ಸೋಮವಾರ ಈ ಪೂಜೆಯನ್ನ ಮಾಡಿದರೆ ಸಾಕು ನಿಮಗೆ ಗೊತ್ತಿಲ್ಲದೇ ನಿಮ್ಮ ಖಜಾನೆಯಲ್ಲಿ ಹಣ ಬಂದು ತುಂಬಿಕೊಳ್ಳುತ್ತೆ… ಅಷ್ಟಕ್ಕೂ ಆ ಪೂಜೆ ಯಾವುದು ನೋಡಿ…

319

ನಿಮ್ಮ ಮನೆಗೆ ಹಣದ ಹರಿವು ಜಾಸ್ತಿಯಾಗಿದೆ ಬೇಕಾ ಹಾಗಾದರೆ ಸೋಮವಾರದ ದಿನದಂದು ಈ ಪರಿಹಾರವನ್ನು ಮಾಡಿ ಖಂಡಿತ ನೀ1ಕೊಂಡಂತೆ ನಿಮ್ಮ ಮನೆಗೆ ಹಣದ ಹರಿವು ಹೆಚ್ಚಾಗುತ್ತದೆ. ಹೌದು ಯಾರಿಗೇ ಆಗಲಿ ಇವತ್ತಿನ ದಿನ ಹಣ ಬೇಕು ಅಂದ್ರೆ ಯಾರೂ ಬೇಡ ಅನ್ನುವುದಿಲ್ಲ ಹಣಕ್ಕೆ ಈ ದಿನ ಅಷ್ಟು ಬೆಲೆ ಇದೆ ಮನುಷ್ಯನಿಗೆ ಬೆಲೆ ಕೊಡುತ್ತಾರೊ ಇಲ್ಲವೊ ಜನ, ಆದರೆ ಹಣಕ್ಕೆ ಮಾತ್ರ ಬೆಲೆ ಕೊಟ್ಟೇ ಕೊಡ್ತಾರೆ. ಹೌದು ಕಣ್ರೀ ಇದು ಕಲಿಯುಗ ಎಲ್ಲರಿಗೂ ಹಣದ ಅವಶ್ಯಕತೆ ಇದ್ದೇ ಇರುತ್ತದೆ ಇವತ್ತಿನ ದಿವಸಗಳಲ್ಲಿ ಹಣ ಬೇಡ ಅನ್ನುವವರು ಯಾರೂ ಸಹ ಇಲ್ಲಾ.

ಯಾಕೆಂದರೆ ಪ್ರತಿಯೊಬ್ಬರು ಕೂಡ ಹಣಕ್ಕೆ ಬೆಲೆ ಕೊಡುವಾಗ ಯಾರೋ ಒಬ್ಬರು ಹಣದ ಅವಶ್ಯಕತೆ ನನಗಿಲ್ಲ ಅಂದಾಗ ಅವನನ್ನು ಹುಚ್ಚ ಅಂದುಕೊಳ್ತಾರೆ ಇದಂತೂ ಇಂದಿನ ಸಮಾಜದ ಕಟು ಸತ್ಯವಾಗಿದೆ ಇದನ್ನು ನಾವು ಒಪ್ಪಿಕೊಳ್ಳಲೇಬೇಕು ನೋಡಿ. ಹೀಗಿರುವಾಗ ನಾವು ಇವತ್ತಿನ ಲೇಖನಿಯಲ್ಲಿ ಹಣ ಹೆಚ್ಚಾಗಬೇಕೆಂದರೆ ಹಣದ ಹರಿವು ಹೆಚ್ಚಾಗಬೇಕೆಂದರೆ ಮಾಡಬೇಕಿರುವ ಪರಿಹಾರದ ಬಗ್ಗೆ ತಿಳಿಸಿಕೊಡುತ್ತಾ ಇದ್ದೇವೆ. ಹೌದು ಎಷ್ಟೇ ಶ್ರಮಪಟ್ಟರೂ ಆಚೆ ಮಾತ್ರ ಹಣ ದುಡಿಯುತ್ತಾ ಇದ್ದೇನೆ ಆದರೆ ಆ ಹಣ ನಾವು ಮನೆಗೆ ಹೋಗೋ ಅಷ್ಟರಲ್ಲಿ ಪೂರ್ತಿಯಾಗಿ ಖಾಲಿಯಾಗಿ ಹೋಗಿಬಿಡುತ್ತಾ ಇದೆ ಅನ್ನುವವರೇ ಹೆಚ್ಚು. ಆದ್ದರಿಂದ ನಾವು ತಿಳಿಸುವ ಪರಿಹಾರವನ್ನು ಮಾಡಿಕೊಂಡಿದ್ದೇ ಆದಲ್ಲಿ ನಿಮ್ಮ ಮನೆಗೆ ಹಣದ ಹರಿವು ಹೆಚ್ಚಾಗುತ್ತದೆ ಇದಕ್ಕಾಗಿ ನೀವು ಮಾಡಬೇಕಿರುವುದು ಕುಬೇರನ ಆರಾಧನೆಯನ್ನು ಯಾರು ಕುಬೇರನ ಆರಾಧನೆಯನ್ನು ಸೋಮವಾರದ ದಿನದಂದು ಈ ರೀತಿಯಾಗಿ ಮಾಡ್ತಾರೆ ಆ ಅಂಥವರಿಗೆ ಖಂಡಿತ ಕುಬೇರನ ಅನುಗ್ರಹ ದೊರೆತು ಹಣದ ಹರಿವು ಹೆಚ್ಚಾಗುತ್ತದೆ ಇಲ್ಲಸಲ್ಲದ ಖರ್ಚುಗಳು ಕಡಿಮೆಯಾಗಿ ನೀವು ಶ್ರಮಪಟ್ಟಂತೆ ನಿಮಗೆ ಹಣದ ಹರಿವು ಮಾತ್ರ ಹೆಚ್ಚುತ್ತದೆ ಆ ಪರಿಹಾರ ಏನಪ್ಪಾ ಅಂತ ಹೇಳ್ತೇನೆ ಈ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ ಸ್ನೇಹಿತರೆ.

ಮುಕ್ಕಣ್ಣ ನನಗಿರುವ ಪರಮಾತ್ಮನನ್ನು ಒಲಿಸಿಕೊಳ್ಳುವುದು ಬಹಳ ಸುಲಭ ಆತನನ್ನು ಮನಸಾರೆ ಯಾರು ಆರಾಧಿಸುತ್ತಾರೆ ಯಾರು ಆತನ ನಾಮ ಸ್ಮರಣೆ ಮಾಡುತ್ತಾರೆ ಅಂಥವರಿಗೆ ಖಂಡಿತ ಪರಮಾತ್ಮ ಶಿವನು ಒಲಿಯುತ್ತಾನೆ. ಹಾಗೆ ಶಿವನ ಆರಾಧನೆಯನ್ನು ಸೋಮವಾರದ ದಿನದಂದು ಮಾಡಿ ಅದರ ದೇವಾಲಯಕ್ಕೆ ಹೋಗಿ ಅವನ ದರ್ಶನ ಪಡೆದು ಬನ್ನಿ ಈ ನಿಮಗೆಲ್ಲ ಕೋರಿಕೆಗಳು ನೆರವೇರುತ್ತದೆ ಹಾಗೆ ಈ ಸೋಮವಾರ ಎಂಬ ವಿಶೇಷ ದಿನದಂದು ಕುಬೇರನ ಆರಾಧನೆಯನ್ನು ನಿಮ್ಮ ಮನೆಯಲ್ಲಿ ಮಾಡಬೇಕು ಅದು ಹೇಗಪ್ಪಾ ಅಂದರೇ ಮೊದಲಿಗೆ ಸ್ವಚ್ಚವಾದ ತಟ್ಟೆಯೊಂದನ್ನು ತೆಗೆದುಕೊಳ್ಳಬೇಕು ಅದರ ಮೇಲೆ ಅಕ್ಷತೆ ಕಾಳುಗಳನ್ನು ಇರಿಸಿ ಅದರ ಮೇಲೆ ಕುಬೇರನ ಮೂರ್ತಿಯನ್ನು ಇರಿಸಬೇಕು.

ಬಳಿಕ ಬಾದಾಮಿಯ ಎಲೆಯನ್ನು ತೆಗೆದುಕೊಂಡು ನಿಮ್ಮ ದೇವರ ಮನೆಯಲ್ಲಿ ಸ್ವಚ್ಚವಾದ ಸ್ಥಳದಲ್ಲಿ ಇಡಬೇಕು ಅಂದರೆ ದೇವರ ಮುಂದೆ ಜಾಗವನ್ನು ಸ್ವಚ್ಛ ಮಾಡಿ ಅಲ್ಲಿ ಬಾದಾಮಿ ಎಲೆಯನ್ನು ಹಾಕಿ ಬಳಿಕ ಕುಬೇರನ ವಿಗ್ರಹವನ್ನು ಅದರ ಮೇಲೆ ಇರಿಸಬೇಕು ನಂತರ ಕುಬೇರನ ಮೇಲೆ ಅರಿಶಿಣ ಕುಂಕುಮವನ್ನು ಹಾಕಿ ಕುಬೇರನಿಗೆ ಸಕ್ಕರೆಯನ್ನು ನೈವೇದ್ಯ ಸಮರ್ಪಣೆ ಮಾಡಬೇಕು ಈ ರೀತಿ ಪ್ರತಿ ಸೋಮವಾರ ನೀವು ಪೂಜೆಯ ಸಮಯದಲ್ಲಿ ಕುಬೇರನಿಗೂ ಈ ಪರಿಹಾರವನ್ನು ಮಾಡಿಕೊಂಡು ಬಂದದ್ದೇ ಆದಲ್ಲಿ ಖಂಡಿತ ನಿಮ್ಮ ಹಣಕಾಸಿನ ವಿಚಾರದಲ್ಲಿ ನೀವು ಎದುರಿಸುತ್ತಾ ಇರತಕ್ಕಂತಹ ಸಮಸ್ಯೆಗಳು ಪರಿಹಾರವಾಗುತ್ತದೆ.

ಹೌದು ಈ ಸರಳ ಪರಿಹಾರವನ್ನು ನೀವು ಕೂಡ ಪಾಲಿಸಿ ನಿಮ್ಮ ಜೀವನದಲ್ಲಿ ಅನಗತ್ಯವಾಗಿ ಉಂಟಾಗುತ್ತಿರುವ ಖರ್ಚುವೆಚ್ಚಗಳನ್ನು ಕಡಿಮೆ ಮಾಡಿಕೊಂಡು ಕುಬೇರನ ಅನುಗ್ರಹದೊಂದಿಗೆ ಹಣದ ಹರಿವನ್ನು ಹೆಚ್ಚು ಮಾಡಿಕೊಳ್ಳಿ, ಜೀವನದಲ್ಲಿ ಹಣದ ಅವಶ್ಯಕತೆ ಎಲ್ಲರಿಗೂ ಬರುತ್ತದೆ ಆದರೆ ಈ ಎಲ್ಲಾ ಹಣವೇ ಆಗಿರುವುದಿಲ್ಲ ನಿಮ್ಮ ಸಂಬಂಧಗಳಿಗೆ ನಿಮ್ಮ ಸಮಯಕ್ಕೆ ಮೌಲ್ಯ ಕೊಡಿ ಆಗ ಎಲ್ಲವೂ ಕೂಡ ಜೀವನದಲ್ಲಿ ಉತ್ತಮವಾಗಿಯೇ ಇರುತ್ತದೆ, ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದಗಳು.