಅದೆಷ್ಟೋ ಜನ ತಾವು ನೆಲೆಸಿದ್ದ ಹಳ್ಳಿಯನ್ನು ಬಿಟ್ಟು ಬೆಂಗಳೂರಿಗೆ ಬರುತ್ತಾರೆ. ಕೆಲವರಿಗೆ ಅದೃಷ್ಟ ಎಂಬುದು ಆದಷ್ಟು ಬೇಗ ಸಿಕ್ಕರೆ ಇನ್ನು ಕೆಲವು ಕಲಾವಿದರುಗಳಿಗೆ ಎಷ್ಟೇ ಪ್ರಯತ್ನ ಮಾಡಿದರೂ ಕಲಾದೇವಿಯ ಆಶೀರ್ವಾದ ಲಭಿಸುವುದಿಲ್ಲಾ. ಹೌದು ಕಠಿಣ ಪರಿಶ್ರಮ ಮಾಡುವ ಕೆಲಸದಲ್ಲಿ ನಿಯತ್ತು ತಲುಪುವ ಗುರಿ ಒಳ್ಳೆಯ ನಿಟ್ಟಿನಲ್ಲಿ ಇದ್ದರೆ, ಕಲಾದೇವಿ ತನ್ನ ಮಡಿಲಿನಲ್ಲಿ ಕೂಡಿಸಿಕೊಂಡು ನಮ್ಮನ್ನು ಎತ್ತರದ ಸ್ಥಾನಕ್ಕೆ ಏರಿಸುತ್ತಾಳೆ. ಸಿನಿಮಾ ಎಂಬ ದಾರಿ ಸುಗಮವಾಗಿರುವುದಿಲ್ಲ.

ಇವತ್ತು ಡಿ ಬಾಸ್ ಎಂಬ ಬ್ರ್ಯಾಂಡ್ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಜನಪ್ರಿಯತೆ ಗಳಿಸಿದೆ ಎಂದರೆ ಅವರು ಈ ಎತ್ತರಕ್ಕೆ ಬೆಳೆಯಲು ಪಟ್ಟ ಶ್ರಮ ಸ್ವಲ್ಪವಲ್ಲಾ. ದರ್ಶನ್ ಅವರು ತಮ್ಮ ಹಿಂದಿನ ಬದುಕಿನಲ್ಲಿ ಹಾಲು ಮಾರುತ್ತ ಲೈಟ್ ಬಾಯ್ ಆಗಿ ಕೆಲಸ ಮಾಡುತ್ತ ಫ್ಯಾಷನ್ ಶೋಗಳಲ್ಲಿ ಭಾಗವಹಿಸುತ್ತಾ, ತಮ್ಮ ಹೊಟ್ಟೆಯನ್ನು ತುಂಬಿಸಿಕೊಂಡು ಗುರಿಯನ್ನು ಮುಟ್ಟಿರುವವರು ದರ್ಶನ್. ಇನ್ನೂ ನಮ್ಮ ಕನ್ನಡದ ಮತ್ತೊಬ್ಬ ಕಲಾವಿದ ಸಹ. ಹೌದು ಹಸಿವು ಧೈರ್ಯ ಛಲ ಮತ್ತು ಗುರಿ ಒಬ್ಬ ವ್ಯಕ್ತಿಯನ್ನು ಎಲ್ಲೆಲ್ಲಿಗೋ ಕರೆದುಕೊಂಡು ಹೊಗುತ್ತದೆ ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆ ಅಂದರೆ ಅದು ನಟ ದರ್ಶನ್. ಒಂದು ಉತ್ತಮ ಅವಕಾಶಕ್ಕಾಗಿ ಚಿತ್ರರಂಗದಲ್ಲಿ ಬರೋಬ್ಬರಿ 25 ವರ್ಷ ಕಾಯ್ದು ಇದೀಗ ಯಶಸ್ಸಿನ ತುತ್ತತುದಿಯಲ್ಲಿದ್ದಾರೆ.

ಹೌದು ಆ ನಟ ಬೇರೆ ಯಾರೂ ಅಲ್ಲ ಡೈಲಾಗ್ ಕಿಂಗ್ ನಟ ಸಾಯಿಕುಮಾರ್ ಅವರ ಸಹೋದರ ಹಾಗೂ ಬಹುಮುಖ ಪ್ರತಿಭೆ ಆಗಿರುವಂತಹ ನಟ ರವಿಶಂಕರ್ ಅವರು ಹೌದು 1986ರಲ್ಲಿ ತೆಲುಗು ಚಿತ್ರರಂಗದಲ್ಲಿ ಮುಖ್ಯ ನಟರಾಗಿ ಗುರುತಿಸಿಕೊಂಡ ಇವರು ನಂತರ 1991ರಲ್ಲಿ ಹಳ್ಳಿ ಕೃಷ್ಣ ಡೆಲ್ಲಿ ರಾಧ ಎಂಬ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಾರೆ. ನಟನೆಯ ಜೊತೆಗೆ ಡಬ್ಬಿಂಗ್ ನಲ್ಲಿಯು ಸಹ ಆಸಕ್ತಿ ವಹಿಸಿದ ರವಿಶಂಕರ್ ರವರಿಗೆ ನಟನೆ ಅಷ್ಟಾಗಿ ಕೈ ಹಿಡಿಯದ ಕಾರಣ, ಕೆಲವು ವರ್ಷ ಕೇವಲ ಡಬ್ಬಿಂಗ್ ಆರ್ಟಿಸ್ಟ್ ಆಗಿ ಮಾತ್ರ ಕೆಲಸ ಮಾಡುತ್ತಾರೆ.

ಹೌದು ಸರಿ ಸುಮಾರು 3ಸಾವಿರಕ್ಕೂ ಹೆಚ್ಚು ಚಲನಚಿತ್ರಗಳಿಗೆ ಡಬ್ಬಿಂಗ್ ಮಾಡಿರುವ ಇವರು 2009 ರಲ್ಲಿ ತೆರೆಕಂಡ ನಾಯಕಿ ಪ್ರಧಾನವಾದ ಸೂಪರ್ ಹಿಟ್ ಚಿತ್ರ ಅರುಂಧತಿ ಸಿನಿಮಾ ರವಿಶಂಕರ್ ರವರಿಗೆ ದೊಡ್ಡ ಬ್ರೇಕ್ ನೀಡಿತ್ತದೆ. ಈ ಚಿತ್ರಕ್ಕೆ ಧ್ವನಿ ನೀಡುವ ಮೂಲಕ ಪ್ರೇಕ್ಷಕರ ಪ್ರಶಂಸೆ ಪಡೆದುಕೊಂಡರು ನಟ ರವಿಶಂಕರ್ ಅವರನ್ನ ತೆಲುಗು ಚಿತ್ರರಂಗದವರು ಅಷ್ಟೇನು ಗುರುತಿಸಲಿಲ್ಲಾ. ಆದರೆ ಇವರಿಗೆ ಆಸಕ್ತಿ ಸ್ಯಾಂಡಲ್ ವುಡ್ ಕೈಬೀಸಿ ಕರೆದಿತ್ತು ಮತ್ತು ಅನೇಕ ಅವಕಾಶಗಳನ್ನು ಕೂಡ ನೀಡಿತ್ತು.

ಹೌದು ಇವರ ಪ್ರತಿಭೆಯನ್ನು ಗುರುತಿಸಿದ ಕಿಚ್ಚ ಸುದೀಪ್ ರವರು ತಮ್ಮ ಕೆಂಪೇಗೌಡ ಚಿತ್ರದಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸುವ ಅವಕಾಶ ನೀಡಿದರು ಹೌದು ಆರ್ಮುಗಂ ಪಾತ್ರದಲ್ಲಿ ಕಾಣಿಸಿಕೊಂಡ ರವಿಶಂಕರ್ ಅವರು ಈ ಪಾತ್ರದ ನಂತರ ಕನ್ನಡ ಸಿನಿಮಾ ರಂಗದಲ್ಲಿ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದರು. ಇವರು ಮೂಲತಃ ತೆಲುಗಿನವರಾಗಿದ್ದು ಕನ್ನಡವನ್ನು ಹಾಗೂ ಕನ್ನಡಿಗರನ್ನು ತುಂಬಾ ಅಭಿಮಾನದಿಂದ ಕಾಣುತ್ತಾರೆ. ನನ್ನ ಕನಸುಗಳಿಗೆ ರೆಕ್ಕೆ ಕಟ್ಟಿದ್ದು ಕರ್ನಾಟಕ, ಆದ್ದರಿಂದ ಎಂದೂ ನಾನು ಕನ್ನಡಿಗರಿಗೆ ಚಿರಋಣಿ ಎಂದು ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.ಸದ್ಯ ಇದೀಗ ಕನ್ನಡ ಚಿತ್ರರಂಗದಲ್ಲಿ ಅವರು ಬೇಡಿಕೆಯ ನಟರಾಗಿದ್ದು, ಅಖಿಲ ಕರ್ನಾಟಕ ಸಕಲಕಲಾವಲ್ಲಭರ ವಿ.ಶಂಕರ್ ಅಭಿಮಾನಿಗಳ ಸಂಘ ಕಟ್ಟಿಕೊಂಡಿದ್ದಾರೆ. ಒಬ್ಬ ನಾಯಕ ನಟನಿಗೆ ಅಭಿಮಾನಿ ಸಂಘಗಳಿರುವುದು ಮಾಮೂಲಿಯಾದ ಸಂಗತಿ. ಆದರೆ ಒಬ್ಬ ಖಳನಟನಿಗೆ ಅಭಿಮಾನಿ ಬಳಗವಿರುವುದು ತುಂಬಾ ಅಪರೂಪ ಹಾಗೂ ಅಚ್ಚರಿಪಡುವಂತಹ ಮಾತು.

 

ನಟ ರವಿಶಂಕರ್ ಅವರು ತಮ್ಮ ಮಗನನ್ನು ಕೂಡ ಕನ್ನಡ ಚಿತ್ರರಂಗದ ಮೂಲಕ ಪಾದಾರ್ಪಣೆ ಮಾಡಿಸಿ, ಉತ್ತಮ ನಟನಾಗಿ ಮಾಡುವ ಕನಸನ್ನು ಕಟ್ಟಿಕೊಂಡಿದ್ದರು ರವಿಶಂಕರ್ ಹಾಗೂ ಇದಕ್ಕಾಗಿ ಸಿನಿ ಶಿಕ್ಷಣದ ತರಬೇತಿ ನನ್ನ ಮಗನಿಗೆ ಕೊಡಿಸಿದ್ದಾರೆ ಮತ್ತು ಅದ್ವೈತ ಶಂಕರ ಇನ್ನು ಮುಂಬೈ ಕಳಸಿ ಪರಿಪೂರ್ಣ ತರಬೇತಿ ಕೊಡಿಸಿದ್ದಾರೆ. ಮಗನ ಚಿತ್ರಕ್ಕೆ ತಾವೇ ನಿರ್ದೇಶನ ಮಾಡುವ ಹೊಣೆಯನ್ನು ಕೂಡ ಹೊತ್ತಿದ್ದಾರೆ ರವಿಶಂಕರ್ ಮತ್ತು ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ರವಿಶಂಕರ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.