ಹೆಂಗಸರಲ್ಲಿ ಮುಟ್ಟಿನ ಯಾವುದೇ ಸಮಸ್ಸೆ ಇದ್ದರು ಅದರಿಂದ ಹೊರಗೆ ಬರಲು ಈ ಮನೆಮದ್ದು ತುಂಬಾ ಪರಿಣಾಮಕಾರಿ ..

91

ಸ್ನೇಹಿತರೆ ಸಾಮಾನ್ಯವಾಗಿ ಪ್ರತಿಯೊಬ್ಬ ಮಹಿಳೆಯಲ್ಲೂ ಕೂಡ ಸರ್ವೇ ಸಾಮಾನ್ಯವಾಗಿ ಕಾಡುವ ಸಮಸ್ಯೆಯೆಂದರೆ ಅದು ಮುಟ್ಟಿನ ಸಮಸ್ಯೆ.ಹುಟ್ಟಿದ ಮೇಲೆ ಪ್ರತಿಯೊಂದು ಹೆಣ್ಣು ಕೂಡ ಒಂದಲ್ಲ 1 ಸಂದರ್ಭದಲ್ಲಿ ಈ ಸಮಸ್ಯೆಯನ್ನು ಎದುರಿಸಿರುತ್ತಾರೆ ಆದರೆ ಕೆಲವೊಬ್ಬರಿಗೆ ಪ್ರತಿ ತಿಂಗಳು ಈ ಋತುಚಕ್ರದಲ್ಲಿ ಸ್ವಲ್ಪ ಬದಲಾವಣೆಯಾಗುತ್ತದೆ ಅದರ ಜತೆಯಲ್ಲಿ ಕೆಲವೊಬ್ಬರಿಗೆ ತುಂಬಾ ವ್ಯತ್ಯಾಸವಾಗುವುದನ್ನು ,

ನಾವು ಗಮನಿಸಬಹುದು ಈ ರೀತಿ ವ್ಯತ್ಯಾಸ ಕಂಡುಬಂದಲ್ಲಿ ನಾವು ವೈದ್ಯರನ್ನು ಸಂಪರ್ಕಿಸುತ್ತೇವೆ ಕೆಲವೊಬ್ಬರು ನಾಟಿ ವೈದ್ಯವನ್ನು ಕೂಡ ಮಾಡುತ್ತಾರೆ ಆದರೆ ಈ ಸಮಸ್ಯೆ ಏರುಪೇರಾದ ತಕ್ಷಣ ಪ್ರತಿಯೊಬ್ಬರಿಗೂ ಕೂಡ ಅರಿವಿಗೆ ಬರುತ್ತದೆ ಆ ರೀತಿ ಅರಿವಿಗೆ ಬಂದ ತಕ್ಷಣ ನೀವು ಖಂಡಿತವಾಗಿಯೂ ಈಗ ನಾವು ಹೇಳುವಂತಹ ಮನೆ ಮದ್ದು ಸೇವಿಸಿ ನಿಮ್ಮ ಋತು ಚಕ್ರದಲ್ಲಿ ಆಗುವಂಥ ಬದಲಾವಣೆಯನ್ನ ಕಡಿಮೆ ಮಾಡಿಕೊಳ್ಳಿ.

ಸಾಮಾನ್ಯವಾಗಿ ಹೆಂಗಸರು ಈ ಸಮಸ್ಯೆಯಿಂದ ಹೊರಬರಲು ತುಂಬಾ ರೀತಿಯಾದಂಥ ಪ್ರಯತ್ನಗಳನ್ನು ಮಾಡಿರುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿರುವಂತಹ ವಿಷಯ ಆದರೆ ಈಗ ನಾವು ಹೇಳಿದ ಮನೆಮದ್ದು ತುಂಬಾ ಸುಲಭ ಮತ್ತು ಅತೀ ಪರಿಣಾಮಕಾರಿಯಾಗಿದೆ ಎಂಬುದನ್ನು ನಾವು ಮೊದಲು ಗಮನಿಸಬೇಕಾಗಿದೆ ಈ ಮನೆಮದ್ದನ್ನು ಮಾಡಲು ಬೇಕಾಗಿರುವ ಮುಖ್ಯವಾದ ಸಾಮಗ್ರಿಯೆಂದರೆ ಮುಳ್ಳು ಅರವೆ ಗಿಡ ಇದು ಸಾಮಾನ್ಯವಾಗಿ ಪ್ರತಿಯೊಬ್ಬರಗೂ ಕೂಡ ದೊರಕುತ್ತದೆ ಅದರಲ್ಲೂ ಕೂಡ ಹಳ್ಳಿಯ ಕಡೆ ಹೆಚ್ಚಾಗಿ ಈ ಅರವೆ ಗಿಡ ನಾವು ಕಾಣಬಹುದು.

ಈ ಅರವೇ ಗಿಡವನ್ನ ಮನೆಮದ್ದಿನ ರೀತಿಯಲ್ಲಿ ಉಪಯೋಗಿಸುವುದು ಹೇಗೆ ಎಂದು ಗೊಂದಲದಲ್ಲಿದ್ದೀರಾ ಅಲ್ಲದೆ ಈ ಗಿಡದಿಂದ ಸ್ವಲ್ಪ ಸೊಪ್ಪನ್ನು ಬಿಡಿಸಿ ಚೆನ್ನಾಗಿ ತೊಳೆದುಕೊಳ್ಳಬೇಕು ಅದಾದ ನಂತರ ಅದನ್ನು ಜಜ್ಜಿ ಸೇವಿಸಬಹುದು ಅಥವಾ ಮಿಕ್ಸಿಯಲ್ಲಿ ಅದನ್ನು ರುಬ್ಬಿ ಕೂಡ ಸೇವಿಸಬಹುದು ಈ ರೀತಿ ಮಾಡುವುದರಿಂದ ಖಂಡಿತವಾಗಿಯೂ ನಿಮಗೆ ಈ ಸೊಪ್ಪಿನ ಪರಿಣಾಮ ತಿಳಿಯುತ್ತದೆ.

ಅದರ ಜೊತೆಗೆ ಈ ಅರವೆ ಗಿಡದ ಸೊಪ್ಪನ್ನು ಬಿಡಿಸಿದ ನಂತರ ಅದನ್ನು ಜಜ್ಜುವಾಗ ಅಥವಾ ಮಿಕ್ಸಿ ಮಾಡುವ ಸಂದರ್ಭದಲ್ಲಿ 4 ಕಾಳುಮೆಣಸು ಹಾಕಿ ಅದರ ಜೊತೆಯಲ್ಲಿ ಸ್ವಲ್ಪ ಅಂದರೆ ಒಂದರಿಂದ ಹತ್ತು ಕಾಳು ಓಮಿನ ಕಾಳನ್ನು ಹಾಕಿ ಇವೆಲ್ಲವನ್ನೂ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ ಪುಡಿಯಾದ ನಂತರ ಅದನ್ನು 1 ಪಾತ್ರೆಗೆ ಹಾಕಿ ಮತ್ತೊಂದು ಪಾತ್ರೆಯಲ್ಲಿ 2 ಲೋಟ ನೀರನ್ನು ಚೆನ್ನಾಗಿ ಕುದಿಯಲು ಇಡಿ ಆ ಕುದಿದ ನೀರಿಗೆ ನೀವು ಈಗ ತಯಾರಿಸಿರುವ .

ಅರವೇ ಸೊಪ್ಪಿನ ಮಿಶ್ರಣವನ್ನು ಹಾಕಿ ಅಥವಾ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಕುದಿಸಿ ಅದಾದ ನಂತರ ಇದಕ್ಕೆ ಸ್ವಲ್ಪ ಅರಿಶಿನವನ್ನು ಸೇರಿಸಿ ಜೇನುತುಪ್ಪವನ್ನು ಸೇರಿಸಿ ಪ್ರತಿದಿನ ನೀವು ಈ ಕಷಾಯವನ್ನು ಕುಡಿಯುತ್ತ ಬನ್ನಿ ಇದು ತುಂಬಾ ಒಳ್ಳೆಯ ಕಷಾಯವಾಗಿದೆ ಮತ್ತು ಇದು ತಣ್ಣಗಾದರೂ ಪರವಾಗಿಲ್ಲ ಪ್ರತಿನಿತ್ಯ 2 ಲೋಟ ಕುಡಿದರೆ ಸಾಕು ನಿಮಗೆ ಗರ್ಭಕೋಶದ ಸಮಸ್ಯೆ ಮುಟ್ಟಿನ ಸಮಸ್ಯೆ ಮತ್ತು ರಕ್ತಸ್ರಾವ ಹೆಚ್ಚಾಗುತ್ತಿದ್ದರೆ.

ಈ ಎಲ್ಲ ಸಮಸ್ಯೆಗಳಿಂದ ಕೂಡ ನೀವು ಖಂಡಿತವಾಗಿ ಮುಕ್ತಿ ಪಡೆಯಬಹುದು ಇದರ ಬದಲಾಗಿ ನೀವು ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ಖಂಡಿತವಾಗಿಯೂ ಅದರಿಂದ ನಿಮಗೆ ಅಡ್ಡ ಪರಿಣಾಮ ಸರ್ವೇಸಾಮಾನ್ಯ ಅದರಿಂದ ನೀವು ಮುಕ್ತಿ ಪಡೆಯಲು ಈ ಅರಿವೇ ಗಿಡ ಕಷಾಯವನ್ನು ಸೇವಿಸಿ ನೀವು ಎಷ್ಟೇ ದಿನದಿಂದ ಈ ಸಮಸ್ಯೆಗೆ ಪರಿಹಾರ ಸಿಗದೆ ಬಳಲುತ್ತಿದ್ದದರೆ ಖಂಡಿತವಾಗಿಯೂ ನೀವು ಸಮಸ್ಯೆಯಿಂದ ಹೊರಗೆ ಬರುತ್ತೀರಾ ಮತ್ತು ಬೇರೆ ಯಾರಾದರೂ ಈ ಸಮಸ್ಯೆಯಲ್ಲಿದ್ದರೆ ಖಂಡಿತವಾಗಿಯೂ ಅವರಿಗೆ ಮಾಹಿತಿಯನ್ನು ತಿಳಿಸುವ ಪ್ರಯತ್ನ ಮಾಡಿ ಧನ್ಯವಾದಗಳು .

LEAVE A REPLY

Please enter your comment!
Please enter your name here