ಮುಂಗಾರು ಮಳೆ ಸಿನಿಮಾ ಮೊದಲು ಯಾವ ಹೀರೊ ಜೊತೆಗೆ ಮಾಡಬೇಕು ಅಂತ ನಿರ್ದಾರ ಆಗಿತ್ತು ಗೊತ್ತ … ನೋಡಿ ಒಮ್ಮೆ

103

ಮುಂಗಾರು ಮಳೆ ಸಿನಿಮಾಗೆ ಮೊದಲು ಆಯ್ಕೆ ಆದ ನಟ ಯಾರು ಗೊತ್ತಾ? ಇವರೇ ನೋಡಿ ಇವರು ಕೂಡ ಕನ್ನಡದ ಟಾಪ್ ನಟರಲ್ಲಿ ಒಬ್ಬರು.ಹೌದು ಕನ್ನಡ ಸಿನೆಮಾ ರಂಗ ದಲ್ಲಿ ಮುಂಗಾರು ಮಳೆ ಸುಮಾರು ಹದಿನೈದು ವರುಷಗಳ ಹಿಂದೆಯೇ ಸಾಕಷ್ಟು ಸಿನೆಮಾಗಳ ದಾಖಲೆಗಳನ್ನು ಕುಟ್ಟಿ ಪುಡಿ ಮಾಡಿತ್ತು. ಈ ಕನ್ನಡ ಸಿನೆಮಾ ಇಡೀ ಭಾರತ ಚಿತ್ರರಂಗವನ್ನು ಕನ್ನಡ ಸಿನಿಮಾ ರಂಗದತ್ತ ನೋಡುವಂತೆ ಮಾಡಿದ ಸಿನಿಮಾ.

ಮುಂಗಾರು ಮಳೆ ಸಿನಿಮಾದ ಯಶಸ್ಸು ಇಡೀ ಚಿತ್ರ ತಂಡಕ್ಕೆ ಸಲ್ಲಬೇಕು ಹೌದು ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ ಗಣೇಶ್ ಮತ್ತು ಪೂಜಾ ಗಾಂಧಿ ಅವರ ನಟನೆ ಬಹಳ ಅದ್ಭುತ ಆಗಿತ್ತು. ಕನ್ನಡ ಸಿನೆಮಾ ರಂಗದ ಈ ಅದ್ಭುತ ಚಿತ್ರದಲ್ಲಿ ನಟಿಸಿದ ಗಣೇಶ್ ಅವರಿಗೆ ಈ ಸಿನಿಮಾ ಅಪಾರ ಯಶಸ್ಸು ತಂದುಕೊಟ್ಟಿದ್ದು ನಿಜ. ಆದರೆ ಸಿನಿಮಾಗೆ ಗಣೇಶ್ ಅವರನ್ನು ಆಯ್ಕೆ ಮಾಡುವುದಕ್ಕಿಂತ ಮೊದಲೇ ಮತ್ತೊಬ್ಬ ನಟನನ್ನು ಈ ಚಿತ್ರದ ನಾಯಕ ನಟರನ್ನಾಗಿ ಮಾಡಬೇಕಂತ ಅಂದುಕೊಂಡಿದ್ದರಂತೆ ನಿರ್ದೇಶಕರಾದ ಯೋಗರಾಜ್ ಭಟ್.

ಹಾಗಾದರೆ ಮುಂಗಾರು ಮಳೆ ಚಿತ್ರದ ನಾಯಕ ನಟರ ನ ಫೈನಲ್ ಮಾಡುವುದಕ್ಕಿಂತ ಮುಂಚೆ ಸಿನೆಮಾದ ನಾಯಕ ನಟನನ್ನಾಗಿ ಮಾಡಬೇಕಂತ ಅಂದುಕೊಂಡಿದ್ದ ಆ ನಟ ಯಾರು ಗೊತ್ತಾ ಹೌದು ಸ್ವತಃ ಆ ನಟರೆ ಮುಂಗಾರು ಮಳೆ ಯಶಸ್ಸಿನ ಕುರಿತು ಮಾತನಾಡುವಾಗ ಚಿತ್ರಕ್ಕೆ ನಿರ್ದೇಶಕರು ನಟರನ್ನು ಆಯ್ಕೆ ಮಾಡುವಾಗ ಇವರನ್ನೇ ಆಯ್ಕೆ ಮಾಡಿಕೊಳ್ಳಬೇಕು ಅಂತ ಅಂದುಕೊಂಡಿದ್ದರಂತೆ ಆದರೆ ತಾನು ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಕಾರಣ ಕಥೆ ಹೇಳಿದರು ಅವರು ಬಿಡುವು ಮಾಡಿಕೊಂಡು ನಮ್ಮ ಸಿನಿಮಾ ಮಾಡ್ತಾರೋ ಇಲ್ಲವೋ ಎಂದು ಅಂದುಕೊಂಡು ಅವರು ನನಗೆ ಚಿತ್ರದ ಕುರಿತು ಪ್ರಪೋಸ್ ಕೂಡ ಮಾಡಲಿಲ್ಲ ಆದರೆ ಆ ಸಿನಿಮಾಗೆ ನನ್ನನು ನಾಯಕ ನಟರನ್ನಾಗಿ ಮಾಡಬೇಕಂತ ಅಂದುಕೊಂಡಿದ್ದು ಮಾತ್ರ ಈಗ ಎಂದು ಹೇಳಿದ್ದಾರೆ.

ಹೌದು ಸಿನಿಮಾ ಅಂದ ಮೇಲೆ ಸಿನಿಮಾ ಮೇಕಿಂಗ್ ನಡೆಯುವಾಗ ಚಿತ್ರಕ್ಕೆ ತಕ್ಕ ನಾಯಕನಟರನ್ನು ಹುಡುಕುವಾಗ ಹೀರೋ ಹೀರೋಯಿನ್ ಗಳು ಬದಲಾಗೋದು ಸಹಜವೇ ಹಾಗೆ ಮುಂಗಾರು ಮಳೆ ಸಿನಿಮಾ ಗಾಗಿ ನಾಯಕ ನಟರ ಹುಡುಕಾಟ ನಡೆಸುವಾಗ ಮೊದಲ ಬಾರಿಗೆ ನಿರ್ದೇಶಕರಾದ ಯೋಗರಾಜ್ ಭಟ್ ಅವರು ಸಿನೆಮಾಗೆ ವಿಜಯ ರಾಘವೇಂದ್ರ ಅವರನ್ನು ನಾಯಕ ನಟರನ್ನಾಗಿ ಮಾಡಬೇಕು ಅಂದುಕೊಂಡಿದ್ದರಂತೆ ಆದರೆ ಆ ಸಮಯದಲ್ಲಿ ವಿಜಯ ರಾಘವೇಂದ್ರ ಅವರು ಬೇರೆ ಸಿನಿಮಾದಲ್ಲಿ ಬ್ಯುಸಿ ಆಗಿದ್ದ ಕಾರಣ ಅವರು ಸಿನೆಮಾ ಒಪ್ಪುವುದಿಲ್ಲವೇನೊ ಎಂದು ಭಾವಿಸಿ ಸುಮ್ಮನಾಗಿದ್ದರೆಂದು ಕಾರ್ಯಕ್ರಮವೊಂದರಲ್ಲಿ ವಿಜಯ ರಾಘವೇಂದ್ರ ಅವರು ಹೇಳಿಕೊಂಡಿದ್ದರು.

ಹೌದು ಸ್ನೇಹಿತರೆ ಅಕುಲ್ ಬಾಲಾಜಿ ಅವರು ನಡೆಸಿಕೊಡುತ್ತಿದ್ದ ಕಾರ್ಯಕ್ರಮವಾಗಿರುವ ಟಾಕ್ ಶೋ ಎಂಬ ಕಾರ್ಯಕ್ರಮದಲ್ಲಿ ವಿಜಯ ರಾಘವೇಂದ್ರ ಅವರು ಅತಿಥಿಯಾಗಿ ಆಗಮಿಸಿದ್ದಾಗ ಈ ವಿಚಾರದ ಕುರಿತು ಸಹ ಹೇಳಿಕೊಂಡಿದ್ದು ಸ್ವತಃ ವಿಜಯ್ ರಾಘವೇಂದ್ರ ಅವರೇ ಇದನ್ನು ತಿಳಿಸಿದ್ದಾರೆ ಹಾಗೆ ವಿಜಯರಾಘವೇಂದ್ರ ಅವರಿಗೇನಾದರೂ ಮುಂಗಾರುಮಳೆ ಸಿನೆಮಾ ಅವಕಾಶ ಸಿಕ್ಕಿದ್ದರೆ ಇಂದು ಸ್ಯಾಂಡಲ್ ವುಡ್ ನ ಟಾಪ್ ನಟರು ಗಳಲ್ಲಿ ವಿಜಯ ರಾಘವೇಂದ್ರ ಅವರು ಕೂಡ ಒಬ್ಬರಾಗಿರುತ್ತಿದ್ದರು.

ಅಷ್ಟೇ ಅಲ್ಲ ಈ ಶೋನಲ್ಲಿ ಯೋಗರಾಜ್ ಭಟ್ ಅವರ ನಿರ್ದೇಶನದ ಮಣಿ ಸಿನಿಮಾದಲ್ಲಿ ನನ್ನ ತಮ್ಮ ಮುರಳಿ ಅವರು ಮೊದಲು ಅಭಿನಯಿಸಬೇಕಿತ್ತು ಆದರೆ ಆ ಸಮಯದಲ್ಲಿಯೂ ಕೂಡ ಆ ಅವಕಾಶವೂ ತಪ್ಪಿ ಹೋಗಿತ್ತು ಎಂದು ಘಟನೆಯೊಂದರ ಬಗ್ಗೆ ವಿಚಾರಗಳಿಂದ ರವರು ಅದೇ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.

LEAVE A REPLY

Please enter your comment!
Please enter your name here