ಕನ್ನಡದ ನಿರೂಪಕಿ ಅನುಶ್ರೀಗಿಂತಲ್ಲೂ ಸಿಕ್ಕಾಪಟ್ಟೆ ಸಂಬಾವನೆ ಪಡೆಯುವ ಇನ್ನೊಬ್ಬ ಕನ್ನಡದ ನಿರೂಪಕಿ ಯಾರು ಗೊತ್ತ …

141

ಹೌದು ನಾವು ಮಾಡಿದ ಕೆಲಸಕ್ಕೆ ಹೇಗೆ ಸಂಬಳ ಪಡೆದುಕೊಳ್ಳುತ್ತೇವೆ ಹಾಗೆ ಶೋ ಗಳಲ್ಲಿ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಆ್ಯಂಕರಿಂಗ್ ಮಾಡುವುದಕ್ಕೆ ಆಗಲಿ ಅಥವಾ ಕಾಮಿಡಿ ಶೋಗಳಲ್ಲಿ ಅಥವಾ ಇನ್ನು ಮುಂತಾದ ಕಾರ್ಯಕ್ರಮ ಶೋ ಗಳಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸುವುದಕ್ಕೆ ಆಗಲಿ, ಇಂತಿಷ್ಟು ಸಂಭಾವನೆ ಎಂದು ಪಡೆದುಕೊಳ್ತಾರೆ. ಸಂಭಾವನೆ ವಿಚಾರದಲ್ಲಿ ಕೂಡ ಕೆಲವೊಮ್ಮೆ ಒಬ್ಬೊಬ್ಬರು ಭಾರೀ ಸದ್ದು ಮಾಡುತ್ತಾ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಅವರು ಪಡೆದುಕೊಳ್ಳುವ ಸಂಭಾವನೆ ಕುರಿತು ಸಾಕಷ್ಟು ಚರ್ಚೆಗಳು ಕೂಡ ನಡೆಯುತ್ತಾ ಇರುತ್ತದೆ ಸದ್ಯ ಅಂತಹದ್ದೇ ಪರಿಸ್ಥಿತಿ ಈಗ ಉಂಟಾಗಿದ್ದು, ನಿರೂಪಕಿ ಅನುಶ್ರೀ ಅವರಿಗಿಂತ ಹೆಚ್ಚು ಸಂಭಾವನೆ ಪಡೆದ ಕೊಟ್ಟು ಸದ್ಯ ಸುದ್ದಿಯಲ್ಲಿದ್ದಾರೆ ಈ ಆ್ಯಂಕರ್.

ಕನ್ನಡ ಕಿರುತೆರೆಯಲ್ಲಿ ಅಪಾರ ಯಶಸ್ಸು ಪಡೆದುಕೊಂಡ ನಿರೂಪಕರಲ್ಲಿ ಮತ್ತು ಜನಪ್ರಿಯ ಮನಮೆಚ್ಚಿದ ನಿರೂಪಕಿಯ ಅಂತೆಲ್ಲಾ ಹೆಗ್ಗಳಿಕೆಗೆ ಪಾತ್ರರಾಗಿರುವ ಅನುಶ್ರೀ ಅವರು ಕಿರುತೆರೆಯಲ್ಲಿ ಕೇವಲ ನಿರೂಪಕಿ ಮಾತ್ರವಲ್ಲ ಕೆಲವೊಂದು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಯೂಟ್ಯೂಬ್ ಚಾನೆಲ್ ಅನ್ನು ಕೂಡ ಹೊಂದಿರುವ ಅನುಶ್ರೀ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳನ್ನು ತಾರೆಯರನ್ನು ಸಂದರ್ಶನ ಮಾಡುವ ಮೂಲಕ ಅವರ ಯೂಟ್ಯೂಬ್ ಚಾನೆಲ್ ಸಹ ಭಾರಿ ಪ್ರಸಿದ್ಧಿ ಪಡೆದುಕೊಂಡಿದೆ. ಅದನ್ನೆಲ್ಲಾ ಬದಿಗಿಟ್ಟರೆ ಅನುಶ್ರೀ ಅವರು ನಡೆದು ಬಂದ ಹಾದಿಯನ್ನು ಅಷ್ಟೊಂದು ಸುಲಭವಾಗಿರಲಿಲ್ಲ ಬಹಳ ಕಷ್ಟಗಳನ್ನು ದಾಟಿ ಚಿಕ್ಕವಯಸ್ಸಿನಿಂದಲೇ ಕುಟುಂಬದ ಜವಾಬ್ದಾರಿಯನ್ನೂ ಸಹ ಹೊತ್ತು ಹಲವು ಹೆಣ್ಣುಮಕ್ಕಳಿಗೆ ಮಾದರಿ ಆಗಿರುವ, ಅನುಶ್ರೀ ನಿರೂಪಣೆ ಕ್ಷೇತ್ರದಲ್ಲಿ ಅಂತೂ ಅಪಾರ ಯಶಸ್ಸು ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಬಹಳಷ್ಟು ಅವಾರ್ಡ್ ಗಳನ್ನು ಕೂಡ ಪಡೆದುಕೊಂಡಿರುವ ಅನುಶ್ರೀ ಉತ್ತಮ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಜೀ ಕನ್ನಡ ವಾಹಿನಿಯ ಸರಿಗಮಪ ಎಂಬ ಹಾಡಿನ ಶೋ ಮೂಲಕ ನಟಿ ಅನುಶ್ರೀ ಅವರು ಇನ್ನಷ್ಟು ಜನಪ್ರಿಯತೆ ಯಶಸ್ಸು ಪಡೆದುಕೊಳ್ಳುತ್ತಾರೆ ಆದರೆ ಕಿರುತೆರೆಯಲ್ಲಿ ಟಾಪ್ ಸ್ಥಾನದಲ್ಲಿರುವ ಈ ನಿರೂಪಕಿಯನ್ನು ಹಿಂದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿರುವ ನಟಿ ನಿರೂಪಕಿ ಯಾರು ಗೊತ್ತಾ ಅವರೇ ಅನುಪಮಾ ಗೌಡ ಹೌದು ಕಿರುತೆರೆಯಲ್ಲಿ ಅಕ್ಕ ಎಂಬ ಧಾರಾವಾಹಿ ಮೂಲಕ ತಮ್ಮ ವೃತ್ತಿ ಜೀವನವನ್ನು ಶುರು ಮಾಡಿದ ಅನುಪಮ ಗೌಡ ಬೆಳ್ಳಿ ತೆರೆ ಅಲ್ಲಿಯೂ ಕೂಡ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಪಾರ ಅಭಿಮಾನಿಗಳನ್ನ ಸಹ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಕೆಲವೊಂದು ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುವ ಮೂಲಕ ಉತ್ತಮ ನಿರೂಪಕಿ ಅಂತ ಸಹ ಹೆಸರು ಪಡೆದಿದ್ದಾರೆ. ರಿಯಾಲಿಟಿ ಶೋ ಗಳಿಗೆಲ್ಲಾ ಟಾಪ್ ಆಗಿರುವ ಬಿಗ್ ಬಾಸ್ ಶೋ ಗು ಕೂಡ ನಟಿ ಅನುಪಮಾ ಗೌಡ ಅವಕಾಶ ಪಡೆದು ಮನೆಯೊಳಗೆ ಹೋಗಿ ಉತ್ತಮ ಪ್ರದರ್ಶನ ನೀಡಿ ಬಂದಿದ್ದರು.

ಸದ್ಯ ಸೃಜನ್ ಅವರ ಪ್ರೊಡಕ್ಷನ್ ಹೌಸ್ ನಿಂದ ಮೂಡಿಬರುತ್ತಿರುವ ಕಾರ್ಯಕ್ರಮ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ನಟಿ ಅನುಪಮಾ ಗೌಡ ಅವರು ನಿರೂಪಣೆ ಮಾಡುತ್ತಿದ್ದು ಈ ಕಾರ್ಯಕ್ರಮಕ್ಕೆ ನಿರೂಪಣೆ ಮಾಡಲು ಅನುಪಮ ಗೌಡ ಅವರು ಪಡೆದುಕೊಳ್ಳುತ್ತಿರುವ ಸಂಭಾವನೆ ಅನುಶ್ರೀ ಅವರು ಪಡೆದುಕೊಳ್ಳುತ್ತಿರುವ ಸಂಭಾವನೆಗೂ ಹೆಚ್ಚು ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗಿದ್ದು ಮೂಲಗಳ ಪ್ರಕಾರ ನಟಿ ಹಾಗೂ ನಿರೂಪಕಿ ಅನುಪಮ ಗೌಡ ಅವರು ಈ ಕಾರ್ಯಕ್ರಮದ ಹೋಸ್ಟಿಂಗ್ ಮಾಡುವುದಕ್ಕೆ ಅಂದರೆ ನಿರೂಪಣೆ ಮಾಡೋದಕ್ಕೆ ಪಡೆದುಕೊಂಡಿರುವ ಸಂಭಾವನೆ ಸುಮಾರು ಹತ್ತು ಲಕ್ಷ ರೂಪಾಯಿಗಳು ಎಂಬ ವಿಚಾರ ತಿಳಿದು ಬಂದಿದೆ. ಸಂಭಾವನೆ ವಿಚಾರದಲ್ಲಿ ಅನುಶ್ರೀಯವರನ್ನು ಹಿಂದಿಕ್ಕೆ ಸುದ್ದಿಯಲ್ಲಿರುವ ಅನುಪಮ ಗೌಡ ಅವರ ನಿರೂಪಣೆ ಮತ್ತು ನಟನೆ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ.

LEAVE A REPLY

Please enter your comment!
Please enter your name here