ಹೋಟೆಲ್ ಗೆ ಬಂದಾಗ ಮಾಲಿಕನೊಂದಿಗೆ ದುಡ್ಡಿಲ್ಲದ ಈ ಅಜ್ಜ ತಿಂದು ಏನ್ ಮಾಡಿದ ಗೊತ್ತಾ…. ಕಣ್ಣಲ್ಲಿ ನೀರು ಬರುತ್ತೆ…!!!

12

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ಒಬ್ಬ ವ್ಯಕ್ತಿಯ ಜೀವನದಲ್ಲಿ ನಡೆದಂತಹ ಒಂದು ಘಟನೆಯ ಬಗ್ಗೆ ತಿಳಿಸಿಕೊಡಲು ಇಚ್ಚಿಸುತ್ತೇನೆ. ಒಮ್ಮೆ ಒಂದು ಹೋಟೆಲ್ ಗೆ ಒಬ್ಬ ವ್ಯಕ್ತಿ ಅಂದರೆ ವಯಸ್ಸಾದ ವ್ಯಕ್ತಿ ಊಟ ಮಾಡಲೆಂದು ಬರುತ್ತಾರೆ ಆಗ ಹೋಟೆಲ್ನವ ವ್ಯಕ್ತಿಯ ಮುಂದೆ ಬಾಳೆ ಬೆಳೆಯನ್ನು ಹಾಸಿ ಊಟಕ್ಕಾಗಿ ಏನು ಬೇಕು ಅಂತ ಕೇಳ್ತಾರೆ ಆಗ ಊಟಕ್ಕೆ ಬೆಲೆ ಎಷ್ಟು ಅಂತ ಕೇಳಿದ ವಯಸ್ಸಾದ ವ್ಯಕ್ತಿ. ಕೆಲಸಗಾರ ಹೇಳ್ತಾರೆ ಮೀನು ಬೇಕೆಂದರೆ ಐವತ್ತು ರುಪಾಯಿ ಮೀನು ಬೇಡ ಅಂದರೆ ಕೇವಲ ಇಪ್ಪತ್ತು ರುಪಾಯಿ ಅಂತ ಹೇಳ್ತಾರೆ.

ಆಗ ವಯಸ್ಸಾದ ವ್ಯಕ್ತಿ ತನ್ನ ಜೇಬಿನಲ್ಲಿ ಇರುವ ಹತ್ತು ರೂಪಾಯಿಯ ನೂತನ ತೆಗೆದು ಹೋಟೆಲ್ನ ಮಾಲೀಕರಿಗೆ ನೀಡಿ ನನ್ನ ಬಳಿ ಇಷ್ಟೇ ಇರುವುದು ನನಗೆ ಇಷ್ಟು ಹಣಕ್ಕೇ ಊಟವನ್ನು ನೀಡಿದರೆ ಸಾಕು ಬರೀ ಅನ್ನ ನೀಡಿದರೂ ಸಾಕು ಹೊಟ್ಟೆ ತುಂಬುವುದಕ್ಕೆ ನಿನ್ನೆ ಮಧ್ಯಾಹ್ನ ಎಂದ ನಾನು ಏನನ್ನೂ ತಿಂದಿಲ್ಲ ಅಂತ ಹೇಳಿ ಆ ಹತ್ತು ರೂಪಾಯಿಯ ನೋಟನ್ನು ತೋರಿಸಿ ಮಾಲೀಕನಿಗೆ ಹೇಳ್ತಾರೆ.

ಆಗ ಹೋಟೆಲ್ ಮಾಲೀಕ ಕೆಲಸಗಾರರಿಗೆ ಆ ವಯಸ್ಸಾದ ವ್ಯಕ್ತಿಗೆ ಊಟವನ್ನು ಬಡಿಸಲು ಹೇಳ್ತಾರೆ ಊಟವನ್ನು ನೋಡಿದ ವಯಸ್ಸಾದ ವ್ಯಕ್ತಿ ಕಣ್ಣಿನಲ್ಲಿ ನೀರು ತುಂಬಿಕೊಂಡು ಊಟವನ್ನು ಮಾಡಲು ಮುಂದಾಗ್ತಾರೆ ಊಟವನ್ನು ಮಾಡುವಾಗ ಕಣ್ಣಿನಿಂದ ನೀರು ಬರುತ್ತಾ ಇತ್ತು ಇದನ್ನು ಕಂಡ ಪಕ್ಕದಲ್ಲಿರುವ ವ್ಯಕ್ತಿ ವಯಸ್ಸಾದ ವ್ಯಕ್ತಿಗೆ ನೀವು ಯಾಕೆ ಅಳುತ್ತಾ ಇದ್ದೀರಾ ಅಂತ ಕೇಳ್ತಾರೆ.

ಆಗ ವಯಸ್ಸಾದ ವ್ಯಕ್ತಿ ನಾನು ನನ್ನ ಹಿಂದಿನ ಜೀವನದ ಬಗ್ಗೆಯೇ ಯೋಚಿಸಿ ಅಳುತ್ತಾ ಇದ್ದೇನೆ ನನಗೆ ಮೂರು ಜನ ಮಕ್ಕಳು ಎಲ್ಲರೂ ಕೂಡ ಒಳ್ಳೆಯ ಕೆಲಸದಲ್ಲಿ ಇದ್ದಾರೆ ನನ್ನ ಜೀವನದಲ್ಲಿ ಅರ್ಧಕ್ಕೆ ನನ್ನ ಅರ್ಧಾಂಗಿ ನನ್ನನ್ನು ಒಂಟಿ ಮಾಡಿ ಹೋದಳು. ನಾನೊಬ್ಬ ಒಂಟಿ ಮನೆಯಲ್ಲಿ ಏನನ್ನೇ ಮುಟ್ಟಿದರೂ ಸೊಸೆಯಂದಿರು ಬರ್ತಾರೆ ಎನ್ನುವ ಮಕ್ಕಳು ಕೂಡಾ ನನ್ನನ್ನು ಕಂಡರೆ ಶಪಿಸುತ್ತಾರೆ ಮನೆಯಲ್ಲಿ ಸೊಸೆಯ ನೀರು ಎಲ್ಲಿಯಾದರೂ ಹೋಗಬಾರದ ಅನ್ನೋ ಮಾತನ್ನು ಹೇಳ್ತಾ ಇರ್ತಾರೆ.

ಮನೆಯಲ್ಲಿ ಎಲ್ಲರ ಊಟವಾದ ಬಳಿಕವೇ ನಾನು ಊಟ ಮಾಡ್ತೇನೆ ಆದರೂ ಕೂಡ ನನ್ನನ್ನು ಬೈತಾರೆ ಎನ್ನುವ ಮೊಮ್ಮಕ್ಕಳು ನನ್ನೊಂದಿಗೆ ಮಾತನಾಡುವಂತಿಲ್ಲ ಅದಕ್ಕೂ ಕೂಡ ನನ್ನ ಮಕ್ಕಳು ಬೈತಾರೆ. ಮೊನ್ನೆ ದಿವಸ ಸೊಸೆಯ ಒಡವೆಯನ್ನು ಗದ್ದೆಯನ್ನು ಆರೋಪ ಮಾಡಿ ನನ್ನ ಮಗ ನನ್ನನ್ನು ತುಂಬಾನೇ ಬೈದುಬಿಟ್ಟ ಇನ್ನು ಆ ಮಾತುಗಳನ್ನೆಲ್ಲ ಕೇಳಿಸಿಕೊಂಡು ನಾನು ಮನೆಯಲ್ಲಿ ಇರುವುದಕ್ಕೆ ಆಗಲಿಲ್ಲ.

ಇದೀಗ ನನ್ನ ಜೀವನವನ್ನು ನೆನೆಸಿಕೊಂಡರೆ ನಾನು ನನ್ನ ಮಕ್ಕಳಿಗಾಗಿ ಪ್ರತಿಯೊಂದನ್ನು ಕೂಡ ತ್ಯಾಗ ಮಾಡಿದೆ ಸುಮಾರು ಇಪ್ಪತ್ತು ಎಂಟು ವರ್ಷಗಳ ಕಾಲ ನಾನು ನನ್ನ ಯೌವ್ವನವನ್ನು ಲೆಕ್ಕಿಸದೆ ಮಕ್ಕಳಿಗಾಗಿ ದುಡಿದ ಆದರೆ ಇದೀಗ ನನ್ನ ಮಕ್ಕಳೇ ನನ್ನನ್ನು ಬೇಡ ಎಂದು ದೂರ ಸರಿಯುತ್ತಿದ್ದಾರೆ.

ಈ ವ್ಯಕ್ತಿಯ ಮಾತುಗಳನ್ನು ಕೇಳಿ ಅಲ್ಲಿರುವವರ ಕಣ್ಣಿನಲ್ಲಿ ನೀರು ಬಂತು ನಂತರ ವ್ಯಕ್ತಿ ಊಟವನ್ನು ಮುಗಿಸಿ ತನ್ನ ಬಳಿ ಇದ್ದ ಹತ್ತು ರೂಪಾಯಿಯ ಹಣವನ್ನು ಮಾಲೀಕನಿಗೆ ನೀಡಿದಾಗ ಅದನ್ನು ಮಾಲೀಕ ವಾಪಸ್ ವೃದ್ಧನಿಗೆ ನೀಡಿ ನಿಮಗೆ ಯಾವಾಗ ಊಟ ಬೇಕೊ ಅವಾಗ ಬಂದು ಊಟ ಮಾಡಿ ನಿಮಗಾಗಿ ಇಲ್ಲಿ ಊಟ ಯಾವಾಗಲೂ ತಯಾರಿರುತ್ತದೆ ಅಂತ ಹೇಳ್ತಾರೆ ಆದರೆ ವಿರುದ್ಧ ಮಾತ್ರ ತನ್ನ ಬಳಿಯಿದ್ದ ಹತ್ತು ರುಪಾಯಿ ಹಣವನ್ನು ಮಾಲೀಕನಿಗೆ ನೀಡಿ, ಕ್ಷಮಿಸಿ ನನ್ನನ್ನು ತಪ್ಪಾಗಿ ತಿಳಿಯಬೇಡಿ ನನ್ನ ಸ್ವಾಭಿಮಾನ ನನ್ನನ್ನು ಬಿಡುತ್ತಾ ಇಲ್ಲ ಅಂತ ಹೇಳಿ, ಅಲ್ಲಿಂದ ಹೊರಟು ಹೋಗ್ತಾರೆ.

ಇಂದಿನ ಮಾಹಿತಿಯನ್ನು ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ ಹಾಗೂ ಪ್ರತಿಯೊಬ್ಬರಿಗೂ ವಯಸ್ಸಾಗುತ್ತದೆ ವಯಸ್ಸಾದವರಿಗೆ ಗೌರವವನ್ನು ನೀಡುವುದು ನಮ್ಮ ಕರ್ತವ್ಯವಾಗಿರುತ್ತದೆ ಏನಂತೀರಾ ಫ್ರೆಂಡ್ಸ್ ಧನ್ಯವಾದಗಳು.

LEAVE A REPLY

Please enter your comment!
Please enter your name here